ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವಧಿ ಮುಕ್ತಾಯ: ಕಲಬುರಗಿ ಆಸ್ಪತ್ರೆ ಉದ್ಘಾಟಿಸೋ ಆಸೆಗೆ ತಣ್ಣೀರು?

By Sathish Kumar KH  |  First Published Jan 24, 2024, 1:07 PM IST

ರಾಜ್ಯದ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರ ಅವಧಿ ಜ.31ಕ್ಕೆ ಮುಕ್ತಾಯ ಆಗುತ್ತಿದೆ.


ಬೆಂಗಳೂರು (ಜ.24): ರಾಜ್ಯದ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರ ಅವಧಿ ಜ.31ಕ್ಕೆ ಮುಕ್ತಾಯ ಆಗುತ್ತಿದ್ದು, ಯಾವುದೇ ಮಾಹಿತಿ ನೀಡದೇ ಹೊಸ ನಿರ್ದೇಶಕರ ಆಯ್ಕೆಗೆ ಸರ್ಕಾರ ಮುಂದಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಬಡಜನರ ಆಶಾಕಿರಣ ಹಾಗೂ ಬಡ ಹೃದ್ರೋಗಿಗಳ ಜೀವ ಸಲೆಯಾದ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರ ಅವಧಿ ಜ.31ಕ್ಕೆ ಮುಕ್ತಾಯವಾಗಲಿದ್ದು, ಅವರನ್ನು ಬಿಡುಗಡೆ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ. ಈಗಾಗಲೇ ಹೊಸ ನಿರ್ದೇಶಕರ ಆಯ್ಕೆಗೆ ಸರ್ಕಾರ ನೋಟಿಫಿಕೇಷನ್ ಹೊರಡಿಸಿದ್ದು, ಕಲಬುರ್ಗಿಯಲ್ಲಿ ನಿರ್ಮಾಣ ಮಾಡುತ್ತಿರುವ ಜಯದೇವ ಹೃದ್ರೋಗ ಆಸ್ಪತ್ರೆ ಉದ್ಘಾಟನೆಗೂ ಮುನ್ನ ಅವರನ್ನು ನಿರ್ದೇಶಕ ಹುದ್ದೆಯಿಂದ ತೆಗೆದು ಹಾಕುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tap to resize

Latest Videos

undefined

ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ತಪ್ಪಿಸಲು ಮುಂದಾದ ಕೆಎಎಸ್‌ ಅಧಿಕಾರಿಯದ್ದೇ ತಪ್ಪು: ಸಿಎಂ ಸಿದ್ದರಾಮಯ್ಯ!

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಸಿ.ಎನ್. ಮಂಜುನಾಥ್ ಅವರು, ಜಯದೇವ ಆಸ್ಪತ್ರೆಯ ಆಡಳಿತ ಮಂಡಳಿಯ ನಿರ್ಧಾರದಂತೆ ಜನವರಿ 31ಕ್ಕೆ ನನ್ನ ಜವಬ್ದಾರಿ ಮುಗಿಯುತ್ತದೆ. ಕಳೆದ 16 ವರ್ಷಗಳಿಂದ ನಾನು ನಿರ್ದೇಶಕ ನಾಗಿ ಕರ್ತವ್ಯ ನಿರ್ವಹಿಸಿದ್ದೇವೆ. ಶೇ.500 ರಷ್ಟು ಅಭಿವೃದ್ಧಿ ನನ್ನ ಅವಧಿಯಲ್ಲಿ ನಡೆದಿದೆ. 300 ಹಾಸಿಗೆ ಇದ್ದ ಆಸ್ಪತ್ರೆ ನನ್ನ ಅವಧಿಯಲ್ಲಿ ಈಗ 2,000 ಹಾಸಿಗೆಯಾಗಿದೆ. ದಕ್ಷಿಣ ಏಷ್ಯಾದಲ್ಲಿ ಅತಿ ದೊಡ್ಡ ಹೃದ್ರೋಗ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪಂಚತಾರಾ ಖಾಸಗಿ ಆಸ್ಪತ್ರೆ ಆಗಬೇಕೆಂದು ಕನಸ್ಸು ಕಂಡಿದ್ದೆ, ಅದು ನನಸಾಗಿದೆ. ಇಲ್ಲಿ ಬಡಜನರು ಮಾತ್ರವಲ್ಲದೇ ಶ್ರೀಮಂತರಿಗೆ ಚಿಕಿತ್ಸೆ ಸಿಗಬೇಕೆಂದು ನನ್ನ ಕನಸ್ಸು ನನಸಾಗಿದೆ ಎಂದರು.

ಈವರೆಗೆ ಜಯದೇವ ಆಸ್ಪತ್ರೆಯಲ್ಲಿ 75 ಲಕ್ಷ ಓಪಿಡಿ ನಡೆಸಿದ್ದೇವೆ. ಈವರೆಗೆ 8 ಲಕ್ಷ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಕಳೆದ‌ ಮೇ ತಿಂಗಳಲ್ಲಿ ಕೇಂದ್ರೀಯ ಸಂಸದೀಯ ಸಂಸ್ಥೆ ಭೇಟಿ ಕೊಟ್ಟ ಸಂದರ್ಭದಲ್ಲಿ ಇಲ್ಲಿನ ಚಿಕಿತ್ಸೆಯನ್ನು ಕಂಡು ದೇಶದ ಎಲ್ಲಾ ಸರ್ಕಾರಿ ಆಸ್ಪತ್ರೆಗೆ ಜಯದೇವ ಆಸ್ಪತ್ರೆ ಮಾದರಿ ಅಂದಿತ್ತು. ಜಯದೇವ ಹೃದ್ರೋಗ ಸಂಸ್ಥೆ ಮೈಸೂರು 2010 ರಲ್ಲಿ ಆಸ್ಪತ್ರೆ ನಿರ್ಮಾಣಗೊಂಡಿದೆ. ಬೆಂಗಳೂರು ಮಧ್ಯಭಾಗ ಮಲ್ಲೇಶ್ಚರದಲ್ಲೂ ಸ್ಯಾಟಲೈಟ್ ಸೆಂಟರ್ ತೆರೆದಿದ್ದೇವೆ. ಇಎಸ್ಐ ಆಸ್ಪತ್ರೆಯಲ್ಲೂ ಶಾಖೆ ತೆರೆದಿದ್ದೇವೆ. ಕಲ್ಯಾಣ ಕರ್ನಾಟಕದಲ್ಲಿ 2016 ರಲ್ಲಿ 135 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ತೆರೆದಿದ್ದೇವೆ. ಶೇ. 85 ಪರ್ಸೆಂಟ್ ಕಾಮಗಾರಿ ಪೂರ್ಣಗೊಂಡಿದೆ. ಏಪ್ರಿಲ್‌ನಲ್ಲಿ ಆಸ್ಪತ್ರೆ ಉದ್ಘಾಟನೆಗೊಳ್ಳಲಿದೆ. ಜನಸಾಮಾನ್ಯರಿಗೆ ಗುಣಮಟ್ಟದ ಚಿಕಿತ್ಸೆ ಕೊಡಲಾಗ್ತಿದೆ ಎಂದರು.

ಕೇಂದ್ರ ಸರ್ಕಾರದ ಮುದ್ರಾ ಯೋಜನೆ ಹೆಸರಲ್ಲಿ 1.63 ಲಕ್ಷ ರೂ. ವಂಚನೆ: ಈಗ್ಲೇ ನಿಮ್ಮ ಬಾಂಡ್ ಪೇಪರ್ ಪರಿಶೀಲಿಸಿ

ಸರ್ಕಾರದ ವಿರುದ್ಧ ಬೇಸರವೇಕೆ? 
ಇನ್ನು ಕಲಬುರ್ಗಿಯಲ್ಲಿ ಜಯದೇವ ಕಾರ್ಯ ಬಹುತೇಕ ಮುಕ್ತಾಯ ಆಗಿದೆ. ಕಲ್ಬುರ್ಗಿ ಜಯದೇವ ಕೆಲಸ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಮುಗಿಬಹುದು. ಆದರೆ, ನನ್ನ ನಿರ್ದೇಶಕ ಸೇವಾ ಅವಧಿಯಲ್ಲಿಯೇ ಕಲಬುರಗಿಯ ಜಯದೇವ ಉದ್ಘಾಟನೆ ಮಾಡಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಕಲ್ಬುರ್ಗಿ ಜಯದೇವಕ್ಕೋಸ್ಕರ ನಾನು ತುಂಬಾ ಕೆಲಸ ಮಾಡಿದ್ದೇನೆ. ಅದರ ಉದ್ಘಾಟನೆಗೆ ನಾನು ಇರಬೇಕಿತ್ತು ಅನ್ನೋ ಆಸೆ ನನಗಿತ್ತು . ಸರ್ಕಾರಕ್ಕೆ ನನ್ನನ್ನು ಮುಮದುವರೆಸಿ ಅಂತ ನಾನು ಯಾವ ಕಾರಣಕ್ಕೂ ಕೇಳೋದಿಲ್ಲ. ಅದು ನನ್ನ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗುತ್ತದೆ. ಅದನ್ನು ಯಾವತ್ತೂ ಒಪ್ಪೋದಿಲ್ಲ ಎಂದು ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.

click me!