New Year Guidelines ಓಮಿಕ್ರಾನ್ ಆತಂಕದಿಂದ ಸಂಭ್ರಮದ ಹೊಸ ವರ್ಷಾಚರಣೆಗೆ ಬ್ರೇಕ್, ಚರ್ಚ್‌ನಲ್ಲಿ ಕ್ರಿಸ್‌ಮಸ್‌!

By Suvarna News  |  First Published Dec 22, 2021, 3:03 AM IST
  • ಹೊಸ ವರ್ಷಕ್ಕೆ ಹೊಸ ಮಾರ್ಗಸೂಚಿ ಜಾರಿಗೊಳಿಸಿದ ರಾಜ್ಯ
  • ರಸ್ತೆ, ಉದ್ಯಾನ, ಮೈದಾನಗಳಲ್ಲಿ ವರ್ಷಾಚರಣೆ ಮಾಡುವಂತಿಲ್ಲ
  • ಅಪಾರ್ಟ್‌ಮೆಂಟ್‌ಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸುವಂತಿಲ್ಲ
  • ಹೊಸ ಮಾರ್ಗಸೂಚಿ ಸಂಪೂರ್ಣ ವಿವರ

ಬೆಂಗಳೂರು(ಡಿ.22):  ಕೋವಿಡ್‌(Covid 19) ಹೊಸ ರೂಪಾಂತರಿ ತಳಿ ಒಮಿಕ್ರೋನ್‌(Omicron) ಹರಡುವುದನ್ನು ತಡೆಯುವ ದೃಷ್ಟಿಯಿಂದ ಬೆಂಗಳೂರಿನ(Bengaluru) ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ ಸೇರಿದಂತೆ ರಾಜ್ಯಾದ್ಯಂತ ಯಾವುದೇ ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ(New Year 2022 Celebration) ಜನರು ಗುಂಪುಗೂಡಿ ಸಂಭ್ರಮಿಸುವುದನ್ನು ನಿರ್ಬಂಧಿಸಲು ಸರ್ಕಾರ ನಿರ್ಧರಿಸಿದೆ.

ಅಲ್ಲದೆ ರೆಸ್ಟೋರೆಂಟ್‌, ಕ್ಲಬ್‌, ಬಾರ್‌, ಹೋಟೆಲ್‌ಗಳಲ್ಲಿ ಡಿಜೆ, ಪಾರ್ಟಿ ಸೇರಿದಂತೆ ಯಾವುದೇ ವಿಶೇಷ ಸಂಗೀತ, ಸಮೂಹ ನೃತ್ಯ, ಸಂಭ್ರಮಾಚರಣೆ ಕಾರ್ಯಕ್ರಮಗಳ ಆಯೋಜನೆಯನ್ನೂ ನಿರ್ಬಂಧಿಸಲು ತೀರ್ಮಾನಿಸಿದೆ. ಆದರೆ, ಇವುಗಳಲ್ಲಿ ಗ್ರಾಹಕರ ಆತಿಥ್ಯಕ್ಕೆ ಲಭ್ಯ ಆಸನಗಳ ಸಾಮರ್ಥ್ಯದ ಶೇ.50ರಷ್ಟುಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲು ಅವಕಾಶ ಕಲ್ಪಿಸಿದೆ. ಈ ಎಲ್ಲಾ ನಿರ್ಬಂಧಗಳನ್ನು ಡಿ.30ರಿಂದ 2022ರ ಜನವರಿ 2ರವರೆಗೆ ಅನ್ವಯಿಸಿ ಪ್ರತ್ಯೇಕ ಮಾರ್ಗಸೂಚಿಯನ್ನೂ(Guidelines) ಹೊರಡಿಸಿದೆ.

Tap to resize

Latest Videos

Omicron Variant: ರಾಜ್ಯದಲ್ಲಿ ಒಮಿಕ್ರೋನ್ ಕಟ್ಟೆಚ್ಚರ, ಹೊಸವರ್ಷ, ಕ್ರಿಸ್ಮಸ್ ಸಂಭ್ರಮಾಚರಣೆಗೆ ನಿರ್ಬಂಧ

ಒಮಿಕ್ರೋನ್‌: ಹೊಸ ವರ್ಷಾಚರಣೆಗೆ ಮಾರ್ಗಸೂಚಿ
- ಕ್ರಿಸ್‌ಮಸ್‌ಗೆ ನಿರ್ಬಂಧ ಇಲ್ಲ
-ನೈಟ್‌ ಕರ್ಫ್ಯೂ ಇಲ್ಲ

ಮಾರ್ಗಸೂಚಿಯಲ್ಲೇನಿದೆ?
ಕ್ರಿಸ್‌ಮಸ್‌
- ಕೋವಿಡ್‌ ನಿಯಮ ರೀತ್ಯ ಚರ್ಚಲ್ಲಿ ಪ್ರಾರ್ಥನೆ, ಆಚರಣೆಗೆ ಅನುಮತಿ
- ಸಾರ್ವಜನಿಕ ಸ್ಥಳ, ರಸ್ತೆ, ಉದ್ಯಾನದಲ್ಲಿ ಪ್ರಾರ್ಥನೆ ಮಾಡುವಂತಿಲ್ಲ

ಹೊಸ ವರ್ಷ
- ಕ್ಲಬ್‌, ಹೋಟೆಲ್‌, ರೆಸ್ಟೋರೆಂಟ್‌ನಲ್ಲಿ ಆರ್ಕೆಸ್ಟ್ರಾ, ಡಾನ್ಸ್‌ ನಿಷಿದ್ಧ
- ಮೇಲಿನ ಸ್ಥಳಗಳಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸುವಂತಿಲ್ಲ
- ರಸ್ತೆ, ಉದ್ಯಾನ, ಮೈದಾನಗಳಲ್ಲಿ ವರ್ಷಾಚರಣೆ ಮಾಡುವಂತಿಲ್ಲ
- ಕ್ಲಬ್‌, ಹೋಟೆಲ್‌ ಪ್ರವೇಶಕ್ಕೆ ನೆಗೆಟಿವ್‌ ವರದಿ, ಲಸಿಕೆ ಪತ್ರ ಕಡ್ಡಾಯ
- ಅಪಾರ್ಟ್‌ಮೆಂಟ್‌ಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸುವಂತಿಲ್ಲ

ಸಿಎಂ ಸಭೆ:
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಒಮಿಕ್ರೋನ್‌ ಹರಡುವಿಕೆ ನಿಯಂತ್ರಿಸಲು ಯಾವೆಲ್ಲಾ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂಬ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಅವರು ಮಂಗಳವಾರ ವಿವಿಧ ಇಲಾಖಾ ಅಧಿಕಾರಿಗಳು, ತಜ್ಞರೊಂದಿಗೆ ಮಹತ್ವದ ಸಭೆ ನಡೆಸಿದರು.

X`mas Here I Come: ಟೇಸ್ಟೀ ಕ್ರಿಸ್ಮಸ್ ಪ್ಲಮ್ ಕೇಕ್ ಹೀಗೆ ಮಾಡಿ

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗಿರುವ ಕೋವಿಡ್‌ ಪ್ರಕರಣಗಳು ಮತ್ತು ಹೊಸ ತಳಿ ಒಮಿಕ್ರೋನ್‌ ಬೆಳವಣಿಗೆಯ ಪರಿಸ್ಥಿತಿಯನ್ನು ಗಮನಿಸಿ ಹೊಸ ವರ್ಷಾಚರಣೆ ವೇಳೆ ಸೋಂಕು ಹರಡುವುದನ್ನು ನಿಯಂತ್ರಿಸಲು ತಜ್ಞರ ಸಲಹೆಯಂತೆ ಕೆಲವೊಂದು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ. ಪ್ರಮುಖವಾಗಿ ರಾಜಧಾನಿ ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ ಸೇರಿದಂತೆ ರಾಜ್ಯಾದ್ಯಂತ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಜನರು ದೊಡ್ಡ ಮಟ್ಟದಲ್ಲಿ ಗುಂಪುಗೂಡಿ ಸಂಭ್ರಮಾಚರಿಸುವಂತಿಲ್ಲ. ಹೋಟೆಲ್‌, ರೆಸ್ಟೋರೆಂಟ್‌, ಕ್ಲಬ್‌, ಬಾರ್‌, ಮಾಲ್‌ಗಳು ಮತ್ತಿತರೆಡೆ ಪಾರ್ಟಿ, ಡಿಜೆ ಸೇರಿದಂತೆ ಯಾವುದೇ ಸಂಗೀತ ಕಾರ್ಯಕ್ರಮ, ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬಾರದು ಎಂಬ ನಿರ್ಬಂಧ ವಿಧಿಸಲು ತೀರ್ಮಾನಿಸಲಾಗಿದೆ.

ಆದರೆ, ಈ ಸ್ಥಳಗಳಲ್ಲಿ ಗ್ರಾಹಕರ ಪ್ರವೇಶಕ್ಕೆ ಇರುವ ಸಾಮರ್ಥ್ಯದ ಶೇ.50ರಷ್ಟುಜನರಿಗೆ ಮಾತ್ರ ಅವಕಾಶ ನೀಡಬಹುದು. ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್‌ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿ ನೆಗೆಟಿವ್‌ ವರದಿ ಹೊಂದಿರಬೇಕು. ಇಲ್ಲಿಗೆ ಬರುವ ಜನರು ಕಡ್ಡಾಯವಾಗಿ ಎರಡೂ ಡೋಸ್‌ ಕೋವಿಡ್‌ ಲಸಿಕೆ ಪಡೆದಿರಬೇಕೆಂಬ ಷರತ್ತು ವಿಧಿಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ಅಪಾರ್ಟ್‌ಮೆಂಟ್‌ಗಳಲ್ಲೂ ನಿರ್ಬಂಧ
ಅಪಾರ್ಟ್‌ಮೆಂಟ್‌ಗಳಲ್ಲಿ ಕೂಡ ಜನರು ಗುಂಪುಗೂಡಿ ಸಂಭ್ರಮಿಸುವುದು, ಪಾರ್ಟಿ, ಸಂಗೀತ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ. ಈ ವಿಚಾರ ಪಾಲನೆಯನ್ನು ಆಯಾ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳ ಸಂಘದವರೇ ಉಸ್ತುವಾರಿ ವಹಿಸಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.

ಇದೇ ವೇಳೆ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಅವರು ಕೂಡ ಮುಖ್ಯಮಂತ್ರಿಗಳ ಎಲ್ಲಾ ಮಾತುಗಳನ್ನು ಪುನರುಚ್ಚರಿಸಿದರಲ್ಲದೆ, ಕ್ರಿಸ್‌ಮಸ್‌ ಅವಧಿಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಯಾವುದೇ ಪ್ರತ್ಯೇಕ ನಿಯಮಾವಳಿಗಳು ಇರುವುದಿಲ್ಲ. ಆದರೆ, ಆ ವೇಳೆ ಕೂಡ ಜನರು ದೊಡ್ಡ ಪ್ರಮಾಣದಲ್ಲಿ ಗುಂಪು ಗೂಡಬಾರದು. ಸಾಮಾಜಿಕ ಅಂತರ ಕಾಯ್ದುಕೊಂಡು ಚಚ್‌ರ್‍ಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿರುತ್ತದೆ. ಅನಗತ್ಯವಾಗಿ ಧಾರ್ಮಿಕ ಆಚರಣೆಗಳ ಮೇಲೆ ನಿಬಂರ್‍ಧ ವಿಧಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

click me!