
ಚಿಕ್ಕಬಳ್ಳಾಪುರ (ಮೇ.16) :ಮಾಜಿ ಸಚಿವ ಡಾ.ಸುಧಾಕರ್ ಆಭಿಮಾನಿಯೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಅನಾರೋಗ್ಯ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ಮೃತನನ್ನು ನಗರದ 17ನೆ ವಾರ್ಡಿನ ನಿವಾಸಿ ಚಿತ್ತಾರದ ವೆಂಕಟೇಶ್(48) (Chittapur venkatesh) ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ವೆಂಕಟೇಶ್ ಚಿಕ್ಕಬಳ್ಳಾಪುರದಿಂದ ಆಟೋದಲ್ಲಿ ಕೇತೇನಹಳ್ಳಿ ರಸ್ತೆಯತ್ತಾ ತೆರಳಿ ಮುಸ್ಟೂರು ರಸ್ತೆಯಲ್ಲಿ ಮೂಲಕ ಕೌರನಹಳ್ಳಿ ಸಮೀಪದ ಕೆರೆಯತ್ತ ತೆರಳಿದ್ದಾನೆæ. ನಂತರ ಕೆರೆಗೆ ಹಾರಿಆತ್ಮಹತ್ಯೆ ಮಾಡಿ ಕೊಂಡಿದ್ದಾನೆ.
ನನ್ನ ಸೋಲು ಅಭಿವೃದ್ಧಿಗಾದ ಸೋಲು: ಡಾ.ಸುಧಾಕರ್
ವೆಂಕಟೇಶ್ ರಾತ್ರಿಯಾದರೂ ಮನೆಗೆ ಬಾರದ್ದರಿಂದ ಮನೆಯವರು ಕಂಗಾಲಾಗಿ ಹುಡುಕಾಟ ನಡೆಸಿದಾಗ ಸೋಮವಾರ ಬೆಳಗ್ಗೆ ಕೌರನಹಳ್ಳಿ ಕೆರೆಯ ಬಳಿ ಚಪ್ಪಲಿ ಇರುವುದು ಕಂಡು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದಾಗ, ಸ್ಥಳಕ್ಕೆ ಬಂದ ಪೋಲೀಸರು ಕೆರೆಯ ನೀರಿನಿಂದ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಮೃತನ ಕುಟುಂಕ್ಕೆ ಹಸ್ತಾಂತರಿಸಿದ್ದಾರೆ. ವೆಂಕಟೇಶ್ ಆಟೋದಲ್ಲಿ ತೆರಳುವಾಗ ಮಾರ್ಗ ಮಧ್ಯೆ ಯಾರೊಂದಿಗೋ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗಿದ್ದಾಗಿ ಪೋಲಿಸರು ತಿಳಿಸಿದ್ದಾರೆ.
ಡಾ.ಸುಧಾಕರ್ ಸಾಂತ್ವನ
ಮೃತನು ಲಿವರ್ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಆತ್ಮಹತ್ಯೆ ಶರಣಾಗಿದ್ದಾನೆ ಎನ್ನಲಾಗಿದೆ. ಮೃತ ವೆಂಕಟೇಶ್ ಮಾಜಿ ಸಚಿವ ಡಾ.ಕೆ.ಸುಧಾಕರ್ ರವರ ಅಭಿಮಾನಿಯಾಗಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಡಾ.ಕೆ.ಸುಧಾಕರ್‌ರವರು ಮೃತನ ಮನೆಗೆ ತೆರಳಿ ಅಂತಿಮದರ್ಶನ ಪಡೆದು, ಮೃತರ ಕುಟುಂಬಕ್ಕೆ ಸ್ವಾಂತನ ಹೇಳಿದರು.
Chikkaballapur Constituency: ಅಭಿವೃದ್ಧಿಯ ಹರಿಕಾರ ಡಾ.ಸುಧಾಕರ್ ಸೋಲಿಗೆ ಕಾರಣವೇನು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ