ಬಿಜೆಪಿ ಹಗರಣಗಳು, 40% ಕಮಿಷನ್ ಬಗ್ಗೆ ನ್ಯಾಯಾಂಗ ತನಿಖೆಗೆ ಮುಂದಾದ ಸರ್ಕಾರ!

By Sathish Kumar KH  |  First Published Jul 6, 2023, 8:21 PM IST

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಎಲ್ಲ ಹಗರಣಗಳು ಹಾಗೂ ಎಲ್ಲ ಗುತ್ತಿಗೆ ಕಾಮಗಾರಿಗಳಲ್ಲಿ ಶೇ.40 ಪರ್ಸೆಂಟ್‌ ಕಮಿಷನ್‌ ಪಡೆದ ಬಗ್ಗೆ ನ್ಯಾಯಾಂಗ ತನಿಖೆ ಮಾಡಲು ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ.


ಬೆಂಗಳೂರು (ಜು.06): ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಎಲ್ಲ ಹಗರಣಗಳು ಹಾಗೂ ಎಲ್ಲ ಗುತ್ತಿಗೆ ಕಾಮಗಾರಿಗಳಲ್ಲಿ ಶೇ.40 ಪರ್ಸೆಂಟ್‌ ಕಮಿಷನ್‌ ಪಡೆದ ಬಗ್ಗೆ ನ್ಯಾಯಾಂಗ ತನಿಖೆ ಮಾಡಲು ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ಸಮಿತಿಯನ್ನು ಕೂಡ ರಚನೆ ಮಾಡಲಾಗುತ್ತಿದೆ.

ಕೊನೆಗೂ ಬಿಜೆಪಿ ವಿರುದ್ಧ ಕಾಂಗ್ರೆಸ್​ನಿಂದ ತನಿಖಾಸ್ತ್ರ ಪ್ರಯೋಗ ಮಾಡಲು ಮುಂದಾಗಿದೆ. ನ್ಯಾಯಾಂಗ ತನಿಖೆ ಮಾಡಿಸಲು ಮುಂದಾದ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದು, ಇದರ ಪೂರ್ಣ ವಿವರ ಇಲ್ಲಿದೆ. ಬಿಟ್​ ಕಾಯಿನ್ ವಿರುದ್ಧ ಎಸ್​ಐಟಿ ತನಿಖೆಗೆ ಆದೇಶ ಬೆನ್ನಲ್ಲೇ ಶೇ.40 ಪರ್ಸೆಂಟ್ ಕಮಿಷನ್ ಆರೋಪದ ಬಗ್ಗೆ ತನಿಖೆಗೆ ನಿರ್ಧಾರ ಮಾಡಲಾಗಿದೆ. ಹೈಕೋರ್ಟ್​ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಮಾಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

Latest Videos

undefined

ಶಕ್ತಿ ಯೋಜನೆ: ಬುರ್ಖಾ ಧರಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಿದ ಪುರುಷ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಿಂದ ನ್ಯಾಯಾಂಗ ತನಿಖೆಗೆ ನೀಡಲು ಸಿದ್ಧತೆ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರದಲ್ಲಿ ನಡೆದ ಎಲ್ಲ ಹಗರಣಗಳ ಪರಿಪೂರ್ಣ ತನಿಖೆಗಾಗಿ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಯನ್ನು ಸರ್ಕಾರದಿಂದ ಹುಡುಕಲಾಗುತ್ತಿದೆ. ನಿವೃತ್ತ ಹೈಕೋರ್ಟ್ ಜಡ್ಜ್ ಖಚಿತವಾಗ್ತಿದ್ದಂತೆ ಸರ್ಕಾರದಿಂದ ನ್ಯಾಯಾಂಗ ತನಿಖೆಗೆ ಆದೇಶ ಹೊರಬೀಳಲಿದೆ. ಬಿಜೆಪಿ ಸರ್ಕಾರದ ಶೇ.40 ಪರ್ಸೆಂಟ್‌ ಕಮಿಷನ್, ಪೇ ಸಿಎಂ ಆರೋಪದ ಬಗ್ಗೆ ಸರ್ಕಾರ ತನಿಖೆ ಮಾಡಲಿದೆ. 

ನೀರಾವರಿ ಅಕ್ರಮಗಳ ಬಗ್ಗೆ ತನಿಖೆ..? : ಬಿಜೆಪಿ ಸರ್ಕಾರದ ಕಾಲದಲ್ಲಾದ ನೀರಾವರಿ ಯೋಜನೆಗಳ ಬಗ್ಗೆ ತನಿಖೆ ಮಾಡಲು ಕೂಡ ತೀರ್ಮಾನಿಸಿದೆ. ನೀರಾವರಿ ಯೋಜನೆಗಳಲ್ಲಿ ಭಾರೀ ಅಕ್ರಮ ನಡೆದಿರೋ ಆರೋಪ ಕೇಳಿಬಂದಿದೆ. ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಗಳಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಸಾವಿರಾರು ಕೋಟಿ ಮೊತ್ತದ ಯೋಜನೆಗಳಲ್ಲಿ ಭಾರೀ ಕಮಿಷನ್ ಆರೋಪವಿದ್ದು, ಈ 2 ಯೋಜನೆಗಳ ತನಿಖೆ ಮಾಡಿಸಲು ಮುಂದಾದ ಸಿದ್ದು ಸರ್ಕಾರ ಮುಂದಾಗಿದೆ. ಅಗತ್ಯ ಬಿದ್ದರೆ ಎಸ್​ಐಟಿ ರಚಿಸಿ ತನಿಖೆ ಮಾಡಿಸಲು ಸರ್ಕಾರ ಸಿದ್ದತೆ ಮಾಡಲಾಗಿದೆ. 

'ಸೆಕ್ಯುಲರ್ ಅಂತಾ ಹೇಳಿ ದೇವೇಗೌಡರ ಕುತ್ತಿಗೆ ಕುಯ್ದವರು ನೀವು..' ಸಿದ್ಧುಗೆ ಎಚ್‌ಡಿಕೆ ವಾಗ್ಭಾಣ!

ಏನಿದು ಶೇ. 40 ಪರ್ಸೆಂಟ್‌​ ಕಮಿಷನ್?:  ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರು ಬಿಜೆಪಿ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದರು. ಪ್ರಧಾನಿ ಮೋದಿ ಕಚೇರಿಗೂ ಈ ಬಗ್ಗೆ ಪತ್ರ ಬರೆದಿದ್ದರು. ‘ನೀರಾವರಿ ಹಾಗೂ ಇತರ ಇಲಾಖೆ ಕಾಮಗಾರಿಯಲ್ಲಿ ಕಮಿಷನ್’ ಪಡೆಯಲಾಗುತ್ತಿದೆ. ಬಿಲ್ ಪಾಸ್ ಮಾಡಲು ಶೇ.40 ಕಮಿಷನ್ ಕೇಳ್ತಿದ್ದಾರೆಂದು ಆರೋಪ ಮಾಡಿದ್ದರು. ಆದರೆ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಕ್ಕೆ ದಾಖಲೆ ಕೊಟ್ಟಿರಲಿಲ್ಲ. ಚುನಾವಣೆಯಲ್ಲಿ ಶೇ.40 ಆರೋಪದ ಲಾಭ ಪಡೆದಿದ್ದ ಕಾಂಗ್ರೆಸ್ ಬಿಜೆಪಿ ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಪೇಸಿಎಂ ಅಭಿಯಾನ ಮಾಡಿ ಅಧಿಕಾರಕ್ಕೂ ಬಂದಿದೆ.

click me!