ಹಲವು ಪ್ರಕರಣ ಭೇದಿಸಿದ ಅರಣ್ಯ ಇಲಾಖೆ ಮುದ್ದಿನ ರಾಣಾ ಸಾವು, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ!

Published : Aug 02, 2022, 01:12 PM IST
ಹಲವು ಪ್ರಕರಣ ಭೇದಿಸಿದ ಅರಣ್ಯ ಇಲಾಖೆ ಮುದ್ದಿನ ರಾಣಾ ಸಾವು, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ!

ಸಾರಾಂಶ

ವನ್ಯಜೀವಿ ಅಪರಾಧ ಪತ್ತೆಗಾಗಿ ರಾಜ್ಯ ಸರ್ಕಾರ ಕರ್ನಾಟಕ ಶ್ವಾನದಳ ರಚಿಸಲಾಗಿದೆ. ಈ ಶ್ವಾನದಳದಲ್ಲಿ ತರಬೇತಿ ನೀಡಿದ ಶ್ವಾನಗಳನ್ನು ವಿವಿಧ ಇಲಾಖೆಗಳಲ್ಲಿ ನಿಯೋಜಿಸಲಾಗುತ್ತಿದೆ. ಇದರಲ್ಲಿ ಕರ್ನಾಟಕ ಶ್ವಾನದಳದ ಮೊದಲ ಸದಸ್ಯ ರಾಣ ಮೃತಪಟ್ಟಿದೆ. 

ಬಂಡಿಪುರ(ಆ.02):  ವನ್ಯಜೀವಿ ಅಪರಾಧಗಳನ್ನು ಪತ್ತೆಹಚ್ಚಲು ರಚಿಸಲಾಗಿರುವ ಕರ್ನಾಟಕ ಶ್ವಾನದಳದ ಮೊದಲ ಸದಸ್ಯ, ಅರಣ್ಯ ಇಲಾಖೆ ಕರ್ತವ್ಯದಲ್ಲಿದ್ದ ರಾಣಾ ಇಂದು ಮೃತಪಟ್ಟಿದೆ. ಬಂಡಿಪುರ ಅರಣ್ಯ ವ್ಯಾಪ್ತಿಯ ಹುಲಿ ಸಂರಕ್ಷಿತ ವಲಯದಲ್ಲಿ ಕರ್ತವ್ಯದಲ್ಲಿ ಅತ್ಯಂತ ಚುರುಕಿನ ಹಾಗೂ ಜಾಣ ಶ್ವಾನ ಎಂದೇ ಗುರುತಿಸಿಕೊಂಡಿತ್ತು. ಬಂಡಿಪುರ ಅರಣ್ಯ ಇಲಾಖೆಯಲ್ಲಿ ಅತೀ ಹೆಚ್ಚು ಹಾಗೂ ಅತೀ ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸಿದ ಕೀರ್ತಿ ರಾಣಾಗಿದೆ. ಅರಣ್ಯ ಇಲಾಖೆಯ ಅತ್ಯಂತ ಪ್ರೀತಿಯ ಹಾಗೂ ಮುದ್ದಿನ ಶ್ವಾನ ರಾಣ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದಿದೆ. ರಾಷ್ಟ್ರಧ್ವಜ ಹೊದಿಸಿ ಸರ್ಕಾರಿ ಗೌರವಗಳೊಂದಿಗೆ ಗೌರವ ನಮನ ಸಲ್ಲಿಸಲಾಗಿದೆ. ಬಳಿಕ ಬಂಡಿಪುರದ ಹುಲಿ ಸಂರಕ್ಷಿತ ವಲಯದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅಗಲಿಗೆ ರಾಣಾ ಅಂತ್ಯಕ್ರಿಯೆಯಲ್ಲಿ  ಸಿಬ್ಬಂದಿಗಳು ಕಣ್ಣಂಚು ಒದ್ದೆಯಾಗಿತ್ತು. 

ವಯೋ ಸಹಜ  ಆರೋಗ್ಯ ಸಮಸ್ಯೆಯಿಂದ ರಾಣ(First member of Canine Squad) ಮೃತಪಟ್ಟಿದೆ. 13 ವರ್ಷ ವಯಸ್ಸಿನ ರಾಣಾ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿಬ್ಬಂದಿಗಳೊಂದಿಗೆ ಅತ್ಯಂತ ದಕ್ಷವಾಗಿ ಕರ್ತವ್ಯ ನಿರ್ವಹಿಸಿದೆ. 2014ರಲ್ಲಿ ರಾಣಾ(Rana ) ಅರಣ್ಯ ಇಲಾಖೆಗೆ ಸೇರಿಕೊಂಡಿತು. ಬೋಪಾಲ್‌ನಲ್ಲಿರನ ಭಾರತೀಯ ಸೇನೆಯ 9ನೇ ಬೆಟಾಲಿಯನ್‌ನಲ್ಲಿ ತರಬೇತಿ ಪಡೆದಿತ್ತು. ಕಳೆದ 50 ವರ್ಷಗಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳನ್ನು ಭೇದಿಸಿದ ಹೆಗ್ಗಳಿಕೆಗೆ ರಾಣಾಗಿದೆ. ಅರಣ್ಯದಲ್ಲಿ(Karnataka Forest Department) ಹುಲಿ ಬೇಟೆ ಪ್ರಕರಣ, ಶಸ್ತ್ರಾಸ್ತ್ರ ಪತ್ತೆ ಹಚ್ಚುವಲ್ಲಿ ರಾಣಾ ಮಾಸ್ಟರ್ ಆಗಿತ್ತು. 

ಉಗ್ರರ ವಿರುದ್ಧ ಹೋರಾಟದಲ್ಲಿ ಹುತಾತ್ಮನಾದ 2 ವರ್ಷದ ಅಲೆಕ್ಸ್: ಸೇನಾ ಶ್ವಾನಕ್ಕೆ ಭಾವಪೂರ್ಣ ವಿದಾಯ

ಅರಣ್ಯ ಇಲಾಖೆ(KFD) ಸೇರಿದ ರಾಣಾಗೆ ಕರ್ನಾಟಕದ ಸ್ಪೆಷಲ್ ಟಾಸ್ಕ್ ಪ್ರೊಟೆಕ್ಷನ್ ಫೋರ್ಸ್‌ನ  ಪ್ರಕಾಶ ಹೊನ್ನಕೊರೆ ತರಬೇತಿ ನೀಡಿದ್ದಾರೆ. ಪ್ರಕಾಶ್ ತರಬೇತಿಯಲ್ಲಿ ಪಳಗಿದ ರಾಣಾ ಅತೀ ಚುರುಕಿನ ಹಾಗೂ ಜಾಣ ಶ್ವಾನ ಸಿಬ್ಬಂದಿ ಅನ್ನೋ ಹಿರಿಮೆಗೆ ಪಾತ್ರವಾಗಿತ್ತು. ರಾಣಾ ಇನ್ನಿಲ್ಲ ಅನ್ನೋ ವಿಚಾರ ತಿಳಿದು ಪ್ರಕಾಶ್ ನೋವಿನಲ್ಲಿ ಗದ್ಗದಿತರಾದರು. ರಾಣಾ ಸ್ಥಾನವನ್ನು ತುಂಬಲು ಯಾರಿಗೂ ಸಾಧ್ಯವಿಲ್ಲ. ಇನ್ಯಾವುದೇ ಶ್ವಾನಕ್ಕೆ ತರಬೇತಿ ನೀಡಿದರೂ ರಾಣಾ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದು ಪ್ರಕಾಶ್ ಹೇಳಿದ್ದಾರೆ. ಕಳೆದ ಎರಡು ವರ್ಷದಿಂದ ರಾಣಾ ಜೊತೆಗಿದ್ದೇನೆ. ಎರಡು ವರ್ಷದಲ್ಲಿ 30ಕ್ಕೂ ಹೆಚ್ಚು ಪ್ರಕರಣ ರಾಣಾ ಪರಿಹರಿಸಿದೆ. 

ಮಗುವಿನ ಮೇಲೆ ನಾಯಿಯ ಪೊಸೆಸಿವ್‌ನೆಸ್: ಟಚ್ ಮಾಡಲು ಬಿಡದೆ ಕಾಯುವ ಶ್ವಾನ

ಇದೀಗ ರಾಣಾ ನಿಧನದಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ತೀವ್ರ ದುಃಖಪ್ತಗೊಂಡಿದ್ದಾರೆ. ರಾಣಾ ನೆನೆದು ಕಣ್ಮೀರಿಟ್ಟಿದ್ದಾರೆ. 9 ತಿಂಗಳು ಭೋಪಾಲ್‌ನಲ್ಲಿ ತರಬೇತಿ ಪಡೆದ ರಾಣಾ, ಬಂಡಿಪುರ ಹುಲಿಸಂರಕ್ಷಿತ ಅರಣ್ಯದಲ್ಲಿ ಪ್ರತಿ ದಿನ 30 ರಿಂದ 35 ಕಿ.ಮೀ ಸುತ್ತಾಡುತ್ತಿತ್ತು. ರಾಣಾ ಪ್ರತಿ ದಿನ ಆಹಾರದಲ್ಲೂ ಪ್ರಕಾಶ್ ಹೊನ್ನಕೊರೆ ಹೆಚ್ಚಿನ ಮುತುವರ್ಜಿವಹಿಸಿದ್ದರು. ಬೆಳಗ್ಗೆ 300 ಗ್ರಾಮ್ ಪಿಡೀಗ್ರಿ, 1 ಲೀಟರ್ ಹಾಲು ಬಳಿಕ 500 ಗ್ರಾಮ್ ಮಾಂಸ, ಸಂಜೆ 200 ಗ್ರಾಮ್ ಪಿಡೀಗ್ರಿ ಪ್ರಮುಖ ಆಹಾರವಾಗಿತ್ತು. ಇದರ ಜೊತೆಗೆ ಊಟವನ್ನು ನೀಡಲಾಗುತ್ತಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್