ಬೆಂಗಳೂರ: ಇಂದು 28 ಕ್ಷೇತ್ರಗಳ ಮತ ಎಣಿಕೆಗೆ ಸಿದ್ಧತೆ

Published : May 13, 2023, 04:49 AM IST
ಬೆಂಗಳೂರ: ಇಂದು 28 ಕ್ಷೇತ್ರಗಳ ಮತ ಎಣಿಕೆಗೆ ಸಿದ್ಧತೆ

ಸಾರಾಂಶ

ನಗರ ಜಿಲ್ಲಾ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯಕ್ಕೆ ನಾಲ್ಕು ಸಾವಿರ ಮಂದಿ ಸಿಬ್ಬಂದಿ ಬಳಕೆ ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ಬೆಂಗಳೂರು (ಮೇ.13) : ನಗರ ಜಿಲ್ಲಾ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯಕ್ಕೆ ನಾಲ್ಕು ಸಾವಿರ ಮಂದಿ ಸಿಬ್ಬಂದಿ ಬಳಕೆ ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ನಾಲ್ಕು ಕಡೆ 28 ವಿಧಾನಸಭಾ ಕ್ಷೇತ್ರ (Bengaluru assembly constituency)ಮತ ಎಣಿಕೆ ಕಾರ್ಯ ನಡೆಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ತಲಾ ಒಂದು ಕೇಂದ್ರದಲ್ಲಿ ಏಳು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಲಿದೆ. ಒಂದೊಂದು ಕೇಂದ್ರಕ್ಕೆ ತಲಾ 1 ಸಾವಿರ ಅಧಿಕಾರಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

Karnataka assembly election: ಜೆಡಿಎಸ್ ಶಾಸಕರ ಹಿಡಿದಿಡಲು ಗೌಡ, ಎಚ್‌ಡಿಕೆ ತಂತ್ರ!

28 ವಿಧಾನಸಭಾ ಕ್ಷೇತ್ರದ ಮತ ಎಣಿಕೆಗೆ ಒಟ್ಟು 481 ಟೇಬಲ್‌ ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತದಾನದ ಎಣಿಕೆಗೆ ಎರಡರಿಂದ ಮೂರು ಟೇಬಲ್‌ಗಳನ್ನು ಮೀಸಲಿಡಲಾಗುವುದು. ಈಗಾಗಲೇ 14 ಮಂದಿ ವೀಕ್ಷಕರು ಇದ್ದಾರೆ. ಹೊಸದಾಗಿ 14 ವೀಕ್ಷಕರು ದೆಹಲಿಯಿಂದ ಆಗಮಿಸಿದ್ದಾರೆ. ಹೀಗಾಗಿ, ತಲಾ ಒಂದು ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ವೀಕ್ಷಕರಂತೆ 28 ವೀಕ್ಷಕರನ್ನು ನಿಯೋಜನೆ ಮಾಡಲಾಗುತ್ತದೆ ಎಂದರು.

28 ವಿಧಾನಸಭಾ ಕ್ಷೇತ್ರಕ್ಕೆ 18ರಿಂದ 20 ಸಾವಿರ ಅಂಚೆ ಮತ ಬಂದಿವೆ. ಮತ ಎಣಿಕೆ ಆರಂಭಗೊಳ್ಳುತ್ತಿದ್ದಂತೆ ಮೊದಲು ಅಂಚೆ ಮತ ಎಣಿಕೆ ಮಾಡಲಾಗುವುದು. ತದ ನಂತರ ಇವಿಎಂ ಮತ ಎಣಿಕೆ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಒಂದೊಂದು ರಾಜಕೀಯ ಪಕ್ಷದ ಒಬ್ಬೊಬ್ಬ ಏಜೆಂಟ್‌ ನಿಯೋಜನೆ ಮಾಡುವುದಕ್ಕೆ ಅವಕಾಶವಿದೆ. ಅಂಚೆ ಮತ ಎಣಿಕೆಗೆ ಪ್ರತ್ಯೇಕ ಏಜೆಂಟ್‌ ನಿಯೋಜನೆ ಮಾಡುವುದಕ್ಕೂ ಅವಕಾಶವಿದೆ ಎಂದು ವಿವರಿಸಿದರು.

ಮತ್ತೊಂದು ಹಂತದ ತರಬೇತಿ:

ಮತ ಎಣಿಕಾ ಸಂದರ್ಭದಲ್ಲಿ ಇವಿಎಂ ಮತ್ತು ಕಂಟ್ರೋಲ್‌ ಯುನಿಟ್‌ ನಿರ್ವಹಿಸುವುದು ಅತ್ಯಂತ ಮುಖ್ಯವಾಗಿದೆ. ಹೀಗಾಗಿ, ಎಣಿಕಾ ಮೇಲ್ವಿಚಾರಕರು ಹಾಗೂ ಎಣಿಕಾ ಸಹಾಯಕರಿಗೆ ಈಗಾಗಲೇ ಒಂದು ಹಂತದ ತರಬೇತಿ ನೀಡಲಾಗಿತ್ತು. ಶುಕ್ರವಾರ ಮತ್ತೊಂದು ಹಂತದಲ್ಲಿ ಮೈಕ್ರೋ ಅಬ್ಸರ್ವರ್ಸ್‌, ಎಣಿಕಾ ಮೇಲ್ವಿಚಾರಕರು ಹಾಗೂ ಎಣಿಕಾ ಸಹಾಯಕರಿಗೆ ತರಬೇತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರು ವೀಕ್ಷಣೆಗೆ ಲಭ್ಯ

ಮತ ಎಣಿಕೆ ಕಾರ್ಯವನ್ನು ಲೈವ್‌ ವೆಬ್‌ ಕಾಸ್ಟಿಂಗ್‌ ಮಾಡಲಾಗುತ್ತದೆ. ಸಾರ್ವಜನಿಕರು ಲೈವ್‌ ಆಗಿ ವೀಕ್ಷಣೆ ಮಾಡಬಹುದಾಗಿದೆ. hಠಿಠಿps://್ಟಛಿs್ಠ್ಝಠಿs.ಛ್ಚಿಜಿ.ಜಟv.ಜ್ಞಿ/ ವೆಬ್‌ಸೈಟ್‌ಗೆ ಭೇಟಿ ನೀಡಿ ವೀಕ್ಷಿಸಬಹುದು.

ಬೆಳಗ್ಗೆ 8 ರಿಂದ ಮತ ಎಣಿಕೆ

ನಗರದ ನಾಲ್ಕು ಮತ ಎಣಿಕಾ ಕೇಂದ್ರದಲ್ಲಿ ಶನಿವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕಾ ಕಾರ್ಯ ಆರಂಭಗೊಳ್ಳಲಿದೆ. ಮೊದಲು ಅಂಚೆ ಮತ ಎಣಿಕೆ, ನಂತರ ಇವಿಎಂನಲ್ಲಿರುವ ಮತಗಳ ಎಣಿಕೆಯನ್ನು ಎಣಿಕೆ ಮಾಡಲಾಗುತ್ತದೆ. ಅದಕ್ಕೆ ಮೂರು ಹಂತದಲ್ಲಿ ಅಧಿಕಾರಿ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ. ಪ್ರತಿ ಟೇಬಲ್‌ಗೆ ಮೈಕ್ರೋ ಅಬ್ಸರ್ವರ್‌, ಮತ ಎಣಿಕೆ ಮೇಲ್ವಿಚಾರಕರು ಮತ್ತು ಮತ ಎಣಿಕೆ ಸಹಾಯಕರು ಇರಲಿದ್ದಾರೆ.

ಒಟ್ಟು 42 ಎಣಿಕಾ ಕೊಠಡಿ

ನಗರದ 28 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ 42 ಕೊಠಡಿಗಳಲ್ಲಿ ನಡೆಯಲಿದೆ. ಬೆಂಗಳೂರು ನಗರ ಹಾಗೂ ಬಿಬಿಎಂಪಿ ಉತ್ತರ ಚುನಾವಣಾ ಜಿಲ್ಲಾ ವ್ಯಾಪ್ತಿಯ ತಲಾ 7 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ತಲಾ 2ರಂತೆ 28 ಕೊಠಡಿಯಲ್ಲಿ ನಡೆಯಲಿದೆ. ಬಿಬಿಎಂಪಿ ದಕ್ಷಿಣ ಹಾಗೂ ಬಿಬಿಎಂಪಿ ಕೇಂದ್ರ ಚುನಾವಣಾ ಜಿಲ್ಲಾ ವ್ಯಾಪ್ತಿಯ ತಲಾ 7 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ತಲಾ ಒಂದರಂತೆ 14 ಕೊಠಡಿಯಲ್ಲಿ ನಡೆಯಲಿದೆ.

389 ಮಂದಿಯ ಭವಿಷ್ಯ ನಿರ್ಧಾರ

ನಗರದ 28 ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 389 ಅಭ್ಯರ್ಥಿಗಳು ಕಣದಲ್ಲಿದ್ದು, ಅವರ ರಾಜಕೀಯ ಭವಿಷ್ಯ ಶನಿವಾರ ನಿರ್ಧಾರವಾಗಲಿದೆ. 137 ಮಂದಿ ಪಕ್ಷೇತರರಾಗಿ, 115 ಅಭ್ಯರ್ಥಿಗಳು ಸಣ್ಣ ಮಟ್ಟದ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌, ಬಿಜೆಪಿ ಮತ್ತು ಆಮ್‌ ಆದ್ಮಿ ಪಕ್ಷಗಳು ಎಲ್ಲ 28 ಕ್ಷೇತ್ರಗಳಲ್ಲೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಜೆಡಿಎಸ್‌ 24 ಕ್ಷೇತ್ರ, ಎಡಿಯು 4, ಎನ್‌ಪಿಪಿಯ ಇಬ್ಬರು, ಸಿಪಿಐಎಂನಿಂದ ಒಬ್ಬರು ಕಣದಲ್ಲಿದ್ದಾರೆ.

Karnataka assembly election: ಸಿದ್ದರಾಮಯ್ಯ ಕೈಗೆ ಸರ್ಪಸುತ್ತು, ಡಿಕೆಶಿ ಜ್ವರದಿಂದ ಗುಣಮುಖ

ಎಲ್ಲಿ ಯಾವ ಕ್ಷೇತ್ರದ ಮತ ಎಣಿಕೆ?

ವಿಧಾನಸಭಾ ಕ್ಷೇತ್ರಗಳು-ಮತ ಎಣಿಕೆ ಕೇಂದ್ರ

  • ಬಸವನಗುಡಿಯ ಬಿಎಂಎಸ್‌ ಕಾಲೇಜು: ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ರಾಜಾಜಿನಗರ, ರಾಜರಾಜೇಶ್ವರಿನಗರ, ಶಾಂತಿನಗರ, ಶಿವಾಜಿನಗರ
  • ವಿಠಲ್‌ ಮಲ್ಯರಸ್ತೆಯ ಸೆಂಟ್‌ ಜೋಸೆಫ್‌ ಇಂಡಿಯನ್‌ ಹೈಸ್ಕೂಲ್‌: ಆನೇಕಲ್‌, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ದಾಸರಹಳ್ಳಿ, ಮಹಾದೇವಪುರ, ಯಲಹಂಕ ಯಶವಂತಪುರ
  • ವಸಂತ ನಗರದ ಮೌಂಟ್‌ ಕಾರ್ಮೆಲ್‌ ಕಾಲೇಜು: ಸಿ.ವಿ.ರಾಮನ್‌ನಗರ, ಹೆಬ್ಬಾಳ, ಕೆ.ಆರ್‌. ಪುರ, ಮಹಾಲಕ್ಷ್ಮಿ ಲೇಟ್‌, ಮಲ್ಲೇಶ್ವರ, ಪುಲಕೇಶಿನಗರ, ಸರ್ವಜ್ಞನಗರ
  • ಜಯನಗರ 4ನೇ ಬ್ಯಾಕ್‌ನ ಎಸ್‌ಎಸ್‌ಎಂಆರ್‌ವಿ ಕಾಲೇಜು: ಬಿಟಿಎಂ ಲೇಔಟ್‌, ಬಸವನಗುಡಿ, ಬೊಮ್ಮನಹಳ್ಳಿ, ಗೋವಿಂದರಾಜನಗರ, ಜಯನಗರ, ಪದ್ಮನಾಭ ನಗರ, ವಿಜಯನಗರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!