ಕೆಪಿಎಸ್‌ಸಿಗೆ ಭ್ರಷ್ಟರನ್ನು ನೇಮಿಸಲು ಮುಂದಾದ ಕಾಂಗ್ರೆಸ್‌ ಸರ್ಕಾರ

By Sathish Kumar KHFirst Published Aug 19, 2023, 11:27 AM IST
Highlights

ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಕಾಂಗ್ರೆಸ್‌ ಸರ್ಕಾರ ಭ್ರಷ್ಟ ಅಧಿಕಾರಿಯನ್ನು ನೇಮಕ ಮಾಡಲು ಮುಂದಾಗಿದೆ. 

ಬೆಂಗಳೂರು (ಆ.19): ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ಭ್ರಷ್ಟ ಅಧಿಕಾರಿಯನ್ನು ನೇಮಕ ಮಾಡಲು ಮುಂದಾಗಿದ್ದಾರೆ. 

ಹೌದು, ರಾಜ್ಯದಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಯುವ ಉದ್ಯೋಗ ನೇಮಕಾತಿಗಳಲ್ಲಿ ಅಕ್ರಮ ನಡೆದು ಇದು ಭ್ರಷ್ಟ ಸಂಸ್ಥೆಯೆಂದೇ ಹೇಳುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರದಿಂದ ಮುಕ್ತವಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ರಾಜ್ಯ ಸರ್ಕಾರದಿಂದ ಕೆಪಿಎಸ್‌ಸಿ ಸದಸ್ಯರ ನೇಮಕಕ್ಕೆ ಭ್ರಷ್ಟ ಅಧಿಕಾರಿಯನ್ನು ನೇಮಕ ಮಾಡಲು ಮುಂದಾಗಿದೆ. ಈಗಾಗಲೇ ಕುವೆಂಪು ವಿಶ್ವವಿದ್ಯಾಲಯದಲ್ಲಿ 50 ಕೋಟಿ ರೂ. ಭ್ರಷ್ಟಾಚಾರ ಎಸಗಿದ್ದಾರೆಂಬ ಆರೋಪವನ್ನು ಹೊಂದಿರುವ ನಿವೃತ್ತ ಪ್ರೊಫೆಸರ್‌ ಅವರನ್ನು ಕೆಪಿಎಸ್‌ಸಿ ಸದಸ್ಯರನ್ನಾಗಿ ನೇಮಕ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಫಾರಸು ಮಾಡಿದ್ದಾರೆ. 

ಬೆಂಗಳೂರು ನಿಲ್ದಾಣಕ್ಕೆ ಬಂದ ಮುಂಬೈ ಉದ್ಯಾನ್ ಎಕ್ಸ್ ಪ್ರೆಸ್ ರೈಲಿಗೆ ಬೆಂಕಿ, ಹೊತ್ತಿ ಉರಿದ ಎಸಿ ಕೋಚ್

ಭ್ರಷ್ಟಾಚಾರ ಆರೋಪವಿರುವ ವ್ಯಕ್ತಿ ಹೆಸರು ಶಿಫಾರಸು: ಹೌದು, ಕೆಪಿಎಸ್‌ಸಿ ಸದಸ್ಯರ ನೇಮಕದಲ್ಲಿ ರಾಜ್ಯ ಸರ್ಕಾರ ಭ್ರಷ್ಟರಿಗೆ ಮಣೆ ಹಾಕಲು ಮುಂದಾಗಿದೆ. ಕರ್ನಾಟಕ ಲೋಕಸೇವಾ ಆಯೋಗಕ್ಕೆ ಮೂವರು ನೇಮಕಕ್ಕೆ ಸಿದ್ದರಾಮಯ್ಯ ಶಿಫಾರಸು ಮಾಡಿದ್ದಾರೆ. ಸಿಎಂ ಸೂಚಿಸಿರುವ ಮೂವರ ಪೈಕಿ ಒಬ್ಬರ ಮೇಲಿದೆ ಗಂಭೀರ ಭ್ರಷ್ಟಾಚಾರದ ಆರೋಪ ಇದೆ. ಬಸವರಾಜ್ ಮಲ್ಗೆ, ಡಾ‌. ಆರ್. ಕಾವಾಲಮ್ಮ ಹಾಗೂ ಎಚ್.ಎಸ್ ಭೋಜ್ಯನಾಯ್ಕ ಎಂಬ ಮೂವರ ಹೆಸರನ್ನ ಶಿಫಾರಸು ಮಾಡಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗಕ್ಕೆ ಭ್ರಷ್ಟಾಚಾರದ ಆರೋಪ ಇರುವ ವ್ಯಕ್ತಿಯ ನೇಮಕ ಎಷ್ಟು ಸರಿ ಎಂಬುದು ಚರ್ಚೆಯಾಗುತ್ತಿದೆ. 

ಕುವೆಂಪು ವಿವಿ ಪರೀಕ್ಷಾಂಗ ವಿಭಾಗದಲ್ಲಿ 50 ಕೋಟಿ ರೂ. ಭ್ರಷ್ಟಾಚಾರ ಆರೋಪ: ಇನ್ನು ಪ್ರೊಫೆಸರ್‌ ಎಚ್.ಎಸ್ ಭೋಜ್ಯನಾಯ್ಕ್ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಇದೆ. ಅಲ್ಲದೇ ಭೋಜ್ಯನಾಯ್ಕ್ ಅವರ ಮೇಲೆ ತನಿಖೆ ನಡೆಯುತ್ತಿದೆ. ಕುವೆಂಪು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾಗಿದ್ದ ವೇಳೆ ಅಕ್ರಮ ಎಸಗಿರುವ ಆರೋಪ ಭೋಜ್ಯನಾಯ್ಕ್ ಮೇಲಿದೆ. ಉನ್ನತ ಶಿಕ್ಷಣ ಇಲಾಖೆ, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಕೂಡ ನಡೆಸುತ್ತಿದೆ. ಅಲ್ಲದೇ ಭೋಜ್ಯನಾಯ್ಕ್ ವಿರುದ್ಧ ಲೋಕಾಯುಕ್ತದಲ್ಲಿ ದೂರು ಕೂಡ ದಾಖಲಾಗಿದೆ. ಕುವೆಂಪು ವಿವಿಯಲ್ಲಿ ಕೆಟಿಟಿಪಿ ನಿಯಮ ಉಲ್ಲಂಘಿಸಿ ಅಕ್ರಮ ಎಸಗಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಸುಮಾರು 50-60 ಕೋಟಿ ಅಕ್ರಮ ಎಸಗಿರುವ ಆರೋಪ ಕೂಡ ಇದೆ. 

ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು; ಶಾಸಕರ ಘರ್‌ ವಾಪ್ಸಿ ಬಗ್ಗೆ ಸುಳಿವು ಕೊಟ್ರಾ ಡಿಕೆಶಿ?

ಮೈಸೂರು ಕುಲಸಚಿವರನ್ನಾಗಿ ನೇಮಕ ಮಾಡುವುದಕ್ಕೆ ತಿರಸ್ಕಾರ: ಇನ್ನು 2022ರಲ್ಲಿ ಮೈಸೂರು ವಿವಿ ಕುಲಸಚಿವರ ಆಯ್ಕೆ ವಿಚಾರಕ್ಕೆ ಭೋಜ್ಯನಾಯ್ಕ್ ಹೆಸರು ತಿರಸ್ಕರಿಸಲಾಗಿದೆ. ಭೋಜ್ಯನಾಯ್ಕ್ ಅವರ ಮೇಲೆ ಗಂಭೀರ ಆರೋಪಗಳಿವೆ. ಯುಜಿಸಿ ನಿಯಮದ ಪ್ರಕಾರ ಅವರಿಗೆ ಯಾವುದೇ ಉನ್ನತ ಹುದ್ದೆ ನೀಡಲು ಆಗುವುದಿಲ್ಲ ಎಂದು ತಿರಸ್ಕರಿಸಲಾಗಿದೆ. ಹೀಗಿದ್ದಾಗಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಭೋಜ್ಯನಾಯ್ಕ್ ಅವರನ್ನ ಕೆಪಿಎಸ್‌ಸಿ ಸದಸ್ಯರಾಗಿ ನೇಮಿಸಲು ಮುಂದಾಗಿದ್ದಾರೆ. ಲೋಕಸೇವಾ ಆಯೋಗಕ್ಕೆ ಸದಸ್ಯರಾಗಿ ನೇಮಿಸಲು ಸಿದ್ದರಾಮಯ್ಯ ಮುಖ್ಯ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡಿದ್ದಾರೆ. ಸಿದ್ದರಾಮಯ್ಯ ಬರೆದಿರುವ ಟಿಪ್ಪಣಿ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.

 

click me!