
ತಿರುಪತಿ (ಮೇ.11) ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ನಾಯಕರು ರಿಲ್ಯಾಕ್ಸ್ ಮೂಡ್‌ಗೆ ವಿದೇಶಗಳಿಗೆ ಪ್ರಯಾಣಿಸಿದ್ದಾರೆ. ಆದರೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಜಾದ್ ಜೋಶಿ ಮತದಾನ ಮುಗಿದ ಬೆನ್ನಲ್ಲೇ ತಿರುಪತಿಗೆ ದರ್ಶನಕ್ಕೆ ತೆರಳಿದ್ದಾರೆ.
ತಿರುಪತಿ ದರ್ಶನ ಪಡೆದ ಜೋಶಿ:
ರಾಜ್ಯದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದ ಪ್ರಲ್ಹಾದ್ ಜೋಶಿ, ಮತದಾನ ಮುಗಿದ ಬಳಿಕ ತಿರುಪತಿಗೆ ಪ್ರಯಾಣ ಬೆಳೆಸಿದ್ದರು. ಇಂದು ಬೆಳಗ್ಗೆಯಿಂದ ಬರಿಗಾಲಲ್ಲಿ ತಿರುಪತಿ ಬೆಟ್ಟ(Tirupati tirumala)ವೇರಲು ಆರಂಭಿಸಿದ ಜೋಶಿ(Pralhad joshi),ಕಾಲ್ನಡಿಗೆಯ ಮೂಲಕವೇ ಸಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು.
ಚುನಾವಣೆ ಮುಗಿದ ಬಳಿಕ ಬಹುತೇಕ ರಾಜಕಾರಣಿಗಳು ರಿಲ್ಯಾಕ್ಸ್ ಮೂಡ್ ಮೊರೆಹೋಗಿದ್ರೆ, ಕೇಂದ್ರ ಸಚಿವ ಪ್ರಲ್ಜಾದ್ ಜೋಶಿ ದೇವಸ್ಥಾನಕ್ಕೆ ತೆರಳಿ ತಿರುಪತಿ ದರ್ಶನ ಪಡೆದು ನಿರಾಳರಾದರು. ಕಾಲ್ನಡಿಗೆಯ ಮೂಲಕವೇ ಬೆಟ್ಟವೇರಿ ದೇವರ ದರ್ಶನ ಪಡೆಯುವ ಆಶಯ ಹೊಂದಿದ್ದ ಜೋಶಿ, ಯಶಸ್ವಿಯಾಗಿ ಮೆಟ್ಟಿಲುಗಳನ್ನ ಏರಿ ತಿರುಪತಿಯ ಶ್ರೀನಿವಾಸನ ದರ್ಶನ ಪಡೆದರು.
ಜೋಶಿ 4 ಬಾರಿ ಸಂಸದ, ಮಂತ್ರಿಯಾಗಿದ್ದಾರೆ ರಾಜಕಾರಣ ಬಿಡಲಿ: ಜಗದೀಶ್ ಶೆಟ್ಟರ್ ಪ್ರಶ್ನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ