ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರಿಡಲು ತೀರ್ಮಾನ, ಕೇಂದ್ರಕ್ಕೆ ಶಿಫಾರಸ್ಸು

Published : Apr 20, 2022, 08:29 PM ISTUpdated : Apr 20, 2022, 08:41 PM IST
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರಿಡಲು ತೀರ್ಮಾನ, ಕೇಂದ್ರಕ್ಕೆ ಶಿಫಾರಸ್ಸು

ಸಾರಾಂಶ

*  ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರು  * ಸಚಿವ ಸಂಪುಟ ತೀರ್ಮಾನಿಸಿ ಕೇಂದ್ರಕ್ಕೆ ಶಿಫಾರಸು * ಶಿವಮೊಗ್ಗದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ

ವರದಿ: ರಾಜೇಶ್ ಕಾಮತ್
ಶಿವಮೊಗ್ಗ, (ಏ.20):
ಸೋಗಾನೆ ಸಮೀಪದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ(Shivamogga Airport) ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ(BS Yediyurappa) ಅವರ ಹೆಸರು ಇಡಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌ ಹೇಳಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಾರು ಹೆಸರಿಡಬೇಕು ಎಂದು ನಾನಾ ಹೆಸರು ಮುನ್ನಲೆಗೆ ಬಂದಿದ್ದವು. ಕುವೆಂಪು, ಬಂಗಾರಪ್ಪ ಸೇರಿದಂತೆ ಇನ್ನೂ ಅನೇಕರ ಹೆಸರುಗಳು ಕೇಳಿಬಂದಿದ್ದವು. ಇವರುಗಳ ಜತೆ ಯಡಿಯೂರಪ್ಪನವರ ಹೆಸರು ಇಡಬೇಕೆಂಬ ಕೂಗು ಕೇಳಿಬಂದಿದ್ದವು. ಇದರಿಂದ ಯಾರ ಹಸರು ಇಡಬೇಕೆಂದು ಭಾರಿ ಗೊಂದಲವುಂಟು ಮಾಡಿತ್ತು.ಈ ಗೊಂದಲಕ್ಕೆ ಸಿಎಂ ಇದೀಗ ಬಸವರಾಜ ಬೊಮ್ಮಾಯಿ (Basavaraj Bommai) ತೆರೆ ಎಳೆದಿದ್ದಾರೆ.

ಶಿವಮೊಗ್ಗ : ಜೂನ್‌ ಅಂತ್ಯಕ್ಕೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ

ಇಂದು(ಬುಧವಾರ) ಶಿವಮೊಗ್ಗದ ಸೋಗಾನೆ ಬಳಿಯಿರುವ ವಿಮಾನ ನಿಲ್ದಾಣದಲ್ಲಿ  3050 ಮೀ ರನ್ ವೇ ಕಾಮಗಾರಿ ವೀಕ್ಷಿಸಿದ ಸಂತರ ಮಾಧ್ಯಮದ ಜೊತೆಗೆ ಮಾತನಾಡಿದ ಸಿಎಂ ಬೊಮ್ಮಾಯಿ, ವಿಮಾನ ನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ ಹೆಸರಿಡಲು ಸಚಿವ ಸಂಪುಟ ತೀರ್ಮಾನಿಸಿ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಕೇಂದ್ರದಿಂದ ಇದು ಅನುಮೋದನೆಗೊಂಡು ಬರಲಿದೆ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪನವರ ಶ್ರಮ ಮತ್ತು ಆಸಕ್ತಿ ಈ ವಿಮಾನ ನಿಲ್ದಾಣ ರಚನೆಯಲ್ಲಿದೆ. ಹಾಗಾಗಿ ಅವರ ಹೆಸರನ್ನ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತಿದೆ ಎಂದರು.

ಬಿಎಸ್‌ವೈ ಹೆಸರು ಪ್ರಸ್ತಾಪಿಸಿದ್ದೇ ಈಶ್ವರಪ್ಪ
ಶಿವಮೊಗ್ಗದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪನವರ ಹೆಸರು ಇಡಬೇಕೆಂದು ಪ್ರಸ್ತಾಪಿಸಿದ್ದೇ ಮೊದಲು ಮಾಜಿ ಸಚಿವ ಈಶ್ವರಪ್ಪನವರು. 

ಇತ್ತೀಚೆಗೆ ಶಿವಮೊಗ್ಗದ ಕುವೆಂಪುರಂಗ ಮಂದಿರದಲ್ಲಿ ಬಿಎಸ್ ವೈಗೆ ಕೆಳದಿ ಶಿವಪ್ಪನಾಯಕನ ಪ್ರಶಸ್ತಿ ನೀಡಲಾಗಿತ್ತು. ಈ ವೇಳೆ ಸಚಿವರಾಗಿದ್ದ ಈಶ್ವರಪ್ಪ ತಮ್ಮ ಭಾಷಣದಲ್ಲಿ ವೇದಿಕೆ ಮೇಲೆ ಕುಳಿತಿದ್ದವರ ವಿರೋಧದ ನಡುವೆಯೂ ಯಡಿಯೂರಪ್ಪ ನವರ ಹೆಸರಿಡಲು ಕರೆ ನೀಡಿದ್ದರು ಇದರ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಯವರು ಶಿವಮೊಗ್ಗದ ವಿಮಾನ ನಿಲ್ದಾಣದಲ್ಲೇ  ಬಿಎಸ್ ವೈ ಹೆಸರು ಘೋಷಿಸಿದ್ದಾರೆ.

ಕರ್ನಾಟಕದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಸಿಎಂ ಮಾತು
ಕರ್ನಾಟಕದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಸಿಎಂ ಬೊಮ್ಮಾಯಿ ಪ್ರಸಂಸಿಕೊಂಡಿದ್ದಾರೆ. ಕರ್ನಾಟಕದ ಸಾಲ ಮೇಲೇರುತ್ತಿದ್ದರು ಸ್ಥಿತಿಗತಿಗಳು ಸರಿಯಾಗಿವೆ ಯಾರೂ ಆತಂಕ ಪಡುವ ವಿಚಾರವಿಲ್ಲ,  3.8 ಲಕ್ಷ ಕೋಟಿ ಸಾಲದ ಗುರಿಯನ್ನ ಬಜೆಟ್ ನಲ್ಲಿ ತೋರಿಸಲಾಗಿದೆ. ವಾಣಿಜ್ಯ ತೆರಿಗೆಯಲ್ಲಿ 11 ಸಾವಿರ ತೆರಿಗೆ ದಾಖಲೆ ಸಂಗ್ರಹವಾಗಿದೆ. ಆರ್ಥಿಕ ಗುರಿ ಸಾಧಿಸಿದ್ದರಿಂದ ಕೇಂದ್ರ ಹೆಚ್ಚಿನ ಅನುದಾನ ನೀಡಿದೆ. ಸಪ್ಲಿಮೆಂಟರಿ ಬಜೆಟ್ ನಲ್ಲಿ ಸೇವಿಂಗ್ ನಿಂದ ಹಣ ಬರುತ್ತದೆ ಎಂಬ ಭಾವನೆಯಿದೆ. ಇದು ಸೇವಿಂಗ್ ನಿಂದ ಬಂದಿಲ್ಲ ಆಗಲೇ ಬೊಕ್ಕಸಕ್ಕೆ ಬಂದ ಹಣವಾಗಿದೆ, ತೆರಿಗೆ ಎಫರ್ಟ್ಸ್ ಇದೆ. ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ತಿಳಿಸಿದರು.

ಸಾಲದ ಬಗ್ಗೆ 67,160 ಕೋಟಿ 60,300 ಸಾವಿರ ಕೋಟಿ ಸಾಲ ಮಾತ್ರ ಮಾಡಲಾಗಿದೆ 4 ಸಾವಿರ ಕೋಟಿ ಕಡಿಮೆ ಇದೆ. 3.5 ಸಾವಿರ ಕೋಟಿ ಸಂಗ್ರಹದ ಗುರಿಹೊಂದಲಾಗಿತ್ತು. ಆದರೆ 9 ಸಾವಿರ ಕೋಟಿ ಸಂಗ್ರಹವಾಗಿದೆ ಆರ್ಥಿಕ ಶಿಸ್ತು ತರಲಾಗಿದೆ. ನಾನ್ ಟ್ಯಾಕ್ಸ್ ಹೆಚ್ಚಿಗೆ ಮಾಡಲಿದ್ದೇವೆ ಎಂದರು.

ರಾಜ್ಯಕ್ಕೆ ಬರುವ ಜಿಎಸ್ ಟಿ ಹಣ ಬರ್ತಾ ಇದೆ. ಕೇಂದ್ರದಿಂದ 18 ಸಾವಿರ ಕೋಟಿ ಸೆಸ್ ಸಂಗ್ರಹ ಬಂದಿದೆ. ಕೋವಿಡ್ ನಿಂದಾಗಿ ಕೇಂದ್ರದಿಂದ ಬರುವ ಸಂಗ್ರಹ ಹಣ ಬಂದಿದೆ. ಜೂನ್ ವರೆಗೆ ಬರುವ ಜಿಎಸ್ ಟಿ ಹಣ ಬಂದಿದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು, ಆದ್ರೆ ಒಂದರಿಂದ 2 ಮಕ್ಕಳನ್ನ ಮಾಡಿಕೊಳ್ಳಿ; ಸಿಎಂ ಸಿದ್ದರಾಮಯ್ಯ
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ