ಫಲಪುಷ್ಪದಲ್ಲಿ ಅರಳಿದ ಡಾ| ರಾಜ್‌, ಪುನೀತ್‌ ಜೀವನ

Published : Aug 06, 2022, 09:55 AM ISTUpdated : Aug 06, 2022, 09:58 AM IST
ಫಲಪುಷ್ಪದಲ್ಲಿ ಅರಳಿದ ಡಾ| ರಾಜ್‌, ಪುನೀತ್‌ ಜೀವನ

ಸಾರಾಂಶ

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ನಟ ಸಾರ್ವಭೌಮ ಡಾ ರಾಜ್‌ಕುಮಾರ್‌ ಮತ್ತು ನಟ ಪುನೀತ್‌ರಾಜ್‌ ಕುಮಾರ್ ಅರಳಿದ್ದಾರೆ

ಬೆಂಗಳೂರು (ಆ.6) : ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ನಟ ಸಾರ್ವಭೌಮ ಡಾ ರಾಜ್‌ಕುಮಾರ್‌ ಮತ್ತು ನಟ ಪುನೀತ್‌ರಾಜ್‌ ಕುಮಾರ್‌ ಅವರ ಜೀವನದ ಪುಟಗಳನ್ನು ಮತ್ತೊಮ್ಮೆ ಮೆಲಕು ಹಾಕುವ ಅನುಭವ ನೀಡಲಿದೆ. ಡಾ.ರಾಜ್‌ಕುಮಾರ್‌ ಅವರ ಬಾಲ್ಯದಲ್ಲಿ ಬೆಳೆದ ಗಾಜನೂರಿನ ಮನೆ, ಸಿನಿಮಾ ರಂಗ ಪ್ರವೇಶದ ಬಳಿಕ ಮೊದಲ ಚಲನಚಿತ್ರದಲ್ಲಿ ನಟನೆ, ಯೋಗ ಮಾಡುತ್ತಿರುವ ದೃಶ್ಯ ಹಾಗೂ ಭಕ್ತ ಪ್ರಹ್ಲಾದ ಚಿತ್ರದಲ್ಲಿ ಹಿರಣ್ಯಕಶ್ಯಪನ ಪಾತ್ರವನ್ನು ಇಲ್ಲಿ ನೋಡಬಹುದಾಗಿದೆ.\

ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ: ಹೇಗಿದೆ ನೋಡೋಣ ಬನ್ನಿ

ಜತೆಗೆ, ಪುನೀತ್‌ ರಾಜ್‌ಕುಮಾರ್‌(Puneet Rajkumar) ಅವರು ಬಾಲ್ಯದಿಂದ ಸಿನಿಮಾಗಳಲ್ಲಿ ಗುರುತಿಸಿಕೊಂಡ ಪ್ರಮುಖ ಚಿತ್ರಗಳ ವಿವರ ಇರಲಿದ್ದು, ಈ ಇಬ್ಬರೂ ಮೇರು ನಟರು ಸಿನಿಮಾ ರಂಗದಲ್ಲಿ ಸಾಧನೆಗಳನ್ನು ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದ ಸಯೋಗದಲ್ಲಿ ಶುಕ್ರವಾರದಿಂದ (ಆ.5ರಿಂದ) ಆರಂಭವಾದ ಫಲಪುಷ್ಪ ಪ್ರದರ್ಶನದಲ್ಲಿ ಕಣ್ತುಂಬಿ ಕೊಳ್ಳಬಹುದಾಗಿದೆ. ಲಾಲ್‌ಬಾಗ್‌(Lal Baag)ನ ಗಾಜಿನ ಮನೆ ಪ್ರವೇಶಿಸುತ್ತಿದ್ದಂತೆ ಮುಖ್ಯದ್ವಾರದ ಎಡ ಭಾಗದಲ್ಲಿ ಪುನೀತ್‌ ರಾಜ್‌ಕುಮಾರ್‌ ಮತ್ತು ಬಲಬದಿಯಲ್ಲಿ ಡಾ

ರಾಜ್‌ ಕುಮಾರ್‌ ಅವರ ಚಿನ್ನದ ಬಣ್ಣದ ಪ್ರತಿಮೆಗಳು ಸ್ವಾಗತಿಸಲಿವೆ. ಮುಂದೆ ನಡೆದಂತೆ ಅಪ್ಪ ರಾಜ್‌ಕುಮಾರ್‌ ಮತ್ತು ಮಗ ಪುನೀತ್‌ ರಾಜ್‌ಕುಮಾರ್‌ ಚಿಕ್ಕದಾದ ಪುತ್ಥಳಿಗಳು ಹೂವಿನ ಅಲಂಕಾರದೊಂದಿಗೆ ನೋಡುಗರನ್ನು ಆಕರ್ಷಿಸುತ್ತವೆ. ಮಯೂರ ಸಿನಿಮಾದಲ್ಲಿನ ಪಾತ್ರದ ರಾಜ್‌ಕುಮಾರ್‌ ಪುತ್ಥಳಿ ಎದುರಾಗಲಿದೆ. ಮತ್ತೊಂದು ಬದಿಯಲ್ಲಿ ರಾಜಕುಮಾರ್‌ ಸಿನಿಮಾದಲ್ಲಿನ ರಾಜನಂತೆ ಪುನೀತ್‌ ರಾಜ್‌ಕುಮಾರ್‌ ಹೆಜ್ಜೆ ಹಾಕುತ್ತಿರುವ ಪುತ್ಥಳಿ ಇದೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಸುಮಾರು ವಿವಿಧ ಜಾತಿಯ ಪುಷ್ಪಾಲಂಕಾರಗಳು ನೋಡುಗರ ಕಣ್ಮನ ಸೆಳೆಯಲಿವೆ.

ಆಗಸ್ಟ್‌ 5ರಿಂದ ಪುನೀತ್‌ ಜೀವನ ಕಥೆ ಹೇಳಲಿರುವ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ

ಹಿರಣ್ಯ ಕಶ್ಯಪ ಚಿತ್ರ:

ಡಾ ರಾಜ್‌ಕುಮಾರ್‌ ಮತ್ತು ಪುನೀತ್‌ ಅಭಿನಯಕ್ಕೆ ಸಾಕ್ಷಿಯಾಗಿದ್ದು ಭಕ್ತ ಪ್ರಹ್ಲಾದ ಚಿತ್ರ. ಈ ಚಲನ ಚಿತ್ರದಲ್ಲಿನ ಕ್ಲೈಮ್ಯಾಕ್ಸ್‌ನ ಒಂದು ಭಾಗವನ್ನು ಮರು ಸೃಷ್ಟಿಸಲಾಗಿದೆ. ಬಾಲಕನಾಗಿದ್ದ ಪುನೀತ ಮತ್ತು ರಾಜ್‌ಕುಮಾರ್‌ ನಡುವಿನ ಸಂಭಾಷಣೆ, ಕಂಭವನ್ನು ಸೀಳಿಕೊಂಡು ಬರುವ ನರಸಿಂಹನ ಪ್ರತಿಮೆ ಜನರನ್ನು ಆಕರ್ಷಿಸುತ್ತದೆ.

ಶ್ರೀಕೃಷ್ಣ ದೇವರಾಯ ಸಿನಿಮಾದಲ್ಲಿ ‘ಶ್ರೀಕೃಷ್ಣದೇವರಾಯ’ನ ಪಾತ್ರದಲ್ಲಿ ಕುಳಿತು ಕೊಳ್ಳವ ಶೈಲಿಯ ಪ್ರತಿಮೆ, ಸುತ್ತಲು ಇರುವ ಹೂವಿನ ಅಲಂಕಾರ ಮಾಡಲಾಗಿದೆ. ಅಲ್ಲದೆ, ಅಪ್ಪ ಅಮ್ಮನ ಮಧ್ಯದಲ್ಲಿ ಮುದ್ದು ರಾಜಕುಮಾರ ಪುನೀತ್‌ ಇರುವ ಪುತ್ಥಳಿಗಳು ಅಭಿಮಾನಗಳನ್ನು ಮೂಕ ವಿಸ್ಮಿತರನ್ನಾಗಿಸಲಿದ್ದು, ಈ ಮೂವರನ್ನೂ ಒಂದೇ ಕಡೆ ನೋಡಿ ಹಲವು ಮಂದಿ ಅಭಿಮಾನಿಗಳು ಕಣ್ಣಂಚಲ್ಲಿ ನೀರು ತುಂಬಿಕೊಂಡಿತ್ತು.

ಮೈಸೂರಿನಲ್ಲಿ ಅನಾಥ ಮಕ್ಕಳು ಮತ್ತು ವಿಧವೆಯರ ಏಳ್ಗೆಗಾಗಿ ಡಾ.ರಾಜ್‌ಕುಮಾರ್‌ ಅವರು ಸ್ಥಾಪಿಸಿದ್ದ ಶಕ್ತಿಧಾಮವನ್ನು ಪುಷ್ಪಗಳ ಮೂಲಕ ನಿರ್ಮಿಸಲಾಗಿದೆ. ಅದಕ್ಕಾಗಿ ಪುನೀತ್‌ ರಾಜ್‌ಕುಮಾರ್‌ ನೀಡುತ್ತಿದ್ದ ನೆರವನ್ನು ತಿಳಿಯಪಡಿಸುವಂತೆ ಚಿತ್ರಿಸಲಾಗಿದೆ. ಅದರ ಮುಂದೆ ಪುನೀತ್‌ ಅವರ ಪುತ್ಥಳಿ ವೀಕ್ಷಕರ ಗಮನ ಸೆಳೆಯಲಿದೆ.

ರಾಘವೇಂದ್ರ ಸ್ವಾಮಿಯಾಗಿ ರಾಜ್‌ಕುಮಾರ್‌:

ಡಾ. ರಾಜ್‌ಕುಮಾರ್‌ ಅವರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿದ್ದರು. ಜತೆಗೆ ಚಲನಚಿತ್ರವೊಂದರಲ್ಲಿ ರಾಘವೇಂದ್ರ ಸ್ವಾಮಿಗಳ ಪಾತ್ರವನ್ನು ನಿಭಾಯಿಸಿದ್ದರು. ಇದನ್ನು ಬಿಂಬಿಸವಂತಹ ಬೃಂದಾವನ ಮತ್ತು ಅದರ ಮುಂದೆ ಕುಳಿತಿರುವ ಸನ್ನಿವೇಶವನ್ನು ಸೃಷ್ಟಿಸಲಾಗಿದೆ. ಅಲ್ಲದೆ, ಬೇಡರ ಕಣ್ಣಪ್ಪನಾಗಿ ಅವತರಿಸಿರುವ ಡಾ. ರಾಜ್‌ಕುಮಾರ್‌ ಶಿವಲಿಂಗದ ಮೇಲೆ ಕಾಲನ್ನಿಡುವ ದೃಶ್ಯವು ಪುಷ್ಪಾಲಂಕೃತವಾಗಿದೆ. ಅಲ್ಲದೆ, ಗಾಜಿನ ಮನೆಯ ಸುತ್ತಲು ಡಾ.ರಾಜ್‌ ಕುಮಾರ್‌ ಮತ್ತು ಪುನೀತ್‌ ರಾಜ್‌ ಕುಮಾರ್‌ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಹಾಕಲಾಗಿದ್ದು.

ಫಲಪುಷ್ಪ ಪ್ರದರ್ಶನದ ಪ್ರಾರಂಭದ ದಿನ ಸುಮಾರು 4 ಸಾವಿರಕ್ಕೂ ಹೆಚ್ಚು ಜನ ಲಾಲ್‌ಬಾಗ್‌ ಪ್ರವೇಶಿಸಿದ್ದು, ಒಟ್ಟ2.94 ಲಕ್ಷ ರು.ಗಳು ಸಂಗ್ರಹವಾಗಿದೆ. ಲಾಲ್‌ಬಾಗ್‌ನ ಎಲ್ಲ ದ್ವಾರಗಳಲಿ 3,781 ವಯಸ್ಕರು ಮತ್ತು 445 ಮಕ್ಕಳು ಸೇರಿ 4,226 ಮಂದಿ ಉದ್ಯಾನಕ್ಕೆ ಆಗಮಿಸಿದ್ದಾರೆ. ಈ ಎಲ್ಲರಿಂದ ಒಟ್ಟು, 2,94,660 ರು.ಗಳು ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಪ್ಪು ಮತ್ತು ತಂದೆ ರಾಜ್‌ಕುಮಾರ್‌ ಅವರ ಯಶಸ್ಸು ಮತ್ತು ಜೀವನವು ಹೇಳಿಕೆಗೆ ನಿಲುಕದ್ದು, ಅವರ ನೆನಪುಗಳು ಹೂವಿನಂತೆ ಸದಾ ಹೊಸದಾಗಿರುತ್ತದೆ. ಅಪ್ಪು, ಅಪ್ಪ ಹಾಗೂ ಅಮ್ಮ ಅವರ ಹೂವಿನ ರೂಪಗಳು ತುಂಬಾ ಸುಂದರವಾಗಿ ಚಿತ್ರಣವಾಗಿದೆ. ಫ್ಲವರ್‌ ಶೋ ಅತ್ಯುತ್ತಮವಾಗಿ ಮೂಡಿಬಂದಿದೆ.

-ಶಿವರಾಜ್‌ಕುಮಾರ್‌, ನಟ.

 

ಈ ಫಲಪುಷ್ಪ ಪ್ರದರ್ಶನವು ಸುಖ-ದುಃಖಗಳ ಮಿಶ್ರಿತವಾಗಿದೆ. ಅಪ್ಪು ಅಪ್ಪನ ಜೀವನದೊಳಗೆ ಹೋಗಿ ಬಂದಂತೆ ಭಾಸವಾಗುತ್ತದೆ. ಅದ್ಭುತವಾಗಿ ಫಲಫುಷ್ಪ ಪ್ರದರ್ಶನವನ್ನು ಅತ್ಯಂತ ಪ್ರೀತಿಯಿಂದ ಮಾಡಿದ್ದಾರೆ.

-ರಾಘವೇಂದ್ರ ರಾಜ್‌ಕುಮಾರ್‌, ನಟ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ