ಕಳೆದ 2005ರಲ್ಲಿ ಪಾವಗಡದ ಪೊಲೀಸ್ ಕ್ಯಾಂಪ್ ಮೇಲೆ ದಾಳಿ 7 ಪೊಲೀಸರನ್ನು ಕೊಲೆಗೈದಿದ್ದ ಮೋಸ್ಟ್ ವಾಂಟೆಡ್ ಮಾವೋವಾದಿ ನಕ್ಸಲ್ ಶಂಕರ ಈಗ ಬಿಬಿಎಂಪಿ ನೌಕರ.
ತುಮಕೂರು (ಮೇ 22): ಕಳೆದ 2005ರಲ್ಲಿ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿನ ಪೊಲೀಸ್ ಕ್ಯಾಂಪ್ ಮೇಲೆ ಮಾಡಿ ಕರ್ತವ್ಯದಲ್ಲಿದ್ದ 7 ಪೊಲೀಸರನ್ನು ಕೊಂದಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ ಬಿಬಿಎಂಪಿಯಲ್ಲಿ ನೌಕರನಾಗಿದ್ದಾನೆ. ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಮಾಡುವ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಪೊಲೀಸರು ಗುರುತಿಸಿ ಬಂಧಿಸಿದ್ದಾರೆ.
ಹೌದು, 2005 ರಲ್ಲಿ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿ ಪೊಲೀಸ್ ಕ್ಯಾಂಪ್ ಮೇಲೆ ನಕ್ಸಲಿಯರ ದಾಳಿ ಮಾಡಿತ್ತು. ಪೊಲೀಸ್ ಕ್ಯಾಂಪ್ ಮೇಲೆ ಸುಮಾರು 300 ಜನ ಮಾವೊಯಿಸ್ಟ್ ನಕ್ಸಲಿಯರು ದಾಳಿ ಮಾಡಿ ಬಂದೂಕು ಹಾಗೂ ಬಾಂಬ್‌ಗಳನ್ನು ಹಾಕಿ ಕರ್ತವ್ಯದಲ್ಲಿದ್ದ 7 ಮಂದಿ ಪೊಲೀಸರನ್ನ ಕೊಲೆಗೈದಿದ್ದರು. ಜೊತೆಗೆ, ಇದೇ ಘಟನೆಯಲ್ಲಿ 5 ಮಂದಿ ಪೊಲೀಸರು ಗಂಭೀರ ಗಾಯಗೊಂಡಿದ್ದರು. ಅಲ್ಲದೇ ಕ್ಯಾಂಪ್ ಮುಂಭಾಗ ನಿಂತಿದ್ದ ಖಾಸಗಿ ಬಸ್ ಡ್ರೈವರ್ ನನ್ನ ಕೊಲೆ ಮಾಡಿ ರಕ್ತದ ಹೋಳಿಯನ್ನೇ ಹರಿಸಿದ್ದರು. ಪೊಲೀಸ್ ಕ್ಯಾಂಪ್ ಮೇಲೆ ದಾಳಿ ಮಾಡಿದ್ದಲ್ಲದೇ ಕ್ಯಾಂಪ್‌ನಲ್ಲಿದ್ದ ಸರ್ಕಾರದ ಬಂದೂಕುಗಳು ಹಾಗೂ ಗುಂಡುಗಳನ್ನ ದೋಚಿಕೊಂಡು ನಾಪತ್ತೆಯಾಗಿದ್ದರು.
undefined
ಶಕ್ತಿ ಯೋಜನೆಯಡಿ ಫ್ರೀಯಾಗಿ ಬಸ್‌ನಲ್ಲಿ ಹೋಗುವ ಮಹಿಳೆಯರೇ ಎಚ್ಚರ; ದರೋಡೆಗಾಗಿ ಕಾಯ್ತಿದೆ ಜ್ಯೂಸ್ ಗ್ಯಾಂಗ್
ಈ ಪ್ರಕರಣ ಸಂಬಂಧ ಪಾವಗಡ ತಾಲೂಕಿನ ತಿರುಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದರಿ ಪ್ರಕರಣದಲ್ಲಿ 32 ಜನ ಆರೋಪಿಗಳ ಮೇಲೆ ಪಾವಗಡ ಜೆಎಂಎಫ್ ಸಿ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳ ಹುಡುಕಾಟದಲ್ಲಿದ್ದರು. ಇನ್ನು ತುಮಕೂರಿನವರೇ ಆದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಎಲ್ಲ ಹಳೆಯ ಬಾಕಿ ಪ್ರಕರಣಗಳನ್ನು ಇತ್ಯರ್ಥಗೊಳಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ತುಮಕೂರು ಪೊಲೀಸರು ಆರೋಪಿಗಳ ಪತ್ತೆಗೆ ಗಂಭೀರವಾಗಿ ಪ್ರಯತ್ನ ಮಾಡಿದ್ದರು. ತೀವ್ರ ಹುಡುಕಾಟದ ನಂತರ ಕೊತ್ತಗೆರೆ ಶಂಕರನನ್ನು ಬಂಧಿಸಿದ್ದಾರೆ.
ಬಿಬಿಎಂಪಿ ನೌಕರನಾಗಿರುವ ಮೋಸ್ಟ್ ವಾಂಟೆಡ್ ನಕ್ಸಲ್: ಹೌದು, ರಾಜ್ಯದಲ್ಲಿ ಅತ್ಯಂತ ಭೀಕರವಾಗಿ ದಾಳಿ ಮಾಡಿ ಪೊಲೀಸರನ್ನು ಹತ್ಯೆಗೈದು ರಕ್ತದೋಕುಳಿ ಆಡಿದ ಕೊತ್ತಗೆರೆ ಶಂಕರ ಈಗ ಬಿಬಿಎಂಪಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ನೌಕರನಾಗಿದ್ದನು. ಅಂದರೆ, ಬಿಬಿಎಂಪಿಯ ಕಸವನ್ನು ಸಾಗಣೆ ಮಾಡುವ ಲಾರಿಯ ಚಾಲಕನಾಗಿ ಕಾರ್ಯ ನರ್ವಹಿಸುತ್ತಿದ್ದನು. ಕಳೆದ 19 ವರ್ಷಗಳಿಂದ ತಲೆ ಮರೆಸಿಕೊಂಡು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಸವಾಗಿದ್ದನು. ಅದರಲ್ಲಿಯೂ ಬಿಬಿಎಂಪಿ ಕಸದ ಲಾರಿ ನಿಲುಗಡೆ ಸ್ಥಳದ ಪಕ್ಕದ ಏರಿಯಾ ಗೋರಿಪಾಳ್ಯದಲ್ಲಿ ವಾಸವಾಗಿದ್ದು, ಪಾಲಿಕೆಯ ಕೆಲಸ ಮಾಡಿಕೊಂಡಿದ್ದರನು. ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದರೂ ಪೊಲೀಸರ ಭದ್ರಕೋಟೆಯ ನಡುವೆಯೇ ಓಡಾಡಿಕೊಂಡಿದ್ದ ನಕ್ಸಲ್ ಶಂಕರನ ಧೈರ್ಯಕ್ಕೆ ಮೆಚ್ಚಲೇಬೇಕು.
ಮನೆಗೆ ಹೋದ್ರೆ ಪೊಲೀಸ್ ಕರೀತಾರೆ, ಪ್ರಶ್ನೆ ಮಾಡಿದ್ರೆ ಹೊಡೀತಾರೆ: ಸಿಪಿವೈ ವಿರುದ್ದ ಅಸಮಾಧಾನ ಹೊರಹಾಕಿದ ಪುತ್ರಿ ನಿಶಾ!
ನಕ್ಸಲ್ ಶಂಕರ ಬೆಂಗಳೂರಿನಲ್ಲಿ ಬಿಬಿಎಂಪಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಬಗ್ಗೆ ಸುಳಿವು ಪಡೆದುಕೊಂಡ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ನೇತೃತ್ವದ ತಂಡದಿಂದ ಮೂರ್ನಾಲ್ಕು ದಿನ ಪೊಲೀಸರು ಬೀಡು ಬಿಟ್ಟು ಬಂಧನ ಮಾಡಿದ್ದಾರೆ. ಇನ್ನೂ ಹಲವು ನಕ್ಸಲರು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೂ ಪೊಲೀಸರು ಮುಂದಾಗಿದ್ದಾರೆ.