Karnataka election results 2023: ಕೇಂದ್ರದ ಸಹಕಾರಕ್ಕೆ ಫಲಿತಾಂಶ ಅಡ್ಡಿ ಆಗದು: ಜೋಶಿ

By Kannadaprabha News  |  First Published May 16, 2023, 11:46 PM IST

ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ, ಸಹಕಾರಕ್ಕೆ ವಿಧಾನಸಭಾ ಚುನಾವಣೆ ಫಲಿತಾಂಶ ‘ಸ್ಪೀಡ್‌ ಬ್ರೇಕರ್‌’ ಆಗಲಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.


ಬೆಂಗಳೂರು (ಮೇ.17) : ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ, ಸಹಕಾರಕ್ಕೆ ವಿಧಾನಸಭಾ ಚುನಾವಣೆ ಫಲಿತಾಂಶ ‘ಸ್ಪೀಡ್‌ ಬ್ರೇಕರ್‌’ ಆಗಲಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಮಂಗಳವಾರ ಸೆಂಟ್ರಲ್‌ ಕಾಲೇಜು ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಐದನೇ ರೋಜಗಾರ್‌ ಮೇಳದಲ್ಲಿ ಪ್ರಧಾನ ಮಂತ್ರಿಗಳಿಂದ ಸರ್ಕಾರಿ ಇಲಾಖೆ, ಸಂಸ್ಥೆಗಳಲ್ಲಿ ನೇಮಕಗೊಂಡ 71 ಸಾವಿರ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Tap to resize

Latest Videos

 

Karnataka Election Result 2023: ಬಿಜೆಪಿ ಸೋಲಿಗೆ ಆಡಳಿತ ವಿರೋಧಿ ಅಲೆ ಮುಖ್ಯ ಕಾರಣವಾಗಿರಬಹುದು, ಜೋಶಿ

ಪ್ರಧಾನಿ ಮೋದಿ(Narendra Modi) ನೇತೃತ್ವದ ಸರ್ಕಾರ ರಾಜ್ಯದ ಅಭಿವೃದ್ಧಿ ಬೆಳವಣಿಗೆಗೆ ಸಾಕಷ್ಟುಕ್ರಮ ವಹಿಸಿದೆ. ಚುನಾವಣಾ ಫಲಿತಾಂಶ(Karnataka assembly election results)ದ ಹೊರತಾಗಿಯೂ ಕೇಂದ್ರದಿಂದ ರಾಜ್ಯಕ್ಕೆ ಸಿಗುವ ಪ್ರೋತ್ಸಾಹ, ಸಹಕಾರ, ಅಭಿವೃದ್ಧಿ ವೇಗಕ್ಕೆ ಯಾವುದೇ ಸ್ಪೀಡ್‌ ಬ್ರೇಕರ್‌ ಇರಲಾರದು. ರಾಜ್ಯದಲ್ಲಿ ಸರ್ಕಾರ, ನಾಯಕತ್ವ ಬದಲಾಗುತ್ತಿದೆ. ಆದರೆ, ನಾವು ರಾಜ್ಯದ ಸಂಪೂರ್ಣ ಬೆಳವಣಿಗೆಗೆ ಬದ್ಧರಾಗಿದ್ದೇವೆ ಎಂದು ಜನತೆಗೆ ಭರವಸೆ ನೀಡುತ್ತೇನೆ. ಹೊಸ ಸರ್ಕಾರ ಜನತೆಯ ಆಶೋತ್ತರಗಳಿಗೆ ನ್ಯಾಯ ಸಮ್ಮತವಾಗಿ ಸ್ಪಂದಿಸಿ ಕೆಲಸ ಮಾಡುವಂತೆ ಕೋರುತ್ತೇವೆ ಎಂದರು.

ಉದ್ಯೋಗ ಪರ್ವ:

ಕಳೆದ ನಾಲ್ಕು ಉದ್ಯೋಗ ಮೇಳದಲ್ಲಿ 2.9 ಲಕ್ಷ ಹೊಸ ನೇಮಕಾತಿ ಪತ್ರ ಒದಗಿಸಲಾಗಿದೆ. ಐದನೇ ಆವೃತ್ತಿಯಲ್ಲಿ 71 ಸಾವಿರಕ್ಕೂ ಹೆಚ್ಚು ಮಂದಿಗೆ ನೌಕರಿ ನೀಡಲಾಗಿದೆ. 2014ರ ಬಳಿಕ ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ, ಪ್ರಧಾನ ಮಂತ್ರಿ ಮುದ್ರಾ ಯೋಜನೆಗಳ ಮೂಲಕ ಕೌಶಲ್ಯ ಅಭಿವೃದ್ಧಿ ಹಾಗೂ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಪ್ರಧಾನಿಗಳೇ ಖುದ್ದಾಗಿ ಇವುಗಳ ಮೇಲ್ವಿಚಾರಣೆ ನಡೆಸುತ್ತಾರೆ ಎಂದು ತಿಳಿಸಿದರು.

ಯುವಕರು ಸರ್ಕಾರಿ ಯೋಜನೆ ಜೊತೆಗೆ ಸ್ವಉದ್ಯೋಗ, ಉದ್ಯಮಿಗಳಾಗಲು ಮುಂದೆ ಬರಬೇಕು. ಮೇಕ್‌ ಇನ್‌ ಇಂಡಿಯಾ(Make in india), ಸ್ಮಾರ್ಟ್ ಅಪ್‌ ಇಂಡಿಯಾ(Startup india) ಅಡಿ ದೇಶದಲ್ಲಿ ಗಣನೀಯ ಬದಲಾವಣೆ ಆಗಿದೆ. ದೇಶ ಮಾತ್ರವಲ್ಲ, ಜಾಗತಿಕ ಮಟ್ಟದ ಬೇಡಿಕೆಗಳನ್ನು ಪೂರೈಸುವ ಶಕ್ತಿ ಭಾರತಕ್ಕಿದೆ. ಗಣಿ ಮತ್ತು ಕಲ್ಲಿದ್ದಲು ಕ್ಷೇತ್ರದಲ್ಲಿ ಬದಲಾವಣೆ ತಂದ ಪರಿಣಾಮ ವಾಣಿಜ್ಯ ಕಲ್ಲಿದ್ದಲು ಗಣಿಯ ಹರಾಜಿನಿಂದ 3 ಲಕ್ಷಕ್ಕೂ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿದೆ. ಅಲ್ಲದೆ, ಲೋಡ್‌ ಶೆಡ್ಡಿಂಗ್‌ ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಮಾಡಲಾಗಿದೆ ಎಂದರು.

 

ಬರಿಗಾಲಿನಲ್ಲಿ ತಿರುಪತಿ ಬೆಟ್ಟವೇರಿ ಶ್ರೀನಿವಾಸನ ದರ್ಶನ ಪಡೆದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಮೋದಿ ಅವರು ವರ್ಚುವಲ್‌ ಮೂಲಕ ನೇಮಕಾತಿ ಪತ್ರಗಳ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು. ಸಂಸದರಾದ ಪಿ.ಸಿ.ಮೋಹನ್‌, ತೇಜಸ್ವಿ ಸೂರ್ಯ ಇದ್ದರು. ಕರ್ನಾಟಕ ವೃತ್ತ ಮುಖ್ಯ ಪೋಸ್ವ್‌ ಮಾಸ್ಟರ್‌ ಜನರಲ… ಎಸ್‌.ರಾಜೇಂದ್ರಕುಮಾರ್‌ ಇದ್ದರು.

ಸಾಂಕೇತಿಕವಾಗಿ 25 ಅಭ್ಯರ್ಥಿಗಳಿಗೆ ಉದ್ಯೋಗ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

click me!