
ಬೆಂಗಳೂರು (ಮೇ.12) : 16ನೇ ವಿಧಾನಸಭೆ ಚುನಾವಣೆಯ ಮತ ಎಣಿಕೆಯು ಶನಿವಾರ ರಾಜ್ಯದ 34 ಚುನಾವಣಾ ಜಿಲ್ಲಾ ಕೇಂದ್ರದಲ್ಲಿ ನಡೆಯಲಿದ್ದು, ಎಣಿಕೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆ ಕೈಗೊಂಡಿದೆ.
ರಾಜ್ಯದ 58,545 ಮತಗಟ್ಟೆಗಳಲ್ಲಿನ ಮತದಾರರು ಅಖಾಡದಲ್ಲಿರುವ 2615 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬರೆದಿದ್ದು, ಫಲಿತಾಂಶ ಶನಿವಾರ ಪ್ರಕಟವಾಗಲಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭಗೊಳ್ಳಲಿದೆ. ಮಧ್ಯಾಹ್ನದ ವೇಳೆಗೆ ಅಭ್ಯರ್ಥಿಗಳ ಹಣೆಬರಹ ಹೊರಬೀಳಲಿದೆ.
ಬೆಂಗಳೂರಲ್ಲಿ 144 ಸೆಕ್ಷನ್ ಜಾರಿ: ಮದುವೆ, ಶವಸಂಸ್ಕಾರ ಬಿಟ್ಟು ಎಲ್ಲದಕ್ಕೂ ನಿಷೇಧಾಜ್ಞೆ
ಈಗಾಗಲೇ ಮತ ಚಲಾಯಿಸಿರುವ ಇವಿಎಂ(EVM)ಗಳನ್ನು ಪೊಲೀಸ್ ಕಣ್ಗಾವಲಿನಲ್ಲಿ ಭದ್ರತೆಯ ಕೊಠಡಿಯಲ್ಲಿಡಲಾಗಿದೆ. ಮತ ಯಂತ್ರಗಳಿರುವ ಸ್ಟ್ರಾಂಗ್‌ರೂಂಗಳಿಗೆ ಸಿಸಿ ಕ್ಯಾಮೆರಾ ನಿಗಾ ಜತೆಗೆ ವ್ಯಾಪಕ ಭದ್ರತೆ ಒದಗಿಸಲಾಗಿದೆ.
ಮತ ಎಣಿಕೆಯ ಜಿಲ್ಲಾ ಕೇಂದ್ರಗಳು:
ಬೆಳಗಾವಿ ಜಿಲ್ಲೆ-ಆರ್‌ಪಿಡಿ ಕಾಲೇಜು, ಬಾಗಲಕೋಟೆ-ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ವಿಜಯಪುರ-ಸೈನಿಕ ಶಾಲೆ ಆವರಣ, ಯಾದಗಿರಿ-ಸರ್ಕಾರಿ ಪಿಯು ಕಾಲೇಜು, ಕಲಬುರಗಿ-ಗುಲ್ಬರ್ಗಾ ವಿಶ್ವವಿದ್ಯಾಲಯ, ಬೀದರ್ ಬಿವಿಬಿ ಕಾಲೇಜು, ರಾಯಚೂರು-ಎಸ್‌ಆರ್‌ಬಿಪಿಎಸ್ ಪಿಯು ಕಾಲೇಜು, ಕೊಪ್ಪಳ- ಶ್ರೀ ಗವಿಸಿದ್ದೇಶ್ವರ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು, ಗದಗ-ಶ್ರೀ ಜಗದ್ಗುರು ತೋಟದಾರ್ಯ ಎಂಜಿನಿಯರಿಂಗ್ ಕಾಲೇಜು, ಧಾರವಾಡ-ಕೃಷಿ ವಿಜ್ಞಾನ ವಿಶ್ವವಿದ್ಯಾಲಯ.
ಉತ್ತರ ಕನ್ನಡ ಜಿಲ್ಲೆ- ಡಾ.ಎ.ವಿ.ಬಾಳಿಗ ಕಲೆ ಮತ್ತು ವಿಜ್ಞಾನ ಕಾಲೇಜು ಕುಮಟಾ, ಹಾವೇರಿ-ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ವಿಜಯನಗರ-ಪ್ರೌಢದೇವರಾಯ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ, ಹೊಸಪೇಟೆ, ಬಳ್ಳಾರಿ-ರಾವ್‌ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು, ಚಿತ್ರದುರ್ಗ-ಸರ್ಕಾರಿ ವಿಜ್ಞಾನ ಕಾಲೇಜು, ದಾವಣಗೆರೆ- ಶಿವಗಂಗೋತ್ರಿ, ದಾವಣಗೆರೆ ವಿಶ್ವವಿದ್ಯಾಲಯ.
ಶಿವಮೊಗ್ಗ ಜಿಲ್ಲೆ -ಸಹ್ಯಾದ್ರಿ ಕಲಾ ಕಾಲೇಜು, ಉಡುಪಿ-ಸೆಂಟ್ ಸೆಸಲೀಯಾಸ್ ಸಮೂಹ ಸಂಸ್ಥೆ, ಬ್ರಹ್ಮಗಿರಿ, ಚಿಕ್ಕಮಗಳೂರು-ಐಡಿಎಸ್‌ಜಿ ಸರ್ಕಾರಿ ಕಾಲೇಜು, ತುಮಕೂರು-ಸರ್ಕಾರಿ ಪಾಲಿಟೆಕ್ನಿಕ್, ತುಮಕೂರು ವಿಜ್ಞಾನ ವಿಶ್ವವಿದ್ಯಾಲಯ ಮತ್ತು ತುಮಕೂರು ಕಲಾ ವಿಶ್ವವಿದ್ಯಾಲಯ, ಚಿಕ್ಕಬಳ್ಳಾಪುರ-ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೋಲಾರ-ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜು.
ಬಿಬಿಎಂಪಿ ಕೇಂದ್ರ-ಬಿಎಂಎಸ್ ಮಹಿಳಾ ಕಾಲೇಜು, ಬಸವನಗುಡಿ, ಬಿಬಿಎಂಪಿ ಉತ್ತರ-ಮೌಂಟ್ ಕಾರ್ಮೆಲ್ ಕಾಲೇಜು, ಬಿಬಿಎಂಪಿ ದಕ್ಷಿಣ- ಎಸ್‌ಎಸ್‌ಎಂಆರ್‌ವಿ ಪಿಯು ಕಾಲೇಜು ಜಯನಗರ, ಬೆಂಗಳೂರು ನಗರ- ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ಬೆಂಗಳೂರು ಗ್ರಾಮಾಂತರ ಜಿಲ್ಲೆ-ದೇವನಹಳ್ಳಿಯ ಆಕಾಶ್ ಇಂಟರ್‌ನ್ಯಾಷನಲ್ ಶಾಲೆ, ರಾಮನಗರ- ಸರ್ಕಾರಿ ಎಂಜಿನಿಯರಿಂಗ್ ಕಾಲೇಜು.
Karnataka Election 2023: ನಾಡಿದ್ದು ಚುನಾವಣಾ ಫಲಿತಾಂಶ, ಅಭ್ಯರ್ಥಿಗಳ ಎದೆಯಲ್ಲಿ ಢವ ಢವ..!
ಮಂಡ್ಯ ಜಿಲ್ಲೆ-ಮಂಡ್ಯ ವಿಶ್ವವಿದ್ಯಾಲಯ, ದಕ್ಷಿಣ ಕನ್ನಡ-ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ, ಸುರತ್ಕಲ್, ಕೊಡಗು-ಸೆಂಟ್ ಜೋಸೆಫ್ ಕಾನ್ವೆಂಟ್, ಮೈಸೂರು-ಸರ್ಕಾರಿ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜು, ಚಾಮರಾಜನಗರ- ಸರ್ಕಾರಿ ಎಂಜಿನಿಯರಿಂಗ್ ಕಾಲೇಜು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ