
ಬೆಂಗಳೂರು (ಆ.19) :
ಹೈಕೋರ್ಟ್ ಸೂಚನೆಯ ಹಿನ್ನೆಲೆಯಲ್ಲಿ ಬಿಬಿಎಂಪಿಯ 243 ವಾರ್ಡ್‌ಗಳನ್ನು 225 ವಾರ್ಡ್‌ಗಳನ್ನಾಗಿ ಮರುವಿಂಗಡಣೆ ಮಾಡಲಾಗಿದ್ದು, ಅದರ ಕರಡು ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಲಾಗಿದೆ.
ಕಳೆದ ಅವಧಿಯಲ್ಲಿ ಬಿಬಿಎಂಪಿಯ 198 ವಾರ್ಡ್‌ಗಳನ್ನು 243ಕ್ಕೆ ಹೆಚ್ಚಿಸಲಾಗಿತ್ತು. ವಾರ್ಡ್ ಮರುವಿಂಗಣೆ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿದ್ದ ಹಲವರು ಹೈಕೋರ್ಚ್ ಮೆಟ್ಟಿಲೇರಿದ್ದರು. ಆ ಹಿನ್ನೆಲೆಯಲ್ಲಿ ವಾರ್ಡ್ ಮರುವಿಂಗಡಣೆ ವರದಿಯಲ್ಲಿನ ಲೋಪಗಳನ್ನು ಸರಿಪಡಿಸಿ ಮತ್ತೆ ಸಲ್ಲಿಕೆ ಮಾಡುವಂತೆ ಹೈಕೊರ್ಚ್ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ವಾರ್ಡ್ ಮರುವಿಂಗಡಣೆಗಾಗಿ ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದ ಸಮಿತಿ ರಚಿಸಿ ಸರ್ಕಾರ ಆದೇಶಿಸಿತ್ತು. ಜತೆಗೆ 243 ವಾರ್ಡ್‌ಗಳನ್ನು 225 ವಾರ್ಡ್‌ಗಳನ್ನು ಮರುವಿಂಗಡಿಸುವಂತೆ ಸೂಚಿಸಿ, ಅದಕ್ಕಾಗಿ ಅಧಿಸೂಚನೆಯನ್ನೂ ಪ್ರಕಟಿಸಲಾಗಿತ್ತು. ಅದರಂತೆ ಅಧಿಕಾರಿಗಳು 225 ವಾರ್ಡ್‌ಗಳ ಕರಡು ಪಟ್ಟಿರಚಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು.
BBMP: ಪಾಲಿಕೆ ಲ್ಯಾಬ್‌ಗೆ ಬೆಂಕಿ: ದೂರು ಕೊಟ್ಟಅಧಿಕಾರಿಗೇ ಪೊಲೀಸರಿಂದ ನೋಟಿಸ್!
ಇದೀಗ ಸರ್ಕಾರ ಕರಡು ಪಟ್ಟಿಯನ್ನು ಪ್ರಕಟಿಸಿದ್ದು, ಸಾರ್ವಜನಿಕರಿಂದ ಆಕ್ಷೇಪ ಸಲ್ಲಿಕೆಗೆ 15 ದಿನ ಕಾಲಾವಕಾಶ ನೀಡಲಾಗಿದೆ. ವಾರ್ಡ್‌ಗಳ ಬಗ್ಗೆ ಸಾರ್ವಜನಿಕರು ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಕಾಸಸೌಧ, ಡಾ
ಬಿ.ಆರ್.ಅಂಬೇಡ್ಕರ್ ವೀದಿ, ಬೆಂಗಳೂರು: 560001ಗೆ ಆಕ್ಷೇಪಣೆ ಸಲ್ಲಿಸಬೇಕಿದೆ.
ಬಿಜೆಪಿ ಕ್ಷೇತ್ರಗಳ ವಾರ್ಡ್‌ಗೆ ಕತ್ತರಿ
ಈ ಹಿಂದೆ 35 ಸಾವಿರ ಜನಸಂಖ್ಯೆಯ ಸರಾಸರಿಯಲ್ಲಿ ವಾರ್ಡ್‌ಗಳನ್ನು ರಚಿಸಲಾಗಿತ್ತು. ಇದೀಗ ಸರಾಸರಿ 37,527 ಜನಸಂಖ್ಯೆಗೊಂದರಂತೆ ವಾರ್ಡ್‌ನ್ನು ರಚಿಸಲಾಗಿದೆ. ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಲ್ಲಿನ ವಾರ್ಡ್‌ಗಳನ್ನು ಕಡಿತಗೊಳಿಸಿ 225 ವಾರ್ಡ್‌ಗಳನ್ನು ರಚಿಸಲಾಗಿದೆ. ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿಯೇ ಬಹುತೇಕ ವಾರ್ಡ್‌ಗಳನ್ನು ಕಡಿತಗೊಳಿಸಲಾಗಿದೆ. ಒಟ್ಟು 18 ವಾರ್ಡ್‌ಗಳನ್ನು ಕಡತಗೊಳಿಸಿ 225 ವಾರ್ಡ್‌ಗಳನ್ನು ರಚಿಸಲಾಗಿದೆ.
ವಾರ್ಡ್‌ಗಳ ಹೆಸರು ಬದಲಾವಣೆ
ಬಿಜೆಪಿ ಅವಧಿಯಲ್ಲಿ ವಾರ್ಡ್‌ಗಳಿಗೆ ಛತ್ರಪತಿ ಶಿವಾಜಿ, ಚಾಣಕ್ಯ, ಕನ್ನೇಶ್ವರ ರಾಮ, ವೀರಮದಕರಿ, ರಣಧೀರ ಕಂಠೀರವ, ವೀರಸಿಂಧೂರ ಲಕ್ಷ್ಮಣ, ವಿಜಯನಗರ ಕೃಷ್ಣದೇವರಾಯ, ಸರ್ ಎಂ.ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್ ಪಾರ್ಕ್ ಹೀಗೆ ಇತಿಹಾಸ ಪುರುಷರ ಹೆಸರನ್ನಿಡಲಾಗಿತ್ತು. ಈಗ ಅವನ್ನೆಲ್ಲ ತೆಗೆದು ಹಾಕಿ ಆಯಾ ಪ್ರದೇಶಕ್ಕೆ ತಕ್ಕಂತೆ ಬಡಾವಣೆಗಳ ಹೆಸರನ್ನು ಇಡಲಾಗಿದೆ.
BBMP Lab Fire: ನಿಯಮಬಾಹಿರವಾಗಿ ಲ್ಯಾಬ್ ನಿರ್ಮಾಣ? ಕಮಿಷನರ್‌ಗೆ ನೋಟಿಸ್
ವಾರ್ಡ್‌ಗಳ ವಿವರ
ಯಲಹಂಕ ಕ್ಷೇತ್ರ
1.ಕೆಂಪೇಗೌಡ
2.ಚೌಡೇಶ್ವರಿ
3.ಅಟ್ಟೂರು
4.ಯಲಹಂಕ ಉಪನಗರ
ಬ್ಯಾಟರಾಯನಪುರ ಕ್ಷೇತ್ರ
5.ಕೋಗಿಲು
6.ಥಣಿಸಂದ್ರ
7.ಜಕ್ಕೂರು
8.ಅಮೃತಹಳ್ಳಿ
9.ಹೆಬ್ಬಾಳ ಕೆಂಪಾಪುರ
10.ಬ್ಯಾಟರಾಯನಪುರ
11.ಕೊಡಿಗೆಹಳ್ಳಿ
12.ದೊಡ್ಡಬೊಮ್ಮಸಂದ್ರ
13.ವಿದ್ಯಾರಣ್ಯಪುರ
14.ಕುವೆಂಪುನಗರ
ದಾಸರಹಳ್ಳಿ ಕ್ಷೇತ್ರ
15.ಕಮ್ಮಗೊಂಡನಹಳ್ಳಿ
16.ಮಲ್ಲಸಂದ್ರ
17.ಚಿಕ್ಕಸಂದ್ರ
18.ಬಾಗಲಗುಂಟೆ
19.ಟಿ.ದಾಸರಹಳ್ಳಿ
20.ನೆಲಗದರೇನಹಳ್ಳಿ
21.ಚೊಕ್ಕಸಂದ್ರ
22.ಪೀಣ್ಯ ಕೈಗಾರಿಕಾ ಪ್ರದೇಶ
23.ರಾಜಗೋಪಾಲನಗರ
24.ಹೆಗ್ಗನಹಳ್ಳಿ
25.ಸುಂಕದಕಟ್ಟೆ
ಯಶವಂತಪುರ ಕ್ಷೇತ್ರ
26.ದೊಡ್ಡಬಿದರಕಲ್ಲು
27.ಬ್ಯಾಡರಹಳ್ಳಿ
28.ಹೇರೋಹಳ್ಳಿ
29.ಉಲ್ಲಾಳು
30.ನಾಗದೇವನಹಳ್ಳಿ
31.ಬಂಡೆಮಠ
32.ಕೆಂಗೇರಿ
33.ಹೆಮ್ಮಿಗೆಪುರ
ರಾಜರಾಜೇಶ್ವರಿನಗರ ಕ್ಷೇತ್ರ
34.ಜೆಪಿ ಪಾರ್ಕ್
35.ಯಶವಂತಪುರ
36.ಜಾಲಹಳ್ಳಿ
37.ಪೀಣ್ಯ
38.ಲಕ್ಷ್ಮೇದೇವಿನಗರ
39.ಲಗ್ಗೆರೆ
40.ಚೌಡೇಶ್ವರಿನಗರ
41.ಕೊಟ್ಟಿಗೆಪಾಳ್ಯ
42.ಶ್ರೀಗಂಧದ ಕಾವಲ್
43.ಮಲ್ಲಹಳ್ಳಿ
44.ಜ್ಞಾನಭಾರತಿ
45.ರಾಜರಾಜೇಶ್ವರಿನಗರ
ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ
46.ಮಾರಪ್ಪನಪಾಳ್ಯ
47.ನಂದಿನಿ ಲೇಔಟ್
48.ಮಹಾಲಕ್ಷ್ಮೇಪುರ
49.ನಾಗಪುರ
50.ಡಾ
ಪುನೀತ್ ರಾಜ್‌ಕುಮಾರ್
51.ಶಂಕರಮಠ
52.ಶಕ್ತಿ ಗಣಪತಿನಗರ
53.ವೃಷಭಾವತಿನಗರ
ಮಲ್ಲೇಶ್ವರ ಕ್ಷೇತ್ರ
54.ಮತ್ತಿಕೆರೆ
55.ಅರಮನೆನಗರ
56.ಮಲ್ಲೇಶ್ವರ
57.ಸುಬ್ರಹ್ಮಣ್ಯನಗರ
58.ಗಾಯತ್ರಿನಗರ
59.ಕಾಡುಮಲ್ಲೇಶ್ವರ
60.ರಾಜಮಹಲ್ ಗುಟ್ಟಹಳ್ಳಿ
ಹೆಬ್ಬಾಳ ಕ್ಷೇತ್ರ
61.ರಾಧಾಕೃಷ್ಣ ದೇವಸ್ಥಾನ
62.ಸಂಜಯನಗರ
63.ಹೆಬ್ಬಾಳ
64.ವಿಶ್ವನಾಥ ನಾಗೇನಹಳ್ಳಿ
65.ಮನೋರಾಯನಪಾಳ್ಯ
66.ಚಾಮುಂಡಿನಗರ
67.ಗಂಗಾನಗರ
68.ಜೆಸಿ ನಗರ
ಪುಲಕೇಶಿನಗರ ಕ್ಷೇತ್ರ
69.ಕಾವಲ್ ಬೈರಸಂದ್ರ
70.ಕುಶಾಲ್ ನಗರ
71.ಮುನೇಶ್ವರ ನಗರ
72.ಡಿಜೆ ಹಳ್ಳಿ
73.ಎಸ್‌ಕೆ ಗಾರ್ಡನ್
74.ಸಗಾಯಪುರ
75.ಪುಲಕೇಶಿನಗರ
ಸರ್ವಜ್ಞನಗರ ಕ್ಷೇತ್ರ
76.ಹೆಣ್ಣೂರು
77.ನಾಗವಾರ
78.ಎಚ್‌ಆರ್‌ಬಿಆರ್ ಲೇಔಟ್
79.ಕಾಚರಕನಹಳ್ಳಿ
80.ಕಾಡುಗೊಂಡನಹಳ್ಳಿ
81.ಕಮ್ಮನಹಳ್ಳಿ
82.ಬಾಣಸವಾಡಿ
83.ಕೆಎಸ್‌ಎಫ್‌ಸಿ ಲೇಔಟ್
84.ಲಿಂಗರಾಜಪುರ
85.ಮಾರುತಿ ಸೇವಾನಗರ
ಕೆಆರ್ ಪುರ ಕ್ಷೇತ್ರ
86.ಚಳ್ಳಕೆರೆ
87.ಹೊರಮಾವು
88.ಕಲ್ಕೆರೆ
89.ವಿಜಿನಾಪುರ
90.ರಾಮಮೂರ್ತಿನಗರ
91.ಕೆಆರ್ ಪುರ
92.ಬಸವನಪುರ
93.ದೇವಸಂದ್ರ
94.ಎ.ನಾರಾಯಣಪುರ
95.ವಿಜ್ಞಾನನಗರ
96.ಎಚ್‌ಎಎಲ್ ವಿಮಾನನಿಲ್ದಾಣ
ಮಹದೇವಪುರ ಕ್ಷೇತ್ರ
97.ಕಾಡುಗೋಡಿ
98.ಬೆಳತ್ತೂರು
99.ಹೂಡಿ
100.ಗರುಡಾಚಾರ್ ಪಾಳ್ಯ
101.ದೊಡ್ಡನೆಕುಂದಿ
102.ಎಇಸಿಎಸ್ ಲೇಔಟ್
103.ವೈಟ್‌ಫೀಲ್ಡ್
104.ವರ್ತೂರು
105.ಮುನ್ನೆಕೊಳ್ಳಾಲು
106.ಮಾರತಹಳ್ಳಿ
107.ಬೆಳ್ಳಂದೂರು
ಸಿ.ವಿ. ರಾಮನ್‌ನಗರ ಕ್ಷೇತ್ರ
108.ಕಾಕ್ಸ್‌ಟೌನ್
109.ಬೆನ್ನಿಗಾನಹಳ್ಳಿ
110.ಸಿವಿ ರಾಮನ್ ನಗರ
111.ಕಗ್ಗದಾಸಪುರ
112.ಹೊಸ ತಿಪ್ಪಸಂದ್ರ
113.ಹೊಯ್ಸಳನಗರ
114.ಜೀವನಭೀಮನಗರ
115.ಕೋನೇನ ಅಗ್ರಹಾರ
ಶಿವಾಜಿನಗರ ಕ್ಷೇತ್ರ
116.ರಾಮಸ್ವಾಮಿಪಾಳ್ಯ
117.ವಸಂತನಗರ
118.ಸಂಪಂಗಿರಾಮನಗರ
119.ಶಿವಾಜಿನಗರ
120.ಭಾರತಿನಗರ
121.ಹಲಸೂರು
ಗಾಂಧಿನಗರ ಕ್ಷೇತ್ರ
122.ದತ್ತಾತ್ರೇಯ ದೇವಸ್ಥಾನ
123.ಗಾಂಧಿನಗರ
124.ಸುಭಾಷ್‌ನಗರ
125.ಓಕಳಿಪುರ
126.ಬಿನ್ನಿಪೇಟೆ
127.ಕಾಟನ್‌ಪೇಟೆ
128.ಚಿಕ್ಕಪೇಟೆ
ರಾಜಾಜಿನಗರ ಕ್ಷೇತ್ರ
130.ದಯಾನಂದನಗರ
131.ಪ್ರಕಾಶನಗರ
132.ಶ್ರೀ ರಾಮಮಂದಿರ
133.ಶಿವನಗರ
134.ಬಸವೇಶ್ವರನಗರ
135.ಕಾಮಾಕ್ಷಿಪಾಳ್ಯ
ಗೋವಿಂದರಾಜನಗರ ಕ್ಷೇತ್ರ
136.ಡಾ
ರಾಜ್‌ಕುಮಾರ್ ಅಗ್ರಹಾರ ದಾಸರಹಳ್ಳಿ
137.ಗೋವಿಂದರಾಜನಗರ
138.ಮಾರೇನಹಳ್ಳಿ
139.ಕಾವೇರಿಪುರ
140.ಮೂಡಲಪಾಳ್ಯ
141.ಮಾರುತಿಮಂದಿರ
142.ನಾಗರಭಾವಿ
143.ಚಂದ್ರಾಲೇಔಟ್
144.ನಾಯಂಡಹಳ್ಳಿ
ವಿಜಯನಗರ ಕ್ಷೇತ್ರ
145.ಕೆಂಪಾಪುರ ಅಗ್ರಹಾರ
146.ವಿಜಯನಗರ
147.ಹೊಸಹಳ್ಳಿ
148.ಹಂಪಿನಗರ
149.ಹೊಸ ಗುಡ್ಡದಹಳ್ಳಿ
150.ಗಾಳಿ ಆಂಜನೇಯ ದೇವಸ್ಥಾನ
151.ಅತ್ತಿಗುಪ್ಪೆ
152.ದೀಪಾಂಜಲಿನಗರ
ಚಾಮರಾಜಪೇಟೆ ಕ್ಷೇತ್ರ
153.ಪಾದರಾಯನಪುರ
154.ರಾಯಪುರ
155.ದೇವರಾಜ ಅರಸ್ ನಗರ
156.ಚಲವಾದಿಪಾಳ್ಯ
157.ಕೆಆರ್ ಮಾರುಕಟ್ಟೆ
158.ಚಾಮರಾಜಪೇಟೆ
159.ಆಜಾದ್ ನಗರ
ಚಿಕ್ಕಪೇಟೆ ಕ್ಷೇತ್ರ
160.ಧರ್ಮರಾಯಸ್ವಾಮಿ ದೇವಸ್ಥಾನ
161.ಸಿಲ್ವರ್ ಜ್ಯೂಬ್ಲಿ ಪಾರ್ಕ್
162.ಸುಂಕೇನಹಳ್ಳಿ
163.ವಿಶ್ವೇಶ್ವರಪುರ
164.ಹೊಂಬೇಗೌಡನಗರ
165.ಸೋಮೇಶ್ವರ ನಗರ
ಶಾಂತಿನಗರ
166.ಶಾಂತಿನಗರ
167.ಶಾಂತಲಾನಗರ
168.ನೀಲಸಂದ್ರ
169.ವನ್ನಾರಪೇಟೆ
170.ಜೋಗುಪಾಳ್ಯ
171.ದೊಮ್ಮಲೂರು
172.ಅಗರ
ಬಿಟಿಎಂ ಲೇಔಟ್ ಕ್ಷೇತ್ರ
173.ಈಜಿಪುರ
174.ಕೋರಮಂಗಲ
175.ಜಕ್ಕಸಂದ್ರ
176.ಆಡುಗೋಡಿ
177.ಲಕ್ಕಸಂದ್ರ
178.ಸುದ್ದಗುಂಟೆಪಾಳ್ಯ
179.ಮಡಿವಾಳ
180.ಸೋಮೇಶ್ವರ ದೇವಸ್ಥಾನ ವಾರ್ಡ್
181.ಬಿಟಿಎಂ ಲೇಔಟ್
ಜಯನಗರ ಕ್ಷೇತ್ರ
182.ಬೈರಸಂದ್ರ
183.ಗುರಪ್ಪನಪಾಳ್ಯ
184.ಜಯನಗರ ಪೂರ್ವ
185.ಜೆಪಿ ನಗರ
186.ಶಾಖಾಂಬರಿನಗರ
187.ಸಾರಕ್ಕಿ
ಪದ್ಮನಾಭನಗರ ಕ್ಷೇತ್ರ
188.ಯಡಿಯೂರು
189.ಗಣೇಶ ಮಂದಿರ
190.ದೇವಗಿರಿ ದೇವಸ್ಥಾನ
191.ಬನಶಂಕರಿ ದೇವಸ್ಥಾನ
192.ಕುಮಾರಸ್ವಾಮಿ ಲೇಔಟ್
193.ಪದ್ಮನಾಭನಗರ
194.ಚಿಕ್ಕಲಸಂದ್ರ
195.ಹೊಸಕೆರೆಹಳ್ಳಿ
ಬಸವನಗುಡಿ ಕ್ಷೇತ್ರ
196.ಹನುಮಂತನಗರ
197.ಶ್ರೀನಗರ
198.ಬಸವನಗುಡಿ
199.ವಿದ್ಯಾಪೀಠ
200.ಗಿರಿನಗರ
201.ಕತ್ರಿಗುಪ್ಪೆ
ಬೆಂಗಳೂರು ದಕ್ಷಿಣ ಕ್ಷೇತ್ರ
202.ಉತ್ತರಹಳ್ಳಿ
203.ಸುಬ್ರಹ್ಮಣ್ಯಪುರ
204.ವಸಂತಪುರ
205.ಯಲಚೇನಹಳ್ಳಿ
206.ಕೋಣನಕುಂಟೆ
207.ಆರ್‌ಬಿಐ ಲೇಔಟ್
208.ಅಂಜನಾಪುರ
209.ಗೊಟ್ಟಿಗೆರೆ
210.ಕಾಳೇನ ಅಗ್ರಹಾರ
211.ಬೇಗೂರು
212.ನಾಗನಾಥಪುರ
ಬೊಮ್ಮನಹಳ್ಳಿ ಕ್ಷೇತ್ರ
213.ಜರಗನಹಳ್ಳಿ
214.ಪುಟ್ಟೇನಹಳ್ಳಿ
215.ಬಿಳೇಕಹಳ್ಳಿ
216.ಹುಳಿಮಾವು
217.ಕೋಡಿಚಿಕ್ಕನಹಳ್ಳಿ
218.ಬೊಮ್ಮನಹಳ್ಳಿ
219.ಹೊಂಗಸಂದ್ರ
220.ಗಾರೆಭಾವಿಪಾಳ್ಯ
221.ಎಚ್‌ಎಸ್‌ಆರ್ ಲೇಔಟ್
222.ಇಬ್ಲೂರು
223.ಮಂಗಮ್ಮನಪಾಳ್ಯ
224.ಹೊಸರಸ್ತೆ
ಆನೇಕಲ್ ಕ್ಷೇತ್ರ
225.ಕೂಡ್ಲು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ