
ನವದೆಹಲಿ(ಆ.06): ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರು ವೈಯಕ್ತಿಕ ಕೆಲಸ ನಿಮಿತ್ತ ಲಂಡನ್‌ಗೆ ತೆರಳಿದ್ದಾರೆ. ನಿನ್ನೆ(ಆ.05) ರಾತ್ರಿ ಬೆಂಗಳೂರಿನಿಂದ ತೆರಳಿದ ಕುಮಾರಸ್ವಾಮಿ, ಮೂರು ದಿನಗಳ ಕಾಲ ಲಂಡನ್‌ನಲ್ಲಿ ಉಳಿಯಲಿದ್ದಾರೆ.
ಕುಮಾರಸ್ವಾಮಿ ಜೊತೆಗೆ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ಲಂಡನ್‌ಗೆ ತೆರಳಿದ್ದು, ಬುಧವಾರ(ಆ.10) ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ಲಂಡನ್‌ಗೆ ಏಕೆ ಹೊಗಿದ್ದಾರೆ ಎನ್ನುವುದು ಖಚಿತವಾಗಿ ತಿಳಿದುಬಂದಿಲ್ಲ.
ಅಕ್ರಮ ಗಣಿಗಾರಿಕೆಗೆ ಇವರೇ ಕಾರಣ ಎಂದು ಬೊಟ್ಟು ಮಾಡಿದ ತೋರಿಸಿದ ಎಚ್‌ಡಿಕೆ
ಸಿಂಗಾಪುರದಲ್ಲಿ ಚಿಕಿತ್ಸೆ ಪಡೆದಿದ್ದ ಕುಮಾರಸ್ವಾಮಿ:
ಜ್ವರ ಹಾಗೂ ಕೆಮ್ಮುವಿನಿಂದ ತೀವ್ರ ಬಳಲಿದ್ದ ಹೆಚ್‌ಡಿ ಕುಮಾರಸ್ವಾಮಿ 2017ರ ಆಗಸ್ಟ್ ತಿಂಗಳಲ್ಲಿ ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲಲಾಗಿದ್ದರು. ಧರ್ಮಸ್ಥಳದ ಪ್ರಕೃತಿ ಚಿಕಿತ್ಸೆಯಲ್ಲಿ ಆರ್ಯುವೇದಿಕ್ ಚಿಕಿತ್ಸೆ ಪಡೆಯುತ್ತಿದ್ದ ಕುಮಾರಸ್ವಾಮಿಗೆ ಜ್ವರ ಹಾಗೂ ಕೆಮ್ಮು ತೀವ್ರಗೊಂಡಿದೆ. ಇದರಿಂದ ಆಯುರ್ವೇದಿಕೆ ಚಿಕಿತ್ಸೆ ಮೊಟಕುಗೊಳಿಸಿ ನೇರವಾಗಿ ಸಿಂಗಾಪುರಕ್ಕೆ ತೆರಳಿ ಚಿಕಿತ್ಸೆ ಪಡೆದಿದ್ದರು. ಉತ್ತರ ಕರ್ನಾಟಕ ಪ್ರವಾಸದ ವೇಳೆ ಅಭಿಮಾನಿಗಳು ಸಿಡಿಸಿದ ಪಟಾಕಿ ಹೊಗೆಯಿಂದ ಕುಮಾರಸ್ವಾಮಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಪಟಾಕಿ ಹೊಗೆಯಿಂದ ತೀವ್ರ ಕೆಮ್ಮು ಕಾಣಿಸಿಕೊಂಡಿತ್ತು. ಬಳಿಕ ಜ್ವರದಿಂದ ಬಳಲಿದ್ದರು.
ಕೋವಿಡ್‌ನಿಂದ ಚೇತರಿಸಿಕೊಂಡಿರುವ ಕುಮಾರಸ್ವಾಮಿ
ಹೆಚ್‌ಡಿ ಕುಮಾರಸ್ವಾಮಿಗೆ 2022ರ ಜುಲೈ ತಿಂಗಳ ಆರಂಭದಲ್ಲಿ ಮತ್ತೊಮ್ಮೆ ಕೊರೋನಾ ಕಾಣಿಸಿಕೊಂಡಿತ್ತು. ಮೈಲ್ಡ್ ಸಿಂಪ್ಟಮ್ಸ್ ಕಾರಣ 10 ದಿನಗಳ ವೈದ್ಯರ ಸೂಚನೆಯಂತೆ ಮನೆಯಲ್ಲಿ ವಿಶ್ರಾಂತಿ ಪಡೆದು ಚೇತರಿಸಿಕೊಂಡಿದ್ದರು. 2021ರಲ್ಲಿ ಕುಮಾರಸ್ವಾಮಿಗೆ ಕೋವಿಡ್‌ಗೆ ತುತ್ತಾಗಿದ್ದರು. ಈ ವೇಳೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದ ಕುಮಾರಸ್ವಾಮಿ ಕೆಲ ದಿನಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದರು.
ರಾಮನಗರದಿಂದ ಯಾರು ಬೇಕಿದ್ರೂ ಕಣಕ್ಕಿಳಿಯಲಿ: ಕುಮಾರಸ್ವಾಮಿ ಖಡಕ್ ಮಾತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ