ಮದ್ಯ ಪ್ರಿಯರ ಜೇಬಿಗೆ ಮತ್ತೊಮ್ಮೆ ಕತ್ತರಿ; ಬಿಯರ್ ಬೆಲೆ 10 ರೂ. ಹೆಚ್ಚಳಕ್ಕೆ ನಿರ್ಧಾರ

By Sathish Kumar KH  |  First Published Jul 30, 2024, 3:38 PM IST

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲಿಯೇ ಮತ್ತೊಮ್ಮೆ ಬಿಯರ್ ದರವನ್ನು ಹೆಚ್ಚಳ ಮಾಡಲಿ ಮುಂದಾಗಿದೆ.


ಬೆಂಗಳೂರು (ಜು.30): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲಿಯೇ ಪ್ರತಿ ಬಿಯರ್ ಬೆಲೆಯಲ್ಲಿ ಸುಮಾರು 60 ರೂ. ಹೆಚ್ಚಳವಾಗಿದೆ. ಆದರೆ, ಈಗ ಬಿಯರ್ ಬಾಟಲಿಗೆ ತಯಾರಿಕೆಗೆ ಹೆಚ್ಚು ವೆಚ್ಚವಾಗುತ್ತಿದೆ ಎಂಬ ನೆಪವೊಡ್ಡಿ ಬಿಯರ್ ಕಂಪನಿಗಳು ಪುನಃ 10 ರೂ. ದರ ಹೆಚ್ಚಳ ಮಾಡಲು ತೀರ್ಮಾನಿಸಿವೆ.

ಹೌದು, ಮದ್ಯಪ್ರಿಯರಿಗೆ ಶಾಕ್, ಬಿಯರ್ ಬೆಲೆ ಮತ್ತೆ ಏರಿಕೆ ನೀಡಲಾಗುತ್ತಿದೆ. ಕಳೆದ 17 ತಿಂಗಳಲ್ಲಿ ಐದನೇ ಸಲ ಬಿಯರ್ ಬೆಲೆ ಏರಿಕೆ ಮಾಡಲಾಗುತ್ತಿದೆ. ಪ್ರತಿ ಬಿಯರ್ ಬಾಟಲಿಯ ಮೇಲೆ ತಲಾ 10 ರೂ.ಗಳಿಂದ 20 ರೂ.ವರೆಗೆ ಬಿಯರ್ ಬೆಲೆ ಏರಿಕೆ ಮಾಡಲು ಆಯಾ ಕಂಪನಿಗಳು ತೀರ್ಮಾನ ಮಾಡಿವೆ. ಬಿಯರ್ ತಯಾರಿಕಾ ಕಂಪನಿಗಳಿಂದ ಒಂದು ತಿಂಗಳ ಹಿಂದೆಯಷ್ಟೆ ಬಿಯರ್ ದರ ಏರಿಕೆ ಮಾಡಿದ್ದ ಕಂಪನಿಗಳು ಇದೀಗ ಮತ್ತೆ ಕಚ್ಚಾ ವಸ್ತುಗಳ ದರ ಏರಿಕೆ ಕಾರಣವೊಡ್ಡಿ ದರ ಏರಿಕೆ ಮಾಡಲು ಮುಂದಾಗಿವೆ. 

Tap to resize

Latest Videos

undefined

ಸುಳ್ಳು ಸಂಶೋಧಕ ಸಿದ್ದರಾಮಯ್ಯನವರೇ, ನಿಮ್ಮ ಮುಖದ ಮೇಲಿನ ಕೊಳಕನ್ನು ನನ್ನ ಮೇಲೆ ಸಿಡಿಸಬೇಡಿ: ಹೆಚ್.ಡಿ. ಕುಮಾರಸ್ವಾಮಿ

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬಿಯರ್ ದರ ಸುಮಾರು 60 ರೂಪಾಯಿ ಏರಿಕೆಯಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಬಿಯರ್‌ ಮೇಲೆ ಶೇ.20 ರಷ್ಟು  ಹೆಚ್ಚುವರಿ ಸುಂಕ ವಿಧಿಸಿತ್ತು. ಇದರಿಂದ ಬಿಯರ್  ದರದಲ್ಲಿಯೂ ಹೆಚ್ಚಳವಾಗಿತ್ತು. ಆ ನಂತರ ಬಿಯರ್‌ ಉತ್ಪಾದನಾ ಕಂಪನಿಗಳು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಪ್ರತಿ ಬಾಟಲ್‌ ಮೇಲೆ ಕನಿಷ್ಠ 10 ರೂ.ವರೆಗೆ ಏರಿಕೆ ಮಾಡಿದ್ದವು. ಇದಾದ ನಂತರ ಸರ್ಕಾರದಿಂದ ಮತ್ತೆ ಬಿಯರ್ ಮೇಲಿನ ಸುಂಕ‌ವನ್ನು ಹೆಚ್ಚಳ ಮಾಡಲಾಗಿತ್ತು. ಅಂದರೆ, ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಬಿಯರ್ ದರ  ಹೆಚ್ಚಿಸಲಾಗಿತ್ತು.

CrowdStrike ಬಳಕೆದಾರರೇ ಗಮನಿಸಿ, ಭಾರತದ ಸೈಬರ್ ಭದ್ರತಾ ಸಂಸ್ಥೆ ಎಚ್ಚರಿಕೆಯ ಸಂದೇಶ!

ಈಗ 15 ತಿಂಗಳ ಅಂತರದಲ್ಲಿ ಬಿಯರ್ ದರ ಏರಿಕೆಗೆ ಕಂಪನಿಗಳು ತೀರ್ಮಾನ ಮಾಡಿವೆ. ಒಟ್ಟಾರೆ, ಕಳೆದ ಹದಿನೈದು ತಿಂಗಳಲ್ಲಿ ಪ್ರತಿ ಬಿಯರ್ ಬಾಟಲಿ ಮೇಲಿನ ದರ ಸುಮಾರು 60 ರೂ.ವರೆಗೆ ಹೆಚ್ಚಳ ಆಗಿದೆ ಎಂದು ತಿಳಿದುಬಂದಿದೆ. ಆದರೆ, ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ದುಬಾರಿ ಮದ್ಯದ ಮೇಲಿನ ದರವನ್ನು ತುಸು ಇಳಿಕೆ ಮಾಡಲಾಗಿತ್ತು. ಇದರಿಂದ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲ ಆಗಿರಲಿಲ್ಲ. ಈಗ ಮತ್ತೊಮ್ಮೆ ಬಿಯರ್ ದರ ಹೆಚ್ಚಳ ಮಾಡುವ ಮೂಲಕ ಮದ್ಯಪ್ರಿಯರಿಗೆ ಶಾಕ್ ನೀಡಿದೆ.

click me!