ಸಿನೆಮಾ ಸ್ಟಾರ್‌ಗಳಿಗೆ ಯೋಗ್ಯತೆ ಮೀರಿ ಬಿಲ್ಡಪ್‌ ಕೊಡ್ತಿದ್ದಾರೆ: ದರ್ಶನ್‌ ಕೇಸ್ ಬಗ್ಗೆ ಅಹಿಂಸಾ ಚೇತನ್ ಹೇಳಿಕೆ

By Gowthami KFirst Published Jul 30, 2024, 3:32 PM IST
Highlights

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ನಟ ದರ್ಶನ್ ಜೈಲು ಪಾಲು ವಿಚಾರವಾಗಿ ಆ ದಿನಗಳು ನಟ ಚೇತನ್ ಅಹಿಂಸಾ ಹೇಳಿಕೆ ನೀಡಿದ್ದಾರೆ.

ಬೆಂಗಳೂರು (ಜು.30): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ನಟ ದರ್ಶನ್ ಜೈಲು ಪಾಲು ವಿಚಾರವಾಗಿ ನಟ ಚೇತನ್ ಅಹಿಂಸಾ ಹೇಳಿಕೆ ನೀಡಿದ್ದಾರೆ. ಸಿನಿಮಾರಂಗದಲ್ಲಿ  ಹೆಚ್ಚು ಬಿಲ್ಡಪ್ ಕೊಡುತ್ತೇವೆ. ಕಾರಣ ಇಲ್ಲದಿದ್ರು ಸಿನಿಮಾ ಸಕ್ಸಸ್ ಗೆ  ಕ್ರೆಡಿಟ್ ಕೊಡುತ್ತೇವೆ. ಸಿನಿಮಾ ಸ್ಟಾರ್ ಗಳು ಹಿರೋಗಳು ಅನ್ನೋ ರೀತಿ ಮೊದಲಿನಿಂದಲೂ ನಡೆದು ಬಂದಿದೆ. ಸಿನಿಮಾ ಸ್ಟಾರ್ ಗಳು ನಿರ್ದೇಶಕ ನಿರ್ಮಾಪಕ, ಬರಹಗಾರರ ಕಾರಣದಿಂದ ಸ್ಟಾರ್ ಗಳಾಗಿದ್ದಾರೆ.

ಸಿನಿಮಾದಲ್ಲಿ ಹೀರೋ ದರ್ಶನ್ ಬಿಟ್ಟು ಬೇರೆ ಯಾರು ಆ ಜಾಗದಲ್ಲಿ ಮಾಡಿದ್ರು, ಸಿನಿಮಾ ಸಕ್ಸಸ್ ಆಗುತ್ತೆ ಅಥವಾ ಸಕ್ಸಸ್ ಆಗಲ್ಲ ಅಂದ್ರೆ ಯಾರು ಇದ್ರು ಆಗಲ್ಲ. ನಮಗೆ ಸ್ಟಾರ್ ಕಲ್ಚರ್ ಇದ್ದಾಗ ಇಂತಹವರಿಗೆ ವ್ಯಾಲ್ಯೂ ಕೊಡುತ್ತೇವೆ. ಸಿನಿಮಾರಂಗದ ಆಸ್ತಿ ಅಂತ ಮಾಡಿಬಿಡುತ್ತೇವೆ. ಸಿನಿಮಾರಂಗದ ಆಸ್ತಿ ನಮ್ಮ ಕಲೆ, ಬರವಣಿಗೆ, ಒಳ್ಳೆ ಸಂದೇಶ.  ಅದನ್ನು ಬಿಟ್ಟು ಯಾವುದೋ ಸ್ಟಾರ್  ಸಿನಿಮಾರಂಗದ ಆಸ್ತಿ ಅಲ್ಲ. ರಾಜ್ ಕುಮಾರ್, ಎಂಪಿ ಶಂಕರ್, ಶಂಕರ್ ನಾಗ್ ಸಿನಿಮಾರಂಗಕ್ಕೆ ಒಳ್ಳೆ ಕೊಡುಗೆ ಕೊಟ್ಟಿದ್ದಾರೆ.

Latest Videos

ವಂಚಿಸಿ ರಷ್ಯಾ ಸೇನೆಗೆ ಸೇರ್ಪಡೆ, ಉಕ್ರೇನ್ ಯುದ್ಧದಲ್ಲಿ ಹೋರಾಡುತ್ತಿದ್ದ ಹರ್ಯಾಣದ ಯುವಕ ಬಲಿ!

ಆದರೆ ಇಂತಹ ಒಂದು ಘಟನೆ ಸಿನಿಮಾರಂಗಕ್ಕೆ ಕಪ್ಪು ಚುಕ್ಕೆ. ಹಂಸಲೇಖ ಅವರನ್ನ ಜೈಲಿಗೆ ಹಾಕಬೇಕು ಅಂದಾಗ ನಾವೆಲ್ಲಾ ಅವರ ಪರವಾಗಿ ನಿಂತೆವು. ಆದ್ರೆ ಆ ವಿಚಾರವಾಗಿ ಮೂಸಿ ಕೂಡ ನೋಡಿಲ್ಲ. ಆದ್ರೆ ಕೋವಿಡ್ ಸಮಯದಲ್ಲಿ ಯುವರತ್ನ ಸಿನಿಮಾಗೆ 50% ಪ್ರೊಟೆಕ್ಷನ್ ಹಾಕಿದಾಗ ಇದು ದೊಡ್ಡ ಅನ್ಯಾಯ ಅಂತ ಕುಣಿದಾಡಿದ್ರು. ಯಾಕಂದ್ರೆ ಅದು ಬಾಕ್ಸಾಫೀಸ್ ಕಲೆಕ್ಷನ್ ಆಗಿದೆ ಅದಕ್ಕೆ.

ಸಿನಿಮಾರಂಗದಲ್ಲಿ ಮೌನ ಬಿಟ್ಟು ಸತ್ಯ ಹೇಳುವ ಕೆಲಸ ಎಲ್ಲರೂ ಮಾಡಬೇಕು. ಚಿತ್ರರಂಗ ಮುಂದಿನ ದಿನಗಳಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸ್ಟಾರ್ ಗಿರಿಯಿಂದ ಸಿನಿಮಾ ಬೆಳೆಯಲ್ಲ. ಒಳ್ಳೆ ಕಥೆಯಿಂದ ಸಿನಿಮಾರಂಗ ಬೆಳೆಯುತ್ತೆ.

ದರ್ಶನ್ ರನ್ನು ಒಂದೆರಡು ಬಾರಿ ಮಾತ್ರ ಬೇಟಿಯಾಗಿದ್ದೇನೆ ಅಷ್ಟೇ. ಅವರ ವಿಚಾರ ಮಾಧ್ಯಮದಿಂದ ಮಾತ್ರ ಗೊತ್ತಾಗಿದೆ. ಅವರ ಸಿನಿಮಾದಲ್ಲಿ ಕಂಟೆಂಟ್ ಗಿಂತ ಬಾಕ್ಸ್ ಆಫೀಸ್ ಕಲೆಕ್ಷನ್ ಗೆ ಅವರು ಹೆಚ್ಚು ಸಿನಿಮಾ ಮಾಡುತ್ತಾರೆ.

ಕೇರಳದಲ್ಲಿ ಭೀಕರ ಭೂಕುಸಿತ, 40ಕ್ಕೂ ಹೆಚ್ಚು ಮಂದಿ ಬಲಿ! 100ಕ್ಕೂ ಹೆಚ್ಚು ಮಂದಿ ಕಣ್ಮರೆ!

ಸಿನಿಮಾ ಸ್ಟಾರ್ ಗಳಿಗೆ ಯೋಗ್ಯತೆ ಮೀರಿ ತುಂಬಾ ಬಿಲ್ಡಪ್ ಸಿಕ್ಕಿದೆ. ಸಿನಿಮಾರಂಗದ ಹಿರೋಗಳು ಕೈಗೊಂಬೆಗಳು. ಹಿರೋಗಳಿಗೆ ಬಿಲ್ಡಪ್ ಕೊಟ್ಟು ಇಂದ್ರ ಚಂದ್ರ ದೇವೇಂದ್ರ ಅಂತ ಮಾಡಿ. ನಮ್ಮ ಸರ್ಕಾರದ ತೆರಿಗೆ ಹಣವನ್ನ ಕೊಡೋದು ಸರಿಯಲ್ಲ. ಹಿರೋಗಳು ಸತ್ತಾಗ ಸ್ಮಾರಕಗಳನ್ನು ಅವರೇ ಮಾಡಿಕೊಳ್ಳಲಿ. ಅವರು ಮಾಡಿರುವ ಸಿನಿಮಾಗಳಿಗೆ ಸಂಭಾವನೆ ಪಡೆದಿರುತ್ತಾರೆ. ಕೋಟಿ ಕೋಟಿ ಹಣ ಅವರ ಬಳಿ ಇರುತ್ತೆ. ಕೋಟಿ ಕೋಟಿ ಹಣ , ಅಭಿಮಾನಿಗಳಿಂದ ಹಿರೋಗಳಿಗೆ  ಬಿಲ್ಡಪ್ ಗಳು ಬಂದಾಗ ಈ ರೀತಿಯ ಆಗುವ ಸಾಧ್ಯತೆಗಳಿವೆ.

ನಾನು ಹೋರಾಟದ ಮೇಲೆ ಎರಡು ಸಲ ಜೈಲಿಗೆ ಹೋಗಿದ್ದೆ. ಮೊದಲ ಬಾರಿ ನಾನು ಜೈಲಿಗೆ ಹೋದಾಗ 6 ಜನರಿರುವ  ಸೆಲ್ ನಲ್ಲಿ ಹಾಕಿದ್ರು. ಎರಡನೇ ಬಾರಿ 40 ಜನರಿರುವ ಬ್ಯಾರೆಕ್ಸ್ ನಲ್ಲಿ ಹಾಕಿದ್ರು. ಜೈಲಲ್ಲಿ ಸ್ವಲ್ಪ ಕಷ್ಟ ಆಗುತ್ತೆ. ಆದ್ರೆ ಮಂತ್ರಿಗಳು ಗೊತ್ತಿರುವವರ ಪ್ರಭಾವದಿಂದ ಅವರಿಗೆ ಸಿಕ್ಕಿರಬಹುದು. ಸೆಲೆಬ್ರಿಟಿ ಸೌಲಭ್ಯ ಸಿಕ್ಕಿದ್ರೆ ಕಷ್ಟ ಆಗದೇನು ಇರಬಹುದು. 

ಜೈಲಲ್ಲಿ ಊಟ ನನಗೆ ಏನು ಸಮಸ್ಯೆ ಅನಿಸಿಲ್ಲ. ಜೈಲೂಟ ನನಗೆ ಇಷ್ಟ ಆಯ್ತು. ನನ್ನ ಹುಟ್ಟುಹಬ್ಬ ಒಂದು ಬಾರಿ ಜೈಲಲ್ಲಿ ಇದ್ದಾಗ ಬಂದಿತ್ತು. ಆಗ ಪುಳಿಯೋಗರೆ ಕೊಟ್ಟಿದ್ರು ಆಗ ತುಂಬಾ ಚೆನ್ನಾಗಿತ್ತು. ಪುಳಿಯೋಗರೆ ಚಿತ್ರಾನ್ನ, ಅನ್ನ ಸಾಂಬಾರು , ಮುದ್ದೆ ಎಲ್ಲವೂ ನನಗೆ ಇಷ್ಟ ಆಯ್ತು ಎಂದಿದ್ದಾರೆ ನಟ ಚೇತನ್.

click me!