ಕರ್ನಾಟಕದಲ್ಲಿ ಭರ್ಜರಿ ಪ್ರಚಾರ ಮಾಡುತ್ತಿರುವ ಪ್ರಧಾನಿ ಮೋದಿ ನಾಳೆ ಬೆಂಗಳೂರಿನಲ್ಲಿ ಮೆಘಾ ರೋಡ್ ಶೋ ನಡೆಸಲಿದ್ದಾರೆ. ಇದು ಮೋದಿಯ ಎರಡನೇ ಅತೀ ದೊಡ್ಡ ರೋಡ್ ಶೋ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದರಿಂದ ನಾಳೆ ಮೋದಿ ಸಾಗುವ ಬೆಂಗಳೂರಿನ ರಸ್ತೆ ಸಂಚಾರ್ ಬಂದ್ ಆಗಲಿದೆ. ಸಾರ್ವಜನಿಕರು ಪರ್ಯಾಯ ಮಾರ್ಗ ಬಳಸಲು ಪೊಲೀಸರ ಮನವಿ ಮಾಡಿದ್ದಾರೆ.
ಬೆಂಗಳೂರು(ಮೇ.05): ಕರ್ನಾಟಕ ವಿಧಾನಸಭಾ ಚುನಾವಣೆ ಭರಾಟೆ ಜೋರಾಗಿದೆ. ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಪ್ರಚಾರದ ಮೂಲಕ ಮತಭೇಟೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ ಆಯೋಜಿಸಲಾಗಿದೆ. ಮೇ.6 ಹಾಗೂ 7 ರಂದು ಎರಡು ದಿನ ಬೆಂಗಳೂರಿನಲ್ಲಿ ಮೋದಿ 37 ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ. ಮೋದಿ ಸಂಚರಿಸುವ ಹಲವು ಮಾರ್ಗಗಳು ಬಂದ್ ಆಗಲಿವೆ. ಹೀಗಾಗಿ ಸಾರ್ವಜನಿಕರು ಪರ್ಯಾಯ ಮಾರ್ಗ ಬಳಸಲು ಪೊಲೀಸರು ಮನವಿ ಮಾಡಿದ್ದಾರೆ. ಶನಿವಾರ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ಮೋದಿ ರೋಡ್ ಶೋ ನಡೆಯಲಿದೆ. ಯಾವ ರಸ್ತೆಗಳಲ್ಲಿ ಸಂಚಾರ ಬಂದ್ ಮಾಡಲಾಗಿದೆ ಅನ್ನೋದನ್ನು ಪೊಲೀಸರು ಹೇಳಿದ್ದಾರೆ.
ನಾಳೆ(ಮೇ.6) ಈ ಮಾರ್ಗ ಬದಲು ಪರ್ಯಾಯ ಮಾರ್ಗ ಬಳಸಲು ಸೂಚನೆ
ರಾಜಭವನ ರಸ್ತೆ
ರಮಣಮಹರ್ಷಿ ರಸ್ತೆ
ಮೇಖ್ರಿ ವೃತ್ತಿ,
ಆರ್‌ಸಿಬಿಐ ಲೇಔಟ್, ಜೆಪಿ ನಗರ
ರೋಸ್ ಗಾರ್ಡನ್, ಜೆಪಿ ನಗರ
ಶಿರ್ಸಿ ವೃತ್ತ, ಜೆಜೆ ನಗರ
ಬಿನ್ನಿ ಮಿಲ್ ರಸ್ತೆ, ಶಾಲಿನಿ ಮೈದಾನ
ಸೌತ್ ಎಂಡ್ ವೃತ್ತ, ಆರ್ಮುಗಂ ವೃತ್ತ
ಬುಲ್ ಟೆಂಪಲ್ ರಸ್ತೆ, ರಾಮಕೃಷ್ಣಾಶ್ರಮ
ಉಮಾ ಟಾಕೀಸ್, ಟಿಆರ್ ಮಿಲ್
ಚಾಮರಾಜಪೇಟೆ ಮುಖ್ಯರಸ್ತೆ, ಬಾಳಿಕಾಯಿ ಮಂಡಿ
ಕೆಪಿ ಅಗ್ರಹಾರ
ಮಾಗಡಿ ಮುಖ್ಯರಸ್ತೆ, ಚೋಳೂರು ಪಾಳ್ಯ
ಎಂಸಿ ವೃತ್ತ, ಪಶ್ಚಿಮ ಕಾರ್ಡ್ ರಸ್ತೆ
ಎಂಸಿ ಲೇಔಟ್, ನಾಗರಭಾವಿ ರಸ್ತೆ
ಬಿಜಿಎಸ್ ಮೈದಾನ, ಹಾವನೂರು ವೃತ್ತ
8ನೇ ಮುಖ್ಯರಸ್ತೆ, ಬಸವೇಶ್ವನಗರ
ಶಂಕರಮಠ, ಮೋದಿ ಆಸ್ಪತ್ರೆ
ನವರಂಗ ವೃತ್ತ, ಎಂಕೆಕೆ ರಸ್ತೆ
ಮಲ್ಲೇಶ್ವರಂ ವೃತ್ತ, ಸಂಪಿಗೆ ರಸ್ತೆ, ಸ್ಯಾಂಕಿ ರಸ್ತೆ
2 ದಿನ, 18 ಕ್ಷೇತ್ರ, 37 ಕಿ.ಮೀ ಮೋದಿ ರೋಡ್ ಶೋ: ಕೊನೆ ಹಂತದಲ್ಲಿ ಮತದಾರನ ಮನ ಗೆಲ್ಲಲು ರಣತಂತ್ರ
ಈ ರಸ್ತೆಗಳಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ರೋಡ್ ಶೋ ನಡೆಯಲಿದೆ. ಹೀಗಾಗಿ ಸಾರ್ವಜನಿಕರು ಈ ರಸ್ತೆ ಬದಲು ಪರ್ಯಾಯ ರಸ್ತೆಯಲ್ಲಿ ಸಂಚರಿಸಲು ಬೆಂಗಳೂರು ಪೊಲೀಸರು ಮನವಿ ಮಾಡಿದ್ದಾರೆ
ಪ್ರಧಾನಿ ಮೋದಿ ರೋಡ್ ಶೋ 18 ಕ್ಷೇತ್ರಗಳಲ್ಲಿ ಹಾದು ಹೋಗಲಿದೆ. ಒಂದೇ ದಿನ ರೋಡ್ ಶೋವನ್ನು ಎರಡು ದಿನ ಮಾಡಲಾಗಿದೆ. ಈ ಬೃಹತ್ ರೋಡ್ ಶೋನಲ್ಲಿ 10 ಲಕ್ಷ ಮಂದಿ ಭಾಗಿಯಾಗುವ ನಿರೀಕ್ಷೆಯಿದೆ ಎಂದರು.
ಮೋದಿ ರೋಡ್ ಶೋ ಕಾರ್ಯಕ್ರಮದಲ್ಲಿ ಬದಲಾವಣೆ: ಯಾಕೆ ಗೊತ್ತಾ ?
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ನಡೆಸಲಿರುವ ರೋಡ್ ಶೋ ಹಿನ್ನಲೆಯಲ್ಲಿ ಬಂದೋಬಸ್ತ್ ಸಂಬಂಧ ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಮಂತ್ರಿಗಳ ರೋಡ್ ಶೋ ಮಾರ್ಗದ ನೀಲ ನಕ್ಷೆ ಸೇರಿದಂತೆ ಪೂರ್ವ ಸಿದ್ಧತೆ ಕುರಿತು ಅಧಿಕಾರಿಗಳಿಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸದಸ್ಯ ಪಿ.ಸಿ.ಮೋಹನ್ ವಿವರಿಸಿದರು. ರೋಡ್ ಶೋ ವೇಳೆ ಸಂಚಾರ ವ್ಯವಸ್ಥೆ ತೊಂದರೆ ಉಂಟಾಗದಂತೆ ಪರ್ಯಾಯ ವ್ಯವಸ್ಥೆ ಬಗ್ಗೆ ಸಹ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಯಿತು. ಸಭೆಯಲ್ಲಿ ವಿಶೇಷ ಆಯುಕ್ತ (ಸಂಚಾರ) ಡಾ.ಎಂ.ಎ.ಸಲೀಂ, ಹೆಚ್ಚುವರಿ ಪೊಲೀಸ್ ಆಯುಕ್ತರು ಹಾಗೂ ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.