ರಾಜ್ಯ ಸರ್ಕಾರದ ಸಹಾಯಧನದೊಂದಿಗೆ ಹಜ್ ಯಾತ್ರೆಗೆ ತೆರಳುತ್ತಿದ್ದ 10,168 ಯಾತ್ರಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿರು ನಿಶಾನೆ ತೋರಿಸಿ ಬೀಳ್ಕೊಡುಗೆ ನೀಡಿದರು.
ಬೆಂಗಳೂರು (ಮೇ 21): ರಾಜ್ಯ ಸರ್ಕಾರದ ಸಹಾಯಧನದೊಂದಿಗೆ ಹಜ್ ಯಾತ್ರೆಗೆ ಹೋಗಲು 10,168 ಜನರನ್ನು ಆಯ್ಕೆ ಮಾಡಲಾಗಿದೆ. ಸರ್ಕಾರದ ಪರವಾಗಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹಜ್ ಯಾತ್ರೆಗೆ ಹೊರಟ ಎಲ್ಲ ಯಾತ್ರಾರ್ಥಿಗಳಿಗೆ ಹಸಿರು ನಿಶಾನೆ ತೋರಿಸಿ ಬೀಳ್ಕೊಡುಗೆ ನೀಡಿದ್ದಾರೆ.
ಬೆಂಗಳೂರಿನ ಹೆಗಡೆನಗರದ ಹಜ್ ಭವನದಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರೋಬ್ಬರಿ 10,168 ಜನ ಯಾತ್ರಾತ್ರಿಗಳನ್ನು ಹೊತ್ತು ಸಾಗುತ್ತಿದ್ದ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಿ ಬೀಳ್ಕೊಟ್ಟರು. ಈ ವೇಳೆ ಸಚಿವರಾದ ಜಮೀರ್ ಅಹಮದ್ ಖಾನ್, ರಹೀಂ ಖಾನ್ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹಮದ್ ಸೇರಿದಂತೆ ಮುಸ್ಲಿಂ ಮುಖಂಡರು ಭಾಗಿಯಾಗಿದ್ದರು.
ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷ ಹಜ್ ಯಾತ್ರೆಗೆ ಹೋಗುವವರಿಗೆ ಬಿಳ್ಕೊಡುಗೆ ಕೊಡ್ತೀನಿ. ಈ ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದಾಗಲೂ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆನು. ಕಳೆದ ವರ್ಷವೂ ಬಂದಿದ್ದೆ, ಈ ವರ್ಷವೂ ಬಂದಿದ್ದೀನಿ. ಹಜ್ ಯಾತ್ರಿಗಳಿಗೆ ಪ್ರಯಾಣ ಸುಖಕರವಾಗಿರಲಿ ಅಂತ ಹಾರೈಸುತ್ತೇನೆ. ಈ ವರ್ಷ 10,168 ಜನ ಯಾತ್ರಿಗಳು ಹಜ್ ಗೆ ಹೋಗ್ತಾ ಇದ್ದಾರೆ. ಅವರೆಲ್ಲರೂ ಪ್ರಾರ್ಥನೆ ಮಾಡಲಿ, ಆರೋಗ್ಯವಾಗಿ ಬರಲಿ. ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆ, ನೆಲೆಸಲಿ ಅಂತ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.
ಸಿನಿಮಾದಲ್ಲಿ ಅಬ್ಬರಿಸಿದ ನಟಿ ವಿದ್ಯಾ, ಗಂಡನಿಂದ ಹತ್ಯೆಯಾಗಿದ್ದೇಕೆ? ಜೀವಕ್ಕೆ ಮುಳುವಾಯ್ತಾ ರಾಜಕಾರಣ!
ನಾಡಿನ ರಾಷ್ಟ್ರಕವಿ ಕುವೆಂಪು ಅವರು ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು ಅನ್ನೋ ಮಾತು ಹೇಳಿದ್ದಾರೆ. ಅದರ ಪ್ರಕಾರ ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧರು, ಸಿಖ್ ಸೇರಿದಂತೆ ಯಾರೇ ಇದ್ದರೂ ಒಂದೇ ತಾಯಿಯ ಮಕ್ಕಳಂತೆ ಬದುಕುವ ವಾತಾವರಣ ನಿರ್ಮಾಣ ಆಗಬೇಕು. ಅಂತಹ ವಾತಾವರಣ ನಿರ್ಮಾಣ ಆಗಬೇಕಾದರೆ ಎಲ್ಲರಿಗೂ ಆರ್ಥಿಕ, ಸಾಮಾಜಿಕ, ರಾಜಕೀಯ ಶಕ್ತಿ ಬರಬೇಕು ಅವರೆಲ್ಲರೂ ಸಬಲರಾಗಬೇಕು. ಅದಕ್ಕಾಗಿ ಹಜ್ ಯಾತ್ರಿಗಳು ಪ್ರಾರ್ಥನೆ ಮಾಡಲಿ. 2024-25ನೇ ವರ್ಷದಲ್ಲಿ ದೇಶ ಮತ್ತು ರಾಜ್ಯ ರೈತರಿಗೆ ಒಳ್ಳೆಯ ಮಳೆ, ಬೆಳೆ ಬಂದು ಸಮೃದ್ಧಿ ಮಳೆ ಆಗಲೆಂದು ಎಲ್ಲ ಯಾತ್ರಿಗಳು ಬೇಡಿಕೊಂಡು ಬರುವಂತೆ ಅವರ ಬಳಿ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಪೆನ್‌ಡ್ರೈವ್ ಆಡಿಯೋ ಕೇಸ್‌ನಲ್ಲಿ ಡಿ.ಕೆ.ಶಿವಕುಮಾರ್ ರಾಜೀನಾಮೆ ಕೊಡಬೇಕು; ಕುಮಾರಸ್ವಾಮಿ ಆಗ್ರಹ
ರಾಜ್ಯಾದ್ಯಂತ ಮುಂಗಾರು ಕೃಷಿ ಚಟುವಟಿಕೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಬೀಜ ಮತ್ತು ಗೊಬ್ಬರಕ್ಕೆ ಯಾವುದೇ ಕಾರಣಕ್ಕೂ ಕೊರತೆಯಾಗದ ಹಾಗೆ ನೋಡಿಕೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬೀಜ ಮತ್ತು ಗೊಬ್ಬರಕ್ಕಾಗಿ ಹಾವೇರಿಯಲ್ಲಿ ರೈತರು ಸಾಲುಗಟ್ಟಿ ನಿಂತಿದ್ದ ವಿಷಯ ನನ್ನ ಗಮನಕ್ಕೆ ಬಂದ ಕೂಡಲೆ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ತಕ್ಷಣ ಅಧಿಕಾರಿಗಳ ಸಭೆ ಕರೆದು ಬೀಜ, ಗೊಬ್ಬರದ ದಾಸ್ತಾನು ಕುರಿತು ಮಾಹಿತಿ ಪಡೆದುಕೊಂಡು, ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.