ಜಾತಿಗಣತಿ ವರದಿ ಜಾರಿಗೆ ಸಿಎಂ ಕರೆದಿದ್ದ ಸಂಪುಟ ಸಭೆ ಠುಸ್ ಪಟಾಕಿ!

Published : Apr 17, 2025, 07:16 PM ISTUpdated : Apr 17, 2025, 07:44 PM IST
ಜಾತಿಗಣತಿ ವರದಿ ಜಾರಿಗೆ ಸಿಎಂ ಕರೆದಿದ್ದ ಸಂಪುಟ ಸಭೆ ಠುಸ್ ಪಟಾಕಿ!

ಸಾರಾಂಶ

ಜಾತಿಗಣತಿ ವರದಿ ಜಾರಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಒಮ್ಮತ ಮೂಡದೆ, ತೀರ್ಮಾನವಾಗಿಲ್ಲ. ಸಚಿವರಿಂದ ಲಿಖಿತ ಉತ್ತರ ಕೋರಲಾಗಿದೆ. ಹಿಂದುಳಿದ ವರ್ಗಗಳ ಆಯೋಗವು ಸಮೀಕ್ಷಾ ವರದಿ ಯೋಜನೆ ರೂಪಿಸಲು ಅಗತ್ಯ ಎಂದಿದೆ. ಜನಸಂಖ್ಯೆ, ಶಿಕ್ಷಣ, ಉದ್ಯೋಗ ಮೊದಲಾದ ಮಾಹಿತಿ ಸಂಗ್ರಹಿಸಲಾಗಿದೆ. ಮೀಸಲಾತಿ ಹೆಚ್ಚಳಕ್ಕೆ ವರದಿ ಆಧಾರವಾಗಬಹುದು.

ರಾಜ್ಯ ಸರ್ಕಾರವು ಜಾತಿಗಣತಿ ವರದಿಯನ್ನು ಜಾರಿಗೆ ತರುವುದಕ್ಕೆ ತುರ್ತಾಗಿ ಕರೆಯಲಾಗಿದ್ದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಎಲ್ಲರೂ ಚರ್ಚೆ ಮಾಡಿದರೂ, ಕೊನೆಗೆ ಎಲ್ಲರ ಅಭಿಪ್ರಾಯಗಳು ಒಂದೇ ಆಗಿರದ ಹಿನ್ನೆಲೆಯಲ್ಲಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಒಟ್ಟಾರೆ, ಜಾತಿ ಗಣತಿ ವರದಿಗೆ ಸರ್ಕಾರದಲ್ಲಿಯೇ ವಿರೋಧವಿದೆ ಎನ್ನುವುದು ಸಾಬೀತಾಗಿದ್ದು, ಠುಸ್ ಪಟಾಕಿ ಸಭೆಯಾಗಿದೆ. ಸಿಎಂ ಸಿದ್ದರಾಮಯ್ಯ ಎಲ್ಲ ಸಚಿವರಿಗೂ ಲಿಖಿತ ರೂಪದಲ್ಲಿ ಉತ್ತರ ನೀಡುವಂತೆ ತಿಳಿಸಿ ಸಭೆ ಮುಕ್ತಾಯ ಮಾಡಿದ್ದಾರೆ.

ಸಂಪುಟ ಸಭೆ ಆರಂಭ ಆಗುತ್ತಿದ್ದಂತೆ ಜಾತಿಗಣತಿ ವರರಿಯ ಚರ್ಚೆ ವೇಳೆ ಜೋರು ಕೆಲವು ಸಚಿವರು ಜೋರು ಧ್ವನಿಯಲ್ಲಿ ಮಾತನಾಡಿದ್ದಾರೆ. ಇನ್ನು ಕೆಲವು ಸಚಿವರು ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ಹೇಳಿಕೊಳ್ಳಲಾಗದೇ ಪತ್ರದ ಮುಖೇನ ಲಿಖಿತ ಬರವಣಿಗೆಯ ಮೂಲಕ ಅಭಿಪ್ರಾಯ ಕೊಟ್ಟಿದ್ದಾರೆ. ಇನ್ನು ಕೆಲವರು ಪರ-ವಿರೋಧ ಎರಡೂ ಕೇಳಿಬಂದಿದೆ. ಸಿದ್ದರಾಮಯ್ಯ ಸೇರಿದಂತೆ ಕೆಲವರು ಎಷ್ಟೇ ಸಮರ್ಥನೆ ಮಾಡಿಕೊಳ್ಳಲು ಮುಂದಾದರೂ ಒಮ್ಮತಕ್ಕೆ ಬರಲು ಸಾಧ್ಯವಾಗಲೇ ಇಲ್ಲ. ಹೀಗಾಗಿ, ಸಿಎಂ ಸದ್ದರಾಮಯ್ಯ ಎಲ್ಲ ಸಚಿವರಿಗೂ ಪತ್ರದ ಮೂಲಕ ಅಭಿಪ್ರಾಯ ನೀಡುವಂತೆ ಸೂಚಿಸಿದರು. ಯಾವುದೇ ಒಮ್ಮತಕ್ಕೆ ಬರದೇ ಉದ್ದೇಶಿತ ಸಚಿವ ಸಂಪುಟ ಸಭೆಯನ್ನು ಮುಕ್ತಾಯ ಮಾಡಲಾಗಿದೆ. ಜೊತೆಗೆ, ಮುಂದಿನ ಕ್ಯಾಬಿಟೆನ್ ಮೀಟಿಂಗ್‌ನಲ್ಲಿಯೂ ಈ ಕುರಿತು ಚರ್ಚೆ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಕೇಳಿಬಂದಿದೆ.

ಜತಿಗಣತಿ ವರದಿ ಸಮರ್ಥಿಸಿಕೊಳ್ಳಲು ಸರ್ಕಾರ ತಿಳಿಸಿದ ಪ್ರಮುಖಾಂಶಗಳು: 
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಮೀಕ್ಷೆ ವರದಿ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ, ಜೀವನೋಪಾಯ / ಔದ್ಯೋಗಿಕ ಸ್ಥಿತಿಗತಿ ಅರಿಯಲು ಹಾಗೂ ಯೋಜನೆಗಳನ್ನು ಸಮರ್ಪಕವಾಗಿ ರೂಪಿಸಿ ಅದರಂತೆ ಅನುಷ್ಠಾನಗೊಳಿಸಲು ಅಂಕಿ-ಅಂಶಗಳ ವಿವರಗಳು ಅವಶ್ಯಕವಾಗಿದೆ ಎಂದು ರಾಜ್ಯ ಸರ್ಕಾರ ಜಾತಿಗಣತಿ ವರದಿಯನ್ನು ಸಮರ್ಥನೆ ಮಾಡಿಕೊಂಡಿದೆ. ಈ ಬಗ್ಗೆ ಹಲವು ಅಂಶಗಳನ್ನು ಹಂಚಿಕೊಂಡಿದೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧಿನಿಯಮ, 1995ರ ಕಲಂ 9(2) ರ ಪ್ರಕಾರ ಆಯೋಗವು ನೀಡುವ ಸಲಹೆಗಳಿಗೆ ಸರ್ಕಾರವು ಸಾಮಾನ್ಯವಾಗಿ ಬದ್ದವಾಗಿರತಕ್ಕದ್ದು. ಆದ್ದರಿಂದ, ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ, ಜೀವನೋಪಾಯ / ಔದ್ಯೋಗಿಕ ಸ್ಥಿತಿಗತಿ ಅರಿಯಲು ಹಾಗೂ ಯೋಜನೆಗಳನ್ನು ಸಮರ್ಪಕವಾಗಿ ರೂಪಿಸಿ ಅದರಂತೆ ಅನುಷ್ಠಾನಗೊಳಿಸಲು ಹಿಂದುಳಿದ ವರ್ಗಗಳ ಅಂಕಿ-ಅಂಶಗಳ ವಿವರಗಳು ಅವಶ್ಯಕವಿರುತ್ತದೆ. ಇದರಿಂದ ಅಗತ್ಯವಿರುವ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಯೋಜನೆಗಳನ್ನು ರೂಪಿಸಿ, ಸಮರ್ಪಕವಾಗಿ ಅನುಷ್ಠಾನಗೊಳಿಸಲು ವರದಿಯಲ್ಲಿನ ದತ್ತಾಂಶಗಳ ಸಹಾಯಕ ಆಗಲಿವೆ.

ಇದನ್ನೂ ಓದಿ: ಜಾತಿ ಗಣತಿ ವರದಿಗೆ ಹೆಬ್ಬಾಳ್ಕರ್ ಆಕ್ಷೇಪ ಬೆನ್ನಲ್ಲೇ ಇಂದು ಒಕ್ಕಲಿಗರ ಸಭೆ ಕರೆದ ಡಿಕೆಶಿ!

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಮೀಕ್ಷೆಯಲ್ಲಿ ಸಂಗ್ರಹಿಸಿ ವಿವಿಧ ಸಂಪುಟಗಳಲ್ಲಿ ದಾಖಲಿಸಿರುವ ಹಿಂದುಳಿದ ವರ್ಗಗಳ‌ ಜಾತಿಗಳ (1) ಜನಸಂಖ್ಯೆ ವಿವರ, (2) ಆಧಾರ್ ಕಾರ್ಡ್ / ಮತದಾರರ ಗುರುತಿನ ಚೀಟಿ / ಬ್ಯಾಂಕ್ ಖಾತೆ ಹೊಂದಿರುವವರ ವಿವರ, (3) ಸಾಕ್ಷರತೆ ಪ್ರಮಾಣ, (4) ಶಾಲೆಯಿಂದ ಹೊರಗುಳಿದವರ ವಿವರ, (5) ಕಾರ್ಮಿಕರು ಹಾಗೂ ನಿರುದ್ಯೋಗದ ವಿವರ, (6) ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಇರುವವರ ವಿವರ, (7) ಭೂಮಿ ಹೊಂದಿರುವವರ ವಿವರ, (8) ಸ್ವಂತ ಮನೆ ಮತ್ತು ನಿವೇಶನ ರಹಿತ ಕುಟುಂಬಗಳ ವಿವರ, (9) ಶೌಚಾಲಯ ಹೊಂದಿರುವವರ ಸಂಖ್ಯೆ (10) ಅಡುಗೆ ಅನಿಲ ಹೊಂದಿರುವವರ ಕುಟುಂಬಗಳ ವಿವರ ಹಾಗೂ ಇತ್ಯಾದಿ ಮಾಹಿತಿಗಳನ್ನು ಪಡೆಯಬಹುದಾಗಿದೆ.

ತಮಿಳುನಾಡು ರಾಜ್ಯ ಶೇಕಡ 69 ರಷ್ಟು, ಜಾರ್ಖಂಡ್ ರಾಜ್ಯವು ಶೇಕಡ 77 ರಷ್ಟು ಜನಸಂಖ್ಯೆಯನ್ನಾಧರಿಸಿ ಮೀಸಲಾತಿಯನ್ನು ಹೆಚ್ಚಿಸಿ ಅಳವಡಿಸಿಕೊಂಡಿರುತ್ತವೆ. ಇದೀಗ ರಾಜ್ಯದಲ್ಲಿ ಹಿಂದುಳಿದ ಆಯೋಗ ಸಲ್ಲಿಸಿರುವ ಅಧ್ಯಯನ ವರದಿಯಲ್ಲಿ ಮುಖ್ಯ ಜಾತಿಯೊಂದಿಗೆ ಅದರ ಎಲ್ಲಾ ಉಪ ಜಾತಿಗಳನ್ನು ತಂದಿರುವುದರಿಂದ ವಿವಿಧ ಪ್ರವರ್ಗಗಳಡಿ ಸೇರಿಸಲು ಶಿಫಾರಸ್ಸು ಮಾಡಿರುವ ಜಾತಿಗಳನ್ನು ಆಯಾ ಪ್ರವರ್ಗಗಳಡಿ ಸೇರಿಸಿರುವುದರಿಂದ ಪ್ರಸ್ತಾಪಿತ ಪರಿಷ್ಕೃತ ಮೀಸಲಾತಿ ಪಟ್ಟಿಯಲ್ಲಿ ಜಾತಿ / ಉಪ ಜಾತಿಗಳ ಸಂಖ್ಯೆ ಮತ್ತು ಇದರಡಿಯಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆಯಲ್ಲಿ ಹೆಚ್ಚಳವಾಗಿರುತ್ತದೆ ಎಂದು ವರದಿಯಲ್ಲಿ ನಮೂದಾಗಿರುತ್ತದೆ.

ಇದನ್ನೂ ಓದಿ: ಸಿಎಂ ಸಚಿವಾಲಯ ಸರ್ಕಾರಿ ಕೆಲಸಕ್ಕೆ ಮೈಸೂರಿನವರಿಗೆ ಮಾತ್ರ ನೌಕರಿ!

ಭಾರತ ಸಂವಿಧಾನದ ಅನುಚ್ಛೇದ-103ರಲ್ಲಿ ಯಾವುದೇ ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಇರುವ ಆರ್ಥಿಕ ದುರ್ಬಲ ವರ್ಗದವರಿಗೆ (EWS) ಶೇಕಡ 10 ರಷ್ಟು ಮೀಸಲಾತಿಯನ್ನು ಜಾರಿಗೆ ತರಲಾಗಿದೆ. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ತೀರ್ಪಿನಲ್ಲಿ ಸದರಿ ತಿದ್ದುಪಡಿ ಎತ್ತಿಹಿಡಿದಿರುತ್ತದೆ. ಬದಲಾದ ಕಾಲಘಟ್ಟದಲ್ಲಿ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇಕಡ 18 ರಿಂದ 24 ಕ್ಕೆ ಹೆಚ್ಚಿಸಿದ್ದರಿಂದ ಪ್ರಸ್ತುತ ರಾಜ್ಯದಲ್ಲಿ ಶೇಕಡ 56 ಮೀಸಲಾತಿ ಪ್ರಮಾಣ ಜಾರಿಯಲ್ಲಿರುತ್ತದೆ. ಕೇಂದ್ರ ಸರ್ಕಾರವು ಆರ್ಥಿಕ ದುರ್ಬಲ ವರ್ಗದವರಿಗೆ (EWS) ಶೇಕಡ 10 ರಷ್ಟು ಮೀಸಲಾತಿಯನ್ನು ಜಾರಿಗೆ ತಂದಿರುತ್ತದೆ ಎಂದು ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!