ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022 ವಿಧಾನಸಭೆಯಲ್ಲಿ ಮಂಡನೆ ಮಾಡಲಾಗಿದೆ. ಕನ್ನಡದಲ್ಲೂ ಉದ್ಯೋಗ ಪ್ರೋರ್ಟಲ್ ತೆರೆಯಲು ಮತ್ತು ಕನ್ನಡ ಭಾಷೆಯನ್ನು ಕಲಿಸುವುದು ಈ ವಿಧೇಯಕದ ಪ್ರಮುಖ ಉದ್ದೇಶವಾಗಿದೆ.
ಬೆಂಗಳೂರು (ಸೆ.22): ನ್ಯಾಯಮೂರ್ತಿ ಎಸ್ ಆರ್ ಬನ್ನೂರಮಠ ನೇತೃತ್ವದ ಕರ್ನಾಟಕ ಕಾನೂನು ಆಯೋಗ ಸಿದ್ದಪಡಿಸಿದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022 ವಿಧಾನಸಭೆಯಲ್ಲಿ ಮಂಡನೆ ಮಾಡಲಾಗಿದೆ. ಕನ್ನಡದಲ್ಲೂ ಉದ್ಯೋಗ ಪ್ರೋರ್ಟಲ್ ತೆರೆಯಲು ಮತ್ತು ಕನ್ನಡ ಭಾಷೆಯ ಯಾರಿಗೆ ಬರೋದಿಲ್ವೋ ಅವರಿಗೆ ಕನ್ನಡ ಕಲಿಕಾ ಘಟಕ ಸ್ಥಾಪಸಿ ಕನ್ನಡ ಭಾಷೆ ಪರಿಚಯಿಸಲು ತೀರ್ಮಾನಿಸಲಾಗಿದೆ. ಕನ್ನಡ ಭಾಷೆ ಕಾಯ್ದೆ ಅನುಷ್ಠಾನ ಮಾಡದಿದ್ದರೆ ಮೇಲ್ವಿಚಾರಣೆಗೆ ಅಧಿಕಾರ ಉಲ್ಲಂಘನೆಗಾಗಿ ದಂಡವನ್ನು ವಿಧಿಸಲು ಅವಕಾಶ ಇದೆ. ಕರ್ನಾಟಕ ಕಾನೂನು ಆಯೋಗ ಸಿದ್ದಪಡಿಸಿದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022 ಕರುಡನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಈ ಹಿಂದೆ ಸಲ್ಲಿಸಲಾಗಿತ್ತು. ಇನ್ನು ಇದರ ಜೊತೆಗೆ ವಿಧಾನಸಭೆಯಲ್ಲಿ ಪ್ರೌಢ ಶಿಕ್ಷಣ ಮಂಡಳಿ ತಿದ್ದುಪಡಿ ವಿಧೇಯಕ ಮಂಡನೆ ಮಾಡಿದ್ದು, ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ಪದವಿ ಪೂರ್ವ ಪರೀಕ್ಷಾ ಮಂಡಳಿ ವಿಲೀನಕ್ಕೆ ಅವಕಾಶ ಮಾಡಿ ಕೊಡುವ ವಿಧೇಯಕ ಇದಾಗಿದೆ. ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕ ಮಂಡನೆ. ಒಂದೇ ವಿಷಯದ ಶಿಕ್ಷಕರು ಪರಸ್ಪರ ವರ್ಗಾವಣೆಗೆ ಅವಕಾಶ ಕೊಡುವ ವಿಧೇಯಕವಾಗಿದೆ.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕದಲ್ಲಿರುವ ಮುಖ್ಯಾಂಶಗಳು ಇಂತಿದೆ:
ಮತಾಂತರ ನಿಷೇಧ ಮಸೂದೆ ಅಂಗೀಕಾರ, ರಾಜ್ಯಪಾಲರ ಅಂಕಿತ ಒಂದೇ ಬಾಕಿ!
ಮೊದಲನೇ ಸಾರಿ ತಪ್ಪು ಮಾಡಿದ್ರೆ 5 ಸಾವಿರ
ಎರಡನೇ ಸಾರಿ ತಪ್ಪು ಮಾಡಿದ್ರೆ 10 ಸಾವಿರ
ಮೂರನೇ ಸಾರಿ ತಪ್ಪು ಮಾಡಿದ್ರೆ 20 ಸಾವಿರ ದಂಡ
1-12 ಕ್ಲಾಸಲ್ಲಿ ಕನ್ನಡ ಕಲಿಕೆ ಕಡ್ಡಾಯಕ್ಕೆ ಶಿಫಾರಸು
ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ 2022 ವಿಧೇಯಕ ಮಂಡನೆ: ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ 2022 ವಿಧೇಯಕ ಮಂಡನೆಯಾಗಿದ್ದು, And ಇರುವ ಜಾಗದಲ್ಲಿ or ಅಂತ ಬಳಸಲು ನಿರ್ಧಾರ ಮಾಡಲಾಗಿದೆ. ಚಾರಿಟಬಲ್ ಟ್ರಸ್ಟ್ ಮಾಡುವವರಿಗೆ ಅನುಕೂಲವಾಗುವಂತೆ ಈ ಕಾಯ್ದೆ ಮಂಡನೆಯಾಗಿದ್ದು, ಹೊಸ ತಿದ್ದುಪಡಿಯೊಂದಿಗೆ ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ವಿಧೇಯಕ ಮಂಡನೆಯಾಗಿದೆ.
ಭೂ ಕಬಳಿಕೆ ಕೇಸ್ ವಾಪಸ್ ಪಡೆಯುವ ಉದ್ದೇಶವಿರುವ ವಿಧೇಯಕ: ಸರ್ಕಾರಿ ಭೂಮಿಯಲ್ಲಿ ಕೃಷಿಗಾಗಿ ಬಳಕೆ ಮಾಡಿದ ರೈತರಿಗೆ ಸಮಸ್ಯೆ ಆಗುತ್ತಿತ್ತು. ಈ ಹಿನ್ನಲೆಯಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ( ತಿದ್ದುಪಡಿ) ವಿಧೇಯಕ ಮಂಡನೆಯಾಗಿದೆ. ವಿಧೇಯಕಕ್ಕೆ ನಿನ್ನೆ ಸದನದಲ್ಲಿ ವಿರೋಧ ವ್ಯಕ್ತವಾಗಿತ್ತು. ಶಾಸಕ ಎಟಿ ರಾಮಸ್ವಾಮಿ ಹಾಗೂ ಗೂಳಿಹಟ್ಟಿ ಶೇಖರ್ ವಿರೋಧ ವ್ಯಕ್ತಪಡಿಸಿದ್ದರು. ಕಾಯ್ದೆ ಭೂಗಳ್ಳರಿಗೆ ಅನುಕೂಲ ಆಗುವ ಸಾಧ್ಯತೆ ಇದೆ ಎಂದು ವಿರೋಧಿಸಿದ್ದರು. ಈ ಹಿನ್ನಲೆಯಲ್ಲಿ ಕೆಲವೊಂದು ತಿದ್ದುಪಡಿಯೊಂದಿಗೆ ಇಂದು ಅಂಗೀಕಾರ ಮಾಡಲಾಗಿದೆ.