ಕಾಂಗ್ರೆಸ್ ಸರ್ಕಾರದಿಂದ ಬಡಜನರು ಹಾಗೂ ಕಾರ್ಮಿಕರಿಗೆ ಅನುಕೂಲವಾಗುವಂತೆ ಸ್ಥಾಪಿಸಲಾಗಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ.
ಮೈಸೂರು (ಜೂ.17): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಬಡಜನರು ಹಾಗೂ ಕಾರ್ಮಿಕರಿಗೆ ಅನುಕೂಲವಾಗುವಂತೆ ಸ್ಥಾಪಿಸಲಾಗಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ ಎಂದು ಸಚಿವ ಸಮಾಜ ಕಲ್ಯಾಣ ಡಾ.ಎಚ್.ಸಿ. ಮಹದೇವಪ್ಪ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಡಿ. ಮಹದೇವಪ್ಪ ಅವರು, ಇಂದಿರಾ ಕ್ಯಾಂಟೀನ್‌ನಲ್ಲಿ ಮಾಂಸಾಹಾರ ಪೂರೈಕೆ ವಿಚಾರವಾಗಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೆ, ಇಂದಿರಾ ಕ್ಯಾಂಟೀನ್‌ನಲ್ಲಿ ಸರ್ಕಾರದಿಂದ ಸಸ್ಯಾಹಾರದ ಊಟ ಕೊಡುತ್ತೇವೆ. ಹೊರಗಡೆಯಿಂದ ಮಾಂಸಾಹಾರ (ಕಬಾಬ್, ಚಿಕನ್ ಸಾಂಬಾರ್ ಇತ್ಯಾದಿ..) ತಂದು ಇಂದಿರಾ ಕ್ಯಾಂಟೀನ್‌ನಲ್ಲಿ ತಿನ್ನಬಹುದು. ರಾಜ್ಯದಲ್ಲಿ ಇನ್ನಷ್ಟು ಇಂದಿರಾ ಕ್ಯಾಂಟೀನ್ ಶುರು ಮಾಡುವ ಪ್ರಸ್ತಾಪ ಇದೆ. ಊಟ ಕೊಡಬೇಕು ಅಂತ ಇದೆ. ಆದರೆ, ಮಾಂಸಾಹಾರ ನೀಡುವ ಬಗ್ಗೆ ಸದ್ಯಕ್ಕೆ ಚಿಂತನೆ ಇಲ್ಲ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ಐಟಿ ಕಂಪನಿಗೆ ಬಾಂಬ್ ಬೆದರಿಕೆ ಸತ್ಯ ಬಾಯ್ಬಿಟ್ಟ ಮಾಜಿ ಉದ್ಯೋಗಿ
ಸಿದ್ದರಾಮಯ್ಯಗೂ, ನಂಗೂ ದನ ಮೇಯಿಸುವ ಬಗ್ಗೆ ಗೊತ್ತಿದೆ:
ನಾವೆಲ್ಲಾ ಸಂವಿಧಾನದ ಹೆಸರಲ್ಲೇ ಪ್ರಮಾಣ ವಚನ ಸ್ವೀಕಾರ ಮಾಡಿದವರು. ಸಂವಿಧಾನ ಹೇಳಿದ ಹಾಗೆ ನಡೆದುಕೊಳ್ಳುತ್ತೇವೆ. ಪಠ್ಯದಲ್ಲಿ ಚರಿತ್ರೆಯನ್ನ ಸರಿಯಾಗಿ ಹೇಳಬೇಕು. ಚರಿತ್ರೆ ತಪ್ಪಾಗೆ ಹೇಳಿದರೆ ಯುವಕರು ದಾರಿ ತಪ್ಪುತ್ತಾರೆ. ಶ್ರೀರಂಗಪಟ್ಟಣದಲ್ಲಿ ಒಂದುಕಡೆ, ಗಂಟೆ ಇನ್ನೊಂದು ಕಡೆ ಮಸೀದಿ ಇದೆ. ಇದು ಸೌಹಾರ್ದತೆಯನ್ನ ಸುಚಿಸುತ್ತದೆ. ನಮಗೆ ಬೇಕಿರೋದು ಧರ್ಮ ಆಧಾರಿತ ರಾಷ್ಟ್ರವಲ್ಲ. ಸಮೃದ್ಧ ರಾಷ್ಟ್ರದ ಗುರಿ ನಮ್ಮದು. ಗೋಹತ್ಯೆ ನಿಷೇದ ಕಾಯ್ದು 1964ನಲ್ಲೆ ಇದೆ. ಗೋ ಹತ್ಯೆ ವಿಚಾರವನ್ನ ಎಲ್ಲವನ್ನು ಪ್ರಸ್ತಾಪಸಲಾಗಿದೆ. ದನ ಮೇಯಿಸದೆ, ಗಂಜಲ ಹಿಡಿಯದೆ ಯಾರ್ಯೋರೊ ಮಾತನಾಡುತ್ತಾರೆ. ಅದರ ಬಗ್ಗೆ ಸಿದ್ದರಾಮಯ್ಯ, ನಾನು ಬಿದ್ದು ಒದ್ದಾಡಿದವರು. ದನ ಮೇಯಿಸುವ ಹಾಗೂ ಅದರ ಗಂಜಲದ ಬಗ್ಗೆ ಸಿದ್ದರಾಮಯ್ಯ, ನನಗೆ ಚೆನ್ನಾಗಿ ಗೊತ್ತು. ಇಂದು ಯಾರ್ ಯಾರೋ ಕೇಳಲು ಬರುತ್ತಿದ್ದಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರದೊಂದಿಗೆ ಮತ್ತೊಮ್ಮೆ ಮಾತುಕತೆ: ಅನ್ನಭಾಗ್ಯಕ್ಕೆ ಪರ್ಯಾಯ ಮಾರ್ಗವಾಗಿ ಅಕ್ಕಿ ಖರೀದಿಗೆ ಚಿಂತನೆ ಮಾಡಲಾಗಿದೆ. ಆಶ್ವಾಸನೆಗಳು ಜನರಿಗೆ ನೀಡುವ ಭರವಸೆಯಾಗಿವೆ. 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ವಿದ್ಯುತ್, ಉಚಿತ ಬಸ್ ಸೌಲಭ್ಯ ಜಾರಿಯಾಗಿದೆ. ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ನೀಡಲು ತೀರ್ಮಾನಿಸಿದ್ದೇವೆ. ಕೇಂದ್ರ ಸರ್ಕಾರ ಅಕ್ಕಿ ನೀಡಲು ಹಿಂದೇಟು ಹಾಕಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿದೆ. ಮುಖ್ಯಮಂತ್ರಿಗಳು ಕೇಂದ್ರದೊಂದಿಗೆ ಮಾತನಾಡುತ್ತಿದ್ದಾರೆ. ಕೇಂದ್ರ ಸರ್ಕಾರ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.
ಹೆಂಡ್ತಿ ಕೊಲ್ಲೋಕೆ ಕಂಟ್ರಿ ಪಿಸ್ತೂಲ್ ಖರೀದಿಸಿದ ಪತಿ: ಗನ್ ಇಟ್ಕೊಳೋಕೆ ಗೊತ್ತಾಗದೇ ಜೈಲು ಸೇರಿದ
ರಾಜ್ಯದಲ್ಲಿ ಶೇ.87 ಕುಟುಂಬಕ್ಕೆ ಮಹಿಳೆಯರೇ ಯಜಮಾನಿ: ಇನ್ನು ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿಗೆ ಸಿದ್ಧತೆಯಲ್ಲಿದ್ದೇವೆ. ಈ ಯೋಜನೆಯ ಮಾರ್ಗಸೂಚಿಗಳ ಅನ್ವಯ ಮನೆಯ ಯಜಮಾನಿ ಯಾರೆಂಬುದನ್ನು ತೀರ್ಮಾನ ಮಾಡುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಇರುವುದಿಲ್ಲ. ವಿಪಕ್ಷಗಳ ನಾಯಕರು ಅನಗತ್ಯವಾಗಿ ಗೊಂದಲ ಮೂಡಿಸುವುದಕ್ಕೆ ಅವಕಾಶವೇ ಇಲ್ಲದಂತಾಗಿದೆ. ರಾಜ್ಯದಲ್ಲಿ ಶೇ.87ರಷ್ಟು ಕುಟುಂಬದಲ್ಲಿ ಮಹಿಳೆಯೇ ಯಜಮಾನಿ ಆಗಿದ್ದಾರೆ. ಇನ್ನುಳಿದ ಕುಟುಂಬಕ್ಕೆ ಪುರುಷರು ಯಜಮಾನರು ಇರಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ ಹೇಳಿದರು.