ಗ್ಯಾರಂಟಿ ಯೋಜನೆ ಕಲ್ಯಾಣ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಭಾವುಕ ಮಾತು

By Ravi JanekalFirst Published Sep 28, 2024, 4:00 PM IST
Highlights

ಯುಗಾದಿ ಹಬ್ಬಕ್ಕೆ ಇಡ್ಲಿ, ದೋಸೆ ತಿನ್ನಬೇಕಿತ್ತು ಅಷ್ಟೆ, ಸಿಹಿ ತಿಂಡಿ ಇರಲಿಲ್ಲ. ಹಬ್ಬದ ದಿನ ಬರೀ ಮುದ್ದೆ, ರೊಟ್ಟಿ ಅಷ್ಟೇ ಸಿಗ್ತಿತ್ತು. ಅನ್ನ ಸಿಗದ ಪರಿಸ್ಥಿತಿಯಲ್ಲಿ ಬೆಳೆದಿದ್ದರಿಂದ ನಾನು ಅನ್ನ ಭಾಗ್ಯ ಯೋಜನೆ ಜಾರಿಗೆ ತಂದೆ.  ಎಲ್ಲರಿಗೂ ಅನ್ನ ಸಿಗಬೇಕು ಎಂದು ಬಯಸಿ ಯೋಜನೆ ಜಾರಿಗೆ ತಂದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಾಲ್ಯದ ಕಷ್ಟದ ದಿನಗಳನ್ನು ಬಿಚ್ಚಿಟ್ಟರು.

ಮೈಸೂರು (ಸೆ.28): ಯುಗಾದಿ ಹಬ್ಬಕ್ಕೆ ಇಡ್ಲಿ, ದೋಸೆ ತಿನ್ನಬೇಕಿತ್ತು ಅಷ್ಟೆ, ಸಿಹಿ ತಿಂಡಿ ಇರಲಿಲ್ಲ. ಹಬ್ಬದ ದಿನ ಬರೀ ಮುದ್ದೆ, ರೊಟ್ಟಿ ಅಷ್ಟೇ ಸಿಗ್ತಿತ್ತು. ಅನ್ನ ಸಿಗದ ಪರಿಸ್ಥಿತಿಯಲ್ಲಿ ಬೆಳೆದಿದ್ದರಿಂದ ನಾನು ಅನ್ನ ಭಾಗ್ಯ ಯೋಜನೆ ಜಾರಿಗೆ ತಂದೆ.  ಎಲ್ಲರಿಗೂ ಅನ್ನ ಸಿಗಬೇಕು ಎಂದು ಬಯಸಿ ಯೋಜನೆ ಜಾರಿಗೆ ತಂದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಾಲ್ಯದ ಕಷ್ಟದ ದಿನಗಳನ್ನು ಬಿಚ್ಚಿಟ್ಟರು.

ಇಂದು ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ  "ಗ್ಯಾರಂಟಿ ಯೋಜನೆಗಳು: ಬಡವರ ಸುರಕ್ಷತೆ ಮತ್ತು ಕಲ್ಯಾಣ" ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯಾವಾಗೋ ಒಮ್ಮೆ ಅನ್ನ ಮಾಡುತ್ತಿದ್ದರು. ನಮ್ಮ ಮನೆಯಲ್ಲಿ ಅನ್ನ ಮಾಡಿದ ದಿನವೇ ಪಕ್ಕದ ಮನೆಯವರು ಕೇಳಿದ್ರೆ ನಮ್ಮ ಅವ್ವ ಅವರಿಗೆ ಗೊಣಗುತ್ತಾ ಕೊಡುತ್ತಿದ್ದಳು. ಇದನ್ನ ನೋಡಿದಾಗಲೇ ನನಗೆ ಆಗ ಅನಿಸ್ತಿತ್ತು. ಎಲ್ಲರಿಗೂ ಅನ್ನಸಿಗಬೇಕಿತ್ತು ಅಂತಾ ಹೀಗಾಗಿ ನಾನು ಮುಖ್ಯಮಂತ್ರಿ ಆದ ಬಳಿಕ ಜಾರಿಗೆ ತಂದಿದ್ದೇ ಅನ್ನ ಭಾಗ್ಯ ಯೋಜನೆ. ಈಗಿನಿಂತೆ ಹಿಂದೆ ನಮಗೆ ಬ್ರೇಕ್ ಫಾಸ್ಟ್ ಅನ್ನೋದೇ ಇರಲಿಲ್ಲ. ಅನ್ನ ಸಹ ಹಬ್ಬದಲ್ಲೇ ಮಾಡುತ್ತಿದ್ದರು ಹಬ್ಬ ಬಿಟ್ಟರೆ ಉಳಿದ ದಿನ ಅನ್ನ ಸಿಗುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಅಣ್ಣನಿಗೆ ಅನ್ನದ ಚಟ ಇತ್ತು. ನಮ್ಮ ಪಕ್ಕದ ಮನೆಯವರು ಜ್ವರ, ಭೇದಿಯಾದ್ರೆ ಕಾಯಿಲೆ ಬಂದರೆ ಒಂದು ತುತ್ತು ಅನ್ನಕ್ಕಾಗಿ ಕಾದು ಕುಳಿತುಕೊಳ್ಳುತ್ತಿದ್ದರು. 

Latest Videos

ಸಿದ್ದರಾಮಯ್ಯ ಅಪ್ಪಟ ಚಿನ್ನ, ಪ್ರಾಮಾಣಿಕ ವ್ಯಕ್ತಿ: ಸಚಿವ ಹೆಚ್‌ಸಿ ಮಹದೇವಪ್ಪ

ನಾನು ಅನ್ನ ಭಾಗ್ಯ ಜಾರಿ ಮಾಡಿದಾಗ ಜನರು ಈ ಯೋಜನೆಯಿಂದ ಸೋಮಾರಿಗಳಾಗ್ತಾರೆ ಅಂತಾ ಚರ್ಚೆ ಆಯಿತು. ಅನ್ನ ಭಾಗ್ಯ ಜಾರಿ ಮಾಡಿದ್ದು ಓಟು ಪಡೆಯಲು ಅಲ್ಲ, ಪ್ರಚಾರಕ್ಕೂ ಅಲ್ಲ. ಅನ್ನ ಮಾಡಿದರು ಹೊಟ್ಟೆ ತುಂಬಾ ಹಿಟ್ಟು ಬಾಯಿ ತುಂಬಾ ಅನ್ನ ಅಂತಾ ನಮ್ಮ ಅಜ್ಜಿ ಹೇಳುತ್ತಿದ್ದರು. ಆರ್ಥಿಕವಾಗಿ ಸಾಮಾಜಿಕವಾಗಿ ಸಬಲ ಮಾಡದೆ ಜಾತಿ ಹೋಗುವುದಿಲ್ಲ. 850 ವರ್ಷಗಳಿಂದ  ಹೇಳುತ್ತಿದ್ದೇವೆ ಎಂದು ಬಸವಣ್ಣನವರ ವಚನ ಹೇಳಿದರು.

ಮೋದಿ ಸಹ ಗ್ಯಾರಂಟಿ ಯೋಜನೆ ಜಾರಿ ಮಾಡಲು ಆಗಲ್ಲ. ಮಾಡಿದರೂ ರಾಜ್ಯ ಆರ್ಥಿಕವಾಗಿ ದಿವಾಳಿ ಅಂತಾ ಹೇಳಿದರು. ನಮಗೂ ಕಷ್ಟ ಅಂತಾ ಗೊತ್ತಿತ್ತು. ಆದರೂ ಮಾಡಲೇಬೇಕು ಅಂತಾ ದೃಢ ನಿರ್ಧಾರ ಮಾಡಿದ್ದೆವು.  ಅನ್ನಭಾಗ್ಯ 5 ಕೆಜಿ ಸಾಲುವುದಿಲ್ಲ 10 ಕೆಜಿ ಅಂತಾ ತೀರ್ಮಾನ ಆಯಿತು. ಅದಕ್ಕಾಗಿ 56 ಸಾವಿರ ಕೋಟಿ ರೆವಿನ್ಯೂ ಎಕ್ಸಪೆನ್ಸ್ ಖರ್ಚು ಮಾಡುವುದು ದೊಡ್ಡ ಸವಾಲಾಗಿತ್ತು. ಅದೆಲ್ಲವನ್ನು ನಿಭಾಯಿಸಿದೆವು. ಅದನ್ನು ಸಹಿಸದೆ ಬಿಜೆಪಿ ಜೆಡಿಎಸ್ನವರು ಕುಹಕವಾಡಿದರು. ಹೊಸದಾಗಿ ಜಾರಿ ಮಾಡ್ತಾರೆ ಎರಡು ವರ್ಷ ಬಿಟ್ಟು ಬಂದ್ ಮಾಡ್ತಾರೆ ಎಂದರು. ಆದರೆ ನಾವು ಬಂದ್ ಮಾಡಿದೆವಾ? ಕೊಟ್ಟ ಮಾತಿನಂತೆ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆವು. ಇಂದಿಗೂ ಯೋಜನೆ ನಿಂತಿಲ್ಲ. ಆರ್ಥಿಕವಾಗಿ ಎಷ್ಟೇ ಕಷ್ಟ ಆದ್ರೂ ನಾವು ಬಡವರಿಗಾಗಿ ತಂದ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಮುಂದುವರಿಸುತ್ತೇವೆ ಎಂದರು.

 

ಬೆಂಗಳೂರು ಐಟಿ ಹಬ್ ಮಂದಿಗೆ ಗುಡ್‌ನ್ಯೂಸ್ ಕೊಟ್ಟ ಸರ್ಕಾರ! ಡಿಕೆ ಶಿವಕುಮಾರ ಕೊಟ್ಟ ಶುಭ ಸುದ್ದಿ ಏನು?

'ಅನ್ನ' ಸಿನಿಮಾ ಉಲ್ಲೇಖಿಸಿದ ಸಿಎಂ:

ಭಾಷಣದ ವೇಳೆ ಅನ್ನಭಾಗ್ಯದಿಂದ ಪ್ರೇರಣೆಗೊಂಡು ತಯಾರದ 'ಅನ್ನ' ಸಿನಿಮಾದ ಕುರಿತು ಉಲ್ಲೇಖಿಸಿದರು. ಅನ್ನ ಭಾಗ್ಯ ಯೋಜನೆಯಿಂದ ಸಾಮಾಜಿಕ ಪರಿಣಾಮ ಬೀರಿದೆ. ಇದು ನಮಗೆ ತೃಪ್ತಿ ತಂದಿದೆ. ಅನ್ನ ಸಿನಿಮಾವನ್ನು ಎಲ್ಲರೂ ನೋಡುವಂತೆ ತಿಳಿಸಿದರು. ಅದೇ ರೀತಿ ಕೃತಿಯಲ್ಲಿ ಒಳ್ಳೆಯದು ಮಾತ್ರ ಅಲ್ಲ, ಟೀಕೆ ಇದ್ದರೂ ತಿಳಿಸಿ ಎಂದರು. ಈ ವೇಳೆ ಗ್ಯಾರಂಟಿ ಯೋಜನೆ ಕೃತಿ ಲೇಖಕನಿಗೆ ವೇದಿಕೆಯಲ್ಲಿ ಧನ್ಯವಾದಗಳನ್ನ ತಿಳಿಸಿದರು.

click me!