ತುರ್ತು ಸೇವೆ 108 ಆ್ಯಂಬುಲೆನ್ಸ್, 104 ಆರೋಗ್ಯ ಸಹಾಯವಾಣಿ ಕಮಾಂಡ್ ಸೆಂಟರ್ ತಾತ್ಕಾಲಿಕ ಸ್ಥಗಿತ

Published : Jun 26, 2026, 08:55 AM IST
Ambulance

ಸಾರಾಂಶ

ನಿನ್ನೆ ರಾತ್ರಿಯಿಂದ ತುರ್ತು ಸೇವೆಗಳ ಸಹಾಯವಾಣಿ ಸ್ಥಗಿತಗೊಂಡಿದೆ. ಆ್ಯಂಬುಲೆನ್ಸ್ (108), ಆರೋಗ್ಯ ಸಹಾಯವಾಣಿ (104) ಎರಡೂ ಸೇವೆಗಳು ವ್ಯತ್ಯಯವಾಗಿದೆ. ಆರೋಗ್ಯ ಇಲಾಖೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದು, ಸಾರ್ವಜನಿಕರಿಗೆ ಮಾಹಿತಿ ನೀಡಿದೆ.

ಬೆಂಗಳೂರು (ಜೂ.26) ರಾಜ್ಯದಲ್ಲಿ ಆರೋಗ್ಯ ಇಲಾಖೆಯ ಕೆಲ ತುರ್ತು ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಪ್ರಮುಖವಾಗಿ ಆ್ಯಂಬುಲೆನ್ಸ್ ಸೇವೆ (108), ಆರೋಗ್ಯ ಸಹಾಯವಾಣಿ (104) ಸೇವಾ ಕೇಂದ್ರಗಳ ಕಮಾಂಡ್ ಸೆಂಟರ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ನಿನ್ನೆ (ಜೂ.25) ರಾತ್ರಿಯಿಂದ ಸೇವೆಗಳಲ್ಲಿ ವ್ಯತ್ಯಯವಾಗಿದೆ. ಕರ್ನಾಟಕದ ಡೇಟಾ ಸೆಂಟರ್‌ನಲ್ಲಿ ವಿದ್ಯುತ್ ನಿರ್ವಹಣ ಕಾರ್ಯದ ಹಿನ್ನಲೆಯಲ್ಲಿ ಸೇವೆಗಳು ತಾತ್ಕಾಲಿಕವಿ ಸ್ಥಗಿತಗೊಂಡಿದೆ. ಪರಿಣಾಮ ಸರ್ವರ್ ಸಂಪರ್ಕ ಕಡಿತಗೊಂಡಿದೆ.

ಸಿಡ್ಯಾಕ್ ಅಬಿವೃದ್ಧಿಪಡಿಸಿದ ತಂತ್ರಜ್ಞಾನ ಬಳಕೆ

ಕರ್ನಾಟಕದಲ್ಲಿನ ಆರೋಗ್ಯ ಇಲಾಖೆ ತುರ್ತು ಸೇವಾ ವಿಭಾಗದ ಡೇಟಾ ಹಾಗೂ ಸರ್ವರ್ ಕೇಂದ್ರಗಳಲ್ಲಿ ತಿರುವಂತಪುರಂ ಸಿಡ್ಯಾಕ್ ಅಭಿವೃದ್ಧಿಪಡಸಿದ ತಂತ್ರಜ್ಞಾನವನ್ನು ಬಳಸಲಾಗಿದೆ. ದುರಸ್ತಿ ಹಿನ್ನಲೆಯಲ್ಲಿ ಸರ್ವರ್ ಸಂಪೂರ್ಣ ಸ್ಥಗಿತಗೊಂಡಿದೆ. ಹೀಗಾಗಿ ಸೇವೆಗಳು ಅಲಭ್ಯವಾಗಿದೆ. ಸರ್ವರ್ ಸಂಪರ್ಕ ಕಡಿತಗೊಂಡಿದ್ದು, ಶೀಘ್ರದಲ್ಲೇ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದ್ದು ಸೇವೆಗಳು ಲಭ್ಯವಾಗಲಿದೆ.

ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆ

ಸರ್ವರ್ ದುರಸ್ತಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಆರೋಗ್ಯ ಇಲಾಖೆ‌ ಮುನ್ನೆಚ್ಚರಿಕೆ ವಹಿಸಿದೆ. ಕರೆ ಸ್ವೀಕರಿಸಲು ಪರ್ಯಾಯ ಕಂಟ್ರೋಲ್ ರೂಂ ತೆರೆಯಲಾಗಿದೆ. ಸಾರ್ವಜನಿಕರು ಎಂದಿನಂತೆ ತುರ್ತು ಸೇವೆಗೆ 108 ಉಚಿತ ಸಂಖ್ಯೆಗೆ ಕರೆ ಮಾಡಬಹುದು ಎಂದು ಆರೋಗ್ಯ ಇಲಾಖೆಯಿಂದ ಸ್ಪಷ್ಟನೆ ನೀಡಿದೆ.

ಆರೋಗ್ಯ ಇಲಾಖೆ ಸಹಾಯವಾಣಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ. ರಾಜ್ಯದ ಮೂಲೆ ಮೂಲೆಗಳಿಂದ ಬರುವ ಕರೆಗೆ ಸ್ಪಂದಿಸಿ ರೋಗಿಗಳಿಗೆ ಸೇವೆ ನೀಡುತ್ತದೆ. ಈ ಮೂಲಕ ಕರ್ನಾಟಕದಲ್ಲಿ ತುರ್ತು ಸೇವೆಗಳು ಸೂಕ್ತ ಸಮಯಕ್ಕೆ ಲಭ್ಯವಾಗುವಂತೆ ಮಾಡುವಲ್ಲಿ ತುರ್ತು ಸೇವೆಗಳು ಯಶಸ್ವಿಯಾಗಿದೆ. ಇದೀಗ ತುರ್ತು ಸಹಾಯವಾಣಿ ಕರೆ ಹಾಗೂ ಕನೆಕ್ಟ್ ಮತ್ತಷ್ಟು ಸುಲಭವಾಗಿಸಲು ಹೊಸ ತಂತ್ರಜ್ಞಾನಗಳ ಅಭಿವೃದ್ಧಿಪಡಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಸ್ತೆ ಅಪಘಾತದಲ್ಲಿ ಮೃತನ 2ನೇ ಪತ್ನಿಗೂ ಸಮಾನ ಪರಿಹಾರ ಕೊಡಬೇಕು: ಹೈಕೋರ್ಟ್ ಮಹತ್ವದ ಆದೇಶ
ಪದೇ ಪದೇ ಕೈಕೊಡುತ್ತಿದೆ ನಮ್ಮ ಮೆಟ್ರೋ, ಮೂರು ವರ್ಷದಲ್ಲಿ 21 ಬಾರಿ ಎಡವಟ್ಟಿಗೆ ಬೇಸತ್ತ ಪ್ರಯಾಣಿಕರು