
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಮೇ.16) ಬಂಗಾಳ ಕೊಲ್ಲಿಯಲ್ಲಿ ಕೆಲವು ದಿನಗಳ ಹಿಂದೆ ರೂಪುಗೊಂಡ ‘ಮೋಖಾ’ ಚಂಡಮಾರುತದಿಂದ ಮುಂಗಾರು ಆರಂಭಕ್ಕೆ ಉತ್ತಮ ವಾತಾವರಣ ನಿರ್ಮಾಣಗೊಳ್ಳಲಿದ್ದು, ನಿರೀಕ್ಷೆಯಂತೆ ರಾಜ್ಯದಲ್ಲಿ ಈ ಬಾರಿ ವಾಡಿಕೆ (ಉತ್ತಮ) ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಾರದ ಹಿಂದೆ ಬಂಗಾಳ ಕೊಲ್ಲಿಯ ಆಗ್ನೇಯ ದಿಕ್ಕಿನಲ್ಲಿ ರೂಪುಗೊಂಡ ‘ಮೋಖಾ’ ಚಂಡಮಾರುತವು ಉತ್ತರ ದಿಕ್ಕಿನ ಕಡೆ ಚಲಿಸಿ ಬಾಂಗ್ಲಾದೇಶದಲ್ಲಿ ಕ್ಷೀಣಿಸಿದೆ. ಈ ಚಂಡಮಾರುತವು ಮುಂಗಾರು ಮಾರುತಗಳು ರೂಪುಗೊಳ್ಳುವುದಕ್ಕೆ ಉತ್ತಮ ವಾತಾವರಣ ನಿರ್ಮಿಸಲಿದೆ. ಹೀಗಾಗಿ, ನಿರೀಕ್ಷೆಯಂತೆ ಜೂನ್ ಮೊದಲ ವಾರದಲ್ಲಿ ಮುಂಗಾರು ಕೇರಳ ಪ್ರವೇಶಿಸಲಿದ್ದು, ನಂತರ ಮೂರ್ನಾಲ್ಕು ದಿನಗಳಲ್ಲಿ ರಾಜ್ಯ ಪ್ರವೇಶಿಸುವ ಸಾಧ್ಯತೆ ಇದೆ.
ಚಂದ್ರ ಗ್ರಹಣದ ನಂತರ...ಮೋಚಾ ಸೈತಾನ್ ಆರ್ಭಟ ಮೋಚಾ ಅಲಿಯಾಸ್ ಮೋಖಾ..ಏನಿದು ಮೋಖಾ ಸೀಕ್ರೆಟ್..?
ಕಳೆದ ಮೂರು ವರ್ಷ ರಾಜ್ಯದಲ್ಲಿ ಉತ್ತಮ ಪ್ರಮಾಣದ ಮಳೆಯಾಗಿದ್ದು, ಈ ಬಾರಿಯೂ ಮುಂಗಾರು ಅವಧಿಯಲ್ಲಿ ನಿರೀಕ್ಷೆಯಂತೆ ಮಳೆಯಾಗಲಿದೆ. ಆದರೆ, ವಾಡಿಕೆ ಪ್ರಮಾಣದಲ್ಲಿ ಶೇ.90ರಷ್ಟುಮಳೆಯಾಗಲಿದೆ. ಈ ಪೈಕಿ ಸ್ವಲ್ಪ ಹೆಚ್ಚು ಮತ್ತು ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ. ಆದರೆ, ಈ ಹಿಂದಿನ ವರ್ಷಗಳಲ್ಲಿ ಉಂಟಾದಂತೆ ಪ್ರವಾಹ ಸೃಷ್ಟಿಯಾಗುವಂತಹ ಮಳೆ ಆಗುವುದಿಲ್ಲ ಎಂದು ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.
ವಾರ್ಷಿಕವಾಗಿ ರಾಜ್ಯದಲ್ಲಿ ಸುರಿಯುವ ಮಳೆಯಲ್ಲಿ ಶೇ.70 ರಿಂದ 80ರಷ್ಟುಮಳೆ ಮುಂಗಾರು ಅವಧಿಯಲ್ಲಿ ಆಗುತ್ತದೆ. ಉಳಿದಂತೆ ಶೇ.20ರಷ್ಟುಮಳೆ ಹಿಂಗಾರು ಅವಧಿಯಲ್ಲಿ ಆಗುತ್ತದೆ. ಹೀಗಾಗಿ, ನೈಋುತ್ಯ ಮುಂಗಾರು ರಾಜ್ಯಕ್ಕೆ ಅತಿ ಮುಖ್ಯವಾಗಿದೆ.
ಇನ್ನೊಂದು ವಾರದಲ್ಲಿ ನಿಚ್ಚಳ:
ಈಗಾಗಲೇ ಮುಂಗಾರು ಮಳೆಯ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ, ಸಾಮಾನ್ಯವಾಗಿ ಮೇ ಮೂರನೇ ವಾರದಲ್ಲಿ ಬಂಗಾಳಕೊಲ್ಲಿಯ ಅಂಡಮಾನ್‌ನಲ್ಲಿ ಮಳೆ ಮಾರುತಗಳು ರೂಪುಗೊಳ್ಳುವ ಆಧಾರದ ಮೇಲೆ ಮತ್ತೊಂದು ಮುನ್ಸೂಚನೆಯನ್ನು ಹವಾಮಾನ ನೀಡಲಿದೆ. ಆಗ ಮುಂಗಾರು ಕುರಿತು ಸ್ಪಷ್ಟಚಿತ್ರಣ ಲಭ್ಯವಾಗಲಿದೆ.
Karnataka rain: ರಾಜ್ಯದ ಎಂಟಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ: 4 ಬಲಿ!
ಸದ್ಯದ ಲಕ್ಷಣಗಳ ಪ್ರಕಾರ ಕೇರಳಕ್ಕೆ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ. ಈ ಬಾರಿ ರಾಜ್ಯದಲ್ಲಿ ವಾಡಿಕೆ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ.
- ಪ್ರಸಾದ್, ತಜ್ಞರು, ಹವಾಮಾನ ಇಲಾಖೆ
15 ಜಿಲ್ಲೆಗಳಲ್ಲಿ ಮುಂಗಾರುಪೂರ್ವ ಮಳೆ ಕೊರತೆ
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಹೆಚ್ಚಾಗಿದೆ. ಆದರೆ, ಕರಾವಳಿಯ ಮೂರು ಜಿಲ್ಲೆಗಳಲ್ಲಿ ಶೇ.50 ರಷ್ಟುಮಳೆ ಕೊರತೆ ಆಗಿದೆ. ಇನ್ನು ಉತ್ತರ ಒಳನಾಡಿನ ಧಾರವಾಡ (-3), ಗದಗ (-20) ಹಾಗೂ ಹಾವೇರಿಯಲ್ಲಿ (-50), ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ (-6), ಚಿಕ್ಕಮಗಳೂರು (-13), ಚಿತ್ರದುರ್ಗ (-23), ದಾವಣಗೆರೆ (-15) ಹಾಗೂ ಕೊಡಗಿನಲ್ಲಿ (-36) ಮಳೆ ಕೊರತೆ ಎದುರಾಗಿದೆ. ಇದರಿಂದ ಈ ಜಿಲ್ಲೆಗಳಲ್ಲಿ ಮುಂಗಾರು ಅವಧಿಯಲ್ಲಿ ಬಿತ್ತನೆಗೆ ತಯಾರಿಯಲ್ಲಿ ಹಿನ್ನಡೆ ಉಂಟಾಗಿದೆ.
ಮುಂಗಾರುಪೂರ್ವ ಮಳೆ ವಿವರ (ಮಾ.1ರಿಂದ ಮೇ15)
ವಲಯ ಮಳೆ ಪ್ರಮಾಣ (ಮಿ.ಮೀ) ಶೇಕಡಾ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ