ಮುಸ್ಲಿಮರು ಇತ್ತಿಚೆಗೆ ಉದ್ದುದ್ದ ಗಡ್ಡ ಬಿಡ್ತಾರೆ
ಕರ್ನಾಟಕ ಜೀವನ ಶೈಲಿ ಬಿಟ್ಟಿದ್ದಾರೆ
ಬೆಲ್ಲದ್ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಹೇಳಿಕೆ
ವರದಿ: ರವಿ ಶಿವರಾಮ್
ಬೆಂಗಳೂರು/ಹುಬ್ಬಳ್ಳಿ, (ಏ.20): ಹುಬ್ಬಳ್ಳಿಯಲ್ಲಿ ಮೊನ್ನೆ ನಡೆದ ಗಲಭೆ ಬೆನ್ನಲ್ಲೆ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಸರ್ಕಾರಕ್ಕೆ ಹೊಸತೊಂದು ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಇರುವ ಎಲ್ಲಾ ಮಸೀದಿ, ಮೌಲ್ವಿಗಳ ಸರ್ವೆ ಕಾರ್ಯ ಮಾಡಲು ಇದು ಸಕಾಲ ಎಂದು ಬೆಲ್ಲದ್ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಹೇಳಿಕೆ ನೀಡಿದ್ದಾರೆ. ಸರ್ವೆ ಕಾರ್ಯ ಯಾಕೆ ಮಾಡಬೇಕು, ಅದರ ಅಗತ್ಯ ಏನಿದೆ ಎನ್ನೋದರ ಬಗ್ಗೆಯೂ ಅವರು ಸಕಾರಣಗಳನ್ನು ನೀಡಿದ್ದಾರೆ.
ಕರ್ನಾಟಕ ಜೀವನ ಶೈಲಿ ಬಿಟ್ಟಿದ್ದಾರೆ
ಮೊದಲು ಮುಸ್ಲಿಂರು ನಮ್ಮೆಲ್ಲರಂತೆ ಬದಕುತ್ತಾ ಇದ್ರು. ಆದ್ರೆ ಈಗ ಅದು ಬದಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬುರ್ಖಾ ಕೂಡ ಹಾಕ್ತಾ ಇರಲಿಲ್ಲ. ಕಳೆದ 15 ವರ್ಷಗಳಲ್ಲಿ ಈಗ ಅದು ಬದಲಾಗಿದೆ.ಉದ್ದುದ್ದ ಗಡ್ಡ ಬಿಡೋದು, ಫೈಜಾಮಾ, ಟೊಪ್ಪಿ ಹಾಕೋಕೆ ಶುರು ಮಾಡಿದ್ದಾರೆ. ಮೊದಲು ಹೀಗೆ ಇರಲಿಲ್ಲ. ಕರ್ನಾಟಕದ ಜೀವನ ಶೈಲಿ ಬಿಟ್ಟು ತಮ್ಮದೆ ಜೀವನ ಶೈಲಿ ಶುರುಮಾಡಿದ್ದಾರೆ ಎಂದು ಬೆಲ್ಲದ್ ತಿಳಿಸಿದ್ದಾರೆ.
undefined
ಕಮಿಷನರ್ ಕಾರ್ ಮೇಲೆ ನಿಂತು ಪ್ರಚೋದನೆ ನೀಡಿದ್ದ ಮೌಲ್ವಿ ತರ ಕಾಣುತ್ತಿದ್ದ ಆ ವ್ಯಕ್ತಿ ಯಾರು?
ದಿಯೊಬಂದ್ ಪಂತ್ ದವರು ಹೆಚ್ಚು ಮೌಲ್ವಿಗಳು ಆಗಿದ್ದಾರೆ.
ಇನ್ನೂ ಮುಸ್ಲಿಂರ ವೇಶ ಭೂಷಣ, ನಡೆ ನುಡಿ ಬದಲಾಗೋಕೆ ಕಾರಣ ತಿಳಿಸಿದ ಬೆಲ್ಲದ್, ರಾಜ್ಯದಲ್ಲಿ ಇರುವ ಅನೇಕರು ದಿಯೊಬಂದ್ ಪಂತ ದಿಂದ ಟ್ರೈನ್ ಆಗಿ ಬಂದಿರುವ ಮೌಲ್ವಿಗಳು ಖಟ್ಟರ್ ಮುಸ್ಲಿಂ ಆಗಿರ್ತಾರೆ.ಅವರು ಇಲ್ಲಿಯ ಸ್ಥಳಿಯ ಮುಸ್ಲಿಂರ ಮನಸ್ಸು ಕೆಡಿಸ್ತಾರೆ. ನಮ್ಮ ಜೀವನ ಶೈಲಿ ಬೇರೆ, ನಾವು ಹೀಗೆ ಇರಬೇಕು ಎಂದು ಸ್ಥಳಿಯ ಮುಸ್ಲಿಂರ ತಲೆ ಕೆಡಿಸ್ತಾರೆ. ಸದ್ಯ ರಾಜ್ಯದ ಬೇರೆ ಬೇರೆ ಮಸೀದಿಗಳಲ್ಲಿ ಇರುವ ಮೌಲ್ವಿಗಳು ಉತ್ತರ ಪ್ರದೇಶ ಮತ್ತು ಬಿಜಾರ್ ಕಡೆಯಿಂದ ಬಂದವರಾಗಿದ್ದಾರೆ. ಸ್ಥಳಿಯ ಮುಸ್ಲಿಂರು ಸ್ವಯಂ ಪ್ರೇರಣೆಯಿಂದ ಅಂತಹ ಮೌಲ್ವಿಗಳನ್ನು ವಾಪಸ್ ಕಳಿಸಬೇಕು ಎಂದು ಬೆಲ್ಲದ್ ಆಗ್ರಹ ಮಾಡಿದ್ರು. ಅವರ ಚಿತಾವಣೆಯಿಂದ ಈ ರೀತಿ ರಾಜ್ಯದಲ್ಲಿ ನಡೆಯುತ್ತಿದೆ ಎನ್ನುವ ಕಾರಣವನ್ನು ನೀಡಿದ ಬೆಲ್ಲದ್ ರಾಜ್ಯದಲ್ಲಿರುವ ಎಲ್ಲಾ ಮಸೀದಿ ಮತ್ತು ಮೌಲ್ವಿಗಳ ಮೌಲ್ಯಮಾಪನವನ್ನು ಆಯಾ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.
ಹುಬ್ಬಳ್ಳಿ ಗಲಭೆಯಲ್ಲಿ ಕಲ್ಲು ಎಲ್ಲಿಂದ ಬಂತು?
ಹುಬ್ಬಳ್ಳಿಯಲ್ಲಿ ನಡೆದ ಗಲಭೆಯ ಬಗ್ಗೆಯೂ ಮಾತಾಡಿದ ಬೆಲ್ಲದ್, ಇದೊಂದು ಪೂರ್ವ ನಿಯೋಜಿತ ಘಟನೆ. ಯಾಕೆಂದರೆ ಹುಬ್ಬಳ್ಳಿಯಲ್ಲಿ ರಸ್ತೆಗಳಲ್ಲಿ ಅಷ್ಟೊಂದು ಕಲ್ಲು ಎಲ್ಲಿಂದ ಸಿಗತ್ತೆ ? ಎಂದು ಪ್ರಶ್ನಿಸಿದ ಬೆಲ್ಲದ್, ಹುಬ್ಬಳ್ಳಿ ರಸ್ತೆ ಸ್ವಲ್ಪ ಹಾಳಾಗಿದೆ ನಿಜ. ಆದ್ರೆ ಅಲ್ಲಿ ಕಲ್ಲು ಸಿಗೋದಿಲ್ಲ. ಧೂಳು ಸಿಗುತ್ತದೆ, ಆದ್ರೆ ಅಷ್ಟೊಂದು ಪ್ರಮಾಣದ ಕಲ್ಲು ಎಲ್ಲಿಂದ ಬಂತು ಎಂದರೆ ಇದು ಪೂರ್ವ ನಿಯೋಜಿತ ಪ್ರಕರಣ ಎಂದು ಅರವಿಂದ್ ಬೆಲ್ಲದ್ ತಿಳಿಸಿದ್ದಾರೆ.
ಈಗ ರಾಜ್ಯದಲ್ಲಿ ಇರುವ ಮಸೀದಿ ಮೌಲ್ವಿಗಳ ಸರ್ವೆ ಆಗಬೇಕು ಎಂದ ಅವರು, ಮಸೀದಿಗಳಲ್ಲಿ ಕಲ್ಲು ಇಟ್ಟಿಗೆ ಶಸ್ತ್ರಾಸ್ತ್ರವನ್ನು ಇಟ್ಟಿದ್ದಾರೆ ಎನ್ನೋದು ಕೂಡ ತನಿಖೆ ಆಗಬೇಕು ಎಂದು ಸರ್ಕಾರಕ್ಕೆ ಆಗ್ರಹ ಪಡಿಸಿದ್ದಾರೆ.
ಚರ್ಮ ಸುಲಿದು ಅಲ್ಲೇ ಶಿಕ್ಷೆ ಕೊಡಿ ಅಂತಾರೆ
ಹುಬ್ಬಳ್ಳಿಯಲ್ಲಿ ಮೊನ್ನೆ ನಡೆದ ಗಲಭೆಗೆ ಒಂದು ಪೋಸ್ಟ್ ಕಾರಣ ಆಗಿತ್ತು. ಮೆಕ್ಕಾ ಮದೀನಾ ಮೇಲೆ ಕೇಸರಿ ಧ್ಜಜ ಹಾಕಿರುವ ಫೋಟೊವೊಂದನ್ನು ಹರಿಬಿಡಲಾಗಿತ್ತು. ಒಬ್ಬ ಯುವಕ ಆ ರೀತಿ ಪೋಸ್ಟ್ ಮಾಡಿದ್ದ. ಅದಾದ ಕೆಲ ಗಂಟೆಗಳಲ್ಲಿ ಗಲಭೆ ಶುರುವಾಗಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ, ಆಂಜನೇಯ ಸ್ವಾಮಿ ದೇಗುಲದ ಮೇಲೆ ಕಲ್ಲೆಸೆತ ಮಾಡಲಾಗಿತ್ತು.ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಬೆಲ್ಲದ್, ಆ ಹುಡುಗ ಪೋಸ್ಟ್ ಮಾಡಿದ್ದು ತಪ್ಪು. ಆದ್ರೆ ಅಲ್ಲಿ ಸೇರಿದ್ದವರು ಪೋಸ್ಟ್ ಮಾಡಿದವನ ಬಂಧನದ ಬಳಿಕವೂ, ಆತನನ್ನು ನಮ್ಮ ಕೈಗೆ ಕೊಡಿ, ಚರ್ಮ ಸುಲಿದು ಅಲ್ಲೆ ಶಿಕ್ಷೆ ನೀಡಿ ಎನ್ನುವಂತೆ ನಡೆದುಕೊಂಡು ಗಲಭೆ ಮಾಡಿದ್ರು ಎಂದು ಬೆಲ್ಲದ್ ಆಕ್ರೋಶ ವ್ಯಕ್ತಪಡಿಸಿದರು.
ಗೃಹ ಸಚಿವರ ಜೊತೆ ಮಾತಾಡಿದ್ದೇನೆ
ಇನ್ನು ಮಸೀದಿ ಮೌಲ್ವಿಗಳ ಸರ್ವೆ ಮಾಡಬೇಕೆಂಬ ಬಗ್ಗೆ ಈಗಾಗಲೇ ಗೃಹ ಸಚಿವ ಅರಗ ಜ್ಞಾನೇಂದ್ರ ಜೊತೆ ಮಾತಾಡಿದ್ದೇನೆ. ಮೊನ್ನೆ ಹುಬ್ಬಳ್ಳಿ ಗೆ ಗೃಹ ಸಚಿವರು ಬಂದಿದ್ದಾಗ ಅವರ ಜೊತೆ ಈ ಸರ್ವೆ ಮಾಡುವ ಬಗ್ಗೆ ಮಾತಾಡಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ಇದೆ ಎಂದು ಬೆಲ್ಲದ್ ತಿಳಿಸಿದ್ದಾರೆ.
ಭಟ್ಕಳದವರು ಯಲ್ಲಾಪುರದಲ್ಲಿ ಮಸೀದಿ ನಿರ್ಮಿಸಿಕೊ ಬಂದಿದ್ರು.
ಈ ಸರ್ವೆ ವಿಚಾರದಲ್ಲಿ ಮಾತಾಡಿದ ಬೆಲ್ಲದ್ ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದ್ದ ಒಂದು ಪ್ರಸಂಗವನ್ನು ಉಲ್ಲೇಖ ಮಾಡಿದ್ರು. ಯಲ್ಲಾಪುರದಲ್ಲಿ ಭಟ್ಕಳದ ನವಾಯತ್ ಮುಸ್ಲಿಂ ಮೌಲ್ವಿಗಳು ಮಸೀದಿ ಮಾಡೋಕೆ ಬಂದಿದ್ರು. ಆದ್ರೆ
ಲೋಕಲ್ ಮುಸ್ಲಿಂರು ವಿರೋಧ ಮಾಡಿ,ನಮ್ಮದು ಈಗಾಗಲೇ ಮಸೀದಿ ಇದೆ. ನೀವು ಈಗ ಮತ್ತೆ ಮಸೀದಿ ನಿರ್ಮಿಸಿ, ಸ್ಥಳೀಯವ ವಾತಾವರಣ ಹಾಳು ಮಾಡಬೇಡಿ ಎಂದು ನವಾಯತ್ ಮೌಲ್ವಿಗಳನ್ನು ವಾಪಸ್ ಕಳಿಸಿದ್ರು. ಭಟ್ಕಳ ನವಾಯತ್ ಮುಸ್ಲಿಂರು ಖಟ್ಟರ್ ಆಗಿರ್ತಾತೆ. ಭಟ್ಕಳದಲ್ಲಿ ಈಗಾಗಲೇ ನಾವು ಆ ಭಟ್ಕಳ ಈ ಭಟ್ಕಳ ಎಂಬ ಉಗ್ರವಾದಿಗಳ ಹೆಸರು ಕೇಳಿದ್ದೇವೆ ಎಂದ ಬೆಲ್ಲದ್ ಪರೋಕ್ಷವಾಗಿ ಭಟ್ಕಳದಲ್ಲಿ ಉಗ್ರವಾದ ಚಟುವಟಿಕೆ ಇದೆ ಎನ್ನುವ ಅರ್ಥದಲ್ಲಿ ಮಾತಾಡಿದ್ರು. ಹೊರಗಿಂದ ಬರುವ ಮೌಲ್ವಿಗಳು ಇದೇ ತರ ಇರಬೇಕು ಎಂದು ಖಟ್ಟರ್ ಆದೇಶ ಮಾಡ್ತಾರೆ. ಕೆಲವು ಸ್ಥಳಿಯ ಮುಸ್ಲಿಂರು ಮುಗ್ಧ ಇರ್ತಾರೆ. ಅಂತವರ ಮೂಲಕ ಈ ಮೌಲ್ವಿಗಳು ಉಗ್ರವಾದ ಬೀಜ ಬಿತ್ತುತ್ತಾರೆ.
ಹೀಗಾಗಿ ಇಂತಹ ಮೌಲ್ವಿಗಳನ್ನು ಸ್ವಯಂ ಪ್ರೇರಣೆಯಿಂದ ಕರ್ನಾಟಕದ ಮುಸ್ಲಿಂರು ವಾಪಸ್ ಕಳಿಸಬೇಕು ಎಂದು ಬೆಲ್ಲದ್ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಮಸೀದಿ ಮೌಲ್ವಿಗಳ ಸರ್ವೆ ಮಾಡಿಸತ್ತಾ?
ರಾಜ್ಯದಲ್ಲಿ ಹಿಜಾಬ್ ಪ್ರಕರಣದಿಂದ ಆರಂಭವಾಗಿ ಈಗ ಮಸೀದಿ ಮತ್ತು ಮೌಲ್ವಿಗಳ ಸರ್ವೆ ಕಾರ್ಯ ತನಕ ಇದು ಬಂದಿದೆ. ಈಗ ಸ್ವತಹ ಬಿಜೆಪಿ ಶಾಸಕರೇ ದನಿ ಎತ್ತಿದ್ದಾರೆ. ಮಸೀದಿ ಮೌಲ್ವಿಗಳ ಸರ್ವೆ ಮಾಡೋಕೆ ಒತ್ತಡ ಹಾಕಿದ್ದಾರೆ. ಹೀಗಾಗಿ ಈಗ ಸರ್ಕಾರ ಯಾವ ಕ್ರಮ ಕೈಗೊಳ್ಳತ್ತೆ ಎನ್ನೋದು ಕುತೂಹಲ ಮೂಡಿಸಿದೆ.