ಕಲಬುರಗಿ: ಓಪಿಡಿ ರಿಜಿಸ್ಟರ್ ಬುಕ್‌ಲ್ಲಿ 'ಪೂಜಿಸಲೆಂದೇ ಹೂಗಳ ತಂದೆ..' ಫುಲ್ ಹಾಡು ಕಂಡು ಲೋಕಾಯುಕ್ತ ಎಸ್‌ಪಿ ಶಾಕ್!

Published : Jul 16, 2025, 06:15 PM IST
Kalaburagi news

ಸಾರಾಂಶ

ಜೇವರ್ಗಿ ತಾಲೂಕು ಆಸ್ಪತ್ರೆಯ ಓಪಿಡಿ ರಿಜಿಸ್ಟರ್‌ನಲ್ಲಿ ರೋಗಿಗಳ ವಿವರಗಳ ಬದಲಿಗೆ ಸಿನಿಮಾ ಹಾಡು ಬರೆದಿರುವುದು ಬೆಳಕಿಗೆ ಬಂದಿದೆ. ಲೋಕಾಯುಕ್ತ ಎಸ್ಪಿ ಭೇಟಿ ವೇಳೆ ಈ ಲೋಪ ಬಯಲಾಗಿದ್ದು, ಆಸ್ಪತ್ರೆಯ ಆಡಳಿತದ ನಿರ್ಲಕ್ಷ್ಯಕ್ಕೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಲಬುರಗಿ (ಜುಲೈ.16): ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕು ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಆಸ್ಪತ್ರೆಯ ಹೊರ ರೋಗಿಗಳ ವಿಭಾಗದ (ಓಪಿಡಿ) ದಾಖಲಾತಿ ಪುಸ್ತಕದಲ್ಲಿ ರೋಗಿಗಳ ವಿವರಗಳ ಬದಲಿಗೆ 'ಎರಡು ಕನಸು' ಚಲನಚಿತ್ರದ 'ಪೂಜಿಸಲೆಂದೇ ಹೂಗಳ ತಂದೆ..' ಎಂಬ ಸಿನಿಮಾ ಹಾಡನ್ನು ಸಿಬ್ಬಂದಿಯೊಬ್ಬರು ಬರೆದಿರುವ ಗಂಭೀರ ಲೋಪ ಬಯಲಾಗಿದೆ.

ರಿಜಿಸ್ಟ್ರಾರ್ ಬುಕ್‌ನಲ್ಲಿ ಹಾಡು ಕಂಡು ಲೋಕಾಯುಕ್ತ ಆಫೀಸರ್ ಶಾಕ್:

ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಅವರು ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಹೊರ ರೋಗಿಗಳ ವಿಭಾಗದ ರಿಜಿಸ್ಟ್ರಾರ್ ಪರಿಶೀಲನೆ ವೇಳೆ ಹಾಡು ಬರೆದಿರುವುದು ಕಂಡು ಶಾಕ್ ಲೋಕಾಯುಕ್ತ ಎಸ್‌ಪಿ ಶಾಕ್‌ ಆಗಿದ್ದಾರೆ. 'ಪೂಜಿಸಲೆಂದೇ ಹೂಗಳ ತಂದೆ ದರುಶನ ಕೋರಿ ನಾ ನಿಂದೇ ತೆರೆಯೋ ಬಾಗಿಲನು ರಾಮ.. ಮೋಡದಮೇಲೆ ಚಿನ್ನದ ನೀರು ಚೆಲ್ಲುತ ಸಾಗಿದೆ ಹೊನ್ನಿನ ತೇರು ಮಾಣಿಕ್ಯದಾರತಿ ಉಷೆತಂದಿಹಳು ತಾಮಸವೇಕಿನ್ನು ಸ್ವಾಮಿ, ತೆರೆಯೋ ಬಾಗಿಲನು, ರಾಮ...' ಅಂತಾ ಇಡೀ ಹಾಡನ್ನು ಬರೆದಿರುವ ತಾಲೂಕು ಆಸ್ಪತ್ರೆ ಸಿಬ್ಬಂದಿ. ಸಿಬ್ಬಂದಿಯ ಈ ಕೃತ್ಯಕ್ಕೆ ಗರಂ ಆದ ಎಸ್‌ಪಿ ಅವರು "ಇದು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಕ್ಷೇತ್ರದ ಆಸ್ಪತ್ರೆನಾ? ಎಂದು ಪ್ರಶ್ನಿಸಿದ್ದಾರೆ. ಆಸ್ಪತ್ರೆಯ ಆಡಳಿತದ ನಿರ್ಲಕ್ಷ್ಯ ಮತ್ತು ಸಿಬ್ಬಂದಿಯ ಬೇಜವಾಬ್ದಾರಿತನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲ:

ಕಲಬುರಗಿಯ ಆರೋಗ್ಯ ಮತ್ತು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಈ ಘಟನೆ ಮತ್ತೊಂದು ಸಾಕ್ಷಿಯಾಗಿದೆ. ಇತ್ತೀಚೆಗಷ್ಟೇ ಜಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ತೀವ್ರ ರಕ್ತಸ್ರಾವವಾಗಿ ರೋಗಿಯೊಬ್ಬರು ಮೃತಪಟ್ಟ ಘಟನೆ ಜನರ ಮನಸ್ಸಿನಲ್ಲಿ ಇನ್ನೂ ಮಾಸಿರುವಾಗಲೇ, ಈ ಹೊಸ ಘಟನೆ ಸಾರ್ವಜನಿಕರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ಕಲಬುರಗಿಯಲ್ಲಿ ಕೊಲೆ, ಸುಲಿಗೆ, ದೌರ್ಜನ್ಯ, ದರೋಡೆ, ಡ್ರಗ್ಸ್ ಕಳ್ಳಸಾಗಣೆಯಂತಹ ಘಟನೆಗಳ ಜೊತೆಗೆ ಆಸ್ಪತ್ರೆಗಳಲ್ಲಿನ ಈ ರೀತಿಯ ಅವ್ಯವಸ್ಥೆಗಳು ಜನರಲ್ಲಿ ಆಡಳಿತದ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ಆಡಳಿತವು ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್
ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ! ಏನಿದು ಪ್ರಕರಣ?