Karnataka Corona case ಕೊರೋನಾ ಪರೀಕ್ಷೆಯಲ್ಲಿ ಮೊದಲ ಸ್ಥಾನದಲ್ಲಿ ಕರ್ನಾಟಕ, 6 ಕೋಟಿ ಮಂದಿಗೆ ಟೆಸ್ಟ್!

Published : Jan 25, 2022, 05:12 AM IST
Karnataka Corona case ಕೊರೋನಾ ಪರೀಕ್ಷೆಯಲ್ಲಿ ಮೊದಲ ಸ್ಥಾನದಲ್ಲಿ ಕರ್ನಾಟಕ, 6 ಕೋಟಿ ಮಂದಿಗೆ ಟೆಸ್ಟ್!

ಸಾರಾಂಶ

 ಜನವರಿಯಲ್ಲಿಯೇ 32 ಲಕ್ಷ ಜನರಿಗೆ ಕೊರೊನಾ ಪರೀಕ್ಷೆ 3 ವಾರದಲ್ಲಿ ಸೋಂಕು ಇಳಿಕೆ; ಕೋವಿಡ್‌ ಟೆಸ್ಟ್‌ನಲ್ಲಿ ರಾಜ್ಯ ನಂ.1 ಹೆಚ್ಚುತ್ತಿದೆ ಕೋವಿಡ್, ಸದ್ಯ ಆಸ್ಪತ್ರೆ ದಾಖಲಾತಿ ಕಡಿಮೆ

ಬೆಂಗಳೂರು(ಜ.25):  ಕೊರೋನಾ ಪರೀಕ್ಷೆಯಲ್ಲಿ ಕರ್ನಾಟಕ ಹೊಸ ದಾಖಲೆ ಬರೆದಿದೆ. ರಾಜ್ಯದಲ್ಲಿ(Karnataka) ಜನವರಿಯಲ್ಲಿಯೇ 32 ಲಕ್ಷ ಜನರಿಗೆ ಕೊರೊನಾ ಪರೀಕ್ಷೆ(Covid test) ಮಾಡಲಾಗಿದೆ. ಯಾವ ರಾಜ್ಯವೂ ಇಷ್ಟುಅಧಿಕ ಸಂಖ್ಯೆಯಲ್ಲಿ ಪರೀಕ್ಷೆ ಮಾಡಿಲ್ಲ. ಮೊದಲೆರಡು ಕೊರೋನಾ ಅಲೆಗಳನ್ನು ಸೇರಿ ಒಟ್ಟು 6 ಕೋಟಿ ಪರೀಕ್ಷೆಗಳನ್ನು ಮಾಡಿದ್ದು, ಇದು ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌(Dr K Sudhakar) ಹೇಳಿದರು. 

3 ವಾರದಲ್ಲಿ ಸೋಂಕು ಇಳಿಕೆ; ಕೋವಿಡ್‌ ಟೆಸ್ಟ್‌ನಲ್ಲಿ ರಾಜ್ಯ ನಂ.1
ಸದ್ಯ ಜಿಲ್ಲೆಗಳಲ್ಲಿ ಕೊರೋನಾ(Corona cases) ಹೊಸ ಪ್ರಕರಣಗಳು ಏರಿಕೆಯಾಗುತ್ತಿವೆ. 3 ವಾರಗಳಲ್ಲಿ ಕಡಿಮೆಯಾಗಲಿದೆ. ಸದ್ಯ ಸೋಂಕು ಪ್ರಕರಣಗಳಿಗಿಂತ ಆಸ್ಪತ್ರೆ(Hospital) ದಾಖಲಾತಿಗೆ ಹೆಚ್ಚು ಗಮನ ನೀಡಲಾಗಿದೆ. ಸದ್ಯ ಆಸ್ಪತ್ರೆ ದಾಖಲಾತಿ ಕಡಿಮೆ ಇದ್ದು, ಒಂದು ವೇಳೆ ಹೆಚ್ಚಾದರೆ ನಿರ್ಬಂಧ ಹೆಚ್ಚಿಸಲು ಕ್ರಮವಹಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

Health Care ಪ್ರತಿ ವರ್ಷ ತಪಾಸಣೆ, ಮಕ್ಕಳ ಚಿಕಿತ್ಸೆಗೆ ಟೆಲಿಮೆಡಿಸಿನ್‌, ರಾಜ್ಯ ಆರೋಗ್ಯ ವ್ಯವಸ್ಥೆ ಸುಧಾರಿಸುವ ವರದಿ ಸಿದ್ಧ!

ಚಿತ್ರದುರ್ಗ ಕೋವಿಡ್‌ ರಿಪೋರ್ಟ್‌
ಜಿಲ್ಲೆಯಲ್ಲಿ ಕೋವಿಡ್‌ ಮತ್ತೆ ಅಟ್ಟಹಾಸ ಗೈದಿದೆ. ಸೋಮವಾರದ ವರದಿಯಲ್ಲಿ 642 ಮಂದಿಗೆ ಸೋಂಕು ತಗುಲಿದ್ದು, ಮೂರನೇ ಅಲೆಯಲ್ಲಿ ಇದೇ ಮೊದಲ ಬಾರಿ ಗರಿಷ್ಠ ಸಂಖ್ಯೆಯಾಗಿದೆ. ಇದರಲ್ಲಿ 18 ವರ್ಷದೊಳಗಿನ 160 ಮಕ್ಕಳಿಗೆ ಕೋವಿಡ್‌ ದೃಢಪಟ್ಟಿದೆ. ಎಸ್‌ಜೆಎಂ ಡೆಂಟಲ್‌ ಕಾಲೇಜಿನ 10 ವಿದ್ಯಾರ್ಥಿನಿಯರು, ಚಿತ್ರದುರ್ಗದ ಸರ್ಕಾರಿ ಪಾಲೆಟೆಕ್ನಿಕ್‌ನ 12,ಚಿಕ್ಕಗೊಂಡನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ 8 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಚಿತ್ರದುರ್ಗ ತಾಲೂಕಿನ 237, ಚಳ್ಳಕೆರೆಯ 96, ಹಿರಿಯೂರಿನ 109, ಹೊಳಲ್ಕೆರೆಯ 58, ಹೊಸದುರ್ಗದ 69, ಮೊಳಕಾಲ್ಮುರು ತಾಲೂಕಿನ 73 ಮಂದಿಗೆ ಕೋವಿಡ್‌ ಸೋಂಕು ತಗುಲಿದ್ದು ಜಿಲ್ಲೆಯಲ್ಲಿ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 3261 ಕ್ಕೆ ಹೆಚ್ಚಳವಾಗಿದೆ.

Corona Cases 3ನೇ ಅಲೆಯಲ್ಲೇ ಗರಿಷ್ಠ: ಕರ್ನಾಟಕದಲ್ಲಿ 32 ಸಾವು, ಶೇ.33 ಪಾಸಿಟಿವಿಟಿ!

ಕೊಡಗು: 657 ಮಂದಿಗೆ ಸೋಂಕು
ಜಿಲ್ಲೆಯಲ್ಲಿ ಸೋಮವಾರ 657 ಹೊಸ ಕೋವಿಡ್‌-19 ಪ್ರಕರಣಗಳು ದೃಢಪಟ್ಟಿದ್ದು, 3,196 ಸಕ್ರಿಯ ಪ್ರಕರಣಗಳಿದೆ. ಜಿಲ್ಲೆಯಲ್ಲಿನ ಒಟ್ಟು ಕೋವಿಡ್‌-19 ಪ್ರಕರಣಗಳ ಸಂಖ್ಯೆ 40,298 ಆಗಿದ್ದು, ಒಟ್ಟು 36,663 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 439 ಮರಣ ಪ್ರಕರಣಗಳು ವರದಿಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಸಾವು ಉಂಟಾಗಿಲ್ಲ, ಕಂಟೈನ್ಮೆಂಟ್‌ ವಲಯಗಳ ಸಂಖ್ಯೆ 232 ಆಗಿದೆ. ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವಿಟಿ ದರ ಶೇ. 113.86 ಆಗಿದೆ ಎಂದು ಡಾ. ಬಿ.ಸಿ. ಸತೀಶ ಅವರು ತಿಳಿಸಿದ್ದಾರೆ.

ನೈಟ್ ಕರ್ಫ್ಯೂಗೆ ಡಿಕೆಶಿ ಆಕ್ರೋಶ:
ಬೆಂಗಳೂರು: ರಾತ್ರಿ ಕಫ್ರ್ಯೂ, ಶೇ.50ರಷ್ಟುಮಿತಿಯ ನಿರ್ಬಂಧಗಳ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತೊಮ್ಮೆ ಕಿಡಿ ಕಾರಿದ್ದು, ‘ಆರೋಗ್ಯ ಸಚಿವ ಸುಧಾಕರ್‌ ತುಂಬಾ ಬುದ್ಧಿವಂತರು. ರಾಜ್ಯಕ್ಕೆ ಬುದ್ಧಿವಂತರು, ವಿದ್ಯಾವಂತರು ಇಲ್ಲದಿದ್ದರೂ ಪರವಾಗಿಲ್ಲ ಪ್ರಜ್ಞಾವಂತರು ಬೇಕು. ಕನಿಷ್ಠ ಸಾಮಾನ್ಯ ಪ್ರಜ್ಞೆ ಇಟ್ಟುಕೊಂಡು ನಿಯಮಾವಳಿಗಳನ್ನು ರೂಪಿಸಬೇಕು. ರಾತ್ರಿ ಕಫ್ರ್ಯೂ, ಶೇ.50ರಷ್ಟುನಿಯಮಾವಳಿ ರೂಪಿಸುವುದೇ ಬ್ರಹ್ಮವಿದ್ಯೆ ಎಂದುಕೊಂಡಿದ್ದಾರಾ?’ ಎಂದು ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್‌ನ ಅವೈಜ್ಞಾನಿಕ ನಡೆಯಿಂದಲೇ ಕೊರೋನಾ ಜಾಸ್ತಿಯಾಗಿದೆ ಎಂಬ ಸುಧಾಕರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಸರ್ಕಾರದ ಮೆಟ್ರೋ, ಬಸ್ಸು, ವಿಮಾನಗಳಲ್ಲಿ ಎಷ್ಟುಜನ ಬೇಕಾದರೂ ತುಂಬಬಹುದು. ಆದರೆ ಆಟೋ, ಟ್ಯಾಕ್ಸಿ, ಹೋಟೆಲ್‌, ಬಾರ್‌ಗಳಲ್ಲಿ ಶೇ.50ಕ್ಕಿಂತ ಹೆಚ್ಚು ಜನ ಇದ್ದರೆ ಕೊರೋನಾ ಬರುತ್ತದೆ. ಹೆಂಡತಿ ಮಕ್ಕಳ ಜತೆ ಮನೆಯಲ್ಲಿ ಪಕ್ಕದಲ್ಲಿ ಕುಳಿತು ಟೀವಿ ನೋಡಬಹುದು. ಅವರೇ ಚಿತ್ರಮಂದಿರಕ್ಕೆ ಹೋದರೆ ದೂರ ಕೂರಬೇಕು. ಯಾರನ್ನು ಉದ್ಧಾರ ಮಾಡೋಕೆ ಈ ಅವೈಜ್ಞಾನಿಕ ನಿಯಮ ಮಾಡಿದ್ದೀರಿ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ