ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಎಲ್. ನಾರಾಯಣಸ್ವಾಮಿ ನೇಮಕ

By Sathish Kumar KHFirst Published Nov 27, 2023, 6:46 PM IST
Highlights

ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಮುಖ್ಯಸ್ಥರನ್ನಾಗಿ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.

ಬೆಂಗಳೂರು (ನ.27): ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಮುಖ್ಯಸ್ಥರನ್ನಾಗಿ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಿ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ. 

ರಾಜ್ಯ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರಾಗಿ ನಿವೃತ್ತ ಮುಖ್ಯನ್ಯಾಯಾಧೀಶರಾದ ಎಲ್.ನಾರಾಯಣ್ ಸ್ವಾಮಿ ನೇಮಕವಾಗಿದ್ದಾರೆ. ಇನ್ನು ಆಯೋಗದ ಸದಸ್ಯರಾಗಿ ನಿವೃತ್ತ ಜಡ್ಜ್ ಎಸ್.ಕೆ‌.ಒಂಟಿಗೋಡಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಶ್ಯಾಮ್ ಭಟ್ ಅವರನ್ನು ನೇಮಕ ಮಾಡಿ ರಾಜ್ಯಪಾಲ ಥಾರಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ. ಹಿಮಾಚಲ ಪ್ರದೇಶ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಾದೇಶರಾಗಿದ್ದ ಎಲ್.ನಾರಾಯಾಣ್ ಸ್ವಾಮಿ ಅವರು ಈಗ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರಾಗಿ ಆಯ್ಕೆ ಆಗಿದ್ದಾರೆ.

Latest Videos

ಬೆಂಗಳೂರಲ್ಲಿ ಮನೆ ಭೋಗ್ಯಕ್ಕೆ ಪಡೆಯೋ ಮುನ್ನ ಎಚ್ಚರ: ಮಾಲೀಕರ ವಂಚನೆ ಕೇಳಿ ಸಿಎಂ ಸಿದ್ದರಾಮಯ್ಯ ತಬ್ಬಿಬ್ಬು!

ಕೆಲದಿನಗಳ ಹಿಂದೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಮುಖ್ಯಸ್ಥರೇ ಇಲ್ಲ ಎಂದು ವರದಿಯನ್ನು ಬಿತ್ತರಿಸಿತ್ತು. ವರದಿ ಬಳಿಕ ಎಚ್ಚೆತ್ತುಕೊಂಡಿದ್ದ ರಾಜ್ಯ ಸರ್ಕಾರ ಕೆಲವು ಹೆಸರುಗಳನ್ನು ಶಿಫಾರಸ್ಸು ಮಾಡಿತ್ತು. ಸರ್ಕಾರದ ಶಿಫಾರಸು ಪರಿಶೀಲನೆ ಮಾಡಿದ ರಾಜ್ಯಪಾಲರು ಇಂದು ಮಾನವ ಹಕ್ಕುಘಲ ಆಯೋಗದ ಮುಖ್ಯಸ್ಥರರು ಹಾಗೂ ಸದಸ್ಯರನ್ನು ನೇಮಕ ಮಾಡಿ ಆದೇಶವನ್ನು ಹೊರಡಿಸಿದ್ದಾರೆ.

ಕೊರೊನಾ ಮಾದರಿಯಲ್ಲೇ ಮತ್ತೊಂದು ಮಾರಕ ಚೀನಾ ವೈರಸ್ ಪತ್ತೆ: ದಿಢೀರ್ ತಜ್ಞರ ಸಭೆ ಕರೆದ ಸರ್ಕಾರ

ಕಳೆದ ಎಂಟು ತಿಂಗಳಿನಿಂದಲೂ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ಹುದ್ದೆ ಖಾಲಿ ಇತ್ತು. ಸುಮಾರು 4,800ಕ್ಕೂ ಅಧಿಕ ಪ್ರಕರಣಗಳು ತನಿಖೆಯಾಗದೆ ಹಾಗೆಯೇ ಉಳಿದಿತ್ತು. ಈಗ ಚೇರ್ಮನ್ ಹಾಗೂ ಸದಸ್ಯರ ಆಯ್ಕೆಯಿಂದ ಎಲ್ಲ ಪ್ರಕರಣಗಳನ್ನು ತನಿಖೆಗೆ ಒಳಪಡಿಸುವ ಸಾಧ್ಯತೆ ಹೆಚ್ಚಾಗಿದೆ. ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳಿಗೂ ಈಗ ಶಕ್ತಿ ಬಂದಂತಾಗಿದೆ. ನಾಳೆಯಿಂದಲೇ ಹಲವು ವರ್ಷಗಳಿಂದ ಪೆಂಡಿಂಗ್ ಇದ್ದ ಪ್ರಕರಣಗಳ ತನಿಖೆ ಆರಂಭ ಆಗೋ ಸಾಧ್ಯತೆಯಿದೆ.

click me!