
ಬೆಂಗಳೂರು (ನ.1): ನಗರದ ಕಂಠೀರವ ಕ್ರೀಡಾಂಗಣದಲ್ಲಿ ಇಂದು (ನವೆಂಬರ್ 1) ನಡೆಯಲಿರುವ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ(Kannada rajyotsav) ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ಗಣ್ಯರು ಆಗಮಿಸುವ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತಮುತ್ತ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಕೆಲ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ.
ಇದನ್ನೂ ಓದಿ: ಪ್ರತಿಯೊಬ್ಬ ಕನ್ನಡಿಗನೂ ಇದನ್ನ ಓದಲೇಬೇಕು: ರಾಜಧಾನಿಯಲ್ಲೇ ಅಲ್ಪಸಂಖ್ಯಾತರಾಗುವತ್ತ ಕನ್ನಡಿಗರು!
ನೃಪತುಂಗ ರಸ್ತೆ ಹಾಗೂ ಎನ್.ಆರ್ ರಸ್ತೆಯಿಂದ ಪೊಲೀಸ್ ಕಾರ್ನರ್-ಎಚ್.ಎಲ್.ಡಿಯಿಂದ ಕೆಬಿ ರಸ್ತೆ, ಎಚ್.ಎಲ್.ಡಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಹಡ್ಸನ್ ಜಂಕ್ಷನ್-ದೇವಾಂಗ್ ಜಂಕ್ಷನ್-ಎಡ ತಿರುವು-ಮಿಷನ್ ರಸ್ತೆ ಮೇಲ್ಸೇತುವೆ ಮೂಲಕ ರೆಸಿಡೆನ್ಸಿ ರಸ್ತೆ ಮೂಲಕ ಸಂಚರಿಸುವುದು. ಕೆ.ಎಚ್ ರಸ್ತೆಯಿಂದ ಶಾಂತಿನಗರ- ರಿಚ್ಮಂಡ್ ಸರ್ಕಲ್, ಆರ್.ಆರ್.ಎಂ.ಆರ್ ರಸ್ತೆಯ ಮೂಲಕ ಮೆಜೆಸ್ಟಿಕ್ ಕಡೆಗೆ ಸಂಚರಿಸುವ ಎಲ್ಲ ರೀತಿಯ ವಾಹನಗಳು ಶಾಂತಿನಗರ ಜಂಕ್ಷನ್ ಬಳಿ ಎಡತಿರುವು ಪಡೆದು ಸುಬ್ಬಯ್ಯ ಸರ್ಕಲ್- ಪೂರ್ಣಿಮಾ ಜಂಕ್ಷನ್ ಬಳಿ ಬಲ ತಿರುವು ಪಡೆದು ಶಿವಾಜಿ ಜಂಕ್ಷನ್ ಎನ್ಆರ್ ರಸ್ತೆಯ ಮೂಲಕ ಸಂಚರಿಸುವುದು.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ: ಇಂದು 'HMT ಕನ್ನಡಿಗ’ ಸರಣಿಯಲ್ಲಿ 4 ಹೊಸ ವಾಚ್ ಬಿಡುಗಡೆ! ಬೆಲೆ ಎಷ್ಟು, ಖರೀಸೋದು ಹೇಗೆ?
ವಾಹನ ನಿಲುಗಡೆ ನಿಷೇಧ ರಸ್ತೆಗಳು
ನೃಪತುಂಗ ರಸ್ತೆ, ಕಸ್ತೂರಬಾ ರಸ್ತೆ, ಕೆಂಪೇಗೌಡ ರಸ್ತೆ, ಆರ್‌ಆರ್‌ಎಂಆರ್ ರಸ್ತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ