ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಜಾರಿಗೊಳಿಸಲಾದ ಮೊದಲ ಗ್ಯಾರಂಟಿ ಶಕ್ತಿ ಯೋಜನೆ 100 ದಿನವನ್ನು ಪೂರೈಸಿದ್ದು, 62 ಕೋಟಿ ಮಹಿಳೆಯರು ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ.
ಬೆಂಗಳೂರು (ಸೆ.20): ರಾಜ್ಯದಲ್ಲಿ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮೊಟ್ಟ ಮೊದಲನೆಯದಾಗಿ ಶಕ್ತಿ ಯೋಜನೆ (ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ) ಜಾರಿಗೊಳಿಸಿದ್ದು, ಈಗ 100 ದಿನಗಳನ್ನು ಪೂರೈಸಿದೆ. ಈ ಶಕ್ತಿ ಯೋಜನೆಯಡಿ 100 ದಿನದಲ್ಲಿ 62,55 ಕೋಟಿ ಮಹಿಳೆಯರು ಬಸ್‌ನಲ್ಲಿ ಪ್ರಯಾಣ ಮಾಡಿದ್ದು, ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 1,456 ಕೋಟಿ ರೂ.ಗೆ ತಲುಪಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಜನತೆ 135 ಸ್ಥಾನಗಳನ್ನು ಕೊಡುವ ಮೂಲಕ ಅಧಿಕಾರಕ್ಕೆ ತಂದಿದ್ದಾರೆ. ಇನ್ನು ನುಡಿದಂತೆ ನಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮೊದಲ ಗ್ಯಾರಂಟಿ ಯೋಜನೆಯಾಗಿ ಜೂನ್ 11ರಂದು 'ಶಕ್ತಿ ಯೋಜನೆ' ಜಾರಿಗೆ ತರಲಾಗಿತ್ತು. ಈಗ ಶಕ್ತಿ ಯೋಜನೆ 100 ದಿನಗಳ ಸಂಭ್ರಮವನ್ನು ಆಚರಣೆ ಮಾಡುತ್ತಿದೆ. ಮೊದಲೆರಡು ತಿಂಗಳು ಹೆಚ್ಚಿನ ಪ್ರಮಾಣದಲ್ಲಿ ಸಂಚಾರ ಮಾಡಿದ ಮಹಿಳಾ ಪ್ರಯಾಣಿಕರ ಸಂಖ್ಯೆ ಆಗಸ್ಟ್‌ನಲ್ಲಿ ಕೊಂಚ ಕಡಿಮೆಯಾಗಿದೆ.
ಕಾಂಗ್ರೆಸ್ ಶಕ್ತಿ ಯೋಜನೆ ದುರುಪಯೋಗ ಮಾಡಿಕೊಂಡ ತಮಿಳುನಾಡು ಮಹಿಳೆ: ಕೊಳ್ಳೇಗಾಲದಲ್ಲಿ ಅಂದರ್
ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಸಾರಿಗೆಗಳಲ್ಲಿ ಸರ್ಕಾರದಿಂದ ಉಚಿತ ಪ್ರಯಾಣ ಕಲ್ಪಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ 11 ರಂದು ಶಕ್ತಿ ಯೋಜನೆಗೆ ವಿಧಾನಸೌಧದ ಮುಂಭಾಗದಲ್ಲಿ ಚಾಲನೆ ನೀಡಿದ್ದರು. ಕೆಎಸ್ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ,ಎನ್‌ಡಬ್ಲ್ಯೂಕೆಆರ್‌ಟಿಸಿಯ ಎಲ್ಲ ವೇಗದೂತ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಲಾಗಿತ್ತು. ಶಕ್ತಿ ಯೋಜನೆಯಡಿ ನಾಲ್ಕು ನಿಗಮಗಳಲ್ಲಿ 62.55 ಕೋಟಿ ಮಹಿಳೆಯರು ಸಂಚಾರ ಮಾಡಿದ್ದಾರೆ.
ಶಕ್ತಿಯೋಜನೆಯಡಿ ಎಷ್ಟು ಮಹಿಳೆಯರು ಓಡಾಟ ನಡೆಸಿದ್ದಾರೆ?
ಜೂನ್ 11 ರಿಂದ ಸೆಪ್ಟೆಂಬರ್ 19 ರವರೆಗೆ ಓಡಾಟ ನಡೆಸಿದ ಮಹಿಳೆಯರ ಸಂಖ್ಯೆ
ಶಕ್ತಿ ಯೋಜನೆಯಡಿ ಓಡಾಟ ನಡೆಸಿದ ಒಟ್ಟು ಮಹಿಳೆಯರ ಸಂಖ್ಯೆ- 62,55,39,727
ಮಹಿಳಾ ಪ್ರಯಾಣಿಕರ ಟಿಕೆಟ್ ದರ- 1456,09,64,867
100 ದಿನದಲ್ಲಿ ಯಾವ ಯಾವ ನಿಗಮದಿಂದ ಎಷ್ಟು ಮಹಿಳೆಯರು ಸಂಚಾರ?
ಕೆಎಸ್‌ಆರ್‌ಟಿಸಿ- 18,64,69,897
ಬಿಎಮ್‌ಟಿಸಿ - 20,73,07,516
ಎನ್‌ಡಬ್ಲ್ಯೂಕೆಆರ್‌ಟಿಸಿ- 14,55,22,859
ಕೆಕೆಆರ್‌ಟಿಸಿ- 8,62,39,455
ಶಕ್ತಿ ಯೋಜನೆಯ ಬಸ್‌ಗಳಿಗೆ ಕಲ್ಲೆಸೆದ ಕಾಲೇಜು ವಿದ್ಯಾರ್ಥಿಗಳು: ಗಾಜುಗಳು ಪುಡಿ, ಪುಡಿ
100 ದಿನಗಳಲ್ಲಿ ಒಟ್ಟು ಮಹಿಳೆಯರ ಪ್ರಯಾಣಿಕರ ಟಿಕೆಟ್ ಮೌಲ್ಯ ಎಷ್ಟು?
ಕೆಎಸ್‌ಆರ್‌ಟಿಸಿ- 541,64,12,207
ಬಿಎಮ್‌ಟಿಸಿ - 264,01,82,826
ಎನ್‌ಡಬ್ಲ್ಯೂಕೆಆರ್‌ಟಿಸಿ- 368,01,97,845
ಕೆಕೆಆರ್‌ಟಿಸಿ- 282,41,71,989