ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಸರಾ ಮಾದರಿ ‘ಪೊಲೀಸ್‌ ಬ್ಯಾಂಡ್‌’ ಮೆರುಗು

By Kannadaprabha News  |  First Published Dec 16, 2024, 6:59 AM IST

ಮಂಡ್ಯದಲ್ಲಿ ಆಯೋಜಿಸಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಿ.22ರಂದು ಸಂಜೆ 6ಕ್ಕೆ ಇದೇ ಮೊದಲ ಬಾರಿಗೆ ಪೊಲೀಸ್ ಬ್ಯಾಂಡ್ ಮೇಳೈಸಲಿದ್ದು, ಇದು ಪ್ರಮುಖ ಆಕರ್ಷಣೆಯಾಗಲಿದೆ. ಮೈಸೂರು ದಸರಾದಲ್ಲಿ ಪೊಲೀಸ್ ಬ್ಯಾಂಡ್ ನೋಡಲು ಜನ ಕಾತರದಿಂದ ಕಾಯುತ್ತಿರುತ್ತಾರೆ.


ಮಂಡ್ಯ (ಡಿ.16): ಮಂಡ್ಯದಲ್ಲಿ ಆಯೋಜಿಸಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಿ.22ರಂದು ಸಂಜೆ 6ಕ್ಕೆ ಇದೇ ಮೊದಲ ಬಾರಿಗೆ ಪೊಲೀಸ್ ಬ್ಯಾಂಡ್ ಮೇಳೈಸಲಿದ್ದು, ಇದು ಪ್ರಮುಖ ಆಕರ್ಷಣೆಯಾಗಲಿದೆ. ಮೈಸೂರು ದಸರಾದಲ್ಲಿ ಪೊಲೀಸ್ ಬ್ಯಾಂಡ್ ನೋಡಲು ಜನ ಕಾತರದಿಂದ ಕಾಯುತ್ತಿರುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಮನವಿ ಮೇರೆಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಇಂತಹ ಸದವಕಾಶ ಜಿಲ್ಲೆ ಜನರಿಗೆ ಕಲ್ಪಿಸಿಕೊಟ್ಟಿದ್ದಾರೆ. ಕನ್ನಡ ಪ್ರೇಮಿಗಳಿಗೆ ಹಾಗೂ ಸಾಹಿತ್ಯಾಸಕ್ತರಿಗೆ ನುಡಿಹಬ್ಬದ ಸವಿಯ ಜೊತೆಗೆ ಕರುನಾಡು ಮತ್ತು ಹೊರನಾಡಿನ ಕಲೆ, ಕಲಾಪ್ರಕಾರಗಳನ್ನು ಪ್ರದರ್ಶಿಸಲು ಸಾಂಸ್ಕೃತಿಕ ಸಮಿತಿ ವೇದಿಕೆ ಸಿದ್ಧಪಡಿಸಿದೆ. ನಾನಾ ಬಗೆಯ ಕಲೆ, ಕಲಾಪ್ರಕಾರಗಳನ್ನು ನಾಡಿನ ಜನತೆ ಎದುರು ಪ್ರದರ್ಶಿಸಲು ರಾಜ್ಯ ಹೊರರಾಜ್ಯಗಳಿಂದ ಕಲಾವಿದರು, ಕಲಾ ತಂಡಗಳು ಮಂಡ್ಯಕ್ಕೆ ಆಗಮಿಸಲಿವೆ.

201 ತಂಡಗಳ ಆಯ್ಕೆ: ಸಾಹಿತ್ಯ ಸಮ್ಮೇಳನದಲ್ಲಿ ನಾಡಿನ ಕಲೆ ಪ್ರದರ್ಶಿಸಲು ಅರ್ಜಿ ಆಹ್ವಾನಿಸಲಾಗಿತ್ತು. ಆನ್‌ಲೈನ್, ಆಫ್‌ಲೈನ್ ಮೂಲಕ ಸಾಕಷ್ಟು ಪ್ರಚಾರ ಮಾಡಿ ಅರ್ಜಿ ಸ್ವೀಕರಿಸಲಾಗಿದೆ. ರಾಜ್ಯಾದ್ಯಂತ ಬಂದಂತಹ 620 ಅರ್ಜಿಗಳಲ್ಲಿ 201 ತಂಡಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮುಖ್ಯ ವೇದಿಕೆ ಹಾಗೂ ಸಮಾನಂತರ ವೇದಿಕೆ ಸೇರಿ ಮೂರು ವೇದಿಕೆಗಳಲ್ಲಿ ಕಾರ್ಯಕ್ರಮಗಳು ಬೆಳಗ್ಗೆ 8ರಿಂದ 10ರವರೆಗೆ ಸಂಜೆ 7ರಿಂದ 10.30ರವರೆಗೆ ಮೂರು ದಿನ ನಡೆಯಲಿವೆ.

Tap to resize

Latest Videos

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ವಿಶೇಷ ರಥ!

ಕಲಾವಿದರಿಗೆ ಹೆಚ್ಚುವರಿ ಗೌರವಧನ: ಗೌರವಧನದಲ್ಲಿ ತಾರತಮ್ಯಕ್ಕೆ ಆಸ್ಪದ ನೀಡದೇ ಎಲ್ಲಾ ಕಲಾವಿದರನ್ನು ಸಮಾನ ರೀತಿಯಲ್ಲಿ ಗೌರವಿಸಲಾಗುತ್ತಿದೆ. ಸ್ಥಳೀಯ ಕಲಾ ತಂಡಗಳ ಗೌರವಧನ ಪರಿಷ್ಕರಣೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿ ಗೌರವಧನ ಕಲಾವಿದರಿಗೆ ನೀಡಲಾಗುತ್ತಿದೆ. ಕನಿಷ್ಠ ₹20 ಸಾವಿರದಿಂದ ಗರಿಷ್ಠ ₹40,000 ಗೌರವಧನ ನೀಡಲಾಗುತ್ತಿದೆ. ಕಲಾವಿದರು ನೀಡುವ ಪ್ರದರ್ಶನ ಮತ್ತು ಅವರು ಬರುವ ಸ್ಥಳದ ದೂರದ ಮೇಲೆ ಗೌರವಧನ ನಿರ್ಧರಿಸಲಾಗುತ್ತಿದೆ.

undefined

ಜಿಎಸ್‌ಟಿ ಇಲ್ಲ: ಕಲಾಪ್ರಕಾರದಲ್ಲಿ ಜಿಲ್ಲೆ ಮಹಿಳೆಯರು, ಅಂಗವಿಕಲರು, ಮಕ್ಕಳು, ಹಿರಿಯರು ಎಲ್ಲರನ್ನೂ ಸಹ ಗಣನೆಗೆ ತೆಗೆದುಕೊಳ್ಳಲಾಗಿದೆ. ಕಲಾವಿದರಿಗೆ ನೀಡಲಾಗುವ ಗೌರವಧನದಲ್ಲಿ ಜಿಎಸ್‌ಟಿ ಕಡಿತ ಮಾಡುವುದಿಲ್ಲ. ಜಿಎಸ್‌ಟಿ ಕನ್ನಡ ಸಂಸ್ಕೃತಿ ಇಲಾಖೆಯೇ ಭರಿಸಲಿದೆ. ಮೈಸೂರು ವಿಭಾಗಕ್ಕೆ ಶೇಕಡ 50 ಹಾಗೂ ಇತರ ಜಿಲ್ಲೆಗೆ ಶೇಕಡ 50 ಕಾರ್ಯಕ್ರಮ ನಿಗದಿಪಡಿಸಲಾಗಿದೆ. ಬೇರೆ ರಾಜ್ಯದ 5 ಕಲಾ ಪ್ರಕಾರಗಳು, ಹೊರ ಜಿಲ್ಲೆಯಿಂದ 33 ಹಾಗೂ ಮಂಡ್ಯ ಜಿಲ್ಲೆಯಿಂದ 109 ಕಲಾ ತಂಡಗಳು ಭಾಗಿಯಾಗಲಿವೆ. ಮೂಡಲಪಾಯ, ಯಕ್ಷಗಾನ, ಬುಡಕಟ್ಟು ಸಮುದಾಯ ನೃತ್ಯಗಳು, ನಾಡಿನ ಹೆಸರಾಂತ ಜನಪದ ಕಲಾ ಪ್ರದರ್ಶನಗಳು, ಸುಗಮ ಸಂಗೀತ ಇನ್ನಿತರ ಕಲಾ ಪ್ರದರ್ಶನಗಳು ನಡೆಯಲಿವೆ.

ಬೆಂಗಳೂರಲ್ಲಿ ಮತ್ತೊಂದು ‘ಎಲೆಕ್ಟ್ರಾನಿಕ್‌ ಸಿಟಿ’ಗೆ ಸಿದ್ಧತೆ: 1000 ಎಕರೆಯಲ್ಲಿ ‘ಸ್ವಿಫ್ಟ್‌ ಸಿಟಿ’ ನಿರ್ಮಾಣ

ಕಲಾ ತಂಡಗಳಿಗೆ ಸಮಾನ ಪ್ರಾತಿನಿಧ್ಯ: ಮಂಡ್ಯ ಜಿಲ್ಲೆ ಹಾಗೂ ಗಡಿ ಜಿಲ್ಲೆಗಳಿಗೆ ಶೇ.50, ಇತರೆ ಜಿಲ್ಲೆಯ ಕಲಾವಿದರಿಗೆ ಶೇ.50ರಷ್ಟು ಪ್ರಾಧಾನ್ಯತೆ ನೀಡಲಾಗಿದೆ. ಮುಖ್ಯ ವೇದಿಕೆ ಮತ್ತು ಸಮಾನಾಂತರ ವೇದಿಕೆಗಳಲ್ಲಿ ರಾಜ್ಯ ಮಟ್ಟದ ಕಲಾವಿದರು ಕಾರ್ಯಕ್ರಮ‌ ನಡೆಸಿಕೊಡಲಿದ್ದಾರೆ. ಇದರಲ್ಲಿ ಮಂಡ್ಯ ಮೂಲದವರು ಕೂಡ ಇರಬಹುದು. ಬಹುಮುಖ್ಯವಾಗಿ ಮಂಡ್ಯ ಜಿಲ್ಲೆಯ ಕಲಾವಿದರಿಗೆಂದೇ ಕಲಾಮಂದಿರ ಮತ್ತು ಅಂಬೇಡ್ಕರ್ ಭವನದಲ್ಲಿ ಮೂರು ದಿನ ನಿರಂತರವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅನುಭವ, ಜನಪ್ರಿಯತೆ, ಅರ್ಹತೆ, ವಿಶೇಷತೆ, ಶೈಕ್ಷಣಿಕ ಪದವಿಗಳು, ಪಡೆದಿರುವ ಪ್ರಶಸ್ತಿಗಳು ಇತ್ಯಾದಿಗಳನ್ನು ಪರಿಗಣಿಸಿ ಕಲಾವಿದರ ಆಯ್ಕೆಗೆ ಕ್ರಮವಹಿಸಲಾಗಿದೆ. ಅವರ ವಾಸ್ತವ್ಯಕ್ಕೆ ಮಂಡ್ಯ ವಿಶ್ವವಿದ್ಯಾಲಯ ಹಾಗೂ ಬಿಜಿಎಸ್ ಸಮುದಾಯ ಭವನ ಕಾಯ್ದಿರಿಸಲಾಗಿದೆ. ಕಲಾವಿದರು ತಂಗುವ ಸ್ಥಳದಿಂದ ಕಾರ್ಯಕ್ರಮದ ಸ್ಥಳಕ್ಕೆ ತೆರಳಲು ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

click me!