ರಾಜ್ಯ ಸರ್ಕಾರ ದಿವಾಳಿಯಾಗಿದೆ, ಸರ್ಕಾರಿ ನೌಕರರಿಗೂ ಸಂಬಳ ಕೊಡಲು ಹಣವಿಲ್ಲ: ಬಸವರಾಜ ಬೊಮ್ಮಾಯಿ

By Sathish Kumar KH  |  First Published Jun 29, 2024, 8:42 PM IST

ರಾಜ್ಯ ಸರ್ಕಾರ ಯಾವೊಬ್ಬ ಶಾಸಕರಿಗೂ ಅನುದಾನ ಕೊಡಲಾಗದಷ್ಟು ದಿವಾಳಿಯಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಗೂ ಸಂಬಳ ಕೊಡಲು ಹಣವಿರುವುದಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.


ಚಿಕ್ಕಬಳ್ಳಾಪುರ (ಜೂ.29): ಇಡೀ ರಾಜ್ಯದಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡಲು ಯಾವ ಶಾಸಕರಿಗೂ ಅನುದಾನ ಕೊಟ್ಟಿಲ್ಲ. ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಮುಂಬರುವ ದಿನಗಳಲ್ಲಿ ಸರಕಾರಿ ನೌಕರರಿಗೆ ದುಡ್ಡು ಕೊಡಲು ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಯಾವೊಬ್ಬ ಶಾಸಕರಿಗೂ ಕ್ಷೇತ್ರ ಅಭಿವೃದ್ಧಿ ಮಾಡಲು ಅನುದಾನ ಕೊಟ್ಟಿಲ್ಲ. ರಾಜ್ಯ ಸರಕಾರ ದಿವಾಳಿಯಾಗಿದೆ. ಮುಂಬರುವ ದಿನಗಳಲ್ಲಿ ಸರಕಾರಿ ನೌಕರರಿಗೆ ದುಡ್ಡು ಕೊಡಲು ಆಗುವುದಿಲ್ಲ. ಒಪಿಎಸ್ ಜಾರಿಗೆ ತರುತ್ತೇವೆ ಎಂದಿದ್ದರು. ಆದರೆ ಈಗ ಆ ಶಬ್ದವನ್ನೇ ಆಡುತ್ತಿಲ್ಲ.  ರೈತರನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾರೆ. ಇಂತ ಕೆಟ್ಟ ಸರಕಾರವನ್ನು ನನ್ನ ಜೀವನದಲ್ಲಿ ನೋಡಿಲ್ಲ. ಕೇಂದ್ರ ಸರಕಾರ ಕೊಟ್ಟಿರುವ ಪರಿಹಾರವನ್ನು ಸರಿಯಾಗಿ ಇವರ ಕೊಡುತ್ತಿಲ್ಲ. ನಮ್ಮ ಸರಕಾರಿವಿದ್ದಾಗ ಡಬಲ್ ಪರಿಹಾರ ಕೊಟ್ಟಿದ್ದೇವೆ. ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ವಿದ್ಯಾರ್ಥಿ ವೇತನವನ್ನು ನಿಲ್ಲಿಸಿದರು. ಸಿಎಂ ಮತ್ತು ಡಿಸಿಎಂಗಳನ್ನು ಮಾಡಿಕೊಳ್ಳುವುದಕ್ಕೆ ಮಾತ್ರ ಈ ಸರಕಾರವಿದೆ ಎಂದು ಹೇಳಿದರು.

Tap to resize

Latest Videos

undefined

ದರ್ಶನ್‌ನ ಶ್ರೀಮಂತ ಅಭಿಮಾನಿಯಾಗಿ ಜೈಲು ಸೇರಿದ ಜಗದೀಶ, ಜೀವನದಲ್ಲಿ ತುತ್ತು ಅನ್ನಕ್ಕೂ ಬೆವರಿಳಿಸುವ ಕಡುಬಡವ!

ಸುಧಾಕರ್ ಅವರು ಕಳೆದ ಚುನಾವಣೆಯಲ್ಲಿ ಸೋತಾಗ ನನಗೆ ಸೋತಿದ್ದಕ್ಕೆ ದುಃಖವಿಲ್ಲ. ಆದರೆ, ಕೆಲಸಗಳು ಆಗಲ್ಲವಲ್ಲ ಎಂದಿದ್ದರು. ಅವರಿಗೆ ಎಲ್ಲೇ ಸ್ಥಾನ ಇದ್ದರೂ ಚಿಕ್ಕಬಳ್ಳಾಪುರದಲ್ಲಿ ಇದ್ದೇ ಇರುತ್ತಾರೆ. ಜನಶಕ್ತಿ ಗೆಲ್ಲಿಸುವ ಮೂಲಕ ಅವರಿಗೆ ಅವಕಾಶ ಕೊಟ್ಟಿದೆ. ಸುಧಾಕರ್ ಅವರು ಕಳೆದ 15 ವರ್ಷಗಳಿಂದ ಕ್ಷೇತ್ರದಲ್ಲಿ ಮಾಡಿದ ಕೆಲಸ ಕಾರ್ಯಗಳು ಅವರ ಕೈ ಹಿಡಿದಿವೆ. ದೊಡ್ಡ ಪ್ರಮಾಣದ ಗೆಲುವು ಸಿಕ್ಕಿದೆ. ಕ್ಷೇತ್ರದ ಋಣಾನುಬಂಧ ಸುಧಾಕರ್ ಅವರನ್ನು  ಎಳೆದುತಂದು ಸಮಗ್ರ ಅಭಿವೃದ್ಧಿ ಗೆ ಅವಕಾಶ ಕೊಟ್ಟಿದ್ದೀರಿ. ಎಲ್ಲ ಕನಸುಗಳ ಸಾಕಾರ ಮಾಡಿಕೊಳ್ಳಲು ಸುಧಾಕರ್ ಅವರನ್ನು ಆಯ್ಕೆ ಮಾಡಿದ್ದೀರಿ ಎಂದು ಹೇಳಿದರು.

ಕ್ಷೇತ್ರದಲ್ಲಿ 25 ಸಾವಿರ ನಿವೇಶನಗಳ ವಿತರಣೆ ಮಾಡುವ ಕೆಲಸ ಒಂದು ಕ್ರಾಂತಿ. ಅಂತಹ ಕೆಲಸವನ್ನು ಸುಧಾಕರ್ ಅವರು ಮಾಡಿದ್ದರು. ಮೆಡಿಕಲ್ ಕಾಲೇಜಿಗಾಗಿ ರಾಜೀನಾಮೆ ಕೊಟ್ಟು ಪಟ್ಟು ಹಿಡಿದು ಮೆಡಿಕಲ್ ಕಾಲೇಜು ಮಾಡಿಸಿದರು. ಆದರೆ, ಕಾಂಗ್ರೆಸ್ ಸರಕಾರದಿಂದ ಅಳಿದುಳಿದ ಕೆಲಸ ಮಾಡಿ ಅಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡಿಸುವ ಕೆಲಸ ಮಾಡುತ್ತಿಲ್ಲ. ಕಾಂಗ್ರೆಸ್ ಸರಕಾರ ಯಾವ ಮುಖ ಇಟ್ಟುಕೊಂಡು ಅಧಿಕಾರ ನಡೆಸುತ್ತಿದೆ ಎಂದು ಹೇಳಿದರು.

ವೀರಶೈವ ಲಿಂಗಾಯತರಿಗೆ ಸಿಎಂ ಸ್ಥಾನ ಕೊಡಿ, ಅದಾಗದಿದ್ದರೆ ಡಿಸಿಎಂ ಸ್ಥಾನ ಕೊಡಲೇಬೇಕು: ರಂಭಾಪುರಿ ಶ್ರೀ

ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟವನ್ನು ಸುಧಾಕರ್ ಅವರು ಪಟ್ಟು ಹಿಡಿದು ಮಾಡಿಸಿದ್ದರು. ಆದರೆ ಕಾಂಗ್ರೆಸ್ ಸರಕಾರ ರದ್ದು ಮಾಡಿದೆ. ನೀವೆಲ್ಲಾ ಏಕೆ ಸುಮ್ನೆ ಕೂತಿದ್ದೀರಾ.. ಎಲ್ಲರೂ ಸುಧಾಕರ್ ಅವರ ನೇತೃತ್ವದಲ್ಲಿ ಚಳವಳಿ ಮಾಡಿ. ಈ ಭಾಗದ ರೈತರಿಗೆ ಪ್ರತ್ಯೇಕ ಹಾಲು ಒಕ್ಕೂಟ ಅತ್ಯಗತ್ಯ. ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಲೋಕಸಭೆ ಚುನಾವಣೆ ನಂತರ ಭಾರೀ ಚೆನ್ನಾಗಿ ಅಟ್ಯಾಕ್ ಮಾಡುತ್ತಿದ್ದಾರೆ. ಏನೋ ಅವರಿಗೆ ಬೆಳಕು ಕಾಣಿಸ್ತಿದೆ. ಖಂಡಿತ ಬೆಳಕು ಸಿಗಲಿದೆ. ಬಿಜೆಪಿ-ಜೆಡಿಎಸ್‌ಗೆ ಮಾತ್ರ ಭವಿಷ್ಯವಿದೆ. ಮಾಜಿ ಪ್ರಧಾನ ಮಂತ್ರಿಗಳಿರುವ ಪ್ರಾದೇಶಿಕ ಪಕ್ಷವದು ಎಂದು ಹೇಳಿದರು.

click me!