ಮತದಾನ ಮಾಡಲೆಂದೇ ಅಮೆರಿಕ, ಆಸ್ಪ್ರೇಲಿಯಾದಿಂದ ಬಂದರು..!

By Kannadaprabha NewsFirst Published May 11, 2023, 10:35 AM IST
Highlights

ಕೊಪ್ಪಳ ಜಿಲ್ಲೆ ಹನುಮಸಾಗರದ ಚಾಣಕ್ಯ ಗಂಗಾವತಿ ಹಾಗೂ ಅವರ ಪತ್ನಿ ಆಸ್ಟೇಲಿಯಾದಿಂದ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರೆ, ಉತ್ತರ ಕನ್ನಡದ ಹಳಿಯಾಳದ ಲಕ್ಷ್ಮೀ ಹಳ್ಳಿಕೇರಿ ಅವರು ಅಮೇರಿಕಾದ ಫ್ಲೋರಿಡಾ ಮಿಯಾಮಿಯಿಂದ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ಬೆಂಗಳೂರು(ಮೇ.11): ಮತದಾನದ ಉತ್ಸವದಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವದ ತಮ್ಮ ಕರ್ತವ್ಯ ನಿಭಾಯಿಸಲು ಹಲವರು ಸ್ವಯಂಪ್ರೇರಿತರಾಗಿ ವಿದೇಶದಿಂದ ಆಗಮಿಸಿ ಮತ ಚಲಾಯಿಸಿದರು. ಕೊಪ್ಪಳ ಜಿಲ್ಲೆ ಹನುಮಸಾಗರದ ಚಾಣಕ್ಯ ಗಂಗಾವತಿ ಹಾಗೂ ಅವರ ಪತ್ನಿ ಆಸ್ಟೇಲಿಯಾದಿಂದ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರೆ, ಉತ್ತರ ಕನ್ನಡದ ಹಳಿಯಾಳದ ಲಕ್ಷ್ಮೇ ಹಳ್ಳಿಕೇರಿ ಅವರು ಅಮೇರಿಕಾದ ಫ್ಲೋರಿಡಾ ಮಿಯಾಮಿಯಿಂದ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ಇನ್ನು, ಫಿಲಿಫೈನ್ಸ್‌ನಲ್ಲಿ ಮೂರನೇ ವರ್ಷದ ಮೆಡಿಕಲ್‌ ಓದುತ್ತಿರುವ ವಿದ್ಯಾರ್ಥಿನಿ, ಎಸ್‌ಎಸ್‌ಎಲ್‌ಸಿ ಬೋರ್ಡ್‌ನ ಜಂಟಿ ನಿರ್ದೇಶಕ ರೇವಣ ಸಿದ್ದಪ್ಪ ಅವರ ಪುತ್ರಿ ಲಿಖಿತಾಯೊಬ್ಬರು ಚಿತ್ರದುರ್ಗಕ್ಕೆ ಆಗಮಿಸಿ ಮತಚಲಾಯಿಸಿದರು.
ವಿಧಾನಸಭೆ ಚುನಾವಣೆಗೆ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಮತ ಚಲಾಯಿಸುವ ಆಸೆಯಿಂದ ಅಮೆರಿಕದಿಂದ ಬಂದಿದ್ದ ಸ್ಥಳೀಯ ವ್ಯಕ್ತಿಯೊಬ್ಬರು ಮತದಾರರ ಪಟ್ಟಿಯಿಂದ ತಮ್ಮ ಹೆಸರು ಬಿಟ್ಟು ಹೋಗಿದ್ದರಿಂದ ಮತದಾನದಿಂದ ವಂಚಿತರಾದ ಘಟನೆ ನಡೆದಿದೆ.

ಉತ್ತರಕನ್ನಡ‌: ಕೆಸರಿನಲ್ಲಿ ಸಿಲುಕಿದ ಮತಯಂತ್ರಗಳನ್ನು ಸಾಗಿಸುತ್ತಿದ್ದ ಲಾರಿ

ಪಟ್ಟೀಲಿ ಹೆಸರೇ ಇಲ್ಲ!: 

ದಾವಣಗೆರೆ ನಗರದ ನಿವಾಸಿಯಾದ ರಾಘವೇಂದ್ರ ಶೇಟ್‌ ಚುನಾವಣೆಗೆಂದೇ ಒಂದು ವಾರ ರಜೆ ಮಾಡಿ, 3-4 ಲಕ್ಷ ರು.ಗೂ ಅಧಿಕ ಖರ್ಚು ಮಾಡಿ ಬಂದವರೇ, ಬುಧವಾರ ಬೆಳಿಗ್ಗೆ ಮತಗಟ್ಟೆಗೆ ತೆರಳಿ, ಮತದಾರರ ಪಟ್ಟಿಪರಿಶೀಲಿಸಿದಾಗ ತಮ್ಮ ಹೆಸರು ಇಲ್ಲದೇ ತೀವ್ರ ತೊಂದರೆ ಅನುಭವಿಸಿದರು. ಪಟ್ಟಿಯಲ್ಲಿ ಹೆಸರು ಇಲ್ಲದ್ದು ಕೇಳಿ ಶೇಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

click me!