ರಾಜಕೀಯ ಪಕ್ಷ ಆಮಿಷೆ ಒಡ್ಡುವ ಸಾಧ್ಯತೆ ಹಿನ್ನೆಲೆ: ಮದುವೆಗೂ ತಟ್ಟಿದ ನೀತಿ ಸಂಹಿತೆ ಬಿಸಿ!

Published : Apr 04, 2023, 06:03 AM ISTUpdated : Apr 04, 2023, 06:04 AM IST
ರಾಜಕೀಯ ಪಕ್ಷ ಆಮಿಷೆ ಒಡ್ಡುವ ಸಾಧ್ಯತೆ ಹಿನ್ನೆಲೆ:  ಮದುವೆಗೂ ತಟ್ಟಿದ ನೀತಿ ಸಂಹಿತೆ ಬಿಸಿ!

ಸಾರಾಂಶ

ಮದುವೆ ಸಮಾರಂಭಗಳಿಗೆ ನೀತಿ ಸಂಹಿತೆ ಅನ್ವಯ ಆಗಲ್ಲ. ಆದರೆ, ರಾಜಕೀಯ ಪಕ್ಷಗಳು, ಮುಖಂಡರು ಅಲ್ಲಿಯೂ ಜನರಿಗೆ ಆಮಿಷವೊಡ್ಡುವುದು ಕಂಡು ಬಂದರೆ ಕಾನೂನು ರೀತ್ಯ ಕ್ರಮಕೈಗೊಳ್ಳುವುದಾಗಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು (ಏ.4) : ಮದುವೆ ಸಮಾರಂಭಗಳಿಗೆ ನೀತಿ ಸಂಹಿತೆ ಅನ್ವಯ ಆಗಲ್ಲ. ಆದರೆ, ರಾಜಕೀಯ ಪಕ್ಷಗಳು, ಮುಖಂಡರು ಅಲ್ಲಿಯೂ ಜನರಿಗೆ ಆಮಿಷವೊಡ್ಡುವುದು ಕಂಡು ಬಂದರೆ ಕಾನೂನು ರೀತ್ಯ ಕ್ರಮಕೈಗೊಳ್ಳುವುದಾಗಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌(Tushar girinath) ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದುವೆ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಸ್ವಾಯತ್ತತೆ ಇದೆ. ಅದಕ್ಕೆ ನೀತಿ ಸಂಹಿತೆ ಇಲ್ಲ. ಆದರೆ, ಕೆಲವು ಸಲ ರಾಜಕೀಯ ಪಕ್ಷದವರು ಸೇರಿಕೊಂಡು ಬುದ್ಧಿವಂತಿಕೆಯಿಂದ ಮತದಾರರಿಗೆ ಆಮಿಷವೊಡ್ಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಈ ಸಮಾರಂಭಗಳ ಮೇಲೆ ತೀವ್ರ ನಿಗಾ ವಹಿಸಿ ದೂರದಿಂದಲೇ ಕಾರ್ಯಕ್ರಮದ ವಿಡಿಯೋ ಚಿತ್ರೀಕರಣದ ಮೂಲಕ ನಿಗಾ ಇಟ್ಟಿರುತ್ತೇವೆ. ಅಂತಹ ಸ್ಥಳಗಳಲ್ಲಿ ಚುನಾವಣಾ ಅಕ್ರಮಗಳು ಕಂಡು ಬಂದರೆ ಅವರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು

ರಾಜ್ಯದಲ್ಲಿ ಎಲೆಕ್ಷನ್ ಬೇಟೆ: ಬರೋಬ್ಬರಿ 12 ಕೋಟಿ ನಗದು, 16 ಕೋಟಿ ಮದ್ಯ, 6 ಕೋಟಿ ಮೌಲ್ಯದ ಚಿನ್ನ ವಶಕ್ಕೆ!

ಈ ಬಾರಿಯ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಪ್ರತಿಯೊಂದು ವಲಯದಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಿ ಮತದಾನ ಜಾಸ್ತಿ ಮಾಡಲು ಏನೇನು ಕ್ರಮಕೈಗೊಳ್ಳಬೇಕು, ಮತಗಟ್ಟೆಗಳಲ್ಲಿ ಯಾವ್ಯಾವ ವ್ಯವಸ್ಥೆ ಮಾಡಲಾಗಿದೆ ಎಂಬಿತ್ಯಾದಿ ಮಾಹಿತಿಗಳನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.

ಆ್ಯಪ್‌ನಲ್ಲಿ ದೂರು ನೀಡಲು ವ್ಯವಸ್ಥೆ

ವಿಎಚ್‌ಎ ತಂತ್ರಾಂಶವನ್ನು ಡೌನ್‌ಲೋಡ್‌ ಮಾಡಿಕೊಂಡು ಅದರಲ್ಲಿ ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ನಮೂದಿಸಿದರೆ ಸಾಕು. ಮತದಾರರ ಸಂಪೂರ್ಣ ವಿವರದ ಜೊತೆಗೆ ಯಾವ ಮತಗಟ್ಟೆಯಲ್ಲಿ ಮತದಾನ ಮಾಡಬೇಕು. ಮತಗಟ್ಟೆಅಧಿಕಾರಿಗಳು ಯಾರು, ಸರದಿ ಸಾಲಿನಲ್ಲಿ ಎಷ್ಟುಜನರು ಇದ್ದಾರೆ, ಪಾರ್ಕಿಂಗ್‌ನಲ್ಲಿ ವಾಹನಗಳ ನಿಲುಗಡೆ ಇತ್ಯಾದಿಗಳ ಕುರಿತು ಮಾಹಿತಿಯೂ ಲಭ್ಯವಾಗಲಿದೆ ಎಂದು ತುಷಾರ್‌ ಗಿರಿನಾಥ್‌ ತಿಳಿಸಿದರು.

Chikkaballapur: ಅನಧಿಕೃತ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿ ಎನ್.ಎಂ.ನಾಗರಾಜು

ಹಾಗೆಯೇ ಚುನಾವಣಾ ಪ್ರಚಾರದ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳನ್ನು ವರದಿ ಮಾಡುವ ಸಲುವಾಗಿ ಸಿ-ವಿಜಿಲ್‌ ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತಿದೆ. ಈ ವಾರದೊಳಗೆ ಆ್ಯಪ್‌ ಸಾರ್ವಜನಿಕ ಬಳಕೆಗೆ ಸಿಗುವ ಸಾಧ್ಯತೆ ಇದೆ. ಚುನಾವಣಾ ಅಕ್ರಮಗಳು ಕಂಡುಬಂದ ಕೂಡಲೇ ಫೋಟೋ ಅಥವಾ ವಿಡಿಯೋವನ್ನು ತೆಗೆದು ಅಪ್ಲೋಡ್‌ ಮಾಡಿದಲ್ಲಿ ಸಂಬಂಧಪಟ್ಟಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ