ಕಿಂಗ್‌ಫಿಶರ್‌ ಬಿಯರ್‌ನಲ್ಲಿ ಅಪಾಯಕಾರಿ ಅಂಶ, 25 ಕೋಟಿ ರೂಪಾಯಿ ಮೌಲ್ಯದ ಬಿಯರ್‌ ವಶ!

Published : Aug 16, 2023, 08:56 PM ISTUpdated : Aug 16, 2023, 09:02 PM IST
ಕಿಂಗ್‌ಫಿಶರ್‌ ಬಿಯರ್‌ನಲ್ಲಿ ಅಪಾಯಕಾರಿ ಅಂಶ, 25 ಕೋಟಿ ರೂಪಾಯಿ ಮೌಲ್ಯದ ಬಿಯರ್‌ ವಶ!

ಸಾರಾಂಶ

ದೇಶದ ಜನಪ್ರಿಯ ಬಿಯರ್‌ ಬ್ರ್ಯಾಂಡ್‌ ಆಗಿರುವ ಕಿಂಗ್‌ಫಿಶರ್‌ನಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿದೆ. ಇದರಿಂದಾಗಿ 25 ಕೋಟಿ ರೂಪಾಯಿ ಮೌಲ್ಯದ ಬಿಯರ್‌ಅನ್ನು ರಾಜ್ಯ ಅಬಕಾರಿ ಇಲಾಖೆ ವಶಪಡಿಸಿಕೊಂಡಿದೆ.  

ಮೈಸೂರು (ಆ.16): ರಾಜ್ಯ ಅಬಕಾರಿ ಇಲಾಖೆಯು 25 ಕೋಟಿ ರೂಪಾಯಿ ಮೌಲ್ಯದ ಎರಡು ಪ್ರಮುಖ ಬ್ರಾಂಡ್‌ಗಳ ಬಿಯರ್‌ಗಳನ್ನು ವಶಪಡಿಸಿಕೊಂಡಿದ್ದಾಗಿ ತಿಳಿಸಿದೆ. ಕಿಂಗ್ ಫಿಷರ್ ಬಿಯರ್ ನಲ್ಲಿ ಅಪಾಯಕಾರಿ ಅಂಶ ಪತ್ತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ರಾಸಾಯನಿಕ ಪರೀಕ್ಷಾ ವರದಿಯು ಈ ಬಿಯರ್‌ "ಮಾನವನ ಬಳಕೆಗೆ ಯೋಗ್ಯವಲ್ಲ" ಎಂದು ಹೇಳಿರುವ ಕಾರಣ ಬುಧವಾರ ಬಿಯರ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದೆ. ನಂಜನಗೂಡಿನ ಘಟಕದಲ್ಲಿ‌ ತಯಾರಿಸಲಾಗಿದ್ದ ಬಿಯರ್ ನಲ್ಲಿ ಮಾತ್ರ ಈ ಅಂಶ ಪತ್ತೆಯಾಗಿದೆ. ಯುನೈಟೆಡ್ ಬ್ರೇವರಿಸ್‌ ಕಂಪನಿ ತಯಾರಿಸಿದ್ದ ಬಿಯರ್ ಇದಾಗಿದೆ ಎಂದು ಮೈಸೂರು ಗ್ರಾಮಾಂತರ ಅಬಕಾರಿ ಇಲಾಖೆಯ ಉಪ ಆಯುಕ್ತ ಎ.ರವಿಶಂಕರ್ ಹೇಳಿದ್ದಾರೆ. ಕಿಂಗ್ ಫಿಷರ್ ಸ್ಟ್ರಾಂಗ್ ಹಾಗೂ ಕಿಂಗ್ ಫಿಷರ್ ಅಲ್ಟ್ರಾ ಲ್ಯಾಗರ್ ಬಿಯರ್ ನಲ್ಲಿ ಮಾನವ ದೇಹಕ್ಕೆ ಅಪಾಯಕಾರಿಯಾಗಿರುವ ಸೆಡಿಮೆಂಟ್‌ ಅಂಶ ಪರೀಕ್ಷೆಯ ವೇಳೆ ಪತ್ತೆಯಾಗಿದೆ. 7e ಮತ್ತು 7 c ದಿನಾಂಕ ಜುಲೈ 15 ರಂದು ಬಾಟಿಲಿಂಗ್ ಆದ ಬಿಯರ್ ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿದೆ ಎಂದು ರವಿಶಂಕರ್‌ ತಿಳಿಸಿದ್ದಾರೆ.

ಇದರ ಬೆನ್ನಲ್ಲಿಯೇ ಬಿಯರ್ ಸ್ಯಾಂಪಲ್ಅನ್ನು ಕೆಮಿಕಲ್ ಲ್ಯಾಬ್ ಕಳುಹಿಸಲಾಗಿತ್ತು. ಆಗಸ್ಟ್‌ 2 ರಂದು ಇದರ ಕೆಮಿಕಲ್‌ ವರದಿ ಬಂದಿದೆ. ವರದಿಯಲ್ಲಿ ಅನ್ ಫಿಟ್ ಫಾರ್ ಹ್ಯುಮನ್ ಕನ್ಸಂಪ್ಷನ್ ಎಂದು ದಾಖಲಾಗಿದೆ. ಒಟ್ಟು‌ 78678 ಬಾಕ್ಸ್ ಬಿಯರ್ ಬಾಕ್ಸ್ ಅದಾಗಲೇ ಸರಬರಾಜಾಗಿತ್ತು. ಎಲ್ಲಾ ಬಾಕ್ಸ್ ಗಳನ್ನ ತಡೆಹಿಡಿಯಲಾಗಿದೆ. ಗುಣಮಟ್ಟದ ಬಿಯರ್ ತಯಾರು ಮಾಡದ ಕಾರಣ ಕಂಪನಿಯ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ. ಈಗಾಗಲೇ ಕೆಲ ಡಿಪೋದಿಂದ ಮದ್ಯ ಮಳಿಗೆಗಳಿಗೂ ವಿತರಣೆಯಾಗಿತ್ತು. ರಿಟೇಲ್‌ನಲ್ಲಿ ಸೇಲ್ ಆಗದಂತೆ ತಡೆ ಹಿಡಿಯಲಾಗಿದೆ. ಇನ್ ಹೌಸ್ ಕೆಮಿಸ್ಟ್ ಅವರು ಕೊಟ್ಟಿರುವ ರಿಪೋರ್ಟ್ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಮನುಷ್ಯರು ಕುಡಿಯಲು ಯೋಗ್ಯವಲ್ಲ ಎಂದು ಬಂದ ವರದಿ ಆಧರಿಸಿ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ. 

ಡೈಲಿ ಒಂದು ಪೆಗ್‌ ಹಾಕಿದ್ರೂ ನೀವು ಸೇಫಲ್ಲ: ನಿಮ್ಮನ್ನೂ ಕಾಡುತ್ತೆ ‘’ಸೈಲೆಂಟ್‌ ಕಿಲ್ಲರ್‌’’!

ಕಂಪನಿಯಿಂದ ಸ್ಪಷ್ಟನೆ:
ಇನ್ನು ಕಂಪನಿಯ ವಕ್ತಾರರು ಸ್ಪಷ್ಟನೆ ನೀಡಿದ್ದು, ಜುಲೈ 15 ರಂದು ನಂಜನಗೂಡಿನ ಕೆಲವೇ ಕೆಲವು ಬಿಯರ್‌ ಬಾಟಲ್‌ಗಳಲ್ಲಿ ಸಣ್ಣ ಪ್ರಮಾಣದ ಮಬ್ಬಿನ ಅಂಶ ಕಾಣಿಸಿಕೊಂಡಿತ್ತು. ಇದರಿಂದ ಆರೋಗ್ಯಕ್ಕೆ ಯಾವುದೇ ಅಪಾಯವೂ ಇರಲಿಲ್ಲ. ನಮ್ಮ ಎಲ್ಲಾ ಉತ್ಪನ್ನಗಳು ಗುಣಮಟ್ಟದ ಮಾನದಂಡಗಳನ್ನು ಸ್ಪಷ್ಟವಾಗಿ ಪಾಲಿಸುತ್ತದೆ ಎಂದು ತಿಳಿಸಿದ್ದಾರೆ.

ದೇಸಿ ವಿಸ್ಕಿ ಮೇಲೆ ಪ್ರೇಮ ಮೆರೆದ ಭಾರತೀಯರು: ಹುಡ್ಗೀರ ಬ್ರ್ಯಾಂಡ್‌ ವೋಡ್ಕಾ ಸೇವನೆಯಲ್ಲೂ ಹೆಚ್ಚಳ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್