ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಬರುವ ಮುನ್ನವೇ ರಾಜ್ಯ ಸರ್ಕಾರದಿಂದ ಪ್ರತಿ ಯೂನಿಟ್‌ಗೆ 70 ಪೈಸೆ ವಿದ್ಯುತ್ ದರವನ್ನು ಹೆಚ್ಚಳ ಮಾಡಲಾಗಿದೆ.
ಬೆಂಗಳೂರು (ಮೇ 12): ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಬರುವ ಮುನ್ನವೇ ರಾಜ್ಯ ಸರ್ಕಾರದಿಂದ ಪ್ರತಿ ಯೂನಿಟ್‌ಗೆ 70 ಪೈಸೆ ವಿದ್ಯುತ್ ದರವನ್ನು ಹೆಚ್ಚಳ ಮಾಡಲಾಗಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ)ವು (karnataka electricity regulatory commission- KERC) ಸಲ್ಲಿಸಿದ್ದ ಬೆಲೆ ಹೆಚ್ಚಳ ಪ್ರಸ್ತಾವನೆಗೆ ಒಪ್ಪಿಗೆ ಲಭಿಸಿದ್ದು, ಪ್ರತಿ ಯೂನಿಟ್ ಗೆ ಶೇ.16.83 ವಿದ್ಯುತ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ಏಪ್ರಿಲ್ 1 ರಿಂದ ಪೂರ್ವಾನ್ವಯ ಆಗುವಂತೆ ಪ್ರತಿ ಯೂನಿಟ್‌ಗೆ 1.46 ರೂ. ಹೆಚ್ಚಳ ಮಾಡುವಂತೆ ಎಲ್ಲ ಎಸ್ಕಾಂಗಳು ಬೇಡಿಕೆ ಸಲ್ಲಿಸಿದ್ದವು. ಆದರೆ, ಈಗ ಕೇವಲ 70 ಪೈಸೆಯನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ಈ ಹೊಸ ದರ ಜಾರಿಯಾದ ಬೆನ್ನಲ್ಲೇ ವಿದ್ಯುತ್ ಗ್ರಾಹಕರ ಪ್ರತಿ ತಿಂಗಳ ಬಿಲ್‌ನಲ್ಲಿ ಶೇ.8.31ರಷ್ಟು ಹಣ ಪಾವತಿ ಹೆಚ್ಚಾಗಲಿದೆ ಎಂದು ತಿಳಿದುಬಂದಿದೆ. ಇನ್ನು ಈ ದರ ಏಪ್ರಿಲ್ 1ರಿಂದಲೇ ಪೂರ್ವಾನ್ವಯವಾಗಲಿದೆ.
ರಾಜ್ಯದ ಜನತೆಗೆ ಭರ್ಜರಿ ಆಫರ್: ಬಿಜೆಪಿ ಗಳಿಸುವ ಮತಗಳನ್ನು ಗೆಸ್ ಮಾಡಿ, ಬಹುಮಾನ ಗೆಲ್ಲಿ
2023-24ನೋ ಸಾಲಿನ ವಿದ್ಯು ಚ್ಛ ಕ್ತಿ ದರ ಪರಿಷ್ಕರಣೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರ ಣ ಆಯೋಗ (ಕ.ವಿ.ನಿ.ಆ)ವು ಆರ್ಥಿಕ ವರ್ಷ 2023-24ನೇ ಸಾಲಿಗೆ ಎಲ್ಲಾ ವಿತರಣಾ ಪರವಾನಿಗೆದಾರರ ವ್ಯಾಪ್ತಿಯ ಗ್ರಾಹಕರಿಗೆ ಅನ್ವಯವಾಗುವಂತೆ ವಿದ್ಯುಚ್ಛಕ್ತಿ ದರಗಳ ಪರಿಷ್ಕರಣೆಯಲ್ಲಿ ಅನುಮೋದಿಸಲಾಗಿದೆ.
ಎಸ್ಕಾಂಗಳಿಂದ ಸಲ್ಲಿಸಲಾಗಿದ್ದ ಪ್ರಸ್ತಾವನೆ ಹೀಗಿದೆ: ಆರ್ಥಿಕ ವರ್ಷ 2023-24 ಕರ್ನಾಟಕ ವಿದ್ಯುತ್ ಸರಬರಾಜು ಕಂಪನಿಗಳು (ವಿ.ಸ.ಕಂ) ಒಟ್ಟು ಮೊತ್ತ 62,133.47 ಕೋಟಿ ರೂ. ವಾರ್ಷಿಕ ಕಂದಾಯ ಅಗತ್ಯತೆ (ARR) ಯನ್ನು ಅನುಮೋದಿಸುವಂತೆ ಕೋರಿರುತ್ತವೆ. ಸದರಿ ಮೊತ್ತವು 8,951.20 ಕೋಟಿ ರೂ.ಗಳ ಕಂದಾಯದಲ್ಲಿನ ಕೊರತೆಯನ್ನು ಒಳಗೊಂಡಿರುತ್ತದೆ. ವಿದ್ಯುತ್ ಸರಬರಾಜು ಕಂಪನಿಗಳು ಒಟ್ಟು, ಕಂದಾಯ ಕೊರತೆಯನ್ನು ಸರಿದೂಗಿಸಲು ಪ್ರತಿ ಯೂನಿಟ್‌ಗೆ ಸರಾಸರಿ 139 ಪೈಸೆಗಳನ್ನು (ಪ್ರತಿ ಯೂನಿಟ್ ಗೆ 120 ರಿಂದ 146 ಪ್ರಸಗಳವರೆಗೆ) ಹೆಚ್ಚಿಸುವಂತೆ ಕೋರಿರುತ್ತವೆ. ಸದರಿ ಕೊರತೆಯು ವಾರ್ಷಿಕ ಕಾರ್ಯನಿರ್ವಹಣೆ ಪುನರ್ಮನನ (APR)ದ ಅನುಸಾರ ಆರ್ಥಿಕ ವರ್ಷ 2021-22 ರಲ್ಲಿ ಉಂಟಾಗಿರುವ ಕಂದಾಯದ ಕೊರತ ಮೊತ್ತ ರೂ. 2337.08 ಕೋಟಿಗಳನ್ನು ಒಳಗೊಂಡಿರುತ್ತದೆ. ಅಂದರೆ, ವಿ.ಸ.ಕಂ.ಗಳು ಶೇಕಡಾ 16.83 ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು.
ಆಯೋಗದ ಅನುಮೋದನೆ: ವಿದ್ಯುತ್ ಸರಬರಾಜು ಕಂಪನಿಗಳು ತಮ್ಮ ದರ ಪರಿಷ್ಕರಣೆ ಅರ್ಜಿಯಲ್ಲಿ ಒಟ್ಟು ಮೊತ್ತ 62,133.47 ಕೋಟಿ ರೂ. ಗಳಿಗೆ ಅನುಮೋದಿಸುವಂತೆ ಕೋರಿರುತ್ತವೆ. ಆಯೋಗವು, ಸದರಿ ಅರ್ಜಿಗಳ ಪರಿಶೀಲನೆಯ ನಂತರ ಒಟ್ಟು ವಾರ್ಷಿಕ ಕಂದಾಯ ಅಗತ್ಯತೆ (ARR) ಮೊತ್ತ 58,109.95 ರೂ. ಕೋಟಿಗಳನ್ನು ಅನುಮೋದಿಸಿರುತ್ತದೆ.
BENGALURU: ಅಕ್ಕನ ಮಗಳ ಪ್ರೀತಿಗೆ ಬಿದ್ದು, ಬಲಿಯಾಯ್ತು ಸುಂದರ ಕುಟುಂಬ: ಮಕ್ಕಳೊಂದಿಗೆ ತಂದೆ ಸಾವು
ಆಯೋಗದ ಅನುಮೋದನೆ: ಸಿ) ವಿದ್ಯುತ್ ಸರಬರಾಜು ಕಂಪನಿಗಳು ತಮ್ಮ ದರ ಪರಿಷ್ಕರಣೆ ಅರ್ಜಿಯಲ್ಲಿ ಒಟ್ಟು ಮೊತ್ತ 62,133.47 ಕೋಟಿ ರೂ. ಗಳಿಗೆ ಅನುಮೋದಿಸುವಂತೆ ಕೋರಿರುತ್ತವೆ. ಆಯೋಗವು, ಸದರಿ ಅರ್ಜಿಗಳ ಪರಿಶೀಲನೆಯ ನಂತರ ಒಟ್ಟು ವಾರ್ಷಿಕ ಕಂದಾಯ ಅಗತ್ಯತೆ (ARR) ಮೊತ್ತ 58,109.95 ರೂ. ಕೋಟಿಗಳನ್ನು ಅನುಮೋದಿಸಿರುತ್ತದೆ. ಆರ್ಥಿಕ ವರ್ಷ 2023-24ಕ್ಕೆ ಆಯೋಗವು ನಿವ್ವಳ ಕಂದಾಯ ಕೊರತೆ 4,457.12 ಕೋಟಿ ರೂ.ಗಳನ್ನು ಅನುಮೋದಿಸಿರುತ್ತದೆ. ಸದರಿ ಮೊತ್ತವು ಆರ್ಥಿಕ ವರ್ಷ 2021-22ರ ವಾರ್ಷಿಕ ಕಾರ್ಯನಿರ್ವಹಣಾ ಪುನರ್ಮನನ (APR) (ಟ್ರೋಯಿಂಗ್ ಅಪ್) ಪ್ರಕಾರ ಕಂದಾಯಲ್ಲಿನ ಕೂರತ ಮೊತ್ತ 1,720.11 ಕೋಟಿ ರೂ.ಗಳನ್ನು ಒಳಗೊಂಡಿದೆ.