Latest Videos

ಕನ್ನಡ ನಾಡು ಅಖಂಡ ಕರ್ನಾಟಕವಾಗಿ ಇರಬೇಕು: ಇಬ್ಬಾಗದ ಮಾತಾಡಿದ ಚಂದ್ರಶೇಖರ್ ಶ್ರೀಗೆ ಕಾರಜೋಳ ತಿರುಗೇಟು

By Govindaraj SFirst Published Jun 29, 2024, 4:08 PM IST
Highlights

ಕನ್ನಡ ನಾಡು ಅಖಂಡ ಕರ್ನಾಟಕವಾಗಿ ಇರಬೇಕು. ಯಾರಿಂದಲೂ ದಕ್ಷಿಣ, ಉತ್ತರ ಎಂಬುದಾಗಿ ಇಬ್ಭಾಗದ ಪ್ರಶ್ನೆ ಬೇಡ ಎಂದು ಉತ್ತರ, ದಕ್ಷಿಣ ಇಬ್ಬಾಗದ ಮಾತಾಡಿದ ಚಂದ್ರಶೇಖರ್ ಶ್ರೀಗೆ ಬಿಜೆಪಿ ಸಂಸದ ಗೋವಿಂದ ಕಾರಜೋಳ ತಿರುಗೇಟು ನೀಡಿದರು. 

ಚಿತ್ರದುರ್ಗ (ಜೂ.29): ಕನ್ನಡ ನಾಡು ಅಖಂಡ ಕರ್ನಾಟಕವಾಗಿ ಇರಬೇಕು. ಯಾರಿಂದಲೂ ದಕ್ಷಿಣ, ಉತ್ತರ ಎಂಬುದಾಗಿ ಇಬ್ಭಾಗದ ಪ್ರಶ್ನೆ ಬೇಡ ಎಂದು ಉತ್ತರ, ದಕ್ಷಿಣ ಇಬ್ಬಾಗದ ಮಾತಾಡಿದ ಚಂದ್ರಶೇಖರ್ ಶ್ರೀಗೆ ಬಿಜೆಪಿ ಸಂಸದ ಗೋವಿಂದ ಕಾರಜೋಳ ತಿರುಗೇಟು ನೀಡಿದರು. ಇಬ್ಭಾಗದ ಮಾತು ಬೇಡ ಎಂದು ಕೈಮುಗಿದು ಪ್ರಾರ್ಥಿಸುತ್ತೇನೆ. ಏಕೀಕರಣ ಹೋರಾಟದ ಮಾಹಿತಿ ಕೊರತೆಯಿಂದ ಇಬ್ಬಾಗದ ಹೇಳಿಕೆ ನೀಡಿದ್ದಾರೆ.  ಸಿಎಂ ಸ್ಥಾನದ ಬಗ್ಗೆ ಆಯಾ ಸಮಾಜದ ಶ್ರೀಗಳ ಒತ್ತಾಯ ವಿಚಾರವಾಗಿ ಜಾತಿ ಆಧಾರದ ಮೇಲೆ ಪರಮಾಧಿಕಾರ ಹಂಚಿಕೆ ಸರಿಯಲ್ಲ. ಅರ್ಹತೆ, ದಕ್ಷತೆ ಆಧಾರದ ಮೇಲೆ ರಾಜಕೀಯ ಪರಮಾಧಿಕಾರ ಸಿಗಬೇಕು ಎಂದರು.

ಎಲ್ಲಾ ವರ್ಗದವರಿಗೂ ಅವಕಾಶ ಸಿಗಬೇಕು. ಅವರವರ ಪಕ್ಷ, ಸಿದ್ಧಾಂತಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಚಿತ್ರದುರ್ಗ ಸೇರಿ ಹೈದ್ರಾಬಾದ್ ಕರ್ನಾಟಕ, ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಮಲತಾಯಿ ಧೋರಣೆ ಆಗಿದೆ. ಚಿತ್ರದುರ್ಗ ಅಭಿವೃದ್ಧಿ ಆಗಿಲ್ಲ ಎಂದರೆ ಕೆಲವರಿಗೆ ಸಿಟ್ಟು ಬರುತ್ತದೆ, ಚಿತ್ರದುರ್ಗ ದೇಶದಲ್ಲೇ ಹಿಂದುಳಿದ ಜಿಲ್ಲೆ ಆಗಿದೆ, ದಲಿತರಿಗೆ ಮೀಸಲಾಗಿದ್ದ ಹಣ ರಾಜ್ಯ ಸರ್ಕಾರದಿಂದ ದುರುಪಯೋಗ ಆಗಿದೆ. ಸರ್ಕಾರದ ಖಜಾನೆ ಲೂಟಿ ಮಾಡಿ ಹಣ ದುರುಪಯೋಗವಾಗಿದ್ದು,  ಖಜಾನೆ ಲೂಟಿ ಮಾಡಿದವರು ರಾಜಾರೋಷವಾಗಿ ಇದ್ದಾರೆ. ರಾಜ್ಯ ಸರ್ಕಾರದ ಕೈವಾಡ ಇದೆ ಎಂಬುದು ಜನರಿಗೆ ಗೊತ್ತಿದೆ. ವಾಲ್ಮೀಕಿ ನಿಗಮದ 187ಕೋಟಿ ಕೂಡಲೇ ಜಮಾ ಮಾಡಿ. ದಲಿತ ಸಮುದಾಯದ ಏಳ್ಗೆಗೆ ಉಪಯೋಗ ಮಾಡಬೇಕು. ಸಿಎಂ ಸೇರಿ ಸಂಬಂಧ ಪಟ್ಟವರು ರಾಜೀನಾಮೆ ನೀಡಬೇಕು ಎಂದು ಕಾರಜೋಳ ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯ ಗಮನಕ್ಕೆ ಬಾರದೇ ವಾಲ್ಮೀಕಿ ಹಗರಣ ಆಗಿದೆಯಾ.?: ಪ್ರಲ್ಹಾದ್ ಜೋಶಿ ವಾಗ್ದಾಳಿ

ಸರ್ಕಾರದ ವಿರುದ್ಧ 40 ಕಾಂಗ್ರೆಸ್‌ ಶಾಸಕರ ಬಂಡಾಯ: ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದೆ ರಾಜ್ಯ ಸರ್ಕಾರ ದಿವಾಳಿಯಾಗಿದ್ದು ಅನುದಾನ ನೀಡದ ಕಾರಣ ಮುದ್ದೇಬಿಹಾಳದ ಕಾಂಗ್ರೆಸ್‌ ಶಾಸಕ ಅಪ್ಪಾಜಿಗೌಡ ಯಾವ ಪುರುಷಾರ್ಥಕ್ಕಾಗಿ ಶಾಸಕರಾಗಿ ಮುಂದುವರಿಯಬೇಕೆಂದು ಅಸಮಾಧಾನ ಹೊರ ಹಾಕಿದ್ದಾರೆ. ರಾಜ್ಯದಲ್ಲಿ ಇಂಥ 40 ಮಂದಿ ಕಾಂಗ್ರೆಸ್ ಶಾಸಕರು ಸರ್ಕಾರದ ವಿರುದ್ಧ ಬಂಡಾಯ ಏಳಲಿದ್ದಾರೆಂದು ಸಂಸದ ಗೋವಿಂದ ಕಾರಜೋಳ ಹೇಳಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಪೂರೈಸಿದೆ. 

ಯಾವುದೇ ಒಂದು ಹೊಸ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಚಾಲನೆಗೊಂಡ ಕಾಮಗಾರಿಗಳೇ ಇನ್ನೂ ಮುಂದುವರಿಯುತ್ತಿವೆ. ಕಳೆದ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಘೋಷಿಸಿದ ಬಿಟ್ಟಿ ಭಾಗ್ಯ ಹಾಗೂ ವಿವೇಚನೆಯಿಲ್ಲದೆ ತೆಗೆದುಕೊಂಡ ತೀರ್ಮಾನಗಳಿಂದ ರಾಜ್ಯ ಸಂಕಷ್ಟಕ್ಕೆ ಸಿಲುಕಿದೆ ಎಂದರು. ಜನ ಸರ್ಕಾರದ ವರ್ತನೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಬೇಕಾಬಿಟ್ಟಿ ಯೋಜನೆ ಕೊಟ್ಟು ಈಗ ಡೀಸೆಲ್, ಪೆಟ್ರೋಲ್ ದರ ಹೆಚ್ಚಿಸಿದ್ದಾರೆ. ಅದನ್ನು ಇಳಿಕೆ ಮಾಡಿ ಯಥಾಸ್ಥಿತಿ ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ನಿಮ್ಮ ಸಂಸ್ಕೃತಿ ರಾಜ್ಯ ನೋಡಿದೆ: ವಿಷಕನ್ಯೆ ಎಂದ ರಮೇಶ್‌ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್‌ ತಿರುಗೇಟು

ಪೆಟ್ರೋಲ್, ಡೀಸೆಲ್ ದರ ಬೇರೆ ರಾಜ್ಯಗಳಿಗಿಂತ ಕಡಿಮೆ ಎನ್ನುವುದು ಭಂಡತನದ ಹೇಳಿಕೆ. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸರ್ಕಸ್ ಮಾಡುತ್ತಿದ್ದಾರೆ. ಮೂರು ತಿಂಗಳಿಂದ ಅನ್ನಭಾಗ್ಯ ಹಣ ಹಾಕಿಲ್ಲ. ಈ ಬಾರಿ ಉತ್ತಮ ಮಳೆಯಾಗಿದ್ದು ಬಿತ್ತನೆಗೆ ರೈತರಿಗೆ ಶೇಂಗಾ ಬೀಜ ಸಿಗುತ್ತಿಲ್ಲ. ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ. ಬರ ಪರಿಹಾರದ ಹಣವನ್ನೂ ಸರಿಯಾಗಿ ಬಿಡುಗಡೆ ಮಾಡಿಲ್ಲ. ಎಲ್ಲದಕ್ಕೂ ಕೇಂದ್ರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. 74 ವರ್ಷಗಳಲ್ಲಿ ಹೇಗೆ ಆಡಳಿತ ನಡೆದಿದೆ ಅದನ್ನು ಮುಂದುವರೆಸಿ, ಜನರ ದಾರಿ ತಪ್ಪಿಸಬೇಡಿ. ಮೊದಲು ಹಣ ಖರ್ಚು ಮಾಡಿ ಕೇಂದ್ರದಿಂದ ಮರುಪಾವತಿ ಪಡೆಯಿರಿ ಎಂದರು.

click me!