ಅಂಕೋಲಾ ಏರ್ಪೋರ್ಟ್‌ ನಿರ್ಮಾಣಕ್ಕೆ ಭೂಮಿ ಕೊಟ್ಟವರಿಗೆ ಪರ್ಯಾಯ ಭೂಮಿ: ಸಚಿವ ಮಂಕಾಳ್‌ ವೈದ್ಯ ಭರವಸೆ

Published : Nov 09, 2023, 03:53 PM IST
ಅಂಕೋಲಾ ಏರ್ಪೋರ್ಟ್‌ ನಿರ್ಮಾಣಕ್ಕೆ ಭೂಮಿ ಕೊಟ್ಟವರಿಗೆ ಪರ್ಯಾಯ ಭೂಮಿ: ಸಚಿವ ಮಂಕಾಳ್‌ ವೈದ್ಯ ಭರವಸೆ

ಸಾರಾಂಶ

ಅಂಕೋಲಾದಲ್ಲಿ ವಿಮಾನ ನಿರ್ಮಾಣ ಮಾಡಲಾಗುತ್ತಿದೆ. ವಿಮಾನ ನಿಲ್ದಾಣಕ್ಕೆ ಭೂಮಿ ಕೊಡುವವರಿಗೆ ಪರ್ಯಾಯ ಭೂಮಿ ನೀಡಲಾಗುವುದು.

ಬೆಂಗಳೂರು (ನ.09): ರಾಜ್ಯದ ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡ ಜಿಲ್ಲೆಗೆ ಹೋಗಲು ಅನುಕೂಲ ಆಗುವಂತೆ ಅಂಕೋಲಾದಲ್ಲಿ ವಿಮಾನ ನಿರ್ಮಾಣ ಮಾಡಲಾಗುತ್ತಿದೆ. ವಿಮಾನ ನಿಲ್ದಾಣಕ್ಕೆ ಭೂಮಿ ಕೊಡುವವರಿಗೆ ಪರ್ಯಾಯ ಭೂಮಿ ನೀಡಲಾಗುವುದು ಎಂದು ಮೀನುಗಾರಿಕಾ ಸಚಿವ ಮಂಕಾಳ್‌ ವೈದ್ಯ ತಿಳಿಸಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಗುರುವಾರ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲಾ ಶಾಸಕರೊಂದಿಗೆ ಚರ್ಚೆ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಂಕೋಲದಲ್ಲಿ‌ ಏರ್ಪೋರ್ಟ್ ನಿರ್ಮಾಣ ಆಗಲಿದೆ. ಇದಕ್ಕೆ ಬೇಕಾದ ಜಮೀನು ಖರೀದಿಗೆ ಪ್ರಕ್ರಿಯೆಗಳು ನಡೆಯುತ್ತವೆ. ಹೆಚ್ಚುವರಿ ಜಾಗ ಬೇಕು ಅಂತ ಕೇಳಿದ್ದಾರೆ. ಇದಕ್ಕೆ ಪ್ರಕ್ರಿಯೆ ನಡೆಯುತ್ತಿದೆ. ಭೂಮಿ ಕೊಡೋರಿಗೆ ಪರ್ಯಾಯ ಭೂಮಿ ಕೊಟ್ಟು ಏರ್ಪೋರ್ಟ್ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ತೀವಿ. ಇನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬೇಕಿರುವ ಎಲ್ಲ ಕ್ರಮಗಳನ್ನು ಕೈಗೊಂಡು ಸ್ಥಳೀಯ ಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು. 

ಬ್ರ್ಯಾಂಡ್‌ ಬೆಂಗಳೂರು ಕನಸು ಕಂಡಿದ್ದ ಕನ್ನಡದ ಖ್ಯಾತ ನಟ ಶಂಕರ್‌ ನಾಗ್‌ ಅಪರೂಪದ ಫೋಟೋಗಳು

ಉತ್ತರ ಕನ್ನಡ, ಉಡುಪಿ, ಮಂಗಳೂರು ಭಾಗ ಶಾಸಕರ ಸಭೆ ಮಾಡಲಾಗಿದೆ. ಮೀನುಗಾರಿಕೆ ಇಲಾಖೆ ಸಂಬಂಧ ಮತ್ತು ಪೋರ್ಟ್ ಸಂಬಂಧ ಸಭೆ ಆಗಿದೆ. ಅನೇಕ ಸಲಹೆ ಸೂಚನೆಗಳು ಬಂದಿದೆ. ಅಧಿಕಾರಿಗಳು ಏನು‌ ಮಾಡಿದ್ರೆ ಸರಿ ಅಂತ ಪ್ಲ್ಯಾನ್ ಮಾಡಲಾಗಿದೆ. ಪ್ರವಾಸೋದ್ಯಮ ಒಳಗೊಂಡು ಅಭಿವೃದ್ಧಿ ಮಾಡಲು ಕ್ರಮವಹಿಸಲಾಗಿದೆ. ಮೀನುಗಾರರಿಗೆ ಡಿಸೇಲ್ ಕೊಡೋದಾಗಿ ಹೇಳಿದ್ದೇವೆ. ಸಿಮೇಎಣ್ಣೆ ಬಗ್ಗೆ ಸಮಸ್ಯೆ ‌ಇತ್ತು. ಇದರಿಂದ ಮೀನುಗಾರಿಗೆ ಸಮಸ್ಯೆ ಆಗ್ತಿತ್ತು. 10 ತಿಂಗಳು ಬಿಳಿ ಸೀಮೆಎಣ್ಣೆಯನ್ನ ಸರ್ಕಾರವೇ ಖರೀದಿ ಮಾಡಿ, 35 ರೂಪಾಯಿ ಸಬ್ಸಿಡಿ ದರದಲ್ಲಿ ಮೀನುಗಾರಿಕೆ ಮಾಡೋರಿಗೆ ಸೀಮೆಎಣ್ಣೆ ಕೊಡ್ತಿದ್ದೇವೆ. ಕೇಂದ್ರ ಸರ್ಕಾರ ಸೀಮೆಎಣ್ಣೆ ಕೊಡ್ತಿಲ್ಲ. ಹೀಗಾಗಿ ನಾವೇ ಕೊಡ್ತಿದ್ದೇವೆ. ದೇಶದಲ್ಲಿ ‌ಮೊದಲ ಬಾರಿಗೆ ನಾವೇ ಸೀಮೆಎಣ್ಣೆ ‌ಕೊಡ್ತಿದ್ದೇವೆ. 200 ಲೀಟರ್ ಕೊಡ್ತಿದ್ದೇವೆ. ಮುಂದಿನ ದಿನಗಳಲ್ಲಿ ಲಭ್ಯತೆ ನೊಡಿಕೊಂಡು 300 ಲೀಟರ್ ಕೋಡೋಕೆ ಸಿದ್ದರಾಗಿದ್ದೇವೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ನವೆಂಬರ್ 21 ರಂದು ವಿಶ್ವ ಮೀನುಗಾರಿಕೆ ದಿನ ಆಚರಣೆ ಕಾರ್ಯಕ್ರಮ ಮಾಡ್ತಿದ್ದೇವೆ. ಅಂದು 8 ಲಕ್ಷ ಮೌಲ್ಯದ ಮೀನುಗಾರರಿಗೆ ಮೀನು ಮಾರಾಟ ಮಾಡೋ ಗಾಡಿ ಕೊಡ್ತಿದ್ದೇವೆ. 300 ಗಾಡಿ ಪೈಕಿ ಬೆಂಗಳೂರಿಗೆ 150 ಗಾಡಿ ಕೊಡ್ತಿದ್ದೇವೆ. ಸರ್ಕಾರ ಸೆಕ್ಯುರಿಟಿ ಫಂಡ್ ಅಂತ 2 ಲಕ್ಷ ರೂ. ಡೆಪಾಸಿಟ್ ಫಲಾನುಭವಿಗಳು ಇಡಬೇಕು. ಎಸ್‌ಸಿ, ಎಸ್‌ಟಿ ಜನರಿಗೆ 1.5 ಲಕ್ಷ ಡೆಪಾಸಿಟ್ ತೆಗೆದುಕೊಳ್ತೀವಿ. ಪಾತಿ ಧೋಣಿ ಸೇರಿದಂತೆ ಬೇರೆ ಬೇರೆ ಸಹಾಯ ಧನ ಕೂಡಾ ಕೊಡ್ತಿದ್ದೇವೆ ಎಂದು ತಿಳಿಸಿದರು.

ಕಾಂತರಾಜ್ ವರದಿ ಜಾತಿ ಜನಗಣತಿಯೇ ಅಲ್ಲ: ರಾಜಕಾರಣದಲ್ಲಿ ಭರ್ಜರಿ ಟ್ವಿಸ್ಟ್ ಕೊಟ್ಟ ಸಚಿವ ಶಿವರಾಜ್‌ ತಂಗಡಗಿ

ರಾಜ್ಯದಲ್ಲಿ ನಮ್ಮ ಸರ್ಕಾರದಿಂದ ಕಾರವಾರ, ಮಂಗಳೂರಿನಲ್ಲಿ ಬಂದರು ಮಾಡಲು ನಿರ್ಧಾರ ಮಾಡಿದ್ದೇವೆ. 1 ಕೋಟಿ. ರೂ.ಗಳಿಂದ 1,000 ಕೋಟಿ ರೂ. ವೆಚ್ಚದಲ್ಲಿ ಬಂದರು ಮಾಡಬಹುದು. ಯಾವ ಮಾದರಿ ಬಂದರು ಬೇಕು ಅಂತ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ. ಈಗ ಒಂದೂ ಬಂದರು ನಮ್ಮಲ್ಲಿ ‌ಇಲ್ಲ. ಮಾರುಕಟ್ಟೆ, ಪ್ರವಾಸೋದ್ಯಮ ಗಮನದಲ್ಲಿಟ್ಟುಕೊಂಡು ಬಂದರು ಮಾಡಲು ಚರ್ಚೆ ಆಗಿದೆ. ಆದಷ್ಟು ಬೇಗ ಇದಕ್ಕೆ ಬೇಕಾದ ಬ್ಲೂ ‌ಪ್ರಿಂಟ್ ರೆಡಿ ಮಾಡ್ತೀವಿ. 3 ಜಿಲ್ಲೆಗಳಲ್ಲಿ 13 ಐಲ್ಯಾಂಡ್ ಗುರುತಿಸಿದ್ದೇವೆ. ಅದನ್ನ ಅಭಿವೃದ್ಧಿ ಮಾಡೋಕೆ ಸರ್ಕಾರಿ ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾಡೆಲ್ ಮಾಡಬೇಕಾ ಎಂಬುದರ ಚರ್ಚೆ ಆಗಿದೆ. ಐ ಲ್ಯಾಂಡ್ ಅಭಿವೃದ್ಧಿ ಮಾಡಿದ್ರೆ ಪ್ರವಾಸೋದ್ಯಮ ಅಭಿವೃದ್ಧಿ ಆಗಲಿದೆ.ಈ‌ ನಿಟ್ಟಿನಲ್ಲಿ ಇವತ್ತಿನ ಸಭೆಯಲ್ಲಿ ಚರ್ಚೆ ಆಗಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉಳಿ ಪೆಟ್ಟು ಬಿದ್ದಾಗಲಷ್ಟೇ ಶಿಲೆಆಗುತ್ತದೆ ಕಲ್ಲು: ಡಿಕೆ ಹಿತನುಡಿ
ಬೆಂಗಳೂರು ನಗರದಲ್ಲಿ ಮತ್ತೆ 150 ಇಂಡಿಗೋ ವಿಮಾನಗಳ ಸಂಚಾರ ರದ್ದು