
ಬೆಂಗಳೂರು (ಜೂ.19): RCB ವಿಜಯೋತ್ಸವದ ವೇಳೆ ಸಂಭವಿಸಿದ ದುರಂತದಲ್ಲಿ 11 ಮಂದಿ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟ ಘಟನೆಯ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತಿದೆ. ಜನಸಂದಣಿಯಿಂದ ಉಂಟಾಗುವ ಅನಾಹುತಗಳನ್ನು ತಡೆಯಲು ಕರ್ನಾಟಕ ಕ್ರೌಂಡ್ ಕಂಟ್ರೋಲ್ ಬಿಲ್-2025 ತರಲು ಸರ್ಕಾರ ಮುಂದಾಗಿದೆ.
ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು, ವಿಧೇಯಕದ ಡ್ರಾಫ್ಟ್ ಸಿದ್ಧವಾಗಿದೆ. ಕ್ರೀಡಾ ಕಾರ್ಯಕ್ರಮಗಳು, ಸರ್ಕಸ್, ರಾಜಕೀಯ ರೋಡ್ ಶೋ, ವಾಣಿಜ್ಯ ಕಾರ್ಯಕ್ರಮಗಳು ಹಾಗೂ ಕಾನ್ಫರೆನ್ಸ್‌ಗಳಂತಹ ಜನಸಂದಣಿ ಒಡ್ಡುವ ಕಾರ್ಯಕ್ರಮಗಳಲ್ಲಿ ಜನರನ್ನು ನಿಯಂತ್ರಿಸಲು ಈ ಕಾಯ್ದೆ ಕಠಿಣ ನಿಯಮಗಳನ್ನು ಜಾರಿಗೆ ತರಲಿದೆ. ಕಾರ್ಯಕ್ರಮ ಆಯೋಜಕರು ಜನಸಂದಣಿಯನ್ನು ನಿಯಂತ್ರಿಸಲು ವಿಫಲವಾದರೆ ಅಥವಾ ಆಯಾ ಪೊಲೀಸ್ ಠಾಣೆಯಿಂದ ಪೂರ್ವಾನುಮತಿ ಪಡೆಯದಿದ್ದರೆ ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ ಮತ್ತು ಐದು ಸಾವಿರ ರೂಪಾಯಿ ದಂಡ ಎದುರಿಸಬೇಕಾಗುತ್ತದೆ.
ಕಾರ್ಯಕ್ರಮದ ವೇಳೆ ಗಲಾಟೆ, ಅಹಿತಕರ ಘಟನೆ, ದೇಹ ಹಾನಿ ಅಥವಾ ಸಾವು-ನೋವು ಸಂಭವಿಸಿದರೆ ಆಯೋಜಕರೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ. ಗಾಯಾಳುಗಳಿಗೆ ಅಥವಾ ಮೃತರ ಕುಟುಂಬಕ್ಕೆ ಪರಿಹಾರ ನೀಡಲು ವಿಫಲವಾದರೆ, ಆಯೋಜಕರ ಆಸ್ತಿಯನ್ನು ಹರಾಜು ಮಾಡಿ ಪರಿಹಾರ ವಸೂಲಿ ಮಾಡಲಾಗುವುದು. ಶಾಂತಿ ಭಂಗವಾಗುವ ಮುನ್ಸೂಚನೆ ಇದ್ದರೆ ಅಥವಾ ಅಹಿತಕರ ಘಟನೆ ನಡೆದರೆ, ಅನುಮತಿ ಇದ್ದರೂ ಕಾರ್ಯಕ್ರಮವನ್ನು ನಿಷೇಧಿಸುವ ಅಧಿಕಾರವನ್ನು ಪೊಲೀಸರಿಗೆ ನೀಡಲಾಗುವುದು.
ಈ ಕಾಯ್ದೆ ಯಾವುದಕ್ಕೆ ಅನ್ವಯ ಆಗೋಲ್ಲ?
ಜಾತ್ರೆ, ರಥೋತ್ಸವ, ಪಲ್ಲಕ್ಕಿ ಉತ್ಸವ, ತೆಪ್ಪದ ತೇರು, ಉರುಸ್ ಮತ್ತು ಇತರ ಧಾರ್ಮಿಕ ಉತ್ಸವಗಳಿಗೆ ಈ ಕಾಯ್ದೆ ಅನ್ವಯವಾಗುವುದಿಲ್ಲ. ರಾಜ್ಯ ಸರ್ಕಾರದ ಈ ಕ್ರಮವು ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಡೆಯುವ ಗುರಿಯನ್ನು ಹೊಂದಿದ್ದು, ಕಾರ್ಯಕ್ರಮ ಆಯೋಜಕರಿಗೆ ಕಠಿಣ ಜವಾಬ್ದಾರಿಯನ್ನು ವಿಧಿಸಲಿದೆ. ಕರ್ನಾಟಕ ಕ್ರೌಂಡ್ ಕಂಟ್ರೋಲ್ ಬಿಲ್-2025 ಶೀಘ್ರದಲ್ಲೇ ವಿಧಾನಸಭೆಯಲ್ಲಿ ಮಂಡನೆಯಾಗಲಿದೆ.
ಮುಂದಿನ ಅಪ್‌ಡೇಟ್‌ಗಾಗಿ ಏಷಿಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಸಂಪರ್ಕದಲ್ಲಿರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ