ಅಮೇರಿಕಾದಲ್ಲಿ ಕನ್ನಡಿಗರ ಕಲರವ: ಕಾರ್ನೆಗೀ ಡ್ಯಾನ್ಸ್ ಫೆಸ್ಟಿವಲ್‌ನಲ್ಲಿ ಶಾಸ್ತ್ರೀಯ ನೃತ್ಯ ಪ್ರದರ್ಶನ

By Sathish Kumar KH  |  First Published Jul 6, 2023, 10:53 PM IST

ನ್ಯೂಯಾರ್ಕ್ ನ ಪೌರಾಣಿಕ ಕಾರ್ನೆಗೀ ಹಾಲ್ ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಡ್ಯಾನ್ಸ್ ಫೆಸ್ಟಿವಲ್ ನಲ್ಲಿ ಬೆಂಗಳೂರಿನ ರಶ್ಮಿ ಶಶಿ ಅವರ 30 ವಿಧ್ಯಾರ್ಥಿಗಳ ನೃತ್ಯ ಕಲಾರಸಿಕರ ಮನ ಸೆಳೆಯಿತು.


ವರದಿ- ವಿದ್ಯಾಶ್ರೀ ಏಷ್ಯಾನೆಟ್ ಸುವರ್ಣನ್ಯೂಸ್ 

ಬೆಂಗಳೂರು (ಜು.06): ನ್ಯೂಯಾರ್ಕ್ ನ ಪೌರಾಣಿಕ ಕಾರ್ನೆಗೀ ಹಾಲ್ ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಡ್ಯಾನ್ಸ್ ಫೆಸ್ಟಿವಲ್ ನಲ್ಲಿ ಬೆಂಗಳೂರಿನ ರಶ್ಮಿ ಶಶಿ ಅವರ 30 ವಿಧ್ಯಾರ್ಥಿಗಳ ನೃತ್ಯ ಕಲಾರಸಿಕರ ಮನ ಸೆಳೆಯಿತು. ಡ್ಯಾನ್ಸ್ ಫೆಸ್ಟಿವಲ್ ನಲ್ಲಿ 10 ಆಯ್ದ ನೃತ್ಯ ಶಾಲೆಗಳು ಪಾಲ್ಗೊಂಡಿದ್ದು, ಬೆಂಗಳೂರು ಮೂಲದ ಗುರು ರಶ್ಮಿಯವರ ತಂಡ ಭಾರತೀಯ ಶಾಸ್ತ್ರೀಯ ನೃತ್ಯವನ್ನ ಪ್ರದರ್ಶಿಸಿತು.‌

Tap to resize

Latest Videos

ಅಮೇರಿಕಾದ ಪ್ರಸಿದ್ಧ ಫೆಸ್ಟಿವಲ್ ನಲ್ಲಿ ಒಂದಾಗಿರುವ ನ್ಯೂಯಾರ್ಕ್ ಕಾರ್ನೆಗೀ ಡ್ಯಾನ್ಸ್  ಫೆಸ್ಟಿವಲ್ ಗೆ ಪ್ರಪಂಚದಾದ್ಯಂತ ಅತ್ಯತ್ತಮ ಕಲಾವಿದರನ್ನ ಆಯೋಜಿಸಲಾಗಿತ್ತು.‌ ಫೆಸ್ಟಿವಲ್ ಗೆ ಉತ್ತರ ಅಮೆರಿಕದಾದ್ಯಂತ ಕೇವಲ ಹತ್ತು ಪ್ರತಿಷ್ಠಿತ ನೃತ್ಯ ಶಾಲೆಗಳನ್ನು ಆಯ್ಕೆಯಾಗಿದ್ದವು. ಈ ಪೌರಾಣಿಕ ವಿಶ್ವ ವೇದಿಕೆಯಲ್ಲಿ ಗುರು ರಶ್ಮಿ ಅವರ ವಿಧ್ಯಾರ್ಥಿಗಳ ತಂಡ ಭಾರತದ ಪರಂಪರೆಯ ಸಾಸ್ತ್ರೀಯ ನೃತ್ಯವನ್ನ ಪ್ರದರ್ಶಿಸುವುದರೊಂದಿಗೆ ದೇಶದ ಗೌರವ ಹೆಚ್ಚಿಸಿದರು. 

ಶಕ್ತಿ ಯೋಜನೆ: ಬುರ್ಖಾ ಧರಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಿದ ಪುರುಷ

ಅಮೇರಿಕ ಅಕ್ಕ ಸಮ್ಮೇಳನದಲ್ಲೂ ನೃತ್ಯ ಪ್ರದರ್ಶನ: ಟೆಕ್ಸಾಸ್‌ ಲ್ಯಾಂಡ್‌ನಲ್ಲಿರುವ ಸ್ಟುಡಿಯೋ ಮುದ್ರಾ ಸ್ಕೂಲ್ ಆಫ್ ಡ್ಯಾನ್ಸ್‌ನ ಕಲಾತ್ಮಕ ನಿರ್ದೇಶಕರಾಗಿರುವ ಗುರು ರಶ್ಮಿ ಶಶಿಯವರು ಬೆಂಗಳೂರಿನವರು. ಭರತನಾಟ್ಯ, ಜಾನಪದ ಮತ್ತು ಭಾರತದ ಇತರ ಸಮಕಾಲೀನ ನೃತ್ಯಗಳ ಕಲಾಕ್ಷೇತ್ರ ಶೈಲಿಯನ್ನು ಕಲಿಸುವಲ್ಲಿ ಗುರು ರಶ್ಮಿ ಪರಿಣತಿ ಹೊಂದಿದ್ದಾರೆ. ಈ ಹಿಂದೆ ಗುರು ರಶ್ಮಿ ಮತ್ತು ಅವರ ವಿದ್ಯಾರ್ಥಿಗಳ ತಂಡ USA ಯಲ್ಲಿ ಅಕ್ಕ ಮತ್ತು ನಾವಿಕದಂತಹ ಪ್ರಮುಖ ಕನ್ನಡ ಸಮಾವೇಶಗಳಲ್ಲಿ ಪ್ರದರ್ಶನ ನೀಡಿದೆ.

ಅಮೇರಿಕಾದಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಚಾರ:  2002 ರಲ್ಲಿ ಸೌತ್ ಫ್ಲೋರಿಡಾದಲ್ಲಿ ಸಿರಿ ನೃತ್ಯ ಸ್ಕೂಲ್ ಆಫ್ ಡ್ಯಾನ್ಸ್ ಮತ್ತು 2011 ರಲ್ಲಿ ಹೂಸ್ಟನ್ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಸ್ಟುಡಿಯೋ ಮುದ್ರಾ ಸ್ಕೂಲ್ ಆಫ್ ಡ್ಯಾನ್ಸ್ ಅನ್ನು ಪ್ರಾರಂಭಿಸುವ ಮೂಲಕ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಯುವ ಪೀಳಿಗೆಗೆ ಭಾರತೀಯ ಶಾಸ್ತ್ರೀಯ ನೃತ್ಯವನ್ನು ಪ್ರಚಾರ ಮಾಡುವ ಕಾರ್ಯದಲ್ಲಿ ತೊಡಗಿದ್ದರು. 

Bengaluru: ಕರ್ತವ್ಯನಿರತ ಟ್ರಾಫಿಕ್‌ ಎಎಸ್‌ಐ ಹೃದಯಾಘಾತಕ್ಕೆ ಬಲಿ

ಹಲವು ಪುರಸ್ಕಾರಗಳು ಮುಡಿಗೆ: ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಅಮೇರಿಕಾ ಮತ್ತು ಭಾರತದಾದ್ಯಂತ ಹಲವಾರು ನೃತ್ಯ ಪ್ರದರ್ಶನಗಳನ್ನು ಪ್ರದರ್ಶಿಸಿದ್ದಾರೆ. ದಶಾವತಾರ, ರಾಮಾಯಣ, ಮಾಯಾ - ಸಮಕಾಲೀನ ನೃತ್ಯ ನಾಟಕ, ಪುಣ್ಯಕೋಟಿ, ರಘುವೀರ ಮತ್ತು ನಾರಿ ಪ್ರದರ್ಶನಗಳು ಗುರುತಿಸಲ್ಪಟ್ಟಿವೆ. ಪ್ರಮುಖ ಕಾರ್ಯಕ್ರಮಗಳಲ್ಲಿ ಅವರ ಅಭಿನಯಕ್ಕಾಗಿ ಹಲವು ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು  ತಮ್ಮದಾಗಿಸಿಕೊಂಡಿದ್ದಾರೆ.

click me!