Karnataka Cabinet: ಡಿ.10ರ ನಂತರ ರಾಜ್ಯ ಸಚಿವ ಸಂಪುಟ ಭಾರೀ ಬದಲಾವಣೆ: ಯತ್ನಾಳ

By Kannadaprabha NewsFirst Published Dec 3, 2021, 6:30 AM IST
Highlights

*ಕೆಲವು ಸಚಿವರ ವಿರುದ್ಧ ಆಕ್ರೋಶ
*ಮುಖ್ಯಮಂತ್ರಿ ಬದಲಾಗಲ್ಲ, ಸಚಿವರಷ್ಟೇ ಬದಲು
*ವಿಜಯಪುರ ಕ್ಷೇತ್ರದ ಬಿಜೆಪಿ ಶಾಸಕ ಹೊಸ ಬಾಂಬ್‌

ಬೆಂಗಳೂರು(ಡಿ. 03): ಡಿ.10ರ ಬಳಿಕ ಸಚಿವ ರಾಜ್ಯ ಸಂಪುಟದಲ್ಲಿ (Karnataka Cabinet) ಭಾರೀ ಬದಲಾವಣೆಯಾಗಲಿದೆ. ಆದರೆ, ಮುಖ್ಯಮಂತ್ರಿ ಬದಲಾಗುವುದಿಲ್ಲ ಎಂದು ಆಡಳಿತಾರೂಢ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ (Basangouda Patil Yatnal) ಹೊಸ ರಾಜಕೀಯ ಬಾಂಬ್‌ ಸಿಡಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಬೊಮ್ಮಾಯಿ (CM Basavaraj Bommai) ಮಾತ್ರ ಯತ್ನಾಳ್‌ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಅವರ ಮಾತಿನ ಹಿನ್ನಲೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಗುರುವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಲ ಸಚಿವರು ಬೆಳಗಾದರೆ ಮುಖ್ಯಮಂತ್ರಿಗಳ ಜತೆ ಓಡಾಡಿಕೊಂಡು ಇರುತ್ತಾರೆ. ಸಚಿವರು ಜಿಲ್ಲೆಗಳಿಗೆ ಹೋಗಿ ಕೆಲಸ ಮಾಡಲಿಲ್ಲವೆಂದರೆ ಮುಂದೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗುಜರಾತ್‌ ಮಾದರಿಯಲ್ಲಿ ಆಮೂಲಾಗ್ರವಾಗಿ ಸಚಿವ ಸಂಪುಟ ಪುನಾರಚನೆ!

ಸರ್ಕಾರದಲ್ಲಿ ಕೆಲ ಸಚಿವರು ಕೆಲಸವನ್ನೇ ಮಾಡುತ್ತಿಲ್ಲ. ವಿಧಾನಸೌಧಕ್ಕೆ ಬರುವುದೇ ಇಲ್ಲ. ಗುಜರಾತ್‌ ಮಾದರಿಯಲ್ಲಿ ಆಮೂಲಾಗ್ರವಾಗಿ ಸಚಿವ ಸಂಪುಟ ಪುನಾರಚನೆ ಮಾಡಬೇಕು. ಗಂಭೀರ ಆರೋಪ ಇರುವ ಮತ್ತು ಕೆಲಸ ಮಾಡದ ಸಚಿವರನ್ನು ಕೈ ಬಿಡಬೇಕು. ಪಕ್ಷದಲ್ಲಿ ಒಳ್ಳೆಯ ಕೆಲಸ ಮಾಡುವ ಸಚಿವರು ಇದ್ದಾರೆ. ಈ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಬೇಕಾದ ಅಗತ್ಯ ಇದೆ ಎಂದು ಹೇಳಿದರು.

Winter Session In Belagavi: ಗಡಿ ನಾಡಿನಲ್ಲಿ ಅಧಿವೇಶನ ಬೇಡ: ಸಚಿವಾಲಯ ಸಿಬ್ಬಂದಿ!

ಪ್ರಸ್ತುತ ಇರುವ ಸಚಿವರಲ್ಲಿ ಏಳೆಂಟು ಸಚಿವರು ಕೆಲಸವನ್ನೇ ಮಾಡುತ್ತಿಲ್ಲ. ಮುಖ್ಯಮಂತ್ರಿಗಳ ಹಿಂದೆಯೇ ತಿರುಗುತ್ತಿರುತ್ತಾರೆ. ಶಾಸಕರಿಗೆ ಸಮಯವೇ ನೀಡುವುದಿಲ್ಲ. ಪೋನ್‌ ಕೂಡ ಎತ್ತುವುದಿಲ್ಲ. ಶಾಶ್ವತವಾಗಿ ಸಚಿವರಾಗಿಯೇ ಇರುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಸಚಿವ ಸಂಪುಟದ ಬಗ್ಗೆ ಹಲವರಿಗೆ ಅಸಮಾಧಾನ ಇದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಚಿವ ಸಂಪುಟವನ್ನು ಪುನಾರಚಿಸಬೇಕಾಗಿದೆ. 

ಸಚಿವ ಸಂಪುಟದ ಬಗ್ಗೆ ಹಲವರಿಗೆ ಅಸಮಾಧಾನ ಇದೆ!

ಅನುದಾನ ಬಿಡುಗಡೆ ವಿಚಾರದಲ್ಲಿ ಹಲವು ಶಾಸಕರಿಗೆ ಅಸಮಾಧಾನ ಇದೆ. ಅಧಿವೇಶನ ಬಳಿಕ ಹಣ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ಅಶ್ವಾಸನೆ ನೀಡಿದ್ದಾರೆ. ಪಕ್ಷಾತೀತವಾಗಿ ಎಲ್ಲರ ಕ್ಷೇತ್ರಗಳಿಗೂ ಹಣ ನೀಡುವ ಭರವಸೆ ನೀಡಿದ್ದಾರೆ. ಹಣ ನೀಡದಿದ್ದರೆ ಮುಖ್ಯಮಂತ್ರಿಗಳು ಮತ್ತು ಸಚಿವರ ಮೇಲೂ ಅಸಮಾಧಾನ ಹೆಚ್ಚಾಗಲಿದೆ ಎಂದು ವಿಜಯಪುರ ನಗರ ಶಾಸಕ ತಿಳಿಸಿದರು.

Murder Sketch: ಬಿಜೆಪಿ ಶಾಸಕ ವಿಶ್ವನಾಥ್ ಹತ್ಯೆ ಸ್ಕೆಚ್ ಪ್ರಕರಣಕ್ಕೆ ಟ್ವಿಸ್ಟ್

ಸಚಿವ ಸಂಪುಟವನ್ನು ಪುನಾರಚನೆ ಮಾಡುವ ಮುನ್ನ ಎಲ್ಲಾ ಶಾಸಕರ ಅಭಿಪ್ರಾಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆಗೆದುಕೊಳ್ಳಬೇಕು. 15 ದಿನಗಳಿಗೊಮ್ಮೆ ಸಚಿವರ ಕಾರ್ಯವೈಖರಿ ಪರಿಶೀಲನೆ ನಡೆಸಬೇಕು ಎಂದು ಯತ್ನಾಳ್‌ ಆಗ್ರಹಿಸಿದರು.

ಯತ್ನಾಳ ಮಾತಿನ ಹಿನ್ನೆಲೆ ಗೊತ್ತಿಲ್ಲ

ಡಿ.10ರ ಬಳಿಕ ರಾಜ್ಯ ಸಚಿವ ಸಂಪುಟದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಯಾವ ಹಿನ್ನæ್ನಲೆಯಲ್ಲಿ ಹೇಳಿದ್ದಾರೆಂದು ಗೊತ್ತಿಲ್ಲ. ಅವರು ನನ್ನ ಆತ್ಮೀಯರಾಗಿದ್ದು, ನಾನು ಬೆಂಗಳೂರಿಗೆ ತೆರಳಿದ ಬಳಿಕ ಮಾತನಾಡುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಿಜೆಪಿ, ಜೆಡಿಎಸ್‌ ನಾಯಕರು ಕಾಂಗ್ರೆಸ್ ಸೇರ್ಪಡೆ, ಕ್ಯೂನಲ್ಲಿ ಘಟಾನುಘಟಿಗಳು

ಮುಂಬರುವ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಈಗಿನಿಂದಲೇ ತಾಲೀಮು ಆರಂಭಿಸಿವೆ. ಇದರ ಮಧ್ಯೆ ನಾಯರುಗಳು ಸಹ ತಮ್ಮ ಮುಂದಿನ ರಾಜಕೀಯ(Politics) ಭವಿಷ್ಯದ ಲೆಕ್ಕಾಚಾರದೊಂದಿಗೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುತ್ತಿದ್ದಾರೆ.

ಪರಿಷತ್ ಚುನಾವಣೆ ಸಭೆಯಲ್ಲಿ ಬಿಜೆಪಿ ನಾಯಕರ ಕಿತ್ತಾಟ..!

ಅದರಂತೆ ಇಂದು (ಡಿ.02) ಬೆಂಗಳೂರಿನಲ್ಲಿ ಸಿದ್ದರಾಮಯ್ಯ(Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ನೇತೃತ್ವದಲ್ಲಿ ಬಿಜೆಪಿ(BJP) ಹಾಗೂ ಜೆಡಿಎಸ್ (JDS) ಮುಖಂಡರು ಕಾಂಗ್ರೆಸ್(Congress) ಸೇರ್ಪಡೆಯಾದರು.

click me!