'ನೀವು ಮಠಕ್ಕೆ ಕಾಲಿಡಬೇಡಿ, ನಾವೂ ರಾಜಕೀಯಕ್ಕೆ ಬರೊಲ್ಲ': ಡಿಕೆಶಿ ವಿರುದ್ಧ ಪ್ರಣವಾನಂದಶ್ರೀ ಕಿಡಿ

By Ravi Janekal  |  First Published Jun 30, 2024, 4:14 PM IST

ಸ್ವಾಮೀಜಿಗಳು ಅವರ ಅಭಿಪ್ರಾಯ ವ್ಯಕ್ತಪಡಿಸುವಾಗ ಮಂತ್ರಿಗಳು, ರಾಜಕೀಯ ನಾಯಕರು ಅಪಮಾನ ಮಾಡಬಾರದು ಎಂದು ಪ್ರಣವಾನಂದ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.


ಯಾದಗಿರಿ (ಜೂ.30): ಸ್ವಾಮೀಜಿಗಳು ಅವರ ಅಭಿಪ್ರಾಯ ವ್ಯಕ್ತಪಡಿಸುವಾಗ ಮಂತ್ರಿಗಳು, ರಾಜಕೀಯ ನಾಯಕರು ಅಪಮಾನ ಮಾಡಬಾರದು ಎಂದು ಪ್ರಣವಾನಂದ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

'ಸ್ವಾಮೀಜಿಗಳು ರಾಜಕೀಯಕ್ಕೆ ಬರಬೇಡಿ' ಎಂಬ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ(DK shivakumar) ಹೇಳಿಕೆ ವಿಚಾರವಾಗಿ ಇಂದು ಯಾದಗಿರಿಯಲ್ಲಿ ಪ್ರತಿಕ್ರಿಯಿಸಿದ ಸ್ವಾಮೀಜಿ(Pranavananda swamiji), ಸ್ವಾಮೀಜಿಗಳು ಅವರ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ನೀವು ಮಾಡಿದ್ದೆಲ್ಲ ಸರಿ ಅಂತಾ ಒಪ್ಪಿಕೊಳ್ಳೋಕೆ ಸಮುದಾಯದ ಸ್ವಾಮೀಜಿಗಳು ಸಿದ್ದರಿಲ್ಲ. ಸ್ವಾಮೀಜಿಗಳನ್ನ ಅವಮಾನ ಮಾಡಿದ್ರೆ ಮುಂದಿನ ದಿನಗಳಲ್ಲಿ ನೀವೂ ಕೂಡ ಮಠಕ್ಕೆ ಕಾಲಿಡಬೇಡಿ ಎಂದು ಡಿಸಿಎಂ ಡಿಕೆ ಶಿವಕುಮಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Tap to resize

Latest Videos

undefined

ಸಿಎಂ ಬದಲಾವಣೆ ಮಾಡೋದಾದ್ರೆ ಬಿಕೆ ಹರಿಪ್ರಸಾದ್‌ ಅವರನ್ನೇ ಮುಖ್ಯಮಂತ್ರಿ ಮಾಡಿ: ಪ್ರಣವಾನಂದಶ್ರೀ ಆಗ್ರಹ

ನೀವು ಧೈರ್ಯವಾಗಿ ಹೇಳಿ ನಾವು ಮಠಕ್ಕೆ ಕಾಲಿಡಲ್ಲ ಅಂತಾ. ಆಗ ನಾವು ಕೂಡ ರಾಜಕೀಯಕ್ಕೆ ಬರೊಲ್ಲ ಅಂತಾ ಹೇಳ್ತೇವೆ. ಚಂದ್ರಶೇಖರ್ ಸ್ವಾಮೀಜಿ(Chandrashekhar swamiji) ಗಳು ಹೇಳಿದಾಗ ಎಲ್ಲರೂ ಸ್ವಾಗತ ಮಾಡಿದ್ರು. ಡಿಕೆ ಸುರೇಶ್, ಬಾಲಕೃಷ್ಣ, ಚೆಲುವರಾಯಸ್ವಾಮಿ ಸೇರಿ ಎಲ್ಲರೂ ಸ್ವಾಗತ ಮಾಡಿದ್ರು. ಅದೇ ಇನ್ನೊಬ್ಬ ಸ್ವಾಮೀಜಿ ಹೇಳಿದರೆ ವಿರುದ್ಧ ಮಾತಾಡ್ತೀರ? ಅಂದರೆ ನಿಮಗೆ ಬೇಕಾದ ಹಾಗೆ ಸ್ವಾಮೀಜಿಗಳು ಮಾತಾಡಬೇಕೆ? ಒಂದು ಕಡೆ ಸ್ವಾಗತ ಮಾಡೋದು, ಮತ್ತೊಂದು ಕಡೆ ರಾಜಕೀಯಕ್ಕೆ ಬರಬೇಡ ಅಂತಾ ಹೇಳೋದು ಇದೆಲ್ಲ ಡಿಕೆ ಶಿವಕುಮಾರ ಅವರ ರಾಜಕೀಯ ಗಿಮಿಕ್ ಎಂದು ತಿರುಗೇಟು ನೀಡಿದರು.

ನಮಗೆ ನೋವಾಗಿದ್ದಕ್ಕೆ ನಾವು ಹೇಳ್ತಿದ್ದೇವೆ. ನಮ್ಮ ಸಮುದಾಯಕ್ಕೆ ಯಾರೂ ಡಿಸಿಎಂ ಸ್ಥಾನ ಕೊಟ್ಟಿಲ್ಲ, ಅದೇ ಒಕ್ಕಲಿಗ ಸಮುದಾಯದಲ್ಲಿ ಈಗಾಗಲೇ ಡಿಸಿಎಂ ಆಗಿ ಡಿಕೆ ಶಿವಕುಮಾರ ಇದ್ದಾರೆ, ಸಚಿವರೂ ಇದ್ದಾರೆ. ಇಷ್ಟಾಗಿಯೂ ಚಂದ್ರಶೇಖರ್ ಸ್ವಾಮೀಜಿಯವರು ಅವರ ಸಮುದಾಯದ ಬಗ್ಗೆ ಮಾತನಾಡಿದ್ದಾರೆ. ಡಿಕೆ ಶಿವಕುಮಾರ್‌ಗೆ ಮುಖ್ಯಮಂತ್ರಿ ಆಗಲೆಂದು ಆಗ್ರಹಿಸಿದ್ದಾರೆ. ಆದರೆ ನಾವು ನಮ್ಮ ಸಮುದಾಯದವರು ಡಿಸಿಎಂ ಆಗಬೇಕೆಂದು ಆಗ್ರಹಿಸಿದರೆ ತಪ್ಪೇನು? ಇದೆಲ್ಲ ಡಿಕೆ ಶಿವಕುಮಾರ ಅವರ ರಾಜಕೀಯ ಗಿಮಿಕ್‌ನ ಒಂದು ಭಾಗ ಎಂದು ಕಿಡಿಕಾರಿದರು.

ಚನ್ನಪಟ್ಟಣ ಕ್ಷೇತ್ರ ಗೆಲ್ಲಲು ಡಿಕೆಶಿ ರಣತಂತ್ರ: ಮೂರು ದಿನಗಳ ಕಾಲ ಜನಸ್ಪಂದನ ಕಾರ್ಯಕ್ರಮ

ಒಂದು ವೇಳೆ ಮುಖ್ಯಮಂತ್ರಿ ಸ್ಥಾನ ಬದಲಾದರೆ ಈಡಿಗ ಸಮುದಾಯದ ಬಿಕೆ ಹರಿಪ್ರಸಾದ್ ಅವರಿಗೆ ಸಿಎಂ ಸ್ಥಾನ ಘೋಷಿಸುವಂತೆ ಒತ್ತಾಯಿಸಿರುವ ಸ್ವಾಮೀಜಿ. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಸಹ ಬಿಕೆ ಹರಿಪ್ರಸಾದ್‌ಗೆ ನೀಡಬೇಕು ಎಂದಿದ್ದಾರೆ. ಇತ್ತ ಒಕ್ಕಲಿಗರದು ಇದೇ ಒತ್ತಾಯ ಅತ್ತ ದಲಿತ ಸಿಎಂ ಕೂಗು ಕೂಡ ಎದ್ದಿದೆ ಒಟ್ಟಿನಲ್ಲಿ ಸಿಎಂ ಬದಲಾವಣೆಯಾದರೆ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಯಕ್ಷಪ್ರಶ್ನೆಯಾಗಿದೆ.

click me!