Karnataka assembly election: ಸ್ಟಾರ್‌ ಕ್ಷೇತ್ರಗಳ ಫಲಿತಾಂಶದ ಮೇಲೆ ಮತದಾರನ ಕಣ್ಣು!

By Kannadaprabha News  |  First Published May 12, 2023, 2:22 AM IST

ರಾಜ್ಯ ವಿಧಾನಸಭೆಯ ಚುನಾವಣೆ ಪೂರ್ಣಗೊಂಡಿದೆ. ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬರೆದಿರುವ ಮತದಾರನೂ ಸೇರಿದಂತೆ ಸ್ಪರ್ಧಿಸಿದ ಅಭ್ಯರ್ಥಿಗಳ ಕುತೂಹಲವೀಗ ಫಲಿತಾಂಶದತ್ತ ನೆಟ್ಟಿದೆ. ಸೋಲು- ಗೆಲುವಿನ ಲೆಕ್ಕಾಚಾರಗಳನ್ನು ಅಭ್ಯರ್ಥಿಗಳೇ ಹಾಕಿಕೊಳ್ಳುತ್ತಿದ್ದಾರೆ


ಬ್ರಹ್ಮಾನಂದ ಹಡಗಲಿ

ಬೆಳಗಾವಿ (ಮೇ.12) : ರಾಜ್ಯ ವಿಧಾನಸಭೆಯ ಚುನಾವಣೆ ಪೂರ್ಣಗೊಂಡಿದೆ. ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬರೆದಿರುವ ಮತದಾರನೂ ಸೇರಿದಂತೆ ಸ್ಪರ್ಧಿಸಿದ ಅಭ್ಯರ್ಥಿಗಳ ಕುತೂಹಲವೀಗ ಫಲಿತಾಂಶದತ್ತ ನೆಟ್ಟಿದೆ. ಸೋಲು- ಗೆಲುವಿನ ಲೆಕ್ಕಾಚಾರಗಳನ್ನು ಅಭ್ಯರ್ಥಿಗಳೇ ಹಾಕಿಕೊಳ್ಳುತ್ತಿದ್ದಾರೆ. ಇವರ ಜತೆಗೆ ಅವರ ಬೆಂಬಲಿಗರು, ಕ್ಷೇತ್ರದ ಮತದಾರರು ಕೂಡ ತಾವೊಂದು ಲೆಕ್ಕಾಚಾರ ಇಟ್ಟುಕೊಂಡಿದ್ದಾರೆ. ಆದರೆ, ಇವೆಲ್ಲ ಊಹಾಪೋಹಗಳಿಗೆ ಅಂತಿಮ ತೆರೆ ಬೀಳುವುದು ಮೇ 13ರ ಫಲಿತಾಂಶ ದಿನದಂದು.

Tap to resize

Latest Videos

ಇದರ ಜತೆಗೆ ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ಸ್ಟಾರ್‌ ಮತಕ್ಷೇತ್ರಗಳು ಮತ್ತು ಹೊಸಮುಖಕ್ಕೆ ಅವಕಾಶ ಕಲ್ಪಿಸಿರುವ ಮತಕ್ಷೇತ್ರಗಳಲ್ಲಿ ಫಲಿತಾಂಶ ಏನಾಗಲಿಗೆ ಎಂಬ ಕುತೂಹಲ ಕೂಡ ಇದೆ. ಸ್ಟಾರ್‌ ಕ್ಷೇತ್ರಗಳಲ್ಲಿ ಯಾರ ಕೈ ಮೇಲಾಗಲಿದೆ, ಹೊಸ ಮುಖಗಳಿಗೆ ಅವಕಾಶ ಕಲ್ಪಿಸಿರುವ ಕ್ಷೇತ್ರಗಳಲ್ಲಿನ ಪ್ರಯೋಗ ಯಶಸ್ವಿ ಆಗುತ್ತದೆಯೇ ಎಂಬ ಹಲವಾರು ಪ್ರಶ್ನೆಗಳು ಈಗ ಮತದಾರರನ್ನು ಮಾತ್ರವಲ್ಲ, ಆ?ಆ ಕ್ಷೇತ್ರದ ಅಭ್ಯರ್ಥಿಗಳನ್ನು ಕೂಡ ಕಾಡುತ್ತಿದೆ. ಹೀಗಾಗಿ ಈ ಎಲ್ಲ ಕುತೂಹಲಗಳಿಗೆ ಮೇ 13ರ ಫಲಿತಾಂಶ ಉತ್ತರವಾಗಲಿದೆ.

Karnataka assembly election: ಮತದಾನ ಮುಗಿತಿದ್ದಂತೆ ಜೋರಾದ ಬೆಟ್ಟಿಂಗ್!

ಸ್ಟಾರ್‌ ಕ್ಷೇತ್ರಗಳತ್ತ ಮತದಾರರ ಚಿತ್ತ:

ಬೆಳಗಾವಿ ಜಿಲ್ಲೆಯ ಗೋಕಾಕ ಕ್ಷೇತ್ರದ ರಮೇಶ ಜಾರಕಿಹೊಳಿ(Ramesh jarkiholi), ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಲಕ್ಷ್ಮಣ ಸವದಿ(Laxman savaddi) ಅವರ ಭವಿಷ್ಯ ಏನಾಗಲಿದೆ? ಗೆದ್ದರೆ, ಸೋತರೆ ಮುಂದೇನಾಗಲಿದೆ ಎಂಬ ರಾಜಕೀಯ ಲೆಕ್ಕಾಚಾರಗಳೇನು ಈಗಾಗಲೇ ಶುರುವಾಗಿದೆ. ಇದರ ಜತೆಗೆ ಅರಬಾವಿಯಲ್ಲಿ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ(KMF President balachandra jarkiholi), ಬೆಳಗಾವಿ ಗ್ರಾಮೀಣದಲ್ಲಿ ಹಾಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ರಮೇಶ ಆಪ್ತ ನಾಗೇಶ ಮನ್ನೋಳಕರ ಪೈಪೋಟಿ ನೀಡುತ್ತಾರಾ? ಅಥವಾ ಎಂಇಎಸ್‌ ಅಭ್ಯರ್ಥಿ ರಾಜು ಚೌಗಲಾ ಪ್ರಬಲ ಪೈಪೋಟಿ ನೀಡುತ್ತಾರೆ ಎಂಬ ಕುತೂಹಲ ಕೂಡ ಇದೆ. ಯಮಕನಮರಡಿ (ಎಸ್ಸಿ)ಯಲ್ಲಿ ಸತೀಶ ಜಾರಕಿಹೊಳಿ ಈ ಬಾರಿಯೂ ಗೆಲವು ಸಾಧಿಸುತ್ತಾರೆ ಎಂಬ ಅಚಲ ವಿಶ್ವಾಸ ಅವರ ಆಪ್ತ ವಲಯದ್ದು.

ವಿಜಯಪುರ ಜಿಲ್ಲೆಯ ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ, ಬಬಲೇಶ್ವರ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಬಿ.ಪಾಟೀಲ, ಮುದ್ದೇಬಿಹಾಳ ಮತಕ್ಷೇತ್ರದ ಫಲಿತಾಂಶದ ಮೇಲೆ ಸಹಜವಾಗಿ ಮತದಾರರು ಬಹಳ ನಿರೀಕ್ಷೆಯಿಂದ ಎದುರು ನೋಡುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದ ಮುರಗೇಶ ನಿರಾಣಿ, ಮುಧೋಳದ ಗೋವಿಂದ ಕಾರಜೋಳ ಅವರ ಫಲಿತಾಂಶ ರಾಜ್ಯದ ಗಮನ ಸೆಳೆಯುವುದರಲ್ಲಿ ಎರಡು ಮಾತಿಲ್ಲ.

ಹೊಸಮುಖ ಪ್ರಯೋಗದ ಫಲಿತಾಂಶ ಏನಾಗುತ್ತೆ?:

ಕೇವಲ ಸ್ಟಾರ್‌ ಕ್ಷೇತ್ರಗಳು(Star constituency) ಮಾತ್ರವಲ್ಲ, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಕಿತ್ತೂರು ಕರ್ನಾಟಕ ಭಾಗದ ಬಹುತೇಕ ಕಡೆಗಳಲ್ಲಿ ಹೊಸ ಮುಖದ ಪ್ರಯೋಗ ಮಾಡಿವೆ. ಹೀಗಾಗಿ ಆ ಪ್ರಯೋಗ ಯಶಸ್ವಿಯಾಗುತ್ತದೆ ಎಂಬ ಪ್ರಶ್ನೆ ಕೂಡ ಈಗ ಎದುರಾಗಿದೆ. ಈ ಪೈಕಿ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಯು ಬೆಳಗಾವಿ ಗ್ರಾಮೀಣ ಮತಕ್ಷೇತ್ರದಿಂದ ಸ್ಪರ್ಧಿಸಿರುವ ರಮೇಶ ಜಾರಕಿಹೊಳಿ ಆಪ್ತ ನಾಗೇಶ ಮನ್ನೋಳಕರ, ಹುಕ್ಕೇರಿ ಕ್ಷೇತ್ರದಲ್ಲಿ ದಿ.ಉಮೇಶ ಕತ್ತಿ ಅವರ ಪುತ್ರ ನಿಖಿಲ್‌ ಕತ್ತಿ, ಯಮಕನಮರಡಿ (ಎಸ್ಸಿ)ಯಲ್ಲಿ ಬಸವರಾಜ ಹುಂದ್ರಿ, ರಾಮದುರ್ಗದಲ್ಲಿ ಹಾಲಿ ಶಾಸಕರಾಗಿದ್ದ ಮಹಾದೇವಪ್ಪ ಯಾದವಾಡ ಬದಲು ಚಿಕ್ಕರೇವಣ್ಣ, ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಹಾಲಿ ಶಾಸಕ ಅನಿಲ್‌ ಬೆನಕೆ ಬದಲು ಡಾ.ರವಿ ಪಾಟೀಲ, ಸವದತ್ತಿಯಲ್ಲಿ ದಿ.ಆನಂದ ಮಾಮನಿ ಅವರ ಪತ್ನಿ ರತ್ನಾ ಆನಂದ ಮಾಮನಿ ಅವರ ಫಲಿತಾಂಶ ಏನಾಗಲಿದೆ ಎಂಬ ಸಹಜ ಕುತೂಹಲ ಕೂಡ ಮತದಾರರಲ್ಲಿದೆ. ಇನ್ನು ಕಾಂಗ್ರೆಸ್‌ ಗೋಕಾಕನಲ್ಲಿ ಡಾ.ಮಹಾಂತೇಶ ಕಡಾಡಿ, ಬೆಳಗಾವಿ ಉತ್ತರದಲ್ಲಿ ರಾಜು ಸೇಠ್‌, ಬೆಳಗಾವಿ ದಕ್ಷಿಣದಲ್ಲಿ ಪ್ರಭಾವತಿ ಮಾಸ್ತಮರಡಿ ಅವರಂತಹ ಹೊಸಮುಖಗಳಿಗೆ ಮಣೆ ಹಾಕಿದ್ದು, ಇವರ ಫಲಿತಾಂಶ ಏನಾಗಲಿದೆ ಎಂಬ ಸಹಜ ಕುತೂಹಲ ಕೂಡ ಮೂಡಿದೆ.

141 ಸ್ಥಾನ​ಗ​ಳಲ್ಲಿ ಕಾಂಗ್ರೆಸ್‌ ಗೆಲ್ಲುತ್ತೆ ಡಿಕೆಶಿ, 115 ಸ್ಥಾನ ಗೆದ್ದು ಬಿಜೆಪಿ ಅಧಿಕಾರಕ್ಕೆ ಬಿಎಸ್‌ವೈ, ಗೆಲುವು ಯಾರಿಗೆ?

ಬಾಗಲಕೋಟೆ ಜಿಲ್ಲೆಯಲ್ಲಿ ಬಿಜೆಪಿಯು ಜಮಖಂಡಿಯಲ್ಲಿ ಜಗದೀಶ ಗುಡಗುಂಟಿ, ಬಾದಾಮಿಯಲ್ಲಿ ಶಾಂತಗೌಡ ಪಾಟೀಲ ಹೊಸ ಮುಖಗಳಾದರೆ, ಕಾಂಗ್ರೆಸ್‌ ಪಕ್ಷ ತೇರದಾಳದಲ್ಲಿ ಸಿದ್ದು ಕೊಣ್ಣೂರ, ಬಾದಾಮಿಯಲ್ಲಿ ಮಾಜಿ ಸಚಿವ ಚಿಮ್ಮನಕಟ್ಟಿಅವರ ಪುತ್ರ ಭಿಮಸೇನ ಚಿಮ್ಮನಕಟ್ಟಿಗೆ ಅವಕಾಶ ಕಲ್ಪಿಸಿದ್ದು, ಈ ಪ್ರಯೋಗವು ಫಲಿತಾಂಶ ಕೂಡ ಕುತೂಹಲ ಹೆಚ್ಚಿಸಿದೆ. ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿಯು ನಾಗಠಾಣದಲ್ಲಿ ಸಂಜೀವ ಐಹೊಳೆ, ಇಂಡಿಯಲ್ಲಿ ಕಾಸುಗೌಡ ಬಿರಾದಾರಗೆ ಹೊಸಮುಖಗಳಿಗೆ ಅವಕಾಶ ಕಲ್ಪಿಸಿದ್ದು, ಈ ಪ್ರಯೋಗ ಯಶಸ್ವಿಯಾಗುತ್ತಾ ಎಂಬ ಪ್ರಶ್ನೆ ಎದುರಾಗಿದೆ.

click me!