
ದಾವಣಗೆರೆ (ಜುಲೈ.27): ಭರತ್ ಕಾಲೋನಿಯಲ್ಲಿ ಹಿಂದೂ ಮಹಾಸಭಾ ಸೇವಾ ಸಮಿತಿಯಿಂದ ಆಯೋಜಿತ ದೇಹಧಾರ್ಡ್ಯ ಸ್ಪರ್ಧೆಯ ವೇದಿಕೆಯಲ್ಲಿ ನಟ ಪ್ರಥಮ್ ಮತ್ತು ರಕ್ಷಕ್ ಬುಲೆಟ್ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ರಕ್ಷಕ್ ಬುಲೆಟ್ ವಿರುದ್ಧದ ಆರೋಪಗಳು, ಪ್ರಥಮ್‌ನ ಜೀವ ಬೆದರಿಕೆ ಆರೋಪಗಳು ಈ ಕಾರ್ಯಕ್ರಮದಲ್ಲಿ ತೀವ್ರ ಚರ್ಚೆಗೆ ಕಾರಣವಾದವು.
ನಮ್ಮಪ್ಪ ದೊಡ್ಡ ಕಲಾವಿದ, ಹೆಸರು ಉಳಿಸೊಕೆ ಬಂದಿರೋನು ನಾನು: ರಕ್ಷಕ್ ಬುಲೆಟ್
ರಕ್ಷಕ್ ಬುಲೆಟ್ ವಿರುದ್ಧ ಸಾಲು ಸಾಲು ಆರೋಪ ಹಿನ್ನೆಲೆ ಈ ಬಗ್ಗೆ ನೇರವಾಗಿ ಮಾತನಾಡಿದ ರಕ್ಷಕ್ ಬುಲೆಟ್ ಆರೋಪ ಮಾಡೋರಿಗೆ 'ಯಾವ ದೇವಸ್ತಾನದಲ್ಲಿ ಕಾರ್ಯಕ್ರಮದಲ್ಲಿ ಘಟನೆ ನಡೆಯಿತೋ ಅಲ್ಲಿಗೇ ಆಣೆ ಪ್ರಮಾಣಕ್ಕೆ ಬನ್ನಿ ಅಂತಾ ಸವಾಲು ಹಾಕಿದರು. 'ಸುಪಾರಿ' ಎಂಬ ಪದ ಹೇಳಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರಕ್ಷಕ್ ಬುಲೆಟ್, 'ನನಗೆ ಹೊಡೆಸೋದು ರೌಡಿಸಮ್ ಮಾಡೋದು ಗೊತ್ತಿಲ್ಲ. ನಾನು ಕಲಾವಿದರ ಕುಟುಂಬದಿಂದ ಬಂದವನು, ನಮ್ಮಪ್ಪ ದೊಡ್ಡ ಕಲಾವಿದ. ಅವರ ಹೆಸರು ಉಳಿಸೋಕೆ ಬಂದಿರೋನು. ಯಾವುದೋ ಒಂದು ಜಗಳ ಆಯಿತು ಅಂದ್ರೆ ಬಿಡಿಸೋಕೆ ಬರಲ್ಲ ಅಂತ ಬೇಜಾರ ಆಗ್ತಾರೆ ನಮ್ಮ ಮನೆಯವರು ಅಂತದ್ರಲ್ಲಿ ನಮ್ಮ ಮನೆಯವರನ್ನೇ ಕರೆಸಿ ಧಮಕಿ ಹಾಕಿಸ್ತೀನಿ ಅನ್ನೋದೆಲ್ಲ ಸುಳ್ಳು. ಅಲ್ಲಿ ದೊಡ್ಡ ಮಟ್ಟದ ಗಲಾಟೆ ನಡೆಯೋದಿತ್ತು ಚಿಕ್ಕದ್ರಲ್ಲಿ ನಾವು ತಪ್ಪಿಸಿಕೊಂಡು ಆಚೆ ಬಂದಿದ್ದೇವೆ. ನಾನು ಯಾವುದೇ ರೌಡಿ ಶೀಟರ್ ಕರೆಸಿದೇ ಆರೋಪಿಸಿರೋದು ಅನ್ನೋದು ಸುಳ್ಳು ಎಂದರು.
ನಾನು ಪ್ರಥಮಣ್ಣ ಇಬ್ಬರೂ ಚನ್ನಾಗಿದ್ದೀವಿ, ಮುಂದೆನೂ ಚನ್ನಾಗಿರ್ತೀವಿ. ನಮ್ಮಿಬ್ಬರ ಜಗಳದಲ್ಲಿ ಮೂರನೇ ಅವರು ಬೇಳೆ ಬೇಯಿಸಿಕೊಳ್ಳಬಹುದು. ನಾವು ಇಬ್ಬರು ಚೆನ್ನಾಗಿ ಇದೀವಿ, ಚೆನ್ನಾಗಿಯೇ ಇರ್ತೀವಿ ಎಂದರು. ಈ ವೇಳೆ ಪಕ್ಕದಲ್ಲೇ ಕುಳಿತಿದ್ದ ಪ್ರಥಮ್ ಬುಲೆಟ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಥಮ್ ಹೇಳಿದ್ದೇನು?
ಘಟನೆ ನಡೆದಾಗ ತುಂಬಾ ಜನ ದೊಡ್ಡವರು ಫೋನ್ ಮಾಡಿದ್ರು. ಮೂರು ದಿನ ವಿಷಯ ಹೊರಬರಬಾರದು ಅಂತಾ ಪ್ಲ್ಯಾನ್ ಮಾಡಿದ್ದೆ. ಆದ್ರೆ ವಕೀಲ ಜಗದೀಶ್ ಲೈವ್ ಮಾಡಿದ, ಆಯಪ್ಪನ ಬಾಯಿ ಮುಚ್ಚಿಸೋಕೆ ಆಗುತ್ತಾ? ರಾಜ್ಯ ಸರ್ಕಾರದ ದೊಡ್ಡ ಹುದ್ದೆಯಲ್ಲಿ ಇದ್ದವರು ಫೋನ್ ಮಾಡಿದ್ರು. ಇಂತಹ ಗೂಂಡಾಗಿರಿ ಖಂಡಿಸಿದರು. ರಕ್ಷಕ್ ನಾನು ಇಬ್ಬರೂ ಕ್ಲಿಯರ್ ಮಾಡಿಕೊಳ್ಳುತ್ತೀವಿ ನಮ್ಮ ಇಬ್ಬರ ನಡುವೆ ವೈಯಕ್ತಿಕ ದ್ವೇಷ ಇಲ್ಲ ಎಂದ ಪ್ರಥಮ್.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ಜಾಮೀನು ರದ್ದಾಗುವ ಆತಂಕದ ನಡುವೆ, ಪ್ರಥಮ್‌ನ ಈ ಆರೋಪಗಳು ಚಾಲೆಂಜಿಂಗ್ ಸ್ಟಾರ್‌ಗೆ ಹೊಸ ಸವಾಲು ಒಡ್ಡಿವೆ. ಕಳೆದ ಎರಡು ದಿನಗಳಿಂದ ಪ್ರಥಮ್ ಮತ್ತು ವಕೀಲ ಜಗದೀಶ್‌ನ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು, ಈ ವಿವಾದಕ್ಕೆ ಹೆಚ್ಚಿನ ಗಮನ ಸೆಳೆದಿದೆ.
ಪ್ರಥಮ್‌ನಿಂದ ಸೌಹಾರ್ದತೆಯ ಮಾತು: ನನ್ನ ಮತ್ತು ರಕ್ಷಕ್‌ನ ನಡುವೆ ವೈಯಕ್ತಿಕ ದ್ವೇಷವಿಲ್ಲ. ರಕ್ಷಕ್ ನನ್ನ ಸ್ವೀಟ್ ಬ್ರದರ್. ಸಿನಿಮಾ ರಂಗದ ರಾಜಕೀಯವು ದೊಡ್ಡದಾಗಿದೆ. ದರ್ಶನ್‌ನ ಸ್ಟಾರ್‌ಡಮ್‌ಗೆ ಖುಷಿಯಿದೆ, ಆದರೆ ಗೂಂಡಾಗಿರಿಯನ್ನು ಸಹಿಸುವುದಿಲ್ಲ ಎಂದು ಪ್ರಥಮ್ ಹೇಳಿದ್ದಾರೆ. ಈ ವಿವಾದದ ಮುಂದಿನ ಹೆಜ್ಜೆ ಏನು? ದರ್ಶನ್ ಜಾಮೀನು ವಿಚಾರ ಮತ್ತು ಪ್ರಥಮ್‌ನ ಆರೋಪಗಳು ಸಿನಿಮಾ ರಂಗದಲ್ಲಿ ಮುಂದೆ ಯಾವ ರೀತಿ ತಿರುಪಡೆಯುತ್ತವೋ ಕಾದು ನೋಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ