ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಬಂಪರ್ ಆಫರ್, ಬಡ್ಡಿ ಇಲ್ಲದೇ ಸಾಲ

By Kannadaprabha NewsFirst Published Sep 15, 2020, 8:23 AM IST
Highlights

ರಾಜ್ಯದಲ್ಲಿ ರೈತರಿಗೆ ಇಲ್ಲಿಗೆ ಬಂಪರ್ ಗುಡ್ ನ್ಯೂಸ್. ರೈತರು ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆದುಕೊಳ್ಳುವ ಅವಕಾಶ ಇಲ್ಲಿದೆ. 

ಬೆಂಗಳೂರು (ಶೆ.15):  ರಾಜ್ಯದಲ್ಲಿ ರೈತರಿಗೆ ಪ್ರಸಕ್ತ ಸಾಲಿನ (2020-21) ಅಲ್ಪಾವಧಿ ಬೆಳೆ ಸಾಲ ನೀಡಲು ಸಹಕಾರ ಇಲಾಖೆ ಆದೇಶಿಸಿದ್ದು, ರಾಜ್ಯದ್ಯಂತ ಪತ್ತಿನ ಸಹಕಾರಿ ಸಂಸ್ಥೆಗಳಲ್ಲಿ ಅರ್ಜಿ ಸಲ್ಲಿಸಿ ಶೂನ್ಯ ಬಡ್ಡಿ ದರದಲ್ಲಿ ಮೂರು ಲಕ್ಷ ರು.ವರೆಗೆ ಬೆಳೆ ಸಾಲ ಪಡೆಯಬಹುದು ಎಂದು ಸೂಚಿಸಿದೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಡಿಸಿಸಿ ಬ್ಯಾಂಕ್‌ನ ಶಾಖೆ, ಪಿಕಾರ್ಡ್‌ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ನವೀಕರಣ ಹಾಗೂ ಹೊಸ ಸಾಲ ಪಡೆಯಲು ಅಗತ್ಯ ಅರ್ಜಿಗಳ ವಿತರಣೆಗೆ ಆದೇಶಿಸಲಾಗಿದೆ. ಜತೆಗೆ ಸಾಲದ ಅರ್ಜಿಗಳನ್ನು ಸ್ವೀಕರಿಸಿದ ಮತ್ತು ಸಾಲ ಮಂಜೂರಾದ ವಿವರಗಳನ್ನು ನಮೂದಿಸಲು ಪ್ರತ್ಯೇಕ ರಿಜಿಸ್ಟರ್‌ನ್ನು ನಿರ್ವಹಿಸಬೇಕು.

'ರೈತರೇ ಬೆಲೆ ನಿಗದಿಪಡಿಸುವ ವ್ಯವಸ್ಥೆ ಬರಲಿ' ..

ಸೆಪ್ಟೆಂಬರ್‌ 20 ರೊಳಗಾಗಿ ಆಯಾ ಡಿಸಿಸಿ ಬ್ಯಾಂಕ್‌ನ ಒಟ್ಟಾರೆ ಸದಸ್ಯರು, ಹೊಸ ಸದಸ್ಯರು ಮತ್ತು ಪರಿಶಿಷ್ಟಜಾತಿ, ಪಂಗಡದ ಸದಸ್ಯರಿಗೆ ಮಾಸಿಕವಾರು ಸಾಲ ನೀಡುವ ಗುರಿ ನಿಗದಿಪಡಿಸಿ ಕಚೇರಿಗೆ ಕಳುಹಿಸಬೇಕು. ರೈತ ಸರ್ಕಾರಿ ಅಥವಾ ಸರ್ಕಾರಿ ಸ್ವೌಮ್ಯದ ಸಂಸ್ಥೆಗಳಲ್ಲಿ ನೌಕರನಾಗಿದ್ದು 20 ಸಾವಿರಕ್ಕೂ ಹೆಚ್ಚು ವೇತನ ಪಡೆಯುತ್ತಿದ್ದರೆ ಅಂತಹವರಿಗೆ ಬಡ್ಡಿ ರಿಯಾಯಿತಿ ದೊರೆಯುವುದಿಲ್ಲ. ಹೀಗಾಗಿ ಅರ್ಜಿ ಸಲ್ಲಿಸುವ ವೇಳೆಯಲ್ಲೇ ಈ ಬಗ್ಗೆ ಘೋಷಣಾ ಪತ್ರ ಪಡೆಯಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

click me!