
ಬೆಂಗಳೂರು (ಮೇ.13) : ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಬಂದಿದ್ದು ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಲು ಸಿದ್ಧಗೊಂಡಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಈ ಬಾರಿ ಫಲಿತಾಂಶ ಅತಂತ್ರವಾಗಲಿದೆ ಜೆಡಿಎಸ್ ಪಕ್ಷವೇ ಕಿಂಗ್ ಮೇಕರ್ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ರಾಜ್ಯದ ಮತದಾರರು ಎಲ್ಲ ಸಮೀಕ್ಷೆ ನಿರೀಕ್ಷೆಗಳನ್ನು ತಲೆಕೆಳಗು ಮಾಡಿದ್ದಾರೆ. ಜೆಡಿಎಸ್ ಪಕ್ಷ ಹೀನಾಯವಾಗಿ ಸೋಲು ಕಂಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ(HD Kumaraswamy) ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವೇ ಅಂತಿಮ. ಸೋಲು, ಗೆಲುವನ್ನು ನಾನು ಸಮಚಿತ್ತದಿಂದ ಸ್ವೀಕರಿಸುತ್ತೇನೆ. ಆದರೆ, ಈ ಸೋಲು ಅಂತಿಮವಲ್ಲ, ನನ್ನ ಹೋರಾಟ ನಿಲ್ಲುವುದಿಲ್ಲ, ಸದಾ ಜನರ ಜತೆಯಲ್ಲೇ ಇರುತ್ತೇನೆ ಎಂದಿದ್ದಾರೆ ಜೊತೆಗೆ ಜೆಡಿಎಸ್ ಪಕ್ಷ ಬೆಂಬಲಿಸಿದ ಮತದಾರರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
ನಿಜವಾಗಿಯೂ ಕರ್ನಾಟಕದಲ್ಲಿ ಗೆದ್ದಿರುವುದು ಕಾಂಗ್ರೆಸ್ ಪಕ್ಷವಲ್ಲ; ಮತದಾರ!
ರಣಕಣದಲ್ಲಿ ಗೆದ್ದುವರು ಯಾರು ? ಸೋತವರು ಯಾರು ಇಲ್ಲಿದೆ ಮಾಹಿತಿ
ಜೆಡಿಎಸ್ ಗೆಲುವಿನ ಅಭ್ಯರ್ಥಿಗಳು
1.ಚನ್ನಪಟ್ಟಣ- H.D.ಕುಮಾರಸ್ವಾಮಿ
2.ಹೊಳೆನರಸೀಪುರ- H.Dರೇವಣ್ಣ.
3.ಹಾಸನ ಸಿಟಿ- ಸ್ವರೂಪ್.
4.ಚಾಮುಂಡೇಶ್ವರಿ- ಜಿಟಿ ದೇವೇಗೌಡ.
5.ಹುಣಸೂರು - ಹರೀಶ್ ಗೌಡ.
6.ಶ್ರವಣಬೆಳಗೊಳ- ಬಾಲಕೃಷ್ಣ
7.ಗುರುಮಿಠ್ಕಲ್ - ಶರಣಗೌಡ ಕಂದಕೂರ್.
8.ದೇವದುರ್ಗ- ಕರೆಮ್ಮ ನಾಯಕ್.
9.ಚಿಕ್ಕನಾಯಕನಹಳ್ಳಿ- ಸುರೇಶ್ ಬಾಬು.
10.ತುರುವೇಕೆರೆ- MT ಕೃಷ್ಣಪ್ಪ.
11.ಮುಳಬಾಗಿಲು- ಸಂವೃದ್ದಿ ಮಂಜುನಾಥ್.
12.ಕೆ.ಆರ್.ಪೇಟೆ- HT ಮಂಜುನಾಥ್.
13.ಅರಕಲಗೂಡು- ಎ.ಮಂಜು.
14.ಶಿಡ್ಲಘಟ್ಟ- ರವಿಕುಮಾರ್
15.ಶಿವಮೊಗ್ಗ ಗ್ರಾ. - ಶಾರದಾ ಪೂರ್ಯ ನಾಯಕ್
16.ಹಗರಿ ಬೊಮ್ಮನಹಳ್ಳಿ - ನೇಮರಾಜನಾಯ್ಕ್.
17.ದೇವರ ಹಿಪ್ಪರಗಿ - ರಾಜುಗೌಡ ಪಾಟೀಲ್.
18- ಹನೂರು- MR ಮಂಜುನಾಥ್.
19- ಶ್ರೀನಿವಾಸಪುರ- ವೆಂಕಟಶಿವರೆಡ್ಡಿ
ಸೋತ ಹಾಲಿ ಶಾಸಕರು( ಜೆಡಿಎಸ್)*
1.ಬಂಡೆಪ್ಪ ಕಾಶಂಪೂರ್
2.ಸಾರಾ ಮಹೇಶ್.
3.ಸಿಎಸ್ ಪುಟ್ಟರಾಜು
4.ವೆಂಕಟರಾವ್ ನಾಡಗೌಡ.
5.ಡಿಸಿ ತಮ್ಮಣ್ಣ
6.ಮಾಗಡಿ ಮಂಜುನಾಥ್.
7.ಅಶ್ವಿನ್ ಕುಮಾರ್.
8.ರವೀಂದ್ರ ಶ್ರೀಕಂಠಯ್ಯ.
9.ಪಿರಿಯಾಪಟ್ಟಣ- k ಮಹದೇವ
10.ಸಕಲೇಶಪುರ-HKಕುಮಾರಸ್ವಾಮಿ.
11.ಬೇಲೂರ್ - ಲಿಂಗೇಶ್.
12.ನಾಗಮಂಗಲ- ಸುರೇಶ್ ಗೌಡ.
13.ದಾಸರಹಳ್ಳಿ ಮಂಜುನಾಥ್.
14.ನಿಸರ್ಗ ನಾರಾಯಣಸ್ವಾಮಿ
15.ಶ್ರೀನಿವಾಸ್ ಮೂರ್ತಿ.
16.ಕೃಷ್ಣಾರೆಡ್ಡಿ
17. ರಾಜಾ ವೆಂಕಟಪ್ಪ ನಾಯಕ
Karnataka Election Results 2023: ಉತ್ತರ ಕನ್ನಡದಲ್ಲಿ ಕೈ ಹಿಡಿದ ಮತದಾರರು, ಬಿಜೆಪಿಗೆ ಬರೀ ಇಬ್ಬರು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ