ಶಕ್ತಿ ಯೋಜನೆಯಡಿ ಫ್ರೀಯಾಗಿ ಬಸ್‌ನಲ್ಲಿ ಹೋಗುವ ಮಹಿಳೆಯರೇ ಎಚ್ಚರ; ದರೋಡೆಗಾಗಿ ಕಾಯ್ತಿದೆ ಜ್ಯೂಸ್ ಗ್ಯಾಂಗ್

By Sathish Kumar KH  |  First Published May 22, 2024, 6:56 PM IST

ರಾಜ್ಯದಲ್ಲಿ ಚಾಕಲೇಟ್ ಗ್ಯಾಂಗ್ ನಂತರ ಈಗ ಬೆಳಗಾವಿ- ಹುಬ್ಬಳ್ಳಿ ಮಾರ್ಗದಲ್ಲಿ ಜ್ಯೂಸ್ ಗ್ಯಾಂಗ್ ಫುಲ್ ಆಕ್ಟೀವ್ ಆಗಿದೆ. ಶಕ್ತಿ ಯೋಜನೆಯಡಿ ಉಚಿತವಾಗಿ ಬಸ್‌ನಲ್ಲಿ ಸಂಚರಿಸುವ ಮಹಿಳೆಯರೇ ಎಚ್ಚರವಾಗಿರಿ..


ಬೆಂಗಳೂರು (ಮೇ 22): ಶಕ್ತಿ ಯೋಜನೆಯಡಿ ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸುವ ಮಹಿಳೆಯರೇ ಹಾಗೂ ಪ್ರಯಾಣಿಕರೇ ಎಚ್ಚರ...ಎಚ್ಚರ. ರಾಜ್ಯದಲ್ಲಿ ಚಾಕಲೇಟ್ ಗ್ಯಾಂಗ್ ನಂತರ ಈಗ ಬೆಳಗಾವಿ- ಹುಬ್ಬಳ್ಳಿ ಮಾರ್ಗದಲ್ಲಿ ಜ್ಯೂಸ್ ಗ್ಯಾಂಗ್ ಫುಲ್ ಆಕ್ಟೀವ್ ಆಗಿದೆ. ಬಸ್‌ನಲ್ಲಿ ಪ್ರಯಾಣಿಸುವಾಗ ಜ್ಯೂಸ್ ಕುಡಿಸಿ ಮೈಮೇಲಿನ ಎಲ್ಲ ಚಿನ್ನಾಭರಣ, ಬ್ಯಾಗ್, ಪರ್ಸ್ ಹಾಗೂ ಹಣ ದರೋಡೆ ಮಾಡಲಾಗುತ್ತಿದೆ.

ಹೌದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಬೆಡ್ ಮೇಲೆ ಬಿದ್ದಿರುವ ಈತನ ಹೆಸರು ಸಂಜೀವ ಖೋತ್ ಅಂತಾ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ನಿವಾಸಿ ಆಗಿರುವ ಸಂಜೀವ ಖೋತ್ ಹುಕ್ಕೇರಿಯಲ್ಲಿ ಬುಕ್ ಸ್ಟಾಲ್ ಇಟ್ಟುಕೊಂಡು ಜೀವನ ಮಾಡ್ತಿದ್ದಾರೆ. ಆದರೆ, ಅಂಗಡಿಯಲ್ಲಿ ಅಗತ್ಯ ಬುಕ್ಸ್ ಖಾಲಿ ಆಗಿರುವ ಕಾರಣಕ್ಕೆ ಬುಕ್ ತೆಗೆದುಕೊಳ್ಳಲು ಹುಬ್ಬಳ್ಳಿಗೆ ಹೋಗಿದ್ದರು. ಎದಿನಂತೆ ಬುಕ್ ಖರೀದಿಸಿ ವಾಪಸ್ ಹುಬ್ಬಳ್ಳಿ ಬಸ್ ನಿಲ್ದಾಣದಿಂದ ಸಂಜೆ 7.30ರ ಸುಮಾರಿಗೆ ಬೆಳಗಾವಿ ಬಸ್ ಹತ್ತಿದ್ದಾರೆ. 

Tap to resize

Latest Videos

undefined

ಬೆಂಗಳೂರು ರೇವ್ ಪಾರ್ಟೀಲಿ ಸಿಕ್ಕಿಬಿದ್ದ ಮತ್ತೊಬ್ಬ ನಟಿ; ರಕ್ಷಣೆಗಾಗಿ ಕೈ ಮುಗಿದು ಸಹಾಯ ಕೇಳಿದ ಸುಂದರಿ

ಈ ವೇಳೆ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಅನಾಮಿಕನೊಬ್ಬ ಜ್ಯೂಸ್ ಹಾಗೂ ಬಾಳೆ ಹಣ್ಣನ್ನು ಕೊಟ್ಟಿದ್ದಾರೆ. ಇದನ್ನ ಸೇವಿಸಿದ ನಂತರ ಸಂಜೀವ ಪ್ರಜ್ಞೆ ತಪ್ಪಿದ್ದಾರೆ. ಆಗ ಸಂಜೀವ ಪ್ರಜ್ಞಾಹೀನ ಸ್ಥಿತಿಗೆ ಹೋಗ್ತಿದ್ದಂತೆ ಆತನ ಮೈ ಮೇಲೆ ಇದ್ದ ಬಂಗಾರದ ಚೈನ್, ಕೈ ಗಡಗ, ಪರ್ಸ್ ಹಾಗೂ ಬ್ಯಾಗ್ ಎಗರಿಸಿಕೊಂಡು ಹೋಗಿದ್ದಾರೆ. ಇನ್ನು ಜ್ಯೂಸ್ ಕುಡಿಸಿದ ಗ್ಯಾಂಗ್‌ನಲ್ಲಿ ಒಬ್ಬರು ಇರದೇ ಹಲವರು ಸೇರಿ ಕೃತ್ಯವನ್ನು ಎಸಗಿ ಪರಾರಿ ಆಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಇನ್ನು ಹುಬ್ಬಳ್ಳಿಯಲ್ಲಿ ಬಸ್ ಹತ್ತಿದ ಸಂಜೀವ್ ಬೆಳಗಾವಿ ಬಂದರೂ ಎಚ್ಚರಗೊಳ್ಳದೇ ಪ್ರಜ್ಞಾಹೀನವಾಗಿ ಬಸ್‌ನಲ್ಲಿ ಮಲಗಿದ್ದವರನ್ನು ಅವರ ಸಂಬಂಧಿಕರ ಸಹಾಯದೊಂದಿಗೆ ಸಾರಿಗೆ ಇಲಾಖೆ ಸಿಬ್ಬಂದಿಗಳು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಬೆಳಗಾವಿಯಲ್ಲಿ ಜ್ಯೂಸ್ ಗ್ಯಾಂಗ್​ ಮಾದರಿಯಲ್ಲಿಯೇ ಕಳೆದ ಕೆಲ ತಿಂಗಳ ಹಿಂದೆ ಬೆಳಗಾವಿ-ಗೋವಾ ರೈಲಿನಲ್ಲಿ  ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಚೇರ್ವಾ ಗ್ರಾಮಕ್ಕೆ ಹೊರಟ್ಟಿದ್ದ ಎಂಟು ಜನ ಪ್ರಯಾಣಿಕರಿಗೆ ಚಾಕಲೇಟ್ ತಿನ್ನಿಸಿ ಅವರ ಬಳಿಯಿದ್ದ ಮೊಬೈಲ್​, 50,000 ರೂ. ನಗದು ದೋಚಿ ಪರಾರಿಯಾಗಿದ್ದರು. ಆ ಪ್ರಕರಣ ಮಾಸುವ ಮುನ್ನವೇ ಇದೀಗ ಕೆಎಸ್ ಆರ್ ಟಿಸಿ ಸಾರಿಗೆ ಬಸ್ ಟಾರ್ಗೆಟ್ ಮಾಡಿರುವ ಜ್ಯೂಸ್ ಗ್ಯಾಂಗ್ ಆಕ್ಟೀವ್ ಆಗಿದೆ. ಜ್ಯೂಸ್ ಗ್ಯಾಂಗ್‌ನಿಂದ ಸಂಜೀವ ದರೋಡೆಗೆ ಒಳಗಾದ ಮೊದಲ ವ್ಯಕ್ತಿಯಾಗಿದ್ದಾನೆ. ಇದರಿಂದ ಪ್ರಯಾಣಿಕರಲ್ಲಿ ಮತ್ತಷ್ಟು ಆತಂಕ ಎದುರಾಗಿದೆ. 

ಲೈಂಗಿಕ ಕ್ರಿಯೆ ನಡೆಸಿ ಎರಡು ವರ್ಷ ಆಯ್ತು; ಪತಿ ವಿರುದ್ಧ ಧರಣಿಗೆ ಕುಳಿತ ಎಸ್ಐ ಪತ್ನಿ

ಘಟನೆ ನಡೆದಿದ್ದಾದರೂ ಹೇಗೆ? 
ಹುಬ್ಬಳ್ಳಿಗೆ ಹೋಗಿದ್ದ ಸಂಜೀವ ಮತ್ತು ಆತನ ಸ್ನೇಹಿತ ಇಬ್ಬರೂ ಬೆಳಗಾವಿಗೆ ಬರಲು ಬಸ್ ಹತ್ತಿ ಕೂತಿದ್ದಾರೆ. ಅವರ ಪಕ್ಕದಲ್ಲಿ ಕುಳಿತಿದ್ದ ಸಹ ಪ್ರಯಾಣಿಕ ಸಂಜೀವನನ್ನು ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಸಲುಗೆ ಬೆಳೆಸಿ ಇಬ್ಬರಿಗೂ ಬಾಳೆ ಹಣ್ಣು ಹಾಗೂ ಜ್ಯೂಸ್ ಕೊಟ್ಟಿದ್ದಾನೆ. ಇದನ್ನು ಸೇವಿಸಿದ ಇಬ್ಬರು ಪ್ರಜ್ಞೆ ತಪ್ಪಿದ್ದಾರೆ. ಇಬ್ಬರ ಬಳಿಯಿರುವ ಹಣ ನಗನಾಣ್ಯ ದೋಚಿ ಪರಾರಿ ಆಗಿದ್ದಾರೆ. ಸಂಜೀವನನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆ ‌ದಾಖಲಿಸಿದರೆ, ಮತ್ತೊಬ್ಬ ಪ್ರಯಾಣಿಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಹೀಗಾಗಿ ಬಸ್ ಅಥವಾ ರೈಲಿನಲ್ಲಿ ಅಪರಿಚಿತರಿಂದ ಆಹಾರ ಪದಾರ್ಥ ಸೇವಿಸುವ ಮುನ್ನ ಸಾರ್ವಜನಿಕ ಪ್ರಯಾಣಿಕರು ಎಚ್ಚರಿಕೆ ವಹಿಸಬೇಕಿದೆ. ಎಷ್ಟೇ ಜಾಗೃತಿ‌ ಮೂಡಿಸಿದ್ರೂ ಇಂತಹ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿದ್ದು, ಸಾರ್ವಜನಿಕರು ಹಾಗೂ ಪ್ರಯಾಣಿಕರು ಅಪರಿಚಿತ ವ್ಯಕ್ತಿಗಳಿಂದ ಆಹಾರ ಸೇವಿಸುವ ಮುನ್ನ ನೂರು ಸಾರಿ ಯೋಚನೆ ಮಾಡಬೇಕಿದೆ.

click me!