CL 5 license ಬೀಗರೂಟ, ಪಾರ್ಟಿಗೆ ಮದ್ಯ ಖರೀದಿ ಸುಲಭ, ಹೊಸ ನಿಯಮ!

Published : May 16, 2022, 03:04 AM IST
CL 5 license ಬೀಗರೂಟ, ಪಾರ್ಟಿಗೆ ಮದ್ಯ ಖರೀದಿ ಸುಲಭ, ಹೊಸ ನಿಯಮ!

ಸಾರಾಂಶ

- ಸಿಎಲ್‌-5 ಲೈಸೆನ್ಸ್‌ ಪಡೆದು ಎಲ್ಲಿ ಬೇಕಾದರೂ ಖರೀದಿಸಿ - ಸದ್ಯದಲ್ಲೇ ಅಂತಿಮ ಆದೇಶ ಪ್ರಕಟಿಸಲು ತಯಾರಿ - ಎಲ್ಲಿ ಬೇಕಾದರೂ ಮದ್ಯ ಖರೀದಿ ಮಾಡಲು ಅವಕಾಶ  

ಬೆಂಗಳೂರು(ಮೇ.16): ತಾತ್ಕಾಲಿಕ ಅಥವಾ ಸಾಂದರ್ಭಿಕ ಸನ್ನದು (ಸಿಎಲ್‌-5) ಪಡೆಯುವವರಿಗೆ ಮದ್ಯ ಖರೀದಿಸಲು ಇದ್ದ ನಿರ್ಬಂಧಗಳನ್ನು ಸಡಿಲಗೊಳಿಸಲು ಅಬಕಾರಿ ಇಲಾಖೆ ಮುಂದಾಗಿದ್ದು, ಶೀಘ್ರದಲ್ಲಿ ಆದೇಶ ಪ್ರಕಟಿಸಲಿದೆ.

ಅಬಕಾರಿ ಕಾಯಿದೆಗೆ ತಿದ್ದುಪಡಿ ತಂದು ಕೆಎಸ್‌ಬಿಸಿಎಲ್‌ ಡಿಪೋಗಳಲ್ಲಿ ಮಾತ್ರವಲ್ಲದೆ ಇತರೆ ಮದ್ಯ ಮಳಿಗೆಗಳಲ್ಲೂ ಮದ್ಯ ಖರೀದಿಗೆ ಅವಕಾಶ ನೀಡಲು ಏಪ್ರಿಲ್‌ನಲ್ಲಿ ಕರಡು ನಿಯಮಗಳನ್ನು ಪ್ರಕಟಿಸಿತ್ತು. ಮದ್ಯ ಮಾರಾಟಗಾರರ ಒಕ್ಕೂಟ ಸೇರಿದಂತೆ ಯಾರೂ ಸಹ ಕರಡು ನಿಯಮಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಹೀಗಾಗಿ ಸದ್ಯದಲ್ಲೇ ಅಂತಿಮ ಆದೇಶ ಪ್ರಕಟಿಸಲಾಗುವುದು ಎಂದು ಅಬಕಾರಿ ಇಲಾಖೆ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಮದ್ಯ ವ್ಯಾಪಾರಿಗಳಿಂದ ಒಂದು ದಿನ ಖರೀದಿ ಸ್ಥಗಿತ!

ಸಿಎಲ್‌-5 ಸನ್ನದುದಾರರು ಈವರೆಗೆ ಕರ್ನಾಟಕ ರಾಜ್ಯ ಪಾನೀಯ ನಿಗಮ (ಕೆಎಸ್‌ಬಿಸಿಎಲ್‌) ಡಿಪೋಗಳಿಂದ ಮಾತ್ರ ಮದ್ಯ ಖರೀದಿ ಮಾಡಲು ಅನುಮತಿ ಇತ್ತು. ನಿಗದಿತ ದಿನಾಂಕದಂದು ಸನ್ನದು ಜತೆಗೆ ಡಿಪೋಗೆ ತೆರಳಿ ಆಗ ಲಭ್ಯವಿರುವ ಮದ್ಯಗಳಿಗೆ ಇಂಡೆಂಟ್‌ ಸಲ್ಲಿಸಬೇಕಿತ್ತು. ಇಂಡೆಂಟ್‌ ಸಲ್ಲಿಸಿರುವ ಮದ್ಯ ಲಭ್ಯತೆ ಆಧಾರದ ಮೇಲೆ ನಿಗಮದ ಬ್ಯಾಂಕ್‌ ಖಾತೆಗೆ ಹಣ ಪಾವತಿಸಬೇಕಿತ್ತು. ಬಳಿಕವಷ್ಟೇ ಮದ್ಯವನ್ನು ನೀಡಲಾಗುತ್ತಿತ್ತು. ಈ ವೇಳೆ ಅಗತ್ಯವಿರುವ ಬ್ರ್ಯಾಂಡ್‌ನ ಬಿಯರ್‌ ಅಥವಾ ಮದ್ಯ ಲಭ್ಯವಾಗುತ್ತಿರಲಿಲ್ಲ ಎಂಬ ದೂರುಗಳು ಇದ್ದವು.

ಇದೀಗ ಅಬಕಾರಿ ಇಲಾಖೆ ನಿಯಮಗಳಿಗೆ ತಿದ್ದುಪಡಿ ತಂದು ಡಿಪೋಗಳಲ್ಲಿ ಮಾತ್ರವಲ್ಲದೆ ಸಿಎಲ್‌-11 (ವಿತರಕರು), ಸಿಎಲ್‌-2 ಚಿಲ್ಲರೆ ಮದ್ಯ ಮಾರಾಟ ಮಳಿಗೆ, ಸಿಎಲ್‌-11ಸಿ ಎಂಎಸ್‌ಐಎಲ್‌ ಮಳಿಗೆಗಳಲ್ಲೂ ಸಿಎಲ್‌-5 ಸನ್ನದು ತೋರಿಸಿ ಮದ್ಯ ಖರೀದಿ ಮಾಡಬಹುದು. ಸಿಎಲ್‌-5 ಸನ್ನದುದಾರರಿಗೆ ಅಗತ್ಯವಿರುವ ಯಾವುದೇ ರೀತಿಯ ಮದ್ಯವನ್ನು ಸೂಕ್ತ ಬಿಲ್ಲುಗಳ ನಿರ್ವಹಣೆಯೊಂದಿಗೆ ನೀಡಲು ಅವಕಾಶ ನೀಡಲಾಗಿದೆ.

ಏನಿದು ಸಿಎಲ್‌-5 ಸನ್ನದು?:
ಮದುವೆ, ಹುಟ್ಟುಹಬ್ಬ ಆಚರಣೆ, ಬೀಗರೂಟ ಮತ್ತಿತರ ವೈಯಕ್ತಿಕ ಕಾರ್ಯಕ್ರಮಗಳಲ್ಲಿ ಮದ್ಯ ಬಳಕೆಗೆ ತಾತ್ಕಾಲಿಕ ಸನ್ನದು (ಸಿಎಲ್‌-5) ಪಡೆಯುವುದು ಕಡ್ಡಾಯ. ಸನ್ನದು ಅಥವಾ ಪರವಾನಗಿ ಪಡೆಯದೆ ಮದ್ಯ ಬಳಕೆ ಮಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಅವಕಾಶವಿದೆ.

32 ವರ್ಷ ಹಳೆಯ, 311 ಲೀಟರ್, ವಿಶ್ವದ ಅತೀ ದೊಡ್ಡ ವಿಸ್ಕಿ ಮೇ.25ಕ್ಕೆ ಹರಾಜು!

ಹೀಗಾಗಿ ಸ್ಥಳೀಯ ಪೊಲೀಸ್‌ ಠಾಣೆಯಿಂದ ಎನ್‌ಒಸಿ ಪಡೆದು ಜಿಲ್ಲಾ ಅಬಕಾರಿ ಆಯುಕ್ತರ ಬಳಿ 10 ಸಾವಿರ ರು. ಶುಲ್ಕ ಪಾವತಿಸಿದರೆ ಒಂದು ದಿನದ ಮಟ್ಟಿಗೆ ಸಿಎಲ್‌-5 ಸನ್ನದು ದೊರೆಯಲಿದೆ. ಅಲ್ಲದೆ ಅಬಕಾರಿ ಆಯುಕ್ತರು ಸ್ಥಳೀಯ ಪೊಲೀಸ್‌ ಠಾಣೆಗೂ ಸನ್ನದು ಪತ್ರವನ್ನು ಕಳುಹಿಸಲಿದ್ದು, ಮಿಲಿಟರಿ ಮದ್ಯ, ಡ್ಯೂಟಿ ಫ್ರೀ ಮದ್ಯ ಹೊರತುಪಡಿಸಿ ಸ್ವದೇಶಿ ಹಾಗೂ ವಿದೇಶಿ ಮದ್ಯ ಬಳಕೆಗೆ ಅವಕಾಶ ನೀಡಲಾಗುತ್ತದೆ.

ಎಸಿಬಿ ಬಲೆಗೆ ಅಬಕಾರಿ ಅಧಿಕಾರಿ
ಹೊಸ ಬಾರ್‌ಗೆ ಲೈಸೆನ್ಸ್‌ ನೀಡಲು .3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಡಿಸಿ ಸೆಲಿನಾ ಹಣ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.ಕುಷ್ಟಗಿಯಲ್ಲಿ ಫಿರ್ಯಾದಿದಾರರಾದ ಶೈಲಜಾ ಪ್ರಭಾಕರ ಅವರ ನಿವಾಸದಲ್ಲಿ ಪಟ್ಟಣದ ಅಜಯ್‌ ವೈ®್ಸ…ನಲ್ಲಿ ಕೆಲಸ ಮಾಡುತ್ತಿದ್ದ ಹೊನ್ನೂರಬಾಷಾ ಎನ್ನುವ ಯುವಕನ ಕಡೆಯಿಂದ . 1 ಲಕ್ಷ ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿ ಮತ್ತು ಸಿಬ್ಬಂದಿ ದಾಳಿ ಮಾಡಿದ್ದಾರೆ. ಬಳಿಕ ಅಬಕಾರಿ ಉಪ ಆಯುಕ್ತರಾದ ಸಿ. ಸೆಲಿನಾ ಅವರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.ದಾಳಿಯಲ್ಲಿ ಡಿಎಸ್‌ಪಿ ಶಿವಕುಮಾರ ಎಂ.ಸಿ., ಇನ್‌ಸ್ಪೆಕ್ಟರ್‌ಗಳಾದ ಆಂಜನೇಯ ಡಿ.ಎಸ್‌., ಶಿವರಾಜ ಇಂಗಳೆ, ಸಿಬ್ಬಂದಿ ಸಿದ್ದಯ್ಯ, ರಂಗನಾಥ, ಗಣೇಶ್‌, ಜಗದೀಶ್‌, ಉಮೇಶ್‌, ಸವಿತಾ, ಶಂಕರಪ್ಪ, ಚಾಲಕ ಆನಂದ ಇತರರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಜ್ಯದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು, ಆದ್ರೆ ಒಂದರಿಂದ 2 ಮಕ್ಕಳನ್ನ ಮಾಡಿಕೊಳ್ಳಿ; ಸಿಎಂ ಸಿದ್ದರಾಮಯ್ಯ
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ