'ನಗರದಲ್ಲಿ ಮೈನಾರಿಟಿ ಜನಸಂಖ್ಯೆ ಜಾಸ್ತಿ ಆಗ್ತಿದೆ..' ವಸತಿ ಮೀಸಲಾತಿ ಹೆಚ್ಚಳ ಸಮರ್ಥಿಸಿಕೊಂಡ ಡಿಸಿಎಂ ಡಿಕೆಶಿ

Published : Jun 19, 2025, 04:52 PM IST
DK Shivakumar

ಸಾರಾಂಶ

ರಾಜ್ಯದ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರ ಮೀಸಲಾತಿಯನ್ನು ಶೇ.10 ರಿಂದ 15ಕ್ಕೆ ಹೆಚ್ಚಿಸುವ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಹೆಚ್ಚಳವನ್ನು ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರು (ಜೂ.19): ರಾಜ್ಯದಲ್ಲಿನ ವಸತಿ ನಿರ್ಮಾಣ ಯೋಜನೆಗಳಲ್ಲಿ ಅಲ್ಪಸಂಖ್ಯಾರ ಮೀಸಲಾತಿಯನ್ನು ಶೇ. 10 ರಿಂದ 15ಕ್ಕೆ ಏರಿಸುವ ವಿಚಾರವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸಮರ್ಥಿಸಿಕೊಂಡಿದ್ದಾರೆ. ಇನ್ನೊಂದೆಡೆ ಬಿಜೆಪಿ ಈ ಸರ್ಕಾರವನ್ನು ಮೌಲ್ವಿಗಳ ಸಲಹೆ ಪಡೆದು ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ನಗರ ಪ್ರದೇಶಗಳಲ್ಲಿ ಕಡೆ ತುಂಬಾ ಜನ ಅಲ್ಪಸಂಖ್ಯಾತರು ಇದ್ದಾರೆ. ಅಲ್ಲಿ ಅನೇಕ ಕಡೆಗಳಲ್ಲಿ ಮನೆಗಳು ಖಾಲಿ ಇವೆ. ಎಷ್ಟೋ ಕಡೆ ಕಟ್ಟಿರೋ ಬಿಲ್ಡಿಂಗ್ ಖಾಲಿ ಇದೆ. ಮೈನಾರಿಟಿ ಜನಸಂಖ್ಯೆ ಜಾಸ್ತಿ ಆಗುತ್ತಿದೆ. ಅವರಿಗೆ ಆದರೂ ಅವಕಾಶ ಕೊಡಬೇಕು, ಈ ಮನೆಗಳು ಅವರಿಗಾದ್ರೂ ಸಿಗಲಿ ಅಂತ ನಮ್ಮ ಉದ್ದೇಶ. ಹೀಗಾಗಿ 10 ಪರ್ಸೆಂಟ್ ನಿಂದ 15 ಪರ್ಸೆಂಟ್ ಏರಿಕೆ ಮಾಡಲಾಗುತ್ತಿದೆ. ನಾವು ಬಡವರಿಗೆ ಸಹಾಯ ಮಾಡಲು ಮುಂದಾಗಿದ್ದೇವೆ. ಖಾಲಿ ಇರುವ ಬಿಲ್ಡಿಂಗ್ ಗಳು ಇವೆ ಏನು ಮಾಡಬೇಕು? ಎಂದು ಪ್ರಶ್ನೆ ಮಾಡಿದ್ದಾರೆ.

"ವಸತಿ ಯೋಜನೆಗಳು ಸಾಕಷ್ಟು ಖಾಲಿಯಾಗಿಯೇ ಉಳಿದಿದೆ. ನಾವು ಅದನ್ನು ಇತರರಿಗೆ ಹಂಚಿಕೆ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಅವರು ಇದನ್ನು ಶೇ. 10 ರಿಂದ 15ಕ್ಕೆ ಏರಿಸುವಂತೆ ಕೇಳಿದ್ದರು' ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಮಂಡ್ಯದ ಉದಾಹರಣೆ ನೀಡಿದ ಡಿಸಿಎಂ

ಮಂಡ್ಯದಂತಹ ಪಟ್ಟಣಗಳನ್ನು ಉದಾಹರಣೆ ನೀಡುತ್ತಾ ಹೇಳಿದ ಡಿಸಿಎಂ, ಅಲ್ಲಿ ವಸತಿ ಯೋಜನೆಗಳ ಅಡಿಯಲ್ಲಿ ನಿರ್ಮಿಸಲಾದ ಸಂಪೂರ್ಣ ಗೋಪುರಗಳು ಇನ್ನೂ ಖಾಲಿಯಾಗಿವೆ. "ಮಂಡ್ಯವನ್ನೇ ನೋಡಿ, ಬೆಂಗಳೂರಿನಿಂದ ಹೋಗುವಾಗ ಎಡಭಾಗದಲ್ಲಿ, ಯಾರೂ ವಾಸಿಸಲು ಹೋಗದ 7-9 ಗೋಪುರಗಳಿವೆ. ಕನಿಷ್ಠ ಅಲ್ಪಸಂಖ್ಯಾತರು ಆ ಕಟ್ಟಡಗಳ್ಲಿ ಉಳಿಯಲು ಸಿದ್ಧರಿದ್ದಾರೆ" ಎಂದು ಅವರು ಹೇಳಿದರು.

ಮೌಲ್ವಿಗಳ ಸಲಹೆಯಲ್ಲಿ ನಡೆಯಿತ್ತಿರುವ ಸರ್ಕಾರ

ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿರುವ ಬಿಜೆಪಿ ಶಾಸಕ ಸುನೀಲ್‌ ಕುಮಾರ್‌, ' ಸಂವಿಧಾನ ವಿರೂಪ ಮಾಡಿದ್ದು ಕಾಂಗ್ರೆಸ್ ಈಗ ಮುಸ್ಲಿಂ ಮೀಸಲಾತಿ ನೀಡಿ ಅಂಬೇಡ್ಕರ್ ನೀಡಿದ ಮೀಸಲಾತಿ ವಿರೂಪ ಮಾಡಿದ್ದು ಇದೆ ಕಾಂಗ್ರೆಸ್. ಈ ಸರ್ಕಾರವನ್ನು ಅಧಿಕಾರಿಗಳ ಸಲಹೆ ಮೇಲೆ ನಡೆಸುತ್ತಿಲ್ಲ. ಮೌಲ್ವಿಗಳ ಸಲಹೆ ಪಡೆದು ಸರ್ಕಾರ ನಡೆಸಲಾಗುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ಮೀಸಲಾತಿ ಹೆಚ್ಚಳ. ಇದು ಅತ್ಯಂತ ಕಳವಳಕಾರಿ ಮತ್ತು ಖಂಡನಿಯ. ಆಶ್ರಯ ಮನೆಗಳಿಗೆ ಈ ಸರ್ಕಾರ ಎರಡು ವರ್ಷಗಳಲ್ಲಿ ಹಣವನ್ನೇ ನೀಡಿಲ್ಲ. ಉಳಿದ ಸಮುದಾಯದ ಮೇಲೆ ಗಮನ ಇಲ್ಲ. ಕೇವಲ ಮುಸ್ಲಿಂರು ಮಾತ್ರ ಮುಖ್ಯ ಎನ್ನುವಂತೆ ನಡೆದುಕೊಂಡಿದೆ. ಗುತ್ತಿಗೆ ಮೀಸಲಾತಿ ಇನ್ನೂ ರಾಷ್ಟ್ರಪತಿಗಳ ಅಂಗಳದಲ್ಲಿ ಇದೆ. ಈಗ ಆಶ್ರಯ ಮನೆಗೆ ಮೀಸಲಾತಿ ನೀಡಲು ಹೊರಟಿದೆ. ಸಂವಿಧಾನ ವಿರೂಪ ಮಾಡಿದ್ದು ಕಾಂಗ್ರೆಸ್. ತುರ್ತು ಪರಿಸ್ಥಿತಿ ಹೇರಿ ಸಂವಿಧಾನ ವಿರೋಧ ಮಾಡಿದ್ದರು. ಈಗ ಪರಿಶಿಷ್ಟ ಜಾತಿ ಪಂಗಡದವರಿಗೆ ಅನುಕೂಲ ಆಗಲಿ ಎಂದು ಮೀಸಲಾತಿ ತರಲಾಯಿತು. ಆದರೆ ಕಾಂಗ್ರೆಸ್ ಕೇವಲ ಮುಸ್ಲಿಮ್ ತುಷ್ಟಿಕರಣಕ್ಕೆ ಈ ಮೀಸಲಾತಿ ತರುತ್ತಿದೆ. ನಾವು ಇದನ್ನು ಖಂಡಿಸುತ್ತೇವೆ. ಮುಂದಿನ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದು ಕಾನೂನು ಬಾಹಿರ ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಆಶ್ರಯ ಮನೆಯ ಮೀಸಲಾತಿಯಲ್ಲಿ ಮುಸ್ಲಿಂ ಮೀಸಲಾತಿ ಹೆಚ್ಚಳ ವಿಚಾರದ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, '15%ಧರ್ಮಾಧಾರಿತವಾಗಿ ಮುಸ್ಲಿಂ ಗೆ ನೀಡಲು ತೀರ್ಮಾನ. 10% ಮೊದಲು ಇದ್ದಿದ್ದೂ ತಪ್ಪು. ಅಂಸವಿಧಾನಿಕ, ಕಾನೂನು ಬಾಹಿರ ಇದು. ಗುತ್ತಿಗೆಯಲ್ಲಿ 4% ಮುಸ್ಲಿಂ ಮೀಸಲಾತಿ ಕೊಟ್ಟಿದ್ದರು. ವಸತಿ ಯೋಜನೆಯಲ್ಲಿ ಈಗ ಮೀಸಲಾತಿ. ಉಳಿದ ಸಾಮಾನ್ಯ ಬಡವರಿಗೆ, scst obc ಗಳಿಗೆ ಅನ್ಯಾಯ ಆಗುತ್ತಿದೆ. ತುಷ್ಟೀಕರಣದಲ್ಲಿ ಇತರ ಸಮುದಾಯಕ್ಕೆ ಅನ್ಯಾಯ. ಇದನ್ನ ತೀವ್ರವಾಗಿ ವಿರೋಧಿಸುತ್ತೇವೆ. ಕಾನೂನು ರೀತಿಯ ಹೋರಾಟಕ್ಕೂ ರೆಡಿ ಆಗುತ್ತೇವೆ ಎಂದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!